BBK 10: ಸೂಪರ್ ಸಂಡೇ ವಿತ್ ಸುದೀಪ ಪಂಚಾಯ್ತಿ ತುಕಾಲಿ ಸಂತೋಷ್ ಹೈಲೈಟ್.. ಒಂದು ಗಂಟೆ ಇವರದ್ದೇ ಚರ್ಚೆ!

By ಎಸ್ ಸುಮಂತ್

ಬಿಗ್ ಬಾಸ್ ಎಂದಾಗ ವಾರದ ಕಥೆ ಕಿಚ್ಚನ ಜೊತೆ, ಸೂಪರ್‌ ಸಂಡೇ ವಿತ್ ಸುದೀಪ ಕಾರ್ಯಕ್ರಮಕ್ಕಾಗಿಯೇ ಬೇರೆ ಪ್ರೇಕ್ಷಕರು ಇದ್ದಾರೆ. ವಾರಪೂರ್ತಿ ಬಿಗ್ ಬಾಸ್ ನೋಡದೆ ಹೋದರೂ, ಎರಡು ದಿನದಲ್ಲಿ ವಾರಪೂರ್ತಿ ಏನಾಯಿತು ಎಂಬುದನ್ನು ತಿಳಿದುಕೊಳ್ಳಬಹುದು. ಅದರಲ್ಲೂ ಕಿಚ್ಚ ಸುದೀಪ್ ನಡೆಸಿಕೊಡುವ ಪಂಚಾಯ್ತಿ ಅದ್ಭುತವಾಗಿರುತ್ತದೆ.

ಕಿಚ್ಚನಿಗೂ ಹೆಚ್ಚು ಕಂಟೆಂಟ್ ಸಿಗುವುದು ಒಳಗಿರುವ ಸದಸ್ಯರಿಂದಾನೇ. ಅವರು ಮಾಡುವ ಕಾಮಿಡಿ, ಟಾಸ್ಕ್‌ಗಳು, ಗಾಸಿಪ್‌ಗಳು, ತಪ್ಪುಗಳು, ಪ್ರತಿಭೆ ಅನಾವರಣ ಹೀಗೆ ಅನೇಕ ವಿಚಾರಗಳಲ್ಲಿ ಸ್ಪರ್ಧಿಗಳು ಆಕ್ಟೀವ್ ಆಗಿದ್ದಾಗ ಮಾತ್ರ ಕಂಟೆಂಟ್ ಸಿಗುವುದು. ಆದರೆ, ಇವತ್ತಿನ ಎಪಿಸೋಡ್ ನೋಡಿದಾಗ ಸ್ಪರ್ಧಿಗಳು ಎಷ್ಟು ಸೈಲೆಂಟ್ ಆಟ ಆಡುತ್ತಾ ಇದ್ದಾರೆ ಎಂಬುದು ಗೊತ್ತಾಗಿದೆ.

bbk-10-kichcha-sudeep-tukali-santhosh

ಸಂತೂಗಾಗಿಯೇ ಒಂದು ಗಂಟೆ ಕಳೆದ ಪಂಚಾಯ್ತಿ

ಬಿಗ್ ಬಾಸ್ ಮನೆಯಲ್ಲಿ ಎಲ್ಲರನ್ನು ನಗಿಸುವುದಕ್ಕೆ ಇರುವುದು ತುಕಾಲಿ ಸಂತು. ಕೆಲವೊಮ್ಮೆ ಆ ಕಾಮಿಡಿಯೇ ಬೇರೆಯವರ ಮನಸ್ಸನ್ನು ನೋಯಿಸಿದೆ ಕೂಡ. ಒಂದೆರಡು ದಿನ ಕಾರ್ತಿಕ್ ಹಾಗೂ ವಿನಯ್ ಕೂಡ ನಕ್ಕು ನಗಿಸಿದ್ದರು. ಪಂಚಾಯ್ತಿಯಲ್ಲಿ ಕಿಚ್ಚ ಸುದೀಪ್ ತುಕಾಲಿ ಮಾತಿನಿಂದಾನೇ ಶುರು ಮಾಡಿದರು. ಹಬ್ಬಕ್ಕೆ ಎರಡು ಲಕ್ಷ ಹಂಚುವ ವಿಚಾರದ ಬಗ್ಗೆ ಹೇಳಿದರು. ಪ್ರತಾಪ್ ಡ್ರೋನ್ ಹಾರಿಸಿದರೆ ನೀವೂ ಹಣವನ್ನೇ ಹಾರಿಸಿದಿರಿ ಎಂದರು.

ಸಿರಿ ಬಗ್ಗೆ ವಿಡಿಯೋ ಹಾಕಿ ಶಾಕ್

ತುಕಾಲಿ ಸಂತು ಕುಳಿತು ಯಾರ್ಯಾರ ಬಗ್ಗೆಯೋ ಮಾತನಾಡುತ್ತಾ ಇರುತ್ತಾರೆ. ಸಂತೂ ಮಾತ್ರ ಅಲ್ಲ ಎಲ್ಲರೂ ಎಲ್ಲರ ಬಗ್ಗೆ ಮಾತನಾಡುತ್ತಾರೆ. ಆದರೆ, ತುಕಾಲಿ ಸಂತೂಗೆ ಕಿಚ್ಚ ಸುದೀಪ್ ಕಾಡಿಸುವುದು ಯಾಕಂದ್ರೆ ತುಂಬಾ ಸೀರಿಯಸ್ ಆಗಿ ತೆಗೆದುಕೊಂಡು, ಮನಸ್ಸಿಗೆ ತೆಗೆದುಕೊಳ್ಳುವುದಿಲ್ಲ ಎಂಬ ಕಾರಣಕ್ಕೆ. ಈಗ ಸಿರಿ ಬಗ್ಗೆ ಕೂತು ಮಾತನಾಡಿದ ವಿಡಿಯೋವನ್ನು ಹಾಕಿ, ಮನರಂಜನೆ ತೆಗೆದುಕೊಂಡಿದ್ದಾರೆ. ಸಿರಿ ಮುಖದಲ್ಲಂತು ಬೇಸರವೂ ಕಾಣಿಸಿತ್ತು, ಕೋಪವೂ ಕಾಣಿಸಿತ್ತು.

ಎಲ್ಲರ ಬಗ್ಗೆ ಸಂತೂ ಕಡೆಯಿಂದ ಕಾಮಿಡಿ

ಇಷ್ಟೆಲ್ಲ ಆದ ಮೇಲೆ ಸಂತೂ ಮೇಲೆಯೇ ಕಾಮಿಡಿ ಮುಂದುವರೆದಿತ್ತು. ಮನೆಯವರ ಬಗ್ಗೆ ಸಂತೂಗೆ ಇರುವ ಅಭಿಪ್ರಾಯಗಳ ಬಗ್ಗೆ ಹೇಳಿಸುವುದಕ್ಕೆ ಶುರು ಮಾಡಿದರು. ಮೊದಲಿಗೆ ಮನೆಯಲ್ಲಿ ಎಲ್ಲರ ಬಗ್ಗೆ ಉತ್ತಮ ಅಭಿಪ್ರಾಯಗಳನ್ನು ಹೇಳಬೇಕು. ಚೇಂಜ್ ಎಂದಾಕ್ಷಣ ಸಂತೂ ಮನಸ್ಸಲ್ಲಿ ಏನು ರಿಯಲ್ ಭಾವನೆ ಇದೆಯೋ ಅದನ್ನ ತಿಳಿಸಬೇಕು. ಈ ಗೇಮ್ ಬಹಳಷ್ಟು ಸಮಯ ನಡೆದಿದೆ. ತುಕಾಲಿ ಸಂತೂ ಕೂಡ ಈ ವಿಚಾರದಲ್ಲಿ ಮನರಂಜನೆ ನೀಡಿದ್ದಾರೆ.

ಸಂತೂ ಬಗ್ಗೆ ವಿನಯ್, ಪ್ರತಾಪ್ ಕಾಮಿಡಿ

ಬಿಗ್ ಬಾಸ್ ಮನೆಯಲ್ಲಿ ತುಕಾಲಿ ಸಂತೂಗೆ ಸರಿಯಾಗಿ ತಿರುಗೇಟು ನೀಡುವುದು ವಿನಯ್ ಹಾಗೂ ಪ್ರತಾಪ್. ತುಕಾಲಿ ಸಂತೂ ಎಲ್ಲರ ವಿಚಾರವಾಗಿ ಕಾಮಿಡಿ ಮಾಡುತ್ತಾ ಇದ್ದರೆ ಪ್ರತಾಪ್‌ಗೆ ಕುತ್ತಿಗೆಯ ತನಕ ಕೋಪವಿದೆ. ಹೀಗಾಗಿ ಕಿಚ್ಚ ಸುದೀಪ್ ಅವಕಾಶ ಕೊಟ್ಟ ಕೂಡಲೇ ವಿನಯ್ ಹಾಗೂ ಪ್ರತಾಪ್ ತುಕಾಲಿ ಬಗ್ಗೆ ಹೇಳಿದ್ದಾರೆ. ಇವತ್ತಿನ ಪಂಚಾಯ್ತಿಯಲ್ಲಿ ಹೆಚ್ಚಿನ ಸಮಯ ಸಂತೋಷ್ ಹೆಸರಲ್ಲಿಯೇ ಕಳೆದು ಹೋಯಿತು. ನಿನ್ನೆ ಕೂಡ ಸುದೀಪ್ ಅವರು ಇದನ್ನೇ ಹೇಳಿದ್ದರು. ಯಾವ ಕಂಟೆಂಟ್ ಕೂಡ ನಿಮ್ಮಿಂದ ಸಿಗುತ್ತಿಲ್ಲ ಎಂದಿದ್ದರು. ಇವತ್ತಿನ ಪಂಚಾಯ್ತಿ ನೋಡಿದಾಗ ಅದೇ ಅನ್ನಿಸಿದ್ದು.

More from Filmibeat

English summary
BBK 10 Super Sunday with Sudeepa: one hour content goes with Tukali Santhosh only
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X