BBK 10: ವಿನಯ್‌ಗೆ ಕಿಚ್ಚ ಕೊಟ್ಟ ಶಾಕ್ ಹೇಗಿತ್ತು? ಇನ್ಮೇಲಾದ್ರೂ ಬದಲಾಗ್ತಾರಾ ಸ್ಟ್ರಾಂಗ್ ಮ್ಯಾನ್ ?
ಬಿಗ್ ಬಾಸ್ ಸೀಸನ್ 10 ಇದೀಗ 25 ದಿನಕ್ಕೆ ಕಾಲಿಟ್ಟಿದೆ. ಇದು ಖುಷಿಯ ವಿಚಾರವೇ ಸರಿ. ಬಿಗ್ ಬಾಸ್ ಮನೆ ಮಂದಿಗೆ ಇಷ್ಟೊಂದು ದಿನ ಕಳೆದು ಬಿಟ್ಟಿದ್ದೀವಾ ಎಂಬ ಆಶ್ಚರ್ಯ ಕೂಡ. ನಾಲ್ಕನೇ ಎಲಿಮಿನೇಷನ್ ಇವತ್ತು ನಡೆಯುತ್ತಿದೆ. ಮನೆಯಿಂದ ರಕ್ಷಕ್ ಹೊರಗೆ ಬರುತ್ತಾರೆ. ಆದರೆ ಅದಕ್ಕೂ ಮುನ್ನ ಕಿಚ್ಚ ಕೊಟ್ಟ ಶಾಕ್ ನಿಜಕ್ಕೂ ಅತ್ಯದ್ಭುತವಾಗಿತ್ತು ಎಂದೇ ಸೋಷಿಯಲ್ ಮೀಡಿಯಾದಲ್ಲಿ ಅಭಿಪ್ರಾಯಗಳು ಕೇಳಿ ಬರುತ್ತಿವೆ.
ಕಿಚ್ಚ ಸುದೀಪ್ ಮನೆ ಮಂದಿಗೆ ಎಚ್ಚರಿಸುತ್ತಲೇ ಬರುತ್ತಿದ್ದಾರೆ. ನೀವಾಗಿ ನೀವೆ ಎಲ್ಲಾ ಸೇರಿ ಒಬ್ಬ ಫೈನಲಿಸ್ಟ್ ಸ್ಪರ್ಧಿಯನ್ನು ಸಿದ್ಧ ಮಾಡುತ್ತಿದ್ದೀರಿ. ವಿನಯ್‌ನನ್ನು ಕಂಡರೆ ಯಾಕೆ ಅಷ್ಟು ಹೆದರುತ್ತೀರಿ ಎಂದೇ ಕೇಳಿದ್ದರು. ಅದಾದ ಮೇಲೆ ವಿನಯ್ ಮದವೇರಿದ ಆನೆಯಂತೆ ಆಡುತ್ತಿದ್ದರು. ಆ ಅಹಂ ಕರಗುವ ಸಾಧ್ಯತೆ ಇದೆ.

3 ಪಂಚಾಯ್ತಿಯಾದರೂ ಸರಿಯಾಗಲಿಲ್ಲ
ಎರಡನೇ ಪಂಚಾಯ್ತಿಯಲ್ಲಿ ವಿನಯ್‌ನನ್ನು ಫೈನಲಿಸ್ಟ್ ಎಂದು ಬಿಂಬಿಸುತ್ತಾ ಇದ್ದೀರಾ ಎಂದಿದ್ದರು. ಅದರ ಪ್ರಭಾವ ವಿನಯ್ ಮೇಲೆ ಸಾಕಷ್ಟು ಬೀರಿತ್ತು. ಅದಾದ ಮುಂದಿನ ವಾರ ವಿನಯ್ ನಡವಳಿಕೆಯೇ ಬೇರೆ ಆಗಿತ್ತು. ಮನೆಯ ಹೆಣ್ಣು ಮಕ್ಕಳನ್ನು ಕೆಟ್ಟ ಭಾಷೆಯಲ್ಲಿ ಬೈದಿದ್ದರು. ಕಾರ್ತಿಕ್ ಬಗ್ಗೆ ನೀನೂ ಗಂಡಸಾ ಎಂಬೆಲ್ಲ ರೀತಿ ಮಾತನಾಡಿದ್ದರು. ಇದು ಕರ್ನಾಟಕದ ಜನತೆಗೂ ಬೇಸರ ತರಿಸಿತ್ತು. ವಿನಯ್‌ಗೆ ಬುದ್ದಿ ಹೇಳಿ ಎಂದು ಕಿಚ್ಚನಿಗೂ ಸಲಹೆ ನೀಡಿದ್ದರು.
ರಕ್ಷಕ್ ಮತ್ತು ವಿನಯ್ ನಡುವೆ ಸ್ಪರ್ಧೆ
ಸುದೀಪ್ ಬುದ್ದಿ ಹೇಳಿದ್ದರು ವಿನಯ್ ನಡವಳಿಕೆಯಲ್ಲಿ ಯಾವುದೇ ಬದಲಾವಣೆಯಾಗಿಲ್ಲ. ಆದರೆ, ಈ ವಾರದ ನಾಮಿನೇಷನ್ ಫೈಟ್ ಮೂಲಕವೇ ಉತ್ತರ ಕೊಟ್ಟಿದ್ದಾರೆ. ಈ ವಾರದ ಒಂಭತ್ತು ಜನ ನಾಮಿನೇಷನ್‌ನಲ್ಲಿ ಎಲ್ಲರೂ ಸೇಫ್ ಆಗಿದ್ದು, ವಿನಯ್ ಹಾಗೂ ರಕ್ಷಕ್ ನಡುವೆ ಎಲಿಮಿನೇಷನ್ ಫೈಟ್ ನಡೆದಿದೆ.
ವಿನಯ್ ಪರಿಸ್ಥಿತಿ ಕಂಡು ಖುಷಿ ಪಟ್ಟವರು ಯಾರು?
ವಿನಯ್ ಆ ಪರಿಸ್ಥಿತಿಯಲ್ಲಿ ಕೂತಿರುವುದು ಯಾರಿಗೆಲ್ಲಾ ಖುಷಿ ಇದೆ ಹಾಗೂ ಯಾರಿಗೆಲ್ಲಾ ಶಾಕ್ ಆಗಿದೆ ಎಂದು ಸುದೀಪ್ ಕೇಳಿದ್ದಾರೆ. ಇದಕ್ಕೆ ಸಂಗೀತಾ ನಂಗೆ ಖುಷಿ ಇದೆ ಎಂದಿದ್ದು, ಆಡಿದಂತ ಮಾತು ಬೇರೆಯಾದ ರೀತಿಯಾಗಿತ್ತು. ಈ ಪರಿಸ್ಥಿತಿಯಲ್ಲಿ ಕೂತಿರುವುದು ಖುಷಿ ಇದೆ ಎಂದಿದ್ದಾರೆ. ತನಿಷಾ ಕೂಡ ಖುಷಿ ಇದೆ ಎಂದಿದ್ದಾರೆ. ಸ್ನೇಹಿತ್, ನಮ್ರತಾ, ಇಶಾನಿ ಸೇರಿದಂತೆ ಅವರ ಟೀಂಗೆ ಶಾಕ್ ಆಗಿದೆ. ನಾವೆಲ್ಲ ಜೀವ ಕೊಟ್ಟು ಆಡಬೇಕು. ಅದನ್ನ ಜೀವ ಕೊಟ್ಟು ಆಡಿದ್ದಾರೆ. ಮೈಕಲ್‌ನ ಉಳಿಸಬೇಕು ಅಂತ ಅಷ್ಟು ಕಷ್ಟ ಪಟ್ಟು ಆಡಿದ್ದಾರೆ. ನಮ್ರತಾ ಕೂಡ ಇದು ಶಾಕ್ ಎಂದಿದ್ದಾರೆ. ಟಫ್ ಕಾಂಪಿಟೇಟರ್. ಇದೆಲ್ಲಾ ಜನರಿಗೆ ಇಷ್ಟವಾಗುತ್ತೆ ಎಂದುಕೊಂಡಿದ್ದೆ. ಮೊದಲು ಅವರೇ ಸೇಫ್ ಆಗುತ್ತಾರೆ ಎಂದಿಕೊಂಡಿದ್ದೆ ಎಂದಿದ್ದಾರೆ.
ಇನ್ನಾದರೂ ಬದಲಾಗುತ್ತಾರಾ ವಿನಯ್..?
ವಿನಯ್, ಮನೆಯಲ್ಲಿಯೇ ಸ್ಟ್ರಾಂಗ್ ಕಂಟೆಸ್ಟೆಂಟ್ ಎಂದು ಗುರುತಿಸಿಕೊಂಡಿದ್ದರು. ಅದೇ ಥರ ನಡೆದುಕೊಳ್ಳುತ್ತಿದ್ದರು. ಆದರೆ ರಕ್ಷಕ್ ಮುಂದೆ ಹೊರ ಹೋಗುವ ಕಂಟೆಸ್ಟೆಂಟ್ ಆಗಿ ಕುಳಿತುಕೊಂಡಿದ್ದರು. ಇದು ಎಲ್ಲರಿಗೂ ಶಾಕ್ ಎನಿಸಿದರು ಬಿಗ್ ಬಾಸ್ ನೀಡಿದ್ದು ಶಿಕ್ಚೆಯ ರೀತಿಯೇ ಇತ್ತು. ಇಬ್ಬರನ್ನು ಒಂದು ಕೋಣೆಯಲ್ಲಿ ನಿಲ್ಲಿಸಿ ಲೈಟ್ಸ್ ಆಫ್ ಆನ್ ಮಾಡುವ ರೀತಿ ಮಾಡಿದರು. ಸಾಕಷ್ಟು ಸಮಯದಲ್ಲಿ ಲೈಟ್ಸ್ ಆಫ್ ಆಗಿ ವಿನಯ್ ಮೇಲೆ ಆನ್ ಆಯಿತು. ಬಳಿಕ ಉಳಿಸಿದ ಕರ್ನಾಟಕ ಜನತೆಗೆ ಕ್ಷಮೆ ಕೇಳಿದ್ದಾರೆ.


Click it and Unblock the Notifications











