BBK 10: ಮೈಕೆಲ್ ಡಬ್ಬಲ್ ಗೇಮ್ ಆಟ ಶುರು ಮಾಡಲು ಕಾರಣವೇನು..?
ಬಿಗ್ ಬಾಸ್ ಮನೆಯಲ್ಲಿ ಗೆಲ್ಲಬೇಕು ಅಂದ್ರೆ ಒಂದಷ್ಟು ಸ್ಟಾಟರ್ಜಿಗಳು ಬಹಳ ಮುಖ್ಯವಾಗುತ್ತದೆ. ಮೈಂಡ್ ಗೇಮ್ ಅಂತ ಮಾಡುವುದಕ್ಕೆ ಹೋದವರೆಲ್ಲಾ ಮಣ್ಣು ಮುಕ್ಕಿದ್ದಾರೆ. ಆದರೆ, ಸ್ಟಾಟರ್ಜಿ ವರ್ಕೌಟ್ ಆಗುವುದು ಹೇಗೆ ಅಂದ್ರೆ ಟಾಸ್ಕ್‌ಗಳಲ್ಲಿ. ಗೆಲುವು ಬೇಕು ಅಂದಾಗ, ಅವಕಾಶ ಸಿಕ್ಕ ಕೂಡಲೇ ಸ್ಟ್ರಾಂಗ್ ಆಗಿರುವವರನ್ನು ಕಿತ್ತೆಸೆಯಬೇಕು. ಇದು ಒಂದು ರೀತಿಯ ಸ್ಟಾಟರ್ಜಿ.
ಪ್ರತಾಪ್ ಆಗಾಗ ಉಪಯೋಗಿಸುವುದಿದೆಯಲ್ಲ ಅದು ಒಳ್ಳೆ ಸ್ಟಾಟರ್ಜಿ. ಟಾಸ್ಕ್ ವಿಚಾರದಲ್ಲಿ ಮೈಕೆಲ್ ಸ್ಟ್ರಾಂಗ್ ಇರುವಾಗಲೂ ಡಬ್ಬಲ್ ಗೇಮ್ ಶುರು ಮಾಡಿದ್ದಾರೆ. ಅದು ಗಂಧದ ಗುಡಿ ತಂಡದಲ್ಲಿದ್ದುಕೊಂಡು ವಜ್ರಕಾಯ ತಂಡಕ್ಕೆ ಬೆಂಬಲ ನೀಡುವುದು.

ಮೈಕೆಲ್ ಸದ್ಯಕ್ಕೆ ಗಂಧದ ಗುಡಿ ತಂಡದಲ್ಲಿದ್ದಾರೆ. ಆದರೆ, ಆಡುತ್ತಿರುವುದು ಮಾತ್ರ ವಜ್ರಕಾಯದ ಪರ. ಅದರಲ್ಲೂ ತಂಡದ ಸೀಕ್ರೆಟ್‌ಗಳನ್ನೇ ಅಲ್ಲಿ ಹೋಗಿ ಬಿಟ್ಟುಕೊಡುತ್ತಿದ್ದಾರೆ. ಬಲೂಮ್ ಒಡೆದು ನೀರು ಸಂಗ್ರಹಿಸುವ ಟಾಸ್ಕ್‌ನಲ್ಲಿ, ಮೈಕೆಲ್ ಉಸ್ತುವಾರಿ ವಹಿಸಿದ್ದಾರೆ. ಗಂಧದ ಗುಡಿ ಬಿಟ್ಟು ವಜ್ರಕಾಯದ ತಂಡದ ಬಳಿ ಬಂದು, ಈ ಟಾಸ್ಕ್ ಅನ್ನು ಈ ರೀತಿ ಆಡಿ. ಆಗ ಟಾಸ್ಕ್ ಗೆಲ್ಲುತ್ತೀರಿ ಎಂದು ಹೊಸ ಐಡಿಯಾ ಕೊಟ್ಟಿದ್ದಾರೆ.
ಅನೌನ್ಸ್ ಮಾಡುವಾಗಲೂ ಖುಷಿಯಿಲ್ಲ
ಗಂಧದ ಗುಡಿ ಟೀಮ್ ಜಾಸ್ತಿ ನೀರು ಹಾಕಿದ್ದರು. ಆದರೆ ಇಶಾನಿ ಅದನ್ನು ಒಪ್ಪುವುದಕ್ಕೆ ರೆಡಿ ಇಲ್ಲ. ತನಿಷಾ ಎರಡು ಬಲೂನ್ ಕೈಯಲ್ಲಿ ಒಡೆದರು. ಹೀಗಾಗಿ ನೀರು ತೆಗೆಯಬೇಕು ಎಂದು ವಾದ ಮಾಡಿದರು. ಒಂದು ಬಲೂನ್ ತೆಗೆದುಕೊಂಡು ಹೋಗಿ, ಒಡೆದು ನೀರು ಹಾಕಿ ಬಂದಿದ್ದಾರೆ. ಆದರೆ, ಬಿಗ್ ಬಾಸ್ ಅದನ್ನು ಪರಿಗಣನೆಗೆ ತೆಗದುಕೊಳ್ಳದೆ ಹೆಚ್ಚು ನೀರು ಇರುವುದನ್ನು ನೋಡಿ, ಗೆದ್ದವರನ್ನು ಘೋಷಿಸಿ ಎಂದಿದ್ದಾರೆ. ಆದರೆ, ಮೈಕೆಲ್ ಮಾತ್ರ, ಗಂಧದ ಗುಡಿ ಗೆದ್ದಿದೆ ಎಂಬುದನ್ನು ಬೇಸರದಲ್ಲಿಯೇ ಹೇಳಿದ್ದಾರೆ.
ಇಶಾನಿಗಾಗಿ ಟಾಸ್ಕ್ ರೂಲ್ಸ್ ಬ್ರೇಕ್?
ಇಶಾನಿ ಎರಡು ಟೀಂ ಅನ್ನು ಟೈ ಮಾಡಿದ್ದಾರೆ. ಇದಕ್ಕೆ ಬಿಗ್ ಬಾಸ್ ಸಿಟ್ಟಾಗಿದ್ದಾರೆ. ಕ್ಲಾಸ್ ತೆಗೆದುಕೊಂಡಿದ್ದಾರೆ. ಆಗ ಮೈಕೆಲ್, ನಂಗೆ ಚೀಟ್ ಮಾಡುವುದಕ್ಕೆ ಬರಲ್ಲ. ನಿಯಮದಲ್ಲಿ ಎಲ್ಲಿ ಬರೆದಿದೆ. ಕೈಯಲ್ಲಿ ಒಡೆಯಬಾರದು ಅಂತ. ಒಂದು ಬಲೂನ್ ಹಾಕಬೇಕು ಅಂದ್ರೆ ಹಾಕು ಎಂದು ಮೈಕೆಲ್ ಹೇಳಿದರೆ.. ಆಗ ಇಶಾನಿ ಇದು ಚೀಟ್ ಅಲ್ಲ. ಮ್ಯಾಜಿಕ್. ಈಗ ಗೊತ್ತಾಯ್ತು ನಿನ್ನ ನಿಜ ಮುಖ ಏನು ಅಂತ. ಈಗ ಬಲೂನ್ ಹಾಕುವುದಕ್ಕೆ ಏನು ಉಳಿಸಿದ್ದೀಯಾ. ಈಗಾಗಲೇ ಅನೌನ್ಸ್ ಮಾಡಿದ್ದೀಯಲ್ಲ" ಎಂದು ರೇಗಾಡಿದ್ದಾರೆ.
ಇಶಾನಿ ಬಗ್ಗೆ ನೆಗೆಟಿವ್ ಕಮೆಂಟ್
ಬಿಗ್ ಬಾಸ್ ಕೋಪ ಮಾಡಿಕೊಂಡಿದ್ದಕ್ಕೆ, ಉಸ್ತುವಾರಿಗಳು ನಡೆದುಕೊಂಡ ರೀತಿ ಸರಿ ಇಲ್ಲ ಎಂದು ಹೇಳಿದ್ದು ಗಂಧದ ಗುಡಿ ತಂಡಕ್ಕೂ ಬೇಸರ ಆಗಿದೆ. ಎಲ್ಲರೂ ಕೂತು ಚರ್ಚೆ ಮಾಡುವಾಗ, ಕಾರ್ತಿಕ್ ಹೇಳಿದ್ದಾರೆ. ಇದು ಬಲವಂತವಾಗಿ ಒಪ್ಪಿಕೊಂಡಿದ್ದು, ಕೇಳಿ ಎಂದಿದ್ದಾರೆ. ಇದಕ್ಕೆ ಮೈಕೆಲ್ ಕೂಡ ಒಪ್ಪಿಕೊಂಡಿದ್ದು, ಹೌದು ಇಶಾನಿನೇ ಈ ರೀತಿ ಟೈ ಎಂದು ಅನೌನ್ಸ್ ಮಾಡಿದ್ದು ಅಂತ ಹೇಳಿದ್ದಾರೆ. ವಜ್ರಕಾಯ ತಂಡದ ಬಳಿ ಹೋಗಿ ಐಡಿಯಾಗಳನ್ನು ಹೇಳುವ ಮೈಕೆಲ್, ಈ ಕಡೆ ತಮ್ಮ ಗಂಧದ ಗುಡಿ ತಂಡಕ್ಕೂ ಬಂದು ಮಾತು ಆಡುತ್ತಿದ್ದಾರೆ.


Click it and Unblock the Notifications











