ವರ್ತೂರು ಸಂತೋಷ್‌ಗೆ ಮದುವೆ ಆಗಿದ್ಯಾ? ಪತ್ನಿ ಪೀಡಕನೇ? ಮಾದಕ ವ್ಯಸನಿಯೇ? ಇದೆಲ್ಲ ನಿಜವೇ?

By ಫಿಲ್ಮಿಬೀಟ್ ಡೆಸ್ಕ್

ಬಿಗ್ ಬಾಸ್ ಕನ್ನಡ ಸೀಸನ್ 10 ಒಂದಲ್ಲ ಒಂದು ರೀತಿಯಲ್ಲಿ ವೀಕ್ಷಕರನ್ನು ಸೆಳೆಯುತ್ತಿದೆ. ಅದರಲ್ಲೂ ಅಸಮರ್ಥರಾಗಿ ಬಿಗ್ ಬಾಸ್ ಮನೆಯೊಳಗೆ ಎಂಟ್ರಿ ಕೊಟ್ಟಿದ್ದ ವರ್ತೂರು ಸಂತೋಷ್ ಐದನೇ ವಾರದಲ್ಲಿ ಟಾಕ್ ಆಫ್ ದಿ ಟೌನ್ ಆಗಿದ್ದಾರೆ. ದಿನದಿಂದ ದಿನಕ್ಕೆ ಅಭಿಮಾನಿಗಳನ್ನು ಹೆಚ್ಚಿಸಿಕೊಳ್ಳುತ್ತಿದ್ದಾರೆ.

ಕಳೆದ ಸೂಪರ್‌ ಸಂಡೇ ವಿತ್ ಸುದೀಪ ಶೋನಲ್ಲಿ ವರ್ತೂರು ಸಂತೋಷ್ ಮನೆಯಿಂದ ಹೊರ ಹೋಗಬೇಕು ಅಂತ ಪಟ್ಟು ಹಿಡಿದು ಕೂತಿದ್ದರು. ಹುಲಿ ಉಗುರು ಪ್ರಕರಣದಿಂದ ನೊಂದಿದ್ದು, ಅದರಿಂದ ಹೊರಬರೋಕೆ ಆಗ್ತಿಲ್ಲ ಅಂತ ಸುದೀಪ್ ಬಳಿ ಮನವಿ ಮಾಡಿಕೊಂಡಿದ್ದರು.

Varthur Santhosh Marriage Photo goes viral

ಇಲ್ಲಿಂದ ಸೋಶಿಯಲ್ ಮೀಡಿಯಾದಲ್ಲಿ ವರ್ತೂರು ಸಂತೋಷ್ ಬಗ್ಗೆ ನಾನಾ ರೀತಿಯ ಆರೋಪ-ಪ್ರತ್ಯಾರೋಪದ ಮಾತುಗಳು ಕೇಳೋಕೆ ಸಿಗುತ್ತಿವೆ. ಯೂಟ್ಯೂನ್‌ನಲ್ಲಂತೂ ಪತ್ನಿ ಪೀಡಕ, ಮಾದಕ ವ್ಯಸನಿ ಅನ್ನೋ ವಿಡಿಯೋಗಳೆಲ್ಲ ಓಡಾಡುತ್ತಿದೆ. ಅದರಲ್ಲಿ ಒಂದು ವರ್ತೂರು ಮದುವೆ ವಿಷಯ ಕೂಡ ಚರ್ಚೆಯಾಗುತ್ತಿದೆ.

ವರ್ತೂರು ಸಂತೋಷ್‌ಗೆ ಮದುವೆ ಆಗಿದ್ಯಾ?

ಬಿಗ್ ಬಾಸ್ ಮನೆಯಲ್ಲಿ ವರ್ತೂರು ಸಂತೋಷ್‌ ಹಾಗೂ ತನಿಷಾ ಆತ್ಮೀಯರಾಗಿದ್ದಾರೆ. ಇದನ್ನು ಗಮನಿಸಿದ ಮನೆಯ ಸದಸ್ಯರು ಇಬ್ಬರೂ ರೇಗಿಸುತ್ತಿದ್ದಾರೆ. ಇದು ಬಿಗ್ ಬಾಸ್ ಮನೆಯೊಳಗೆ ನಡೆಯುತ್ತಿರುವ ಸಂಗತಿ. ಅದೇ ಸೋಶಿಯಲ್ ಮೀಡಿಯಾದಲ್ಲಿ ವರ್ತೂರು ಸಂತೋಷ್‌ಗೆ ಮದುವೆ ಆಗಿದೆ ಎನ್ನಲಾದ ಫೋಟೊಗಳು ವೈರಲ್ ಆಗುತ್ತಿವೆ. ಅಸಲಿಗೆ ವರ್ತೂರು ಸಂತೋಷ್‌ಗೆ ಮದುವೆ ಆಗಿದ್ಯಾ? ಇಲ್ಲವಾ? ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿರುವ ಫೋಟೊ ಕಥೆಯೇನು? ಅನ್ನೋ ಗೊಂದಲಕ್ಕೆ ಬಿದ್ದಿದ್ದಾರೆ ಫ್ಯಾನ್ಸ್.

ಮದುವೆ ಫೋಟೊ, ವಿಡಿಯೋ ವೈರಲ್

ವರ್ತೂರು ಸಂತೋಷ್ ಮದುವೆ ಆಗಿದ್ದಾರೆ ಎನ್ನಲಾದ ಫೋಟೊಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿವೆ. ಎಸ್. ಜಯಶ್ರೀ ಎಂಬುವವರೊಂದಿಗೆ ಮದುವೆ ನಡೆದಿದೆ ಅನ್ನೋ ಫೋಟೊವನ್ನು ನೆಟ್ಟಿಗರು ಪೋಸ್ಟ್ ಮಾಡಿದ್ದಾರೆ. ಈ ಫೋಟೊ ಬಗ್ಗೆ ಈಗ ಬಾರೀ ಚರ್ಚೆಯಾಗುತ್ತಿದೆ. ಅಲ್ಲದೆ ವಿಡಿಯೋವನ್ನೂ ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಿದ್ದಾರೆ. ಅಸಲಿಗೆ ಮದುವೆ ಆಗಿದ್ಯಾ? ಇಲ್ಲ ಇದು ನಕಲಿನಾ? ಅನ್ನೋದು ವರ್ತೂರು ಸಂತೋಷ್ ಹೇಳಬೇಕಿದೆ.

Varthur Santhosh Marriage Photo goes viral

ಪತ್ನಿ ಪೀಡಕನಾ? ಮಾದಕ ವ್ಯಸನಿಯಾ?

ವರ್ತೂರು ಸಂತೋಷ್ ಬಗ್ಗೆ ಸೋಶಿಯಲ್ ಮೀಡಿಯಾ ಕೇವಲ ಮದುವೆ ಬಗ್ಗೆ ಅಷ್ಟೇ ಸುದ್ದಿಗಳು ಓಡಾಡುತ್ತಿಲ್ಲ. ವರ್ತೂರು ಸಂತೋಷ್ ಒಬ್ಬ ಪತ್ನಿ ಪೀಡಕ, ಮಾದಕ ವ್ಯಸನಿ, ಡ್ರಗ್ಸ್ ಚಟಗಾರ, ರೌಡಿಸಂ ಮಾಡುತ್ತಾರೆ ಅಂತಲ್ಲ ಯೂಟ್ಯೂಬ್‌ನಲ್ಲಿ ವಿಡಿಯೋ ಮಾಡಿ ಹಾಕಲಾಗಿದೆ. ಇದು ವರ್ತೂರ್ ಸಂತೋಷ್ ವರ್ಚಸ್ಸು ಕುಗ್ಸಿಸಲು ಮಾಡಿರೋದಾ? ಇಲ್ಲ ನಿಜವಾಗಲೂ ವರ್ತೂರು ಸಂತೋಷ್ ಇರೋದು ಹೀಗೆನಾ? ಈ ಬಗ್ಗೆನೂ ಕಿಚ್ಚ ಸುದೀಪ್ ಮುಂದೆ ಸ್ಪಷ್ಟಪಡಿಸಬೇಕಿದೆ. ಇದರಿಂದ ಅವರ ಫಾಲೋವರ್ಸ್‌ಗಳಿಗೆ ಕ್ಲಾರಿಟಿ ಸಿಕ್ಕಂತಾಗುತ್ತೆ.

ಬಿಗ್ ಬಾಸ್ ಮನೆಯಲ್ಲಿ ಕ್ಲಾರಿಟಿ ಸಿಗುತ್ತಾ?

ವರ್ತೂರು ಸಂತೋಷ್ ಹುಲಿ ಉಗುರು ಪ್ರಕರಣಕ್ಕೆ ಸಂಬಂಧಿಸಿದಂತೆ ಜೈಲಿಗೆ ಹೋಗಿ ಬಂದಿದ್ದರು. ಇದು ಅವರ ಮನಸ್ಸಿನ ಮೇಲೆ ಪರಿಣಾಮ ಬೀರಿದ್ದು, ಮನೆಯೊಳಗೆ ಇರೋದಕ್ಕೆ ಆಗುತ್ತಿಲ್ಲ ಎಂದಿದ್ದಾರೆ. ಇದರೊಂದಿಗೆ ಹೊರಗಡೆ ಆಗುತ್ತಿರೋ ಚರ್ಚೆ ವರ್ತೂರು ಸಂತೋಷ್‌ಗೆ ಅರಿವಿದೆಯೇ? ಜೈಲಿನಿಂದ ಹೊರ ಬಂದಾಗ ಇಂತಹ ಚರ್ಚೆಗಳನ್ನು ನೋಡಿ ಬೇಸರ ಮಾಡಿಕೊಂಡಿದ್ದಾರೆಯೇ? ಇಂತಹ ಪ್ರಶ್ನೆಗಳಿಗೆ ಈ ವಾರ ಉತ್ತರ ಸಿಗುತ್ತಾ ಅನ್ನೋದನ್ನು ನೋಡಬೇಕಿದೆ.

More from Filmibeat

English summary
BBK 10: Varthur Santhosh Marriage Photo went viral
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X