BBK 10: ವರ್ತೂರ್ ಸಂತೋಷ್ ಮನಸ್ಸು ನೊಂದಿದ್ದೇಕೆ ? ಇದೇ ಕಾರಣಕ್ಕೆ ಹೊರಗೆ ಬರಲು ಹಠ ಹಿಡಿದಿದ್ದಾರಾ ?

By ಎಸ್ ಸುಮಂತ್

ಬಿಗ್ ಬಾಸ್ ಮನೆಯಲ್ಲಿ ಯಾವ ಸೀಸನ್‌ನಲ್ಲೂ ನಡೆಯದಂತಹ ಘಟನೆಯೊಂದು ನಡೆದಿದೆ. ಲಕ್ಷಾಂತರ ಜನರ ಬೆಂಬಲವಿದ್ದರು ಮನೆಯಿಂದ ಹೊರಗೆ ಬರುತ್ತೀನಿ ಅಂತ ವರ್ತೂರು ಸಂತೋಷ್ ಹಠ ಹಿಡಿದಿದ್ದಾರೆ. ಒಬ್ಬ ರೈತನಾಗಿ ಇಷ್ಟೊಂದು ಜನರ ಪ್ರೀತಿ ಗಳಿಸಿದ್ದಾರಾ ಎಂಬ ಅನುಮಾನ ಕಿಚ್ಚ ಸುದೀಪ್ ಹೇಳಿದ ವೋಟ್‌ಗಳಿಂದಾನೇ ತಿಳಿದಿದೆ.

ವರ್ತೂರ್ ಸಂತೋಷ್ ಎಷ್ಟೇ ಸಮಾಧಾನ ಮಾಡಿದರೂ ಸಮಾಧಾನವಾಗುತ್ತಿಲ್ಲ. ಹಿಡಿದ ಹಠ ಬಿಡುತ್ತಿಲ್ಲ. ಸುದೀಪ್ ಇಷ್ಟೊಂದು ತಾಳ್ಮೆ ವಹಿಸಿ ಹೇಳಿದ್ದು ವರ್ತೂರ್ ಸಂತೋಷ್‌ಗೆ ಮಾತ್ರ ಅನ್ನಿಸುತ್ತೆ. ಆದರೂ, ಒಪ್ಪದ ಕಾರಣ ಬೇಸರಗೊಂಡ ಕಿಚ್ಚ, ಇವತ್ತಿನ ಎಲಿಮಿನೇಷನ್ ರೌಂಡ್ ಅನ್ನೇ ಕ್ಯಾನ್ಸಲ್ ಮಾಡಿದ್ದಾರೆ.

BBK 10 Sunday with Sudeepa episode Kichcha Cancel Elimination Varthu Santhu Upset

ತುಕಾಲಿ ಸಂತೂ ಅವರದ್ದು ಅದೆಷ್ಟು ಡಬ್ಬಲ್ ಗೇಮ್

ಎಲಿಮಿನೇಷನ್ ರೌಂಡ್ ಸಂಪೂರ್ಣವಾಗುವುದಕ್ಕೂ ಮುನ್ನವೇ ವರ್ತೂರ್ ಸಂತೋಷ್ ಅವರಿಗೆ ನಾನೇ ಹೋಗುವುದು ಎನಿಸಿತ್ತೋ ಏನೋ. ಅದಕ್ಕೆ ತನ್ನ ಆತ್ಮೀಯರಿಗೆ ಆಲ್ ದಿ ಬೆಸ್ಟ್ ಹೇಳಿದ್ದರು. ಆದರೆ ತುಕಾಲಿ ಸಂತು ಅಲ್ಲಿ ನಿಂತು ಸಮಾಧಾನ ಮಾಡಿದ್ದು‌ ಮಾಡಿದ್ದೆ. ಆದರೆ, ವೇದಿಕೆ ಮೇಲೆ ಕಿಚ್ಚ ಸುದೀಪ್, ಮನೆಯಿಂದ ಯಾರು ಹೊರಗೆ ಹೋಗಬೇಕು ಎಂದು ಕೇಳಿದಾಗ, ತುಕಾಲಿ ಸೇರಿದಂತೆ ಹಲವರ ಬಾಯಲ್ಲಿ ಬಂದಿದ್ದು, ವರ್ತೂರ್ ಸಂತೋಷ್ ಹೋಗಬೇಕು ಅಂತ. ತಕ್ಷಣಕ್ಕೆ ಪ್ಲೇಟ್ ಬದಲಾಯಿಸುವ ತುಕಾಲಿ ಅವರನ್ನು ಬೇರೆಯವರು ನಂಬುವುದಾದರೂ ಹೇಗೆ.

ಎಲ್ಲರ ಟಾರ್ಗೆಟ್‌ನಿಂದ ಬೇಸರಗೊಂಡ ವರ್ತೂರು

ವರ್ತೂರು ಸಂತೋಷ್ ಮನೆಯಿಂದ ಹೋಗಲೇಬೇಕೆಂದು ಹಠ ಹಿಡಿದಾಗ ಎಲ್ಲರೂ ಸಮಾಧಾನ ಮಾಡಿದ್ದಾರೆ. ಇಂಥ ಅವಕಾಶ ಮತ್ತೆ ಸಿಗುವುದಿಲ್ಲ ಎಂದಿದ್ದಾರೆ. ಆಗ ವರ್ತೂರು ಹೇಳಿದ್ದು ಒಂದೇ ಮಾತು. ಯಾಕೆ ನಾನು ಟಾಸ್ಕ್ ಆಡದೆ ನೀವೂ ಗೆದ್ದು ಬಿಟ್ಟಿದ್ದೀರಾ. ಯಾವಾಗಲೂ ಅದನ್ನೇ ಹೇಳುತ್ತೀರಾ. ನಿಮ್ಮ ಜೊತೆ ನಾನು ಇರುವುದಕ್ಕೆ ಆಗಲ್ಲ ಎಂದಿದ್ದಾರೆ. ಬಳಿಕ ಸಿರಿ ಅವರ ಬಳಿ ಮಾತನಾಡುತ್ತಾ, "ಇಲ್ಲಿ ಒಂದೊಂದಕ್ಕೂ ಮಾತನಾಡುವುದು. ಸಕ್ಕರೆ ತಿಂದರೂ ಮಾತನಾಡುತ್ತಾರೆ ಅಕ್ಕ. ಇವತ್ತು ಅಷ್ಟು ಲಕ್ಷ ಜನ ವೋಟ್ ಹಾಕಿದ್ದಾರೆ. ಇಲ್ಲಿಯೇ ಇದ್ದರೆ ಅವರಿಗೆ ಮತ್ತೆ ಮೋಸ ಮಾಡಿದ ಹಾಗೇ ಆಗುತ್ತೆ‌. ನನ್ನ ಆಚೆ ಕಡೆ ನೋಡಿ ಗೌರವ ಕೊಟ್ಟು ಕರೆಸಿಕೊಂಡು ಬಂದಿದ್ದಾರೆ. ಮೂರು ತಿಂಗಳು ಇದ್ದು ಬಾ ಅಂತ ಕಳುಹಿಸಿದ್ದರು. ಆದರೆ,ಇಲ್ಲಿ ಒಂದು ದಿನ ಇರುವುದಕ್ಕೂ ಆಗುತ್ತಿಲ್ಲ" ಎಂದಿದ್ದಾರೆ.

ವರ್ತೂರು ಸಂತೋಷ್‌ಗೆ ಪ್ರತಾಪ್ ಸಮಾಧಾನ

ಪ್ರತಾಪ್‌ಗೆ ವರ್ತೂರು ಪರಿಸ್ಥಿತಿ ಬೇಗ ಅರ್ಥವಾದಂತೆ ಕಾಣುತ್ತಿದೆ. ಅದಕ್ಕೆ ಬೇರೆ ಕರೆದುಕೊಂಡು ಹೋಗಿ ಸಮಾಧಾ‌ನ ಮಾಡುವ ಪ್ರಯತ್ನ ಮಾಡಿದ್ದಾರೆ. "ಹೋಗಲೇಬೇಕಾ. ಇದು ಮಾತು ಅಷ್ಟೇ.. ಇದೊಂದು ವಾರ ಇದ್ದು ನೋಡಿ. ನನ್ನನ್ನ ಎಷ್ಟೆಲ್ಲ ಅಂದ್ರು ಅಣ್ಣಾ. ನೀವೂ ಈ ಮನೆಯಲ್ಲಿ ಇದ್ದರೆ ನನಗೂ ಧೈರ್ಯ ಅಣ್ಣ. ಇದೊಂದು ವಾರ ಇದ್ದು ಬಿಡಿ" ಎಂದಿದ್ದಾರೆ.

ವರ್ತೂರು ಸಮಧಾನ ಮಾಡಲು ಬಂದರು ಭಾಗ್ಯಾ

ವರ್ತೂರು ಹುಲಿ ಉಗುರು ಕೇಸಲ್ಲಿ ಜೈಲಿಗೆ ಹೋಗಿ ಬಂದ ಮೇಲೆ ಎರಡು ವಾರ ಅವರನ್ನೇ ಟಾರ್ಗೆಟ್ ಮಾಡಿದ್ದಾರೆ ಮನೆಯವರು. ಇದು ವರ್ತೂರು ಸಂತೋಷ್ ಅವರನ್ನು ಇನ್ನಷ್ಟು ನೋವಿಗೀಡು ಮಾಡಿದೆ. ನೋವಲ್ಲಿರುವ ಸಂತೋಷ್‌ಗೆ ಸಮಾಧಾನ ಮಾಡಲು ಭಾಗ್ಯಾ ಬಂದಿದ್ದಾರೆ. ತಮ್ಮನಂತೆ ಪಕ್ಕದಲ್ಲಿ ಕೂರಿಸಿಕೊಂಡು ಸಮಾಧಾನ ಮಾಡುವ ಪ್ರಯತ್ನ ಮಾಡಿದ್ದಾರೆ. ಭಾಗ್ಯಾರ ಮಾತಿಗೆ ವರ್ತೂರು ಸಂತೋಷ್ ಮನಸ್ಸು ಎಷ್ಟರಮಟ್ಟಿಗೆ ತಿಳಿಯಾಗುತ್ತೆ ಎಂಬುದನ್ನು ನೋಡಬೇಕಿದೆ.

More from Filmibeat

English summary
BBK 10 Sunday with Sudeepa episode Kichcha Cancel Elimination Varthu Santhu Upset:
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X