BBK 10: ಸಂಗೀತಾ ಅಂಡ್ ಟೀಂ ಜಗಳ ಆಡಿದ್ರೆ ವಿನಯ್ ಮುಖದಲ್ಲಿ ವ್ಯಂಗ್ಯ ನಗು.. ಯಾಕೆ ಗೊತ್ತಾ?
ಒಂದು ಗಾದೆ ಮಾತಿದೆ ಶತ್ರುವಿನ ಶತ್ರು ಮಿತ್ರ ಎಂಬುದು. ಅದನ್ನ ಈಗ ವಿನಯ್ ಅದ್ಭುತವಾಗಿ ಫಾಲೋ ಮಾಡುವುದಕ್ಕೆ ಶುರು ಮಾಡಿದ್ದಾರೆ. ಗಂಧದ ಗುಡಿ ತಂಡದಲ್ಲಿ ಪ್ರತಾಪ್ ವಿಚಾರದಲ್ಲಿ ಎಲ್ಲರ ಅಭಿಪ್ರಾಯ ಬದಲಾಗಿದೆ. ಇದನ್ನೇ ವಿನಯ್ ಬಂಡವಾಳ ಮಾಡಿಕೊಳ್ಳುತ್ತಿದ್ದಾರೆ. ಅದು ವರ್ಕೌಟ್ ಆಗುವ ಎಲ್ಲಾ ಲಕ್ಷಣಗಳು ಕಾಣಿಸುತ್ತಿವೆ.
ಇತ್ತೀಚೆಗೆ ಟಾಸ್ಕ್ ವಿಚಾರದಲ್ಲಿ ಪ್ರತಾಪ್ ಮೇಲೆ ಎಗರಿ ಬಿದ್ದಿದ್ದರು. ಸರಿಯಾಗಿ ನ್ಯಾಯ ಕೊಡಲಿಲ್ಲ. ಸಿರಿ ಹೇಳಿದಂತೆ ಕೇಳಿದ್ದೀಯಾ, ಇದು ಸರಿ ಅಲ್ಲ ಅಂತೆಲ್ಲಾ ಮುಗಿಬಿದ್ದಿದ್ದರು. ಇದೇ ವೇಳೆ ತುಕಾಲಿ ಸಂತು, ಸ್ನೇಹಿತ್ ಒಳಗೆ ಬಂದು ಸಮಾಧಾನ ಮಾಡುವುದಕ್ಕೆ ಪ್ರಯತ್ನ ಪಟ್ಟಿದ್ದಾರೆ. ಆದರೆ ಈ ವೇಳೆ ಗಂಧದ ಗುಡಿ ತಂಡ, ಇದು ನಮ್ಮ ತಂಡದ ಸಮಸ್ಯೆ, ನಾವೇ ಬಗೆಹರಿಸಿಕೊಳ್ಳುತ್ತೇವೆ ಎಂದಿದ್ದಾರೆ.

ಗಂಧದ ಗುಡಿ ಟೀಂ ಜಗಳ ಆಡಿದರೆ ವಿನಯ್‌ಗೆ ಖುಷಿ
ವಿನಯ್ ಈಗ ಜೋರಾಗಿ ಎಗರಾಡುವುದನ್ನು ಕಡಿಮೆ ಮಾಡಿದ್ದಾರೆ. ಆದರೆ, ಏನೋ ದೊಡ್ಡದಾಗಿಯೇ ಪ್ಲ್ಯಾನ್ ಅಂತು ಮಾಡಿದ್ದಾರೆ. ಅದು ನೋಡುಗರಿಗೆ ತುಂಬಾ ಅದ್ಭುತವಾಗಿಯೇ ಗೊತ್ತಾಗ್ತಾ ಇದೆ. ಬಿಗ್ ಬಾಸ್ ಮನೆಯಲ್ಲಿ ಸದ್ಯ ಗಂಧದ ಗುಡಿ ಹಾಗೂ ವಜ್ರಕಾಯ ತಂಡಗಳು ಆಟವಾಡುತ್ತಿವೆ. ವಿನಯ್ ವಜ್ರಕಾಯ ತಂಡದಲ್ಲಿದ್ದಾರೆ. ಆದರೆ, ಎದುರಿನ ಗಂಧದ ಗುಡಿ ಟೀಂನವರು ಸ್ವಲ್ಪ ಜಗಳವಾಡಿದರೂ ವ್ಯಂಗ್ಯವಾಗಿ ನಗುತ್ತಿದ್ದಾರೆ.
ಪ್ರತಾಪ್‌ನನ್ನು ಬಳಸಿಕೊಳ್ಳುವ ಪ್ರಯತ್ನ
ಪ್ರತಾಪ್ ಕಂಡರೆ ಕೆಂಡಕಾರುತ್ತಿದ್ದ ವಿನಯ್ ಈಗ ಅದೇ ಪ್ರತಾಪ್‌ನನ್ನು ಹೊಗಳುವುದಕ್ಕೆ ಶುರು ಮಾಡಿದ್ದಾರೆ. ಹೇಗೆ ಅಂದ್ರೆ ವಿನಯ್ ಮಾತಿಗೆ ಮರುಳಾಗಿ ಬಿಡಬೇಕು ಅಷ್ಟು ಮನವೊಲಿಕೆಯ ಮಾತುಗಳನ್ನು ಆಡಿದ್ದಾರೆ. "ಇಷ್ಟು ದಿನ ನಾವೇನೋ ಅಂದುಕೊಂಡಿದ್ದೀವಿ. ಇನ್ಮೇಲೆ ನೀನು ನಮ್ಮ ಬಳಿ ಏನು ಬೇಕಾದರೂ ಮಾತನಾಡಬಹುದು. ನಿನ್ನ ಬಗ್ಗೆ ನಮಗಿದ್ದ ಭಾವನೆಯೇ ಬದಲಾಗಿದೆ. ತನಿಷಾ ನಾಮಿನೇಟ್ ಮಾಡಿರುವುದು ನೀವೇ ಅಂತ ಗೊತ್ತು. ಅದಕ್ಕೆ ನಿನ್ನೆ ತನಿಷಾ ಆ ರೀತಿ ಆಡಿದ್ದು" ಎಂದು ಹಾಡಿ ಹೊಗಳಿದ್ದಾರೆ.
ನೀತೂ ಬಳಿ ಸೀಕ್ರೆಟ್ ಹೇಳಿದ್ದ ಪ್ರತಾಪ್
ವಿನಯ್ ಅಂಡ್ ನಮ್ರತಾ, ಪ್ರತಾಪ್‌ನನ್ನು ಹೊಗಳುವುದಕ್ಕೆ ಕಾರಣವಿದೆ. ಒಂದು ರೀತಿಯ ಪ್ರವೋಕ್ ಮಾಡುವ ದಾರಿ ಇದು. ಪ್ರತಾಪ್ ಆಟದ ವಿಚಾರಕ್ಕೆ ಬೇಸರ ಮಾಡಿಕೊಂಡಿದ್ದು, ನೀತೂ ಬಳಿ ಹೇಳಿದ್ದರು. ಈ ಆಟದಲ್ಲಿ ಸರಿಯಾಗಿ ನ್ಯಾಯ ಕೊಡಲಿಲ್ಲ. ಬಲವಂತ ಮಾಡಿದರು. ಅದನ್ನು ಸುದೀಪ್ ಸರ್ ಬಳಿ ಹೇಳುತ್ತೀನಿ ಎಂದಿದ್ದರು. ಇದನ್ನು ನೀತೂ ಅಷ್ಟೇ ನೀಟಾಗಿ ತಮ್ಮ ವಜ್ರಕಾಯ ಟೀಂಗೆ ಹೇಳಿದ್ದಾರೆ. ಹೀಗಾಗಿ ಪ್ರತಾಪ್ ಮನಸ್ಸು ಬದಲಾಗುವ ಮೊದಲು ಆ ವಿಚಾರವನ್ನು ಒತ್ತಿ ಒತ್ತಿ ಹೇಳುವ ಪ್ರಯತ್ನ ಮಾಡುತ್ತಿದ್ದಾರೆ.
ವಿನಯ್ ಸ್ಟಾಟರ್ಜಿ ಚೇಂಜ್
ವಿನಯ್ ಈಗ ಹೊಸ ಸ್ಟಾಟರ್ಜಿ ಶುರು ಮಾಡಿಕೊಂಡಿದ್ದಾರೆ ಎನಿಸುತ್ತಿದೆ. ಎದುರುಗಡೆ ಇರುವ ತಂಡದವರ ಒಗ್ಗಟ್ಟನ್ನು ಒಡೆಯುವ ಪ್ಲ್ಯಾನ್ ಮಾಡಿದಂತೆ ಕಾಣಿಸುತ್ತಿದೆ. ಅದಕ್ಕಾಗಿಯೇ ಪ್ರತಾಪ್ ಬಳಿ ಪರವಾಗಿ ಮಾತನಾಡುವುದು, ಮೈಕೆಲ್ ಜೊತೆಗೆ ಸೀಕ್ರೆಟ್ ಹೊರ ತರುವುದು, ಹೀಗೆ ಗಂಧದ ಗುಡಿ ತಂಡದ ಬಗ್ಗೆ ಸಾಕಷ್ಟು ಪ್ಲ್ಯಾನ್ ಮಾಡುತ್ತಿದ್ದಾರೆ. ಇದು ಶನಿವಾರಕ್ಕೆ ಕೊನೆಯಾಗುತ್ತಾ ಎಂಬುದನ್ನು ಕಾದು ನೋಡಬೇಕಿದೆ.


Click it and Unblock the Notifications