BBK 10: ಬಿಗ್ ಬಾಸ್ ಕೊಟ್ಟ ಹೊಸ ಟಾಸ್ಕ್‌ನಲ್ಲಿ ಮನಸ್ಸುಗಳು ಭಾರ.. ಭಾರ.. ಆದರೂ ಸ್ಪರ್ಧಿಗಳು ಕೂಲ್ ಕೂಲ್..!

By ಎಸ್ ಸುಮಂತ್

ಆಟವೇ ಆಗಲಿ, ನಾಟಕವೇ ಆಗಲಿ ವೈಯಕ್ತಿಕ ನಿಂದನೆ ಮಾಡಿದಾಗ ನೋವಾಗುವುದು ಸಹಜ. ಬಿಗ್ ಬಾಸ್‌ನಲ್ಲಿ ನೀಡಿದ ಟಾಸ್ಕ್‌ಗಳು ವೈಯಕ್ತಿಕ ನಿಂದನೆಗಳಾಗಿ ಬದಲಾಗಿವೆ. ಟಾಸ್ಕ್ ಎಂಬುದನ್ನು ಮರೆತು, ಹೊರಗಿನ ವಿಚಾರವೆಲ್ಲಾ, ಮನೆಯೊಳಗೆ ಅನಾವರಣವಾಗಿದೆ.

'ವಜ್ರಕಾಯ' ಹಾಗೂ 'ಗಂಧದ ಗುಡಿ' ಎರಡು ತಂಡದವರು ನಿಂದನೆ ಮಾಡುವುದಕ್ಕೆ ಶುರು ಮಾಡಿದ್ದಾರೆ. ಗಂಧದ ಗುಡಿಯೇ ನಿಂದನೆಯನ್ನು ಶುರು ಮಾಡಿದರು ಸಹ, ವಜ್ರಕಾಯ ತೀರ ವೈಯಕ್ತಿಕ ವಿಚಾರಗಳನ್ನು ತಂದು ಎಳೆದಿದ್ದಾರೆ‌.

bbk-10-snehith-tanisha-namratha-gowda

ಮನುಷ್ಯನ ಗುಣವೇ ಹಾಗೇ ಅಲ್ಲವೇ. ಒಳಗೊಂದು ಹೊರಗೊಂದು ಇಟ್ಟುಕೊಂಡು, ನಾಟಕದ ಬದುಕನ್ನು ಬದುಕುತ್ತಾರೆ‌. ಆ ಎಲ್ಲಾ ವಿಚಾರಗಳನ್ನು ಹೊರಗೆ ತೆಗೆಯುವ ಪ್ರಯತ್ನವೇ ಇಂದಿನ ಬಿಗ್ ಬಾಸ್ ನೀಡಿದ ಟಾಸ್ಕ್‌ನಲ್ಲಿ ಬಯಲಾಗಿದೆ.

ಕೋಪವಾಯ್ತು.. ಈಗ ಅಳಿಸುವ ಟಾಸ್ಕ್

ಬಿಗ್ ಬಾಸ್ ಮನೆಯಲ್ಲಿ ಇವತ್ತು ಎರಡು ರೀತಿಯ ಟಾಸ್ಕ್ ಇತ್ತು. ಒಂದು ಕೋಪ ಬರಿಸುವ ಟಾಸ್ಕ್. ಅದರಲ್ಲಿ ಎರಡು ಕಡೆಯ ಟೀಂನವರು ನೋಡುಗರಿಗೂ ಆಶ್ಚರ್ಯ ಆಗುವಷ್ಟು ವೈಯಕ್ತಿಕ ನಿಂದನೆ ಮಾಡಿದರು. ಅಳಿಸಬೇಕು ಎಂಬ ಟಾಸ್ಕ್‌ನಲ್ಲಿ ದಿಢೀರ್ ಬದಲಾವಣೆ. ಎಲ್ಲರೂ ಅವರವರ ಮನಸ್ಸಿನ ನೋವನ್ನು ಹೊರ ಹಾಕಿದರು. ಹೇಗಿದ್ದೋ, ಹೇಗೆ ಆದ್ವಿ. ಇನ್ನು ಮುಂದೆ ಸಂಬಂಧಗಳೇ ಉಳಿಯುವುದಿಲ್ಲ ಎಂಬ ಲೆವೆಲ್‌ಗೆ ಮಾತನಾಡಿದ್ದಾರೆ.

ಸ್ನೇಹಿತ್‌ಗೆ ಕ್ಲಾಸ್ ತೆಗೆದುಕೊಂಡ ತನಿಷಾ

ಅಳಿಸಬೇಕು ಎಂಬ ಟಾಸ್ಕ್ ನೀಡಿದ ಕೂಡಲೇ ತನಿಷಾಗೆ ಮನಸ್ಸಲ್ಲಿದ್ದ ನೋವೆಲ್ಲಾ ಹೊರ ಬಂದಿದೆ. ಸ್ನೇಹಿತ್ ಮುಂದೆ ಹೋಗಿ, ಶಿಕ್ಷಣದ ಬಗ್ಗೆ ಮಾತನಾಡುತ್ತೀರಾ. ನಾಚಿಕೆ ಆಗಲ್ವಾ ನಿಮ್ಗೆ. ಟಾಸ್ಕ್ ಇದು. ವೈಯಕ್ತಿಕ ವಿಚಾರಗಳನ್ನು ತರುವುದಲ್ಲ. ಫೇಲ್ ಆಗಿದ್ದೀನಾ. ನನ್ನ ಸ್ಕೋರ್ ಬಗ್ಗೆ ಗೊತ್ತ ನಿಮ್ಗೆ. ನಾನು ಲೀಡರ್ ಆಗಿನೇ ಬಂದಿರೋದು. ಅದಕ್ಕೆ ಇಲ್ಲೂ ಲೀಡರ್ ರೀತಿಯೇ ಆಡುವುದು. ಇದನ್ನ ನೀವೂ ಅರ್ಥ ಮಾಡಿಕೊಂಡರೆ ತುಂಬಾ ಉತ್ತಮ ಎಂದಿದ್ದಾರೆ.

bbk-10-snehith-tanisha-namratha-gowda


ನಮ್ರತಾಗೂ ಕ್ಲಾಸ್ ತೆಗೆದುಕೊಂಡ ತನಿಷಾ

ನಮ್ರತಾ, ತನಿಷಾ ಫ್ಯಾಮಿಲಿ ಬಗ್ಗೆ ಮಾತನಾಡಿದ್ದರು. ಈಗ ತನಿಷಾ ಸರದಿ ಬಂದಿತ್ತು. ಆಗ ಎಚ್ಚರಿಕೆ ನೀಡಿದ್ದಾರೆ. " ನನ್ನ ಎಜುಕೇಷನ್ ಬಗ್ಗೆ ಏನು ಗೊತ್ತಾ. ನನ್ನ ಫ್ಯಾಮಿಲಿ ಬಗ್ಗೆ ಮಾತನಾಡಿದ್ರಲ್ಲ. ನಾನು ನಿನ್ನ ಫ್ಯಾಮಿಲಿ ಬಗ್ಗೆ ಮಾತನಾಡ್ಲಾ. ಇನ್ನೊಂದು ಸಲ ನನ್ನ ಫ್ಯಾಮಿಲಿ ಬಗ್ಗೆ ಮಾತನಾಡಿದರೆ ಸುಮ್ಮನೆ ಬಿಡುತ್ತೀನಿ ಎಂದುಕೊಳ್ಳಬೇಡಿ" ಎಂದೇ ಎಚ್ಚರಿಕೆ ನೀಡಿದ್ದಾರೆ.

ನಮ್ರತಾ ಇನ್ಮುಂದೆ ಸರಿಯಾಗ್ತಾರಾ?

ಇದು ಅಳಿಸುವ ಟಾಸ್ಕ್. ಇದರಲ್ಲಿ ಎಮೋಷನಲಿ ಕನೆಕ್ಟ್ ಆಗಬೇಕು. ಹೀಗಾಗಿ ಸಂಗೀತಾ ಹಾಗೂ ಕಾರ್ತಿಕ್ ಹೆಚ್ಚೇನು ಮಾತನಾಡಿಲ್ಲ. ನಮ್ರತಾ ವಿಚಾರವಾಗಿ ಮಾತನಾಡುತ್ತಾ, "ನೀವೂ ಮೊದಲಿಂದ ಹೇಗೆ ನಡೆದುಕೊಂಡು ಬಂದಿದ್ದೀರಿ. ನಿಮ್ಮ ಫ್ಯಾಮಿಲಿಯಲ್ಲಿ ಹೇಗೆಲ್ಲಾ ಹಿಂಸೆ ನೀಡಿದರು ಎಂಬ ವಿಚಾರಗಳನ್ನು ಹೇಳಿದ್ದೀರಿ. ಆದರೆ, ನೀವೂ ಬೇರೊಬ್ಬರಿಂದ ಇನ್ಫ್ಲ್ಯೂಯೆನ್ಸ್ ಆಗುವುದು ಬೇಡ" ಎಂಬ ಅರ್ಥದಲ್ಲಿಯೇ ಇಬ್ಬರು ಬುದ್ದಿ ಮಾತು ಹೇಳಿದ್ದಾರೆ. ಈ ಟಾಸ್ಕ್‌ನಲ್ಲಿ ಯಾರ್ಯಾರು ಯಾವೆಲ್ಲಾ ಮನಸ್ಥಿತಿಯಲ್ಲಿ ಇದ್ದಾರೆ ಎಂಬುದು ಗೊತ್ತಾಗಿದೆ.

More from Filmibeat

English summary
BBK 10 November 8th episode about Tarnisha taking class on Snehith
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X