BBK 10: ಸಂಗೀತಾ ಮೇಲೆ ಕೆಂಡಕಾರುತ್ತಿರುವ ಇಶಾನಿ.. ಮೈಕಲ್ ವಿಚಾರಕ್ಕೆ ಚಾರ್ಲಿ ಬೆಡಗಿ ಫುಲ್ ಶಾಕ್!
ಬಿಗ್ ಬಾಸ್ ಮನೆಯಲ್ಲಿ ನಾಮಿನೇಷನ್ ಪ್ರಕ್ರಿಯೆ ಬಹಳ ಮುಖ್ಯವಾಗುತ್ತದೆ. ಎಷ್ಟೋ ಸಲ ಇದು ವೈಯಕ್ತಿಕವಾಗಿ ತಿರುಗುತ್ತದೆ. ಇನ್ನು ಕೆಲವೊಂದು ಸಲ ತಪ್ಪು ಗ್ರಹಿಕೆಯಾಗಿರುತ್ತದೆ. ನಾಮಿಮೇಷನ್ ಎಂಬ ವಿಚಾರ ಬಂದಾಗಲೇ ಚೆನ್ನಾಗಿದ್ದ ಬಾಂಧವ್ಯಗಳು ಕೂಡ ಬಿರುಕು ಬಿಡುತ್ತವೆ.
ಬಿಗ್ ಬಾಸ್‌ನಲ್ಲಿ ಕೆಲವೊಂದು ಸಲ ಓಪನ್ ಆಗಿ ನಾಮಿನೇಷನ್ ನಡೆದರೆ, ಇನ್ನು ಕೆಲವೊಂದು ಸಲ ಕನ್ಫೇಷನ್ ರೂಮಲ್ಲಿ, ಯಾರಿಗೂ ತಿಳಿಯದಂತೆ ನಾಮಿನೇಷನ್ ನಡೆದಿರುತ್ತದೆ. ಅದನ್ನೇ ಇವತ್ತು ಟಾಸ್ಕ್ ಆಗಿ ಬಿಗ್ ಬಾಸ್ ಪರಿವರ್ತನೆ ಮಾಡಿತ್ತು. ಅದರಲ್ಲಿ ಇಶಾನಿ ಹಾಗೂ ಸಂಗೀತಾ ನಡುವೆ ಹಾಗೂ ಪ್ರತಾಪ್ ಹಾಗೂ ತನಿಷಾ ನಡುವೆ ಬಿರುಕು ಬಿಟ್ಟಿದೆ.

ಹೊಸ ಟಾಸ್ಕ್‌ನ ರೂಲ್ಸ್ ಏನು?
ಬಿಗ್ ಬಾಸ್ ಅಂದ್ರೇನೆ ವಿಭಿನ್ನ ಟಾಸ್ಕ್‌ಗಳಿಗೆ ಎತ್ತಿದ ಕೈ. ಎಷ್ಟೋ ಜನ ಬಿಗ್ ಬಾಸ್ ನೋಡುವುದು ಟಾಸ್ಕ್‌ಗಳಿಗಾಗಿ. ಇವತ್ತು ನಾಮಿನೇಷನ್ ಕಾರಣಗಳನ್ನೇ ಟಾಸ್ಕ್ ಆಗಿ ತಿರುಗಿಸಿದೆ. ಮೊದಲಿಗೆ ಕಾರಣವನ್ನು ಹೇಳುತ್ತೇನೆ. ಆ ಕಾರಣ ಯಾರು ಕೊಟ್ಟಿದ್ದಾರೆ ಎಂಬುದನ್ನು ಊಹಿಸಿ, ಮುಖಕ್ಕೆ ಕ್ರೀಂ ಮೆತ್ತಬೇಕು. ಸರಿಯಾಗಿ ಯಾವ ತಂಡ ಹೆಚ್ಚು ಊಹಿಸುವುದೋ, ಅವರಿಗೆ ವಿಶೇಷ ಅಧಿಕಾರ ನೀಡುತ್ತೇವೆ ಎಂದು ಘೋಷಣೆಯಾಗಿತ್ತು. ಅದರಂತೆ ಮತ್ತೆ ಗಂಧದಗುಡಿ ತಂಡ ಗೆಲುವು ಸಾಧಿಸಿತು. ಸಂಗೀತಾ ಅವರನ್ನು ಬಚಾವ್ ಮಾಡಿ, ಸ್ನೇಹಿತ್‌ನನ್ನು ನಿರ್ಬಂಧ ಮಾಡಲಾಯಿತು.
ಸಂಗೀತಾ ಟಾರ್ಗೆಟ್ ಮಾಡಲು ಕಾರಣವೇನು..?
ಬಿಗ್ ಬಾಸ್ ಒಬ್ಬೊಬ್ಬರನ್ನೇ ಕರೆದರು. ಅದರಲ್ಲಿ ಮೊದಲು ಇಶಾನಿಯನ್ನು ಕರೆಯಲಾಗಿತ್ತು. ಅವರು ನಾಮಿನೇಷನ್ ಆಗಿದ್ದರಿಂದ ಲವ್ ಮಾಡಿದರೆ ಸೇಫ್ ಆಗಬಹುದು ಎಂದುಕೊಂಡಿದ್ದಾರೆ ಎಂದು ತುಕಾಲಿ ಸಂತೂ ಕಾರಣ ನೀಡಿ, ನಾಮಿನೇಷನ್ ಮಾಡಿದ್ದರು. ಆದರೆ, ಇಶಾನಿ ಊಹೆ ಮಾಡಿದ್ದು, ಸಂಗೀತಾ ಬಗ್ಗೆ. ಮೈಕಲ್ ಜೊತೆಗೆ ಇದ್ದರೆ ಅವರಿಗೆ ಜೆಲಸ್ ಫೀಲ್ ಆಗುತ್ತದೆ ಎಂಬ ರೀತಿಯ ಕಾರಣಗಳನ್ನು ನೀಡಿದರು. ಆದರೆ ಇಶಾನಿ ಊಹೆ ತಪ್ಪು ಎಂದೇ ಬಿಗ್ ಬಾಸ್ ಹೇಳಿದರು.
ಇಶಾನಿ ಮಾತಿಗೆ ಸಂಗೀತಾ ಶಾಕ್
ಇಶಾನಿಗೆ ಒಂದು ತಪ್ಪು ಕಲ್ಪನೆ ಇದೆ. ಮೈಕೆಲ್‌ಗೆ ಸಂಗೀತಾ ಮೇಲೆ ಮನಸ್ಸಾಗಿದೆ ಎಂಬ ರೀತಿ. ಹೀಗಾಗಿ ಸಂಗೀತಾ ಮೇಲೆ ಯುದ್ಧಕ್ಕೆ ಆಗಾಗ ಹೋಗುತ್ತಲೆ ಇರುತ್ತಾರೆ. ಈಗ ನಾಮಿನೇಷನ್ ಕಾರಣ ಅದಕ್ಕೆ ಸಿಂಕ್ ಆಗಿದೆ. ಆದರೆ, ಇಶಾನಿ ಹೇಳಿದ ಮಾತುಗಳಿಗೆ ಸಂಗೀತಾ ನೊಂದು ಕೊಂಡಿದ್ದಾರೆ. ಬಿಗ್ ಬಾಸ್ ಬೇರೆ ಊಹೆ ತಪ್ಪಾಗಿದೆ ಎಂದಾಗಲೇ, ಇಶಾನಿಗೂ ಶಾಕ್ ಆಗಿದೆ. ಬಳಿಕ ಸಂಗೀತಾ ಬಳಿ ಕ್ಷಮೆ ಕೇಳುವುದಕ್ಕೆ ಹೋಗಿದ್ದಾರೆ. ಆದರೆ ಸಂಗೀತಾ ಆ ಕ್ಷಮೆಯನ್ನು ರಿಸೀವ್ ಮಾಡಿಕೊಂಡಿಲ್ಲ.
ಇಶಾನಿ ಮನಸ್ಸಲ್ಲಿದ್ದ ಕೋಪ ಹೊರ ಬಂತು
ಇಶಾನಿ ನೀಡಿದ ಕಾರಣಕ್ಕೆ ಸಂಗೀತಾಗೆ ಶಾಕ್ ಆಗಿದ್ದು, ಮೈಕೆಲ್ ಬಳಿಯೇ ಉತ್ತರ ಕೇಳಿದ್ದಾರೆ. ನಿಮ್ಮ ಹುಡುಗಿಗೆ ನನ್ನ ಬಗ್ಗೆ ಈ ರೀತಿಯೆಲ್ಲಾ ಅಭಿಪ್ರಾಯವಿದೆಯಾ. ನಾನು ಯೋಚನೆಯನ್ನೆ ಮಾಡದ ಕಾರಣಗಳನ್ನೆಲ್ಲಾ ಹೇಳಿದ್ದಾಳೆ ಎಂದೇ ಬೇಸರ ಮಾಡಿಕೊಂಡಿದ್ದಾರೆ. ಬಳಿಕ ಇಶಾನಿಗೂ ಕ್ಲಾರಿಟಿ ಕೊಟ್ಟಿದ್ದಾರೆ. ನೀವೇಳಿದ ಯಾವ ಮಾತುಗಳು ನನ್ನ ಯೋಚನೆಗೆ ನಿಲುಕದ್ದು. ಜೆಲಸ್ ಅಂತೆ, ಕೋಪ ಅಂತೆ ಈ ಮಾತುಗಳೆಲ್ಲಾ ಸರಿ ಆಗುತ್ತಾ? ಎಂದು ಪ್ರಶ್ನೆ ಮಾಡಿದ್ದಾರೆ.


Click it and Unblock the Notifications











