BBK 10: ಮನೆಗೆ ವರ್ತೂರು ಸಂತೋಷ್ ತಾಯಿ ಎಂಟ್ರಿ.. ಕೈ ತುತ್ತು ಕೊಟ್ಟು ಮಗನಿಗೆ ಸಮಾಧಾನ ಹೇಳಿದ ಅಮ್ಮ

By ಎಸ್ ಸುಮಂತ್

ಕೆಲವೊಂದು ಸಲ ಮನಸ್ಸಿಗೆ ಆಗುವ ಗಾಯ ಯಾರು ಏನೇ ಹೇಳಿದರೂ ಕಡಿಮೆ ಆಗುವುದಿಲ್ಲ. ವರ್ತೂರು ಸಂತೋಷ್‌ಗೂ ಅದೇ ಆಗಿರುವುದು. ರೈತನಾಗಿ ಬಿಗ್ ಬಾಸ್ ಮನೆಗೆ ಎಂಟ್ರಿ ಕೊಟ್ಟಿರುವ ಸಂತೋಷ್‌ಗೆ ನಿರೀಕ್ಷೆಯೇ ಮಾಡಿರದ ನೋವು ಕಾಡಿದೆ. ಅದು ಹುಲಿ ಉಗುರು ಪ್ರಕರಣದಲ್ಲಿ ಜೈಲಿಗೆ ಹೋಗಿ ಬಂದಿದ್ದು, ಅದರಿಂದಾನೇ ಹೊರಗೆ ಬರಲು ಆಗದಂತಹ ಮನಸ್ಥಿತಿ ಇರುವಾಗ, ಮನೆ ಮಂದಿಯ ಮಾತುಗಳು ವರ್ತೂರು ಸಂತೋಷ್ ಮನಸ್ಸನ್ನು ದೊಡ್ಡ ಮಟ್ಟದಲ್ಲಿಯೇ ಕೆಡಿಸಿದೆ.

ವರ್ತೂರು ಸಂತೋಷ್‌ಗೆ ಇರುವ ಜನ ಬೆಂಬಲ ಮನೆಯೊಳಗಿನ ಯಾವ ಸೀರಿಯಲ್ ಸ್ಟಾರ್ ಗಾಗಲೀ, ಸಿನಿಮಾ ಸ್ಟಾರ್ ಗಾಗಲೀ ಇಲ್ಲವೇ ಇಲ್ಲ. ಟಾಸ್ಕ್ ವಿಚಾರದಲ್ಲಿ ಹೆಚ್ಚು ಆಟವಾಡದೆ ಇದ್ದರು ಜನ ಮಾತ್ರ ಮೊದಲು ಬೆಂಬಲಿಸುತ್ತಾ ಇರುವುದು ವರ್ತೂರು ಸಂತೋಷ್ ಅವರನ್ನೇ. ಆದರೆ, ವರ್ತೂರು ಮಾತ್ರ ತಾನು ಹೊರಗೆ ಬರಲೇ ಬೇಕೆಂದು ಹಠ ತೊಟ್ಟಿದ್ದಾರೆ.

bbk-10-vartur-santhosh-mother-entry

ಸುದೀಪ್ ಕಡೆಯಿಂದ ಬುದ್ದಿ ಮಾತು

ಸೂಪರ್ ಸಂಡೇ ವಿತ್ ಸುದೀಪ ಜೊತೆ ಪಂಚಾಯತಿಯಲ್ಲಿ ವರ್ತೂರು ಸಂತೋಷ್ ತಾನೂ ಮನೆಗೆ ಹೋಗಬೇಕೆಂದು ಹಠ ಮಾಡಿದರು. ಅವರ ಮನಸ್ಸಿನ ನೋವನ್ನು ಅರ್ಥ ಮಾಡಿಕೊಂಡ ಕಿಚ್ಚ, ಸಾಕಷ್ಟು ಸಮಾಧಾನ ಮಾಡಿದರು. 'ಹೊರಗೆ ನೀವೂ ತಿಳಿದುಕೊಂಡಂತೆ ಯಾವ ಸಮಸ್ಯೆಯೂ ಆಗುತ್ತಿಲ್ಲ. ಎಲ್ಲಾ ಆರಾಮಾಗಿನೇ ಇದೆ. ಅದೊಂದು ಕಾರಣಕ್ಕೆ ನೀವೂ ಹೊರಗೆ ಬರುವುದು ಸರಿ ಅಲ್ಲ. ಅಷ್ಟು ಲಕ್ಷ ಜನರ ಪ್ರೀತಿಗೆ ಬೆಲೆ ಕೊಡಿ' ಎಂದೇ ಹೇಳಿದರು. ಆದರೂ ವರ್ತೂರು ಸಂತೋಷ್ ಸಮಾಧಾನವಾಗಲೇ ಇಲ್ಲ.

ಭಾಗ್ಯರಿಂದಲೂ ಸಮಾಧಾನ

ನೋವಾದವರಿಗೆ ಪಕ್ಕದಲ್ಲಿ ಕೂತು ಸಮಸ್ಯೆ ಕೇಳಿದರೆ ಬಗೆ ಹರಿಯಬಹುದು ಎಂದು ಭಾಗ್ಯಾ ಅವರನ್ನು ಬಿಗ್ ಬಾಸ್ ಮನೆಯೊಳಗೆ ಕಳುಹಿಸಲಾಗಿತ್ತು. ಹಬ್ಬದ ದಿನ ಮನೆಗೆ ಬಂದ ಭಾಗ್ಯ ಎಲ್ಲರಿಗೂ ಹಬ್ಬದ ಶುಭಾಶಯ ತಿಳಿಸಿ, ಬಳಿಕ ವರ್ತೂರು ಸಂತೋಷ್ ಬಳಿ ಮಾತನಾಡಿದ್ದಾರೆ. ಅದು ಕೂಡ ಅಷ್ಟಾಗಿ ವರ್ಕೌಟ್ ಆಗಿಲ್ಲ.

ಮನೆಯವರಿಗೆಲ್ಲಾ ಅಮ್ಮನ ಕೈರುಚಿ

ಇಂದು ದೀಪಾವಳಿಯ ಎರಡನೇ ದಿನ. ಸದಸ್ಯರೆಲ್ಲ ಮನೆಯನ್ನು ಮಿಸ್ ಮಾಡಿಕೊಳ್ಳುತ್ತಾರೆ. ಹೀಗಾಗಿ ಬಿಗ್ ಬಾಸ್ ಮನೆ ಮಂದಿಗೆಲ್ಲಾ ಅವರ ತಾಯಂದಿರುವ ಮಾಡಿದ ಅಡುಗೆಯನ್ನು ಗಿಫ್ಟ್ ಆಗಿ ಕಳುಹಿಸಿದ್ದಾರೆ. ಆದರೆ, ವರ್ತೂರು ಸಂತೋಷ್‌ಗೆ ಮಾತ್ರ ಊಟ ಬಂದಿರಲಿಲ್ಲ. ಎಲ್ಲರೂ ಬಿಗ್ ಬಾಸ್‌ಗೆ ಥ್ಯಾಂಕ್ಯೂ ಹೇಳಿ, ಮನೆಯಿಂದ ಬಂದಂತ ಊಟವನ್ನು ಸವಿದರು.

ವರ್ತೂರು ಸಂತೋಷ್‌ಗಾಗಿ ಅಮ್ಮ ಎಂಟ್ರಿ

ಮನೆಗೆ ಹೋಗುತ್ತೀನಿ ಎಂದು ಹಠ ಮಾಡಿದ್ದಕ್ಕಾಗಿ ಬಿಗ್ ಬಾಸ್ ಊಟ ಕಳುಹಿಸಿಲ್ಲವಾ ಎಂದು ವರ್ತೂರು ಸಂತೋಷ್ ಕಣ್ಣೀರು ಹಾಕುತ್ತಾ ಕೂತಿದ್ದರು. ಆಗ ಪ್ರತಾಪ್ ಬಂದು ಸಮಾಧಾನ ಮಾಡಿದ್ದಾರೆ. "ಕಳುಹಿಸುತ್ತಾರೆ, ಸುಮ್ಮನೆ ಇರಿ ಅಣ್ಣ" ಎಂದಿದ್ದಾರೆ. ಅಷ್ಟರಲ್ಲಿ ವರ್ತೂರು ಸಂತೋಷ್ ಅಮ್ಮ, ಊಟದ ಸಮೇತ ಬಿಗ್ ಬಾಸ್ ಮನೆಗೆ ಎಂಟ್ರಿಯಾಗಿದ್ದಾರೆ. ಈ ಮೂಲಕ ಬೇರೆಯವರಿಗಿಂತ ವರ್ತೂರು ಸಂತೋಷ್‌ಗೆ ಸ್ಪೆಷಲ್ ಗಿಫ್ಟ್ ಸಿಕ್ಕಿದೆ. ಅಮ್ಮನನ್ನು ಕಂಡು ವರ್ತೂರು ಸಂತೋಷ್ ಮನಸ್ಸು ನಿರಾಳವಾಗಿದೆ. ಅಮ್ಮ ಕೂಡ ನನ್ನ ಮಗ ಸಾಧಿಸಿಯೇ ಸಾಧಿಸುತ್ತೇನೆ ಎಂದಿದ್ದಾರೆ. ವರ್ತೂರು ಸಂತೋಷ್‌ಗೆ ಆ ಪ್ರಕರಣದ ಬಳಿಕ ಮನೆಯದ್ದೇ ಚಿಂತೆಯಾಗಿತ್ತು. ಈಗ ಅಮ್ಮನ ಮಾತಿನಿಂದ ನಿರಾಳಾರಾಗುತ್ತಾರೆ. ಬಿಗ್ ಬಾಸ್ ಜರ್ನಿ ಮುಂದುವರೆಸುತ್ತಾರೆ ಎಂಬ ನಂಬಿಕೆ ಎಲ್ಲರಲ್ಲೂ ಬಂದಿದೆ.

More from Filmibeat

English summary
BBk 10: Varthur Santhosh Mother came to the big boss house to convince him
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X