BBK 10: ರಾಕಿನಾ.. ಪ್ರೀತಿನಾ..? ನಮ್ರತಾ, ಸ್ನೇಹಿತ್‌ಗೆ ಸಮಯ ನೀಡಿದ್ದೇಕೆ ಕಿಚ್ಚ ಸುದೀಪ್?
ಬಿಗ್ ಬಾಸ್ ಮನೆಯಲ್ಲಿ ಪ್ರತಿ ಸೀಸನ್‌ನಲ್ಲೂ ಲವ್ ಸ್ಟೋರಿಗಳು ಆರಂಭವಾಗುವಂತೆ ಈ ಸೀಸನ್‌ನಲ್ಲಿಯೂ ಎರಡು ಲವ್ ಸ್ಟೋರಿಗಳು ಸದ್ದು ಮಾಡುತ್ತಿವೆ. ಕಾರ್ತಿಕ್ ಹಾಗೂ ಸಂಗೀತಾ, ಲವ್ ಅಲ್ಲ ಫ್ರೆಂಡ್‌ಶಿಪ್ ಅಂದ್ರು ಕೂಡ ನೋಡುಗರಿಗೆ ಅದು ಲವ್ ಅಂತಾನೇ ಅನಿಸುತ್ತದೆ. ಅದರ ಜೊತೆಗೆ ಇಶಾನಿ ಹಾಗೂ ಮೈಕಲ್ ಅಧಿಕೃತವಾಗಿ ಅನೌನ್ಸ್ ಮಾಡಿಕೊಂಡಿದ್ದಾರೆ.
ಈಗ ಪಂಚಾಯ್ತಿಯಲ್ಲಿ ಸದ್ದು ಮಾಡುತ್ತಿರುವುದು ನಮ್ರತಾ ಹಾಗೂ ಸ್ನೇಹಿತ್ ಲವ್ ಸ್ಟೋರಿ. ಕಳೆದ ವಾರ ಅದಾಗಲೇ ಮನೆ ಮಂದಿಯೆಲ್ಲಾ ಸೇರಿ ಸ್ನೇಹಿತ್‌ನನ್ನು ಸಾಕಷ್ಟು ರೇಗಿಸಿದ್ದಾರೆ. ನಮ್ರತಾ ಕೂಡ ಮನೆಯವರ ಜೊತೆಗೆ ಸೇರಿ ಸ್ನೇಹಿತ್‌ಗೆ ಕಾಟ ಕೊಡುತ್ತಿರುತ್ತಾರೆ.

ಸ್ನೇಹಿತ್‌ಗೆ ರಾಕಿಯದ್ದೇ ಭಯ
'ಸೂಪರ್ ಸಂಡೇ ಸುದೀಪ' ಜೊತೆಗೆ ಪಂಚಾಯತಿಯಲ್ಲಿ ಎಸ್ ಆರ್ ನೋ ಬೋರ್ಡ್ ಮೂಲಕ ಹಲವು ವಿಚಾರಗಳನ್ನು ಕಿಚ್ಚ ಸುದೀಪ್ ಕೆದಕುತ್ತಾರೆ. ಮನೆಯೊಳಗೆ ನಡೆದ ವಿಚಾರಗಳು ಕೆಲವೊಮ್ಮೆ ತಪ್ಪಾಗಿ ಅರ್ಥೈಸಿಕೊಳ್ಳಲಾಗಿರುತ್ತದೆ. ಆದರೆ, ಕಿಚ್ಚನ ಪಂಚಾಯ್ತಿಯಲ್ಲಿ ಅದು ಸರಿ ತಪ್ಪುಗಳ ಅನಾವರಣವಾಗುತ್ತದೆ. ಜೊತೆಗೆ ಮನೆಯವರು ಮನಸ್ಥಿತಿಯೂ ಎಲ್ಲರ ಮುಂದೆ ತೆರೆದುಕೊಳ್ಳುತ್ತದೆ. ಇದೀಗ ಈ ವಾರದ ಪಂಚಾಯ್ತಿಯಲ್ಲಿ ನಮ್ರತಾ ಹಾಗೂ ಸ್ನೇಹಿತ್ ಲವ್ ಸ್ಟೋರಿ ಜೊತೆಗೆ, ರಾಕಿ ವಿಚಾರವೂ ಸದ್ದು ಮಾಡಿದೆ. ಕಳೆದ ಬಾರಿ ರೇಗಿಸುತ್ತಿರುವಾಗಲೇ ನಮ್ರತಾ ಕಡೆಯಿಂದ ರಾಕಿ ಕಟ್ಟಿಸುವ ಪ್ರಯತ್ನ ನಡೆದಿದೆ.
ನಮ್ರತಾ ಬಳಿ ಸಲಹೆ ಕೇಳುವ ಸ್ನೇಹಿತ್
ಈಗ ಪಂಚಾಯ್ತಿಯಲ್ಲೂ ಕಿಚ್ಚ ಸುದೀಪ್ ಸ್ನೇಹಿತ್ ಕಾಲೆಳೆದಿದ್ದಾರೆ. ಎಸ್ ಆರ್ ನೋ ಆಟದಲ್ಲಿ ನಮ್ರತಾ ಮೇಲೆ ಸ್ನೇಹಿತ್‌ಗೆ ಫೀಲಿಂಗ್ಸ್ ಇರುವ ಬಗ್ಗೆ ಪ್ರಶ್ನೆ ಕೇಳಿದ್ದಾರೆ. ಆಗ ಮನೆಯವರೆಲ್ಲಾ ಎಸ್ ಎಂದಿದ್ದಾರೆ. ಅದಕ್ಕೆ ಉದಾಹರಣೆಯನ್ನು ಕೊಟ್ಟಿದ್ದಾರೆ. ಸೈಲೆಂಟ್ ಆಗಿ ನಡೀತಾ ಇದೆ ಅಂತ ಅನ್ಸುತ್ತೆ ಸರ್. ಈಗ ನೋಡಿ ಶೂ, ಬಟ್ಟೆ ಎಲ್ಲಾ ಸೆಲೆಕ್ಟ್ ಮಾಡಿದ್ದು ನಮ್ರತಾ ಅವರೇ ಎಂದಾಗ ಸ್ನೇಹಿತ್ ವಿವರಣೆ ನೀಡಿದ್ದಾರೆ.
ರಾಕಿ ಕಟ್ಟಲು ಓಕೆ ಎಂದ ನಮ್ರತಾ
ಈ ರಾಕಿ ಕಟ್ಟುವ ವಿಚಾರದಲ್ಲಿ ನಮ್ರತಾ ಓಕೆ ಎಂದಿದ್ದಾರೆ. ಆದರೆ ಈ ವಿಚಾರ ಕೇಳಿದ ಸ್ನೇಹಿತ್ ಮುಖದಲ್ಲಿ ರಿಯಾಕ್ಷನ್ ಬೇರೆಯೇ ಆಗಿತ್ತು. ನೋ ನೋ ಎಂಬಂತೆ ಇತ್ತು. ಇದಕ್ಕೆ ನಮ್ರತಾ, ನಮ್ಮಿಬ್ಬರ ಮಧ್ಯೆ ಆ ಥರ ಭಾವನೆಗಳು ಏನು ಇಲ್ಲ ಸರ್. ಅದನ್ನ ನಾವಿಬ್ಬರು ಕೂತು ಮಾತನಾಡಿದ್ದೀವಿ ಎಂದಿದ್ದಾರೆ.
ಸ್ನೇಹಿತ್‌ಗೆ ಸಮಯ ನೀಡಿದ ಕಿಚ್ಚ
ಈ ರಾಕಿ ವಿಚಾರಕ್ಕೆ ಸ್ನೇಹಿತ್ ಸಾಕಷ್ಟು ಗೊಂದಲಕ್ಕೀಡಾಗಿದ್ದಾರೆ. ನಮ್ರತಾ ಅವರ ಪ್ರತಿಕ್ರಿಯೆಗೆ ಕಿಚ್ಚ ಸುದೀಪ್, ರಾಕಿ ಕಟ್ಟಿಸುವ ಮಾತನ್ನು ಆಡಿದ್ದಾರೆ. ನಿಮಗೆ ಓಕೆ ಎನಿಸಿದರೆ ಖಂಡಿತಾ ಆ ರಾಕಿಯನ್ನು ಈಗಲೇ ಕಳುಹಿಸುತ್ತೀವಿ ಎಂದಿದ್ದಾರೆ. ಆದರೆ, ಇದಕ್ಕೆ ಸ್ನೇಹಿತ್ ನೋ ಎಂದಿದ್ದಾರೆ. ನಾನು ಇಲ್ಲಿಯ ತನಕ ಯಾರಿಂದಾನೂ ರಾಕಿ ಕಟ್ಟಿಸಿಕೊಂಡಿಲ್ಲ. ಹಾಗಾಗಿ ರಾಕಿ ಕಟ್ಟಿಸಿಕೊಳ್ಳುವುದಿಲ್ಲ ಸರ್ ಎಂದಿದ್ದಾರೆ. ಅದಕ್ಕೆ ಕಿಚ್ಚ ರಾಕಿ ಕಟ್ಟಿಸುವುದಕ್ಕೆ ಸಿಕ್ಕಾಪಟ್ಟೆ ಸಮಯ ನೀಡಿದ್ದಾರೆ. ಮುಂದಿನ ಪಂಚಾಯ್ತಿಯ ತನಕ ಸಮಯ ನೀಡುತ್ತೇನೆ. ಆಮೇಲೆ ರಾಕಿ ಕಟ್ಟಿಸುತ್ತೇವೆ ಎಂದಿದ್ದಾರೆ. ಕಿಚ್ಚ ಕೊಟ್ಟ ಸಮಯಕ್ಕೆ ಸ್ನೇಹಿತ್ ಓಕೆ ಎಂದಿದ್ದಾರೆ.


Click it and Unblock the Notifications











