BBK 10: ಹಾಲು-ಕಾಫಿ ಪುಡಿ ತೆಗೆದುಕೊಂಡು ಹೋದವರ ನಡುವೆ ಪ್ರೀತಿ..? ಸ್ನೇಹಿತ್‌ಗೂ ಲವ್ ಆಯ್ತಾ?
ಬಿಗ್ ಮನೆಗೆ ಎರಡನೇ ಅತಿಥಿಯಾಗಿ ಬಂದಿದ್ದು ಸ್ನೇಹಿತ್. ಮೊದಲ ಸ್ಪರ್ಧಿ ನಮ್ರತಾ ಆಗಿದ್ದರು. ಮನೆಯ ಒಳಗೆ ಮಹಾಲಕ್ಷ್ಮಿಯಂತೆ ಬಲಗಾಲಿಟ್ಟು ಹೋದವರು ನಮ್ರತಾ. ಹೊಸ ಮನೆ ಎಂದರೆ ಹಾಲು ಉಕ್ಕಿಸಿ, ಗೃಹಪ್ರವೇಶ ಮಾಡಬೇಕಲ್ಲವೇ. ನಮ್ರತಾ ಬಳಿ ಬಿಗ್ ಬಾಸ್ ಹಾಲು ಕಳುಹಿಸಲಾಗಿತ್ತು. ಹಾಲು ಉಕ್ಕಿಸಿ, ನಮ್ರತಾ ಏನೋ ಗೃಹ ಪ್ರವೇಶ ಮಾಡಿದರು. ಅದರ ನೆಕ್ಸ್ಟ್ ಸ್ಪರ್ಧಿಯೇ ಸ್ನೇಹಿತ್.
ಸ್ನೇಹಿತ್ ಆರಂಭದಲ್ಲಿ ಎಲ್ಲದಕ್ಕೂ ತಲೆ ಹಾಕುತ್ತಾ ಇದ್ದರು. ಎಲ್ಲರನ್ನು ತಾವೇ ಮಾತನಾಡಿಸುತ್ತಾ ಇದ್ದರು. ಇದು ನೋಡುಗರಿಗೆ ಕೊಂಚ ಓವರ್ ಅನ್ನಿಸುತ್ತಿತ್ತು. ಮನೆ ಮಂದಿಗೂ ಇದು ಯಾಕೋ ವಿಚಿತ್ರ ಅನ್ನಿಸುತ್ತಾ ಇತ್ತು. ಆದರೆ ಈಗ ಎಲ್ಲರಿಗೂ ಇದೇ ಸ್ನೇಹಿತ್ ಇಷ್ಟವಾಗಿದ್ದಾರೆ. ಸ್ನೇಹಿತ್-ನಮ್ರತಾ ಇಷ್ಟವಾಗಿದ್ದಾರೆ.

ಇಶಾನಿಗೆ ಸ್ನೇಹಿತ್ ಇಷ್ಟನಾ?
ಬಿಗ್ ಬಾಸ್ ಮನೆಯಲ್ಲಿ ಮೂರು ಜೋಡಿ ಇದ್ದರು. ಅಧಿಕೃತವಾಗಿ ಘೋಷಣೆ ಆಗಿರುವುದು ಒಂದೇ. ಅದು ಇಶಾನಿ ಹಾಗೂ ಮೈಕೆಲ್. ಕಡೆಗೂ ನಮ್ರತಾ ಅಂಡ್ ಟೀಮ್ ಸೇರಿಕೊಂಡು ಇಬ್ಬರನ್ನು ಜೋಡಿ ಮಾಡಿ ಆಗಿದೆ. ಮೈಕೆಲ್ ಕಣ್ ಸನ್ನೆಯನ್ನು ಅರಿತಿದ್ದ ಮನೆ ಮಂದಿ, ಇಶಾನಿಗೆ ಆ ಸನ್ನೆ ತಲುಪಿಸಿವೆ. ಇತ್ತೀಚೆಗಷ್ಟೇ ಬಿಗ್ ಬಾಸ್ ಮುಂದೆ ನಾವಿಬ್ಬರು ಪಾಟ್ನರ್ಸ್ ಅಂತ ಹೇಳಿ, ಸಕ್ಕರೆಯನ್ನು ತಿಂದಿದ್ದಾರೆ. ಆದರೆ, ಈಗ ಮನೆ ಮಂದಿ ರೇಗಿಸುತ್ತಿದ್ದಾರೆ. ಸ್ನೇಹಿತ್‌ಗೆ ನಿನ್ನ ಮೇಲೆ ಲವ್ ಇದೆ. ನೋಡು ಮೈಕೆಲ್‌ನ ಬಿಟ್ಟು ಸ್ನೇಹಿತ್ ಒಪ್ಪಿಕೋ ಎಂದಿದ್ದಾರೆ. ಆದರೆ, ಇಶಾನಿ ನೋ, ಲಾಯಲ್ಟಿ ಆಗಲ್ಲ ಅದು ಎಂದೇ ತಿರಸ್ಕಾರ ಮಾಡಿದ್ದಾರೆ.
ನಮ್ರತಾ ಕಣ್ಣೀರಿಗೆ ಸ್ನೇಹಿತ್ ಬೇಸರ
ಸ್ನೇಹಿತ್ ಬಾಂಡಿಂಗ್ ಇರುವುದು ನಮ್ರತಾ ಜೊತೆಗೇನೆ. ಇಬ್ಬರ ನಡುವೆ ಒಂದೊಳ್ಳೆ ಫ್ರೆಂಡ್‌ಶಿಪ್ ಇರುವುದು ಎಲ್ಲರಿಗೂ ಗೊತ್ತಾಗುತ್ತಿದೆ. ಸ್ನೇಹಿತ್‌ಗೆ ರಿಯಲ್ ಆಗಿ ಭಾವನೆಗಳು ಹುಟ್ಟಿಕೊಂಡಿರಬಹುದು. ಆ ಅನುಮಾನ ಅವರ ನಡವಳಿಕೆಯಲ್ಲಿ ಕಾಣಿಸುತ್ತಿದೆ. ನಮ್ರತಾ ಕೊಂಚ ಬೇಸರದಲ್ಲಿದ್ದಾರೆ ಎಂದಾಗಲೂ ಅವರಿಂದ ಅದನ್ನು ಸಹಿಸುವುದಕ್ಕೆ ಆಗುತ್ತಿಲ್ಲ. ಬೇಗ ನೊಂದುಕೊಳ್ಳುತ್ತಾರೆ.
ಹಾಲು-ಕಾಫಿಯಂತೆ ಒಂದಾಗುತ್ತಾರಾ?
ತುಕಾಲಿ ಸಂತೂ ಸ್ನೇಹಿತ್‌ಗೆ ಸಿಕ್ಕಾಪಟ್ಟೆ ರೇಗಿಸುತ್ತಿದ್ದಾರೆ. ಸ್ನೇಹಿತ್ ಸರಿಯಾಗಿ ಒಂದು ಕಡೆ ಟ್ರೈ ಮಾಡುವುದಿಲ್ಲ. ಎಲ್ಲರಿಗೂ ಕಾಳು ಹಾಕುತ್ತಾರೆ ಎಂದಿದ್ದಾರೆ. ಮೊದಲ ದಿನವೇ ಅವರು ಹಾಲು ತಂದು ಇವರು ಕಾಫಿ ಪುಡಿ ತಂದು ಎಲ್ಲರಿಗೂ ಸಕ್ಕರೆ ಇಲ್ಲದ ಕಾಫಿ ಕೊಟ್ಟಿದ್ದರು. ಈಗ ನಮ್ರತಾ, ಸ್ನೇಹಿತ್ ಬಾಳಲ್ಲಿ ವಿತ್ ಶುಗರ್ ಕಾಫಿ ಆಗುತ್ತಾರಾ ಎಂದೇ ಕುತೂಹಲದಿಂದ ಕಾಯುತ್ತಿದ್ದಾರೆ.

ಬಿಗ್ ಬಾಸ್‌ನಲ್ಲಿ ರಕ್ಷಾ ಬಂಧನದ್ದೇ ಹಬ್ಬ
ಮನೆಯವರೆಲ್ಲಾ ಸೇರಿ ಇಶಾನಿ ಹಾಗೂ ಮೈಕೆಲ್ ಸೇರಿ ಲವ್ ಮಾಡುವಂತೆ ಮಾಡಿ ಆಗಿದೆ. ಈಗ ಸ್ನೇಹಿತ್ ಹಾಗೂ ನಮ್ರತಾರದ್ದೇ ಮಾತು. ವಿನಯ್ ಹಾಗೂ ಕಾರ್ತಿಕ್ ಸೇರಿಕೊಂಡು ಸ್ನೇಹಿತ್ ಕಾಲು ಎಳೆಯುತ್ತಿದ್ದಾರೆ. ನಮ್ರತಾ ಹೆಸರೇಳಿದರೆ ಸಾಕು, ಸ್ನೇಹಿತ್ ಮುಖದ ಮೇಲೆ ಒಂದು ನಾಚುವ ನಗುವೊಂದು ಅರಳುತ್ತೆ. ಈ ಬದಲಾವಣೆಯೇ ಮನೆಯವರಿಗೆಲ್ಲಾ ಅನುಮಾನ ಮೂಡಿಸಿರುವುದು. ಅದಕ್ಕೆ ಈಗ ಇಬ್ಬರಿಗೂ ರಾಕಿ ಕಟ್ಟಿಸುವ ಪ್ಲ್ಯಾನ್ ಮಾಡುತ್ತಿದ್ದಾರೆ. ಆದರೆ, ಸ್ನೇಹಿತ್ ನೇರವಾಗಿಯೇ ಹೇಳಿದ್ದಾರೆ. ನಾನು ಯಾರಿಂದಾನೂ ರಾಕಿ ಕಟ್ಟಿಸಿಕೊಳ್ಳಲ್ಲ ಅಂತ. ಅಷ್ಟೇ ಅಲ್ಲ, ನಮ್ರತಾರನ್ನು ಕದ್ದು ನೋಡುವುದನ್ನು ವಿನಯ್ ಗಮನಿಸಿದ್ದಾರಂತೆ.


Click it and Unblock the Notifications











