BBK 10: 'ಬಳೆಗಳ ರಾಜ' ವಿನಯ್ ಗೆ ಕಿಚ್ಚನ ಕ್ಲಾಸ್.. ಸಂಗೀತಾಗೆ ಗಿಫ್ಟ್ ಆಗಿ ಬಂತು ಬಳೆಗಳು..!

By ಎಸ್ ಸುಮಂತ್

ಬಿಗ್ ಬಾಸ್ ಮನೆಯಲ್ಲಿ ಟಾಸ್ಕ್ ಮಧ್ಯೆ ಜಗಳಗಳು ಆಗುವುದು ಕಾಮನ್. ಆದರೆ, ಆ ಜಗಳದಲ್ಲಿ ಬರುವ ಮಾತುಗಳು ಬಹಳ ಮುಖ್ಯವಾಗುತ್ತದೆ. ಈ ವಾರದ ಎಪಿಸೋಡಿನಲ್ಲಂತೂ ಸದಸ್ಯರ ಬಾಯಲ್ಲಿ ಬಂದ ಮಾತುಗಳು ಅತ್ಯುತ್ತಮವಾಗಿತ್ತು. ಯಾರಿಗೆ ಯಾರು ಕಡಿಮೆ ಇಲ್ಲ ಎಂಬಂತ ಸ್ಪರ್ಧೆಯೇ ಇತ್ತು.

ನಮ್ರತಾರನ್ನು ಸೋಷಿಯಲ್ ಮೀಡಿಯಾದಲ್ಲಿ ನೋಡಿದ ರೀತಿಯೇ ಬೇರೆ ಇತ್ತು. ಆದರೆ, ಸಂಗೀತಾ ಹಾಗೂ ನಮ್ರತಾ ನಡುವೆ ಹಾದು ಹೋದ ಮಾತುಗಳು ಮಾತ್ರ ಬೀಪ್ ಸೌಂಡ್ ಹಾಕುವಷ್ಟು ಬಂದಿತ್ತು. ಇದರ ಬಗ್ಗೆ ಕಿಚ್ಚ ಸುದೀಪ್ ತಮ್ಮ ಪಂಚಾಯ್ತಿಯಲ್ಲಿ ನ್ಯಾಯ ತೀರ್ಮಾನ ಮಾಡಿದ್ದಾರೆ.

bbk-10-vinay-sangeetha-sudeep

ಕಿಚ್ಚನಿಗೂ ಬೇಸರ ಆ ಮಾತುಗಳು

ಇಡೀ ವಾರ ಸದಸ್ಯರು ರೀತಿ ಕಿಚ್ಚನಿಗೂ ಬೇಸರ ತರಿಸಿದೆ. ಅದಕ್ಕೆ ಖಡಕ್ ಆಗಿಯೇ ಸುದೀಪ್ ಎಲ್ಲರಿಗೂ, ಈ ಟೀಂ ಕಡೆಯಿಂದ ಒಬ್ಬರು ಫೈನಲಿಸ್ಟ್ ರೆಡಿಯಾಗಿದ್ದಾರೆ. ಇನ್ನು ಆ ಟೀಂನಿಂದ ಒಬ್ಬರನ್ನ ರೆಡಿ ಮಾಡಿಬಿಡಿ. ಹದಿನೆಂಟು ವಾರದ ಬಿಗ್ ಬಾಸ್ ಅನ್ನು ನಾಲ್ಕೇ ವಾರದಲ್ಲಿ ಮುಗಿಸಿಬಿಡೋಣಾ ಎಂದಿದ್ದಾರೆ. ಈ ರೀತಿಯ ಮಾತುಕತೆ ಮುಗಿದ ಮೇಲೆ ಸುದೀಪ್ ನಮ್ರತಾ ಹಾಗೂ ಸಂಗೀತಾ ಜಗಳ ಹಾಗೂ ವಿನಯ್ ಆಡಿದ ಮಾತಿನ ಬಗ್ಗೆ ಅವರಿಬ್ಬರ ಬಳಿಯೇ ಕ್ಲಾರಿಟಿ ಕೇಳಿದ್ದಾರೆ.

ಬಳೆಗಳ ರಾಜನ ಬಗ್ಗೆ ವಿನಯ್ ಕ್ಲಾರಿಟಿ

ವಿನಯ್ ಈ ವಾರ ಬಳಸಿದ ಪದಗಳು ಒಂದೆರಡಲ್ಲ. ಬಳೆಗಳ ರಾಜ, ಗಂಡಸರ ಥರ ಆಡು, ಬಾರೋ ಗಂಡಸು ಬಾ ಹೀಗೆ ಹಲವು ಪದಗಳನ್ನು ಕಾರ್ತಿಕ್ ಮೇಲೆ ಪ್ರಯೋಗ ಮಾಡಿದರು. ಇದಕ್ಕೆ ಕಿಚ್ಚ ಸುದೀಪ್ ಕೂಡ ಗರಂ ಆಗಿದ್ದರು. ವಿನಯ್ ಬಳಿಯೇ ಅದಕ್ಕೆ ಕ್ಲಾರಿಟಿಯನ್ನು ಪಡೆದುಕೊಂಡರು. ಆದರೆ, ವಿನಯ್ ಆಡಿದ ಮಾತಿಗೆ ಸ್ಪಷ್ಟನೆ ಕೊಡುವುದಕ್ಕೆ ರೆಡಿ ಇಲ್ಲ. ಆ ಮಾತುಗಳಿಗೆ ಅರ್ಥ ನೀಡುವುದರಲ್ಲಿಯೇ ಸೋತರು. ಅವರ ಅಕ್ಕ ಪಕ್ಕ ಇದ್ದ ಸ್ನೇಹುತ್ ಹಾಗೂ ನಮ್ರತಾ ಬಳಿಯೂ ಕೇಳಿ, ಅದರ ನಿಜವಾದ ಅರ್ಥವನ್ನು ತಿಳಿಸಿ, ಅವರಿಬ್ಬರಿಗೂ ತಪ್ಪಿನ ಅರಿವು ಮೂಡಿಸಿದರು.

ವಿನಯ್ ಕಡೆಯಿಂದಾನೇ ಕ್ಷಮೆ

ಮೀಸೆಗಳ ರಾಣಿ ಯಾಕಾಗಬಾರದು ಅಂತ ಸುದೀಪ್ ಕೇಳಿದರು. ವಿನಯ್‌ನ ತಪ್ಪನ್ನು ಅವರಿಗೆ ಅರಿವು ಮಾಡಿಸಿದರು. ಬಳೆಗಳ ರಾಜ ಎಂಬುದಕ್ಕೆ ಇದ್ದ ನಿಜವಾದ ಅರ್ಥವನ್ನು ನಮ್ರತಾ ಕಡೆಯಿಂದಾನೇ ಹೇಳಿದರು. ಬಳಿಕ ವಿನಯ್, "ಕೆಟ್ಟದಾಗಿ ಏನು ಇಲ್ಲ. ಬಳೆ ನಾನು ಹಾಕಿಕೊಂಡಿದ್ದೀನಿ. ವೀಕ್ ಅಂತ ನಾನು ಹೇಳಿಲ್ಲ. ಬೋರ್ಡ್ ತಟ್ಟಿದಾಗ ಯಾರು ಇಲ್ಲಿ ಬಳೆ ಹಾಕಿಕೊಂಡು ಕೂತಿಲ್ಲ ಅಂದೆ. ನಮ್ಮ ಟೀಂ ನಿಂದ ಇಬ್ಬರು ಹೆಣ್ಣು ಮಕ್ಕಳು ಆಡ್ತಾ ಇದ್ರು. ಹೆಣ್ಣು ಮಕ್ಕಳು ವೀಕ್ ಅಂತ ಹೇಳಿಲ್ಲ ಸರ್. ನನ್ನ ಮಾತಿನಿಂದ ಬೇಸರ ಆಗಿದ್ದರೆ ಕ್ಷಮೆ ಇರಲಿ. ಇಡೀ ಕರ್ನಾಟಕದ ಹೆಣ್ಣು ಮಕ್ಕಳಿಗೆ ಕ್ಷಮೆ ಕೇಳುತ್ತೀನಿ" ಎಂದು ಕೈ ಮುಗಿದರು.

ವಿನಯ್‌ಗೆ ಸಿಕ್ಕಿತು ಸಂಗೀತಾ ಕೈ ಬಳೆ

ವಾರದ ಕೊನೆಯಲ್ಲಿ ಇಡೀ ವಾರ ಯಾರು ಚೆನ್ನಾಗಿ ಆಡುತ್ತಾರೋ ಅವರಿಗೆ ಕಿಚ್ಚನ ಚಪ್ಪಾಳೆ ಸಿಗುತ್ತೆ. ಕಿಚ್ಚನ ಚಪ್ಪಾಳೆಗಾಗಿಯೇ ಸಾಕಷ್ಟು ಎಫರ್ಟ್ ಹಾಕಲಾಗುತ್ತದೆ. ಈ ವಾರ ಕಿಚ್ಚನ ಚಪ್ಪಾಳೆ ಒಂದು ಸ್ಪೆಷಲ್ ಆಗಿತ್ತು. ಅದುವೇ ವಿನಯ್‌ಗೆ ಆ ಗಿಫ್ಟ್ ಸಿಕ್ಕಿದೆ. ಸಂಗೀತಾ ಅವರ ಬಳೆ ಇದ್ದಂತಹ ಫೋಟೋ ಬಂದಿದೆ. ಆ ಬಳೆಗಳ ಕೈಗೆ ಕಿಚ್ಚನ ಚಪ್ಪಾಳೆ ಹೋಗಿದೆ. ಅಂದರೆ ಸಂಗೀತಾಗೆ ಆ ಚಪ್ಪಾಳೆ ಸಿಕ್ಕಿದೆ.

More from Filmibeat

English summary
Bigg Boss Kannada Season 10: Kichcha Sudeep and Vinay Bangle Issue
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X