ವೈವಾಹಿಕ ಜೀವನಕ್ಕೆ ಕಾಲಿಡಲು ಸಜ್ಜಾದ ಚೈತ್ರಾ ಕುಂದಾಪುರ; ಮೆಹಂದಿ ಸಂಭ್ರಮ ಜೋರು.. ವರ ಯಾರು?
ಬಿಗ್ ಬಾಸ್ ಕನ್ನಡ 11 ರಿಯಾಲಿಟಿ ಶೋ ಸ್ಪರ್ಧಿ ಚೈತ್ರಾ ಕುಂದಾಪುರ ಈಗ ಬಹುತೇಕ ಕನ್ನಡಿಗರಿಗೂ ಗೊತ್ತು. ವಿವಾದಕ್ಕೆ ಸಿಲುಕಿದ ಬಳಿಕ ರಿಯಾಲಿಟಿ ಶೋಗೆ ಎಂಟ್ರಿ ಕೊಟ್ಟ ಮತ್ತೆ ತನ್ನ ಜನಪ್ರಿಯತೆಯನ್ನು ಹೆಚ್ಚಿಸಿಕೊಂಡಿದ್ದಾರೆ. ಸದ್ಯ ರಾಜಕೀಯ, ಭಾಷಣಗಳಿಂದ ದೂರ ಉಳಿದಿದರುವ ಚೈತ್ರಾ ವೈವಾಹಿಕ ಜೀವನಕ್ಕೆ ಸಜ್ಜಾಗುತ್ತಿದ್ದಾರೆ. ಕಳೆದ ಕೆಲವು ದಿನಗಳಿಂದ ಇವರ ಮನೆಯಲ್ಲಿ ಮದುವೆ ಸಂಭ್ರಮ ಮನೆ ಮಾಡಿದೆ.
ಚೈತ್ರಾ ಕುಂದಾಪುರ ತನ್ನ ಬಹುದಿನಗಳ ಗೆಳೆಯನನ್ನು ವಿವಾಹವಾಗುತ್ತಿದ್ದಾರೆಂದು ಹೇಳಲಾಗುತ್ತಿದೆ. ಕೆಲವು ದಿನಗಳ ಹಿಂದಷ್ಟೇ ಚೈತ್ರಾ ತನ್ನ ಆಪ್ತರಿಗೆ, ಸ್ನೇಹಿತರಿಗೆ, ಕಿರುತೆರೆಯ ತಾರೆಯರಿಗೆ ಆಮಂತ್ರಣವನ್ನು ನೀಡಿದ್ದರು ಎಂದು ಸುದ್ದಿಯಾಗಿತ್ತು. ಸೈಲೆಂಟ್ ಆಗಿ ಮದುವೆ ತಯಾರಾಗಿದ್ದ ಚೈತ್ರಾ ಕುಂದಾಪುರ ಇದೂವರೆಗೂ ತಾನು ಮದುವೆ ಆಗುತ್ತಿರುವ ಹುಡುಗನ ಬಗ್ಗೆ ಮಾಹಿತಿಯನ್ನು ಕೊಟ್ಟಿಲ್ಲ.

ಬಿಗ್‌ಬಾಸ್ ಸ್ಪರ್ಧಿ ಚೈತ್ರಾ ಕುಂದಾಪುರ ಇತ್ತೀಚೆಗಷ್ಟೇ ತನ್ನ ಇನ್‌ಸ್ಟಾಗ್ರಾಂ ಖಾತೆಯಲ್ಲಿ ಮೆಹಂದಿ ಕಾರ್ಯಕ್ರಮದ ವಿಡಿಯೋವನ್ನು ಹಂಚಿಕೊಂಡಿದ್ದಾರೆ. ಈ ವಿಡಿಯೋ ನೋಡಿದ ಅವರ ಅಭಿಮಾನಿಗಳು, ನೆಟ್ಟಿಗರು ಶುಭಾಶಗಳನ್ನು ತಿಳಿಸುವುದಕ್ಕೆ ಆರಂಭಿಸಿದ್ದಾರೆ. ಹಾಗಿದ್ದರೆ, ಚೈತ್ರಾ ಕುಂದಾಪುರ ಮದುವೆ ಯಾವಾಗ? ವರ ಯಾರು? ಇಂತಹದ್ದೇ ಒಂದಿಷ್ಟು ಮಾಹಿತಿಯನ್ನು ತಿಳಿಯುವುದಕ್ಕೆ ಮುಂದೆ ಓದಿ.
ಚೈತ್ರಾ ಕುಂದಾಪುರ ತಮ್ಮ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಮೆಹಂದಿ ಸಂಭ್ರಮದ ವಿಡಿಯೋವನ್ನು ಶೇರ್ ಮಾಡಿದ್ದಾರೆ. ಈ ವಿಡಿಯೋದಲ್ಲಿ ಕೈಯಲ್ಲಿ ಮೆಹಂದಿ ಚಿತ್ತಾರವನ್ನು ಕಾಣಬಹುದು. ಮದುವೆ ಆಗುತ್ತಿರುವ ಖುಷಿಯಲ್ಲಿರುವ ಚೈತ್ರಾ ಮುಖದಲ್ಲಿ ಮದುಮಗಳ ಕಳೆ ಎದ್ದು ಕಾಣುತ್ತಿದೆ. ಹಾಗೇ ವಿಡಿಯೋಗೆ 'ಮದುವೆಯ ಮೆಹೆಂದಿ' ಟೈಟಲ್ ಕೊಟ್ಟು, ಮೆಹಂದಿಯ ಸಂಪ್ರದಾಯದ ಪ್ರಾಮುಖ್ಯತೆಯನ್ನು ವಿವರಿಸಿದ್ದಾರೆ.
"ತ್ರೇತಾಯುಗದಲ್ಲಿ ಶ್ರೀರಾಮ, ಲಕ್ಷ ಣ, ಭರತ ಮತ್ತು ಶತ್ರುಘ್ನರ ವಿವಾಹದ ಸಮಯದಲ್ಲಿ ಅವರನ್ನು ಸಿಂಗರಿಸಲು ಅವರ ಕೈ, ಕಾಲು, ಹಾಗೆಯೇ ಮುಖದ ಮೇಲೆ ಪಾಷಾಣಬಣ್ಣ (ವಿವಿಧ ಬಣ್ಣದ ಕಲ್ಲುಗಳಿಂದ ತಯಾರಿಸಿದ ಬಣ್ಣ) ಮತ್ತು ಪುಷ್ಪಬಣ್ಣ (ವಿವಿಧ ಬಣ್ಣದ ಹೂವುಗಳಿಂದ ತಯಾರಿಸಿದ ಬಣ್ಣ) ಗಳ ಸಹಾಯದಿಂದ ಎಲೆ-ಹೂವು ಮುಂತಾದ ಆಕಾರಗಳನ್ನು ಬಿಡಿಸಲಾಗಿತ್ತು. ಈ ಬಣ್ಣಗಳಲ್ಲಿ ವಿವಿಧ ದಿವ್ಯ ಔಷಧೀಯ ವನಸ್ಪತಿಗಳ ರಸಗಳನ್ನು ಬೆರೆಸಲಾಗಿತ್ತು. ಈ ಸುಗಂಧಿ ಮಿಶ್ರಣಕ್ಕೆ 'ಪತ್ರಾವಲೀ' ಎಂದು ಹೇಳುತ್ತಿದ್ದರು. (ಆಧಾರ : 'ಭುಶುಂಡೀ ರಾಮಾಯಣ' ಮತ್ತು 'ಶ್ರೀನಾಥಮುನಿ ರಾಮಾಯಣ') ದ್ವಾಪರಯುಗದಲ್ಲಿಯೂ ಸಿಂಗಾರಕ್ಕಾಗಿ 'ಪತ್ರಾವಲೀ'ಯನ್ನು ಉಪಯೋಗಿಸಲಾಗುತ್ತಿತ್ತು. 'ತೋಕ' ಎಂಬ ಹೆಸರಿನ ಶ್ರೀಕೃಷ್ಣನ ಮಿತ್ರನು 'ಪತ್ರಾವಲೀ'ಯಿಂದ ಶ್ರೀಕೃಷ್ಣ ನನ್ನು ಸಿಂಗರಿಸುತ್ತಿದ್ದನು' ಎಂದು 'ಗರ್ಗಸಂಹಿತೆ', 'ಶ್ರೀಮದ್ಭಾಗವತ', 'ಶ್ರೀಕೃಷ್ಣಕರ್ಣಾಮೃತ' ಮುಂತಾದ ಶ್ರೀಕೃಷ್ಣನ ಬಗೆಗಿನ ಪ್ರಮುಖ ಗ್ರಂಥಗಳಲ್ಲಿ ಉಲ್ಲೇಖಿಸಿರುವುದು ಕಂಡುಬರುತ್ತದೆ. ಆ ಸಮಯದಲ್ಲಿ ಶ್ರೀಕೃಷ್ಣನ ಗೋವುಗಳನ್ನೂ 'ಪತ್ರಾವಲಿ'ಯಿಂದ ಸಿಂಗರಿಸಲಾಗುತ್ತಿತ್ತು. ಮದರಂಗಿ ಕೇವಲ ಬಣ್ಣವಲ್ಲ ಅದು ಸಂಸ್ಕೃತಿಯ ಕೈಗನ್ನಡಿ." ಎಂದು ವಿಡಿಯೋ ಶೇರ್ ಮಾಡುವುದರ ಜೊತೆಗೆ ಮಾಹಿತಿಯನ್ನು ನೀಡಿದ್ದಾರೆ.
ಹುಡುಗ ಯಾರು?
ಚೈತ್ರಾ ಕುಂದಾಪುರ ನಾಳೆ (ಮೇ 9) ವೈವಾಹಿಕ ಜೀವನಕ್ಕೆ ಕಾಲಿಡುತ್ತಿದ್ದಾರೆಂದು ವರದಿಯಾಗಿದೆ. ಸುಮಾರು 12 ವರ್ಷಗಳಿಂದ ಪ್ರೀತಿಸುತ್ತಿದ್ದ ಹುಡುಗನೊಂದಿಗೆ ಸಪ್ತಪದಿ ತುಳಿಯುತ್ತಿದ್ದಾರೆಂದು ಹೇಳಲಾಗಿದೆ. ಆದರೆ, ತಾವು ಮದುವೆ ಆಗುತ್ತಿರುವ ಹುಡುಗನ ಬಗ್ಗೆ ಇಲ್ಲೂ ಮಾಹಿತಿಯನ್ನು ಬಿಟ್ಟುಕೊಟ್ಟಿಲ್ಲ. ಚೈತ್ರಾ ತಮ್ಮ ಮದುವೆಗೆ ಕೇವಲ ತಮ್ಮ ಕುಟುಂಬಸ್ಥರಿಗೆ, ಆಪ್ತರಿಗ ಹಾಗೂ ಬಿಗ್ ಬಾಸ್ ಕನ್ನಡ 11ರ ಸ್ಪರ್ಧಿಗಳು ಹಾಗೂ ಬಾಯ್ಸ್ Vs ಗರ್ಲ್ಸ್ ಶೋನ ಸ್ನೇಹಿತರಿಗಷ್ಟೇ ಆಹ್ವಾನ ನೀಡಿದ್ದಾರೆಂದು ಹೇಳಲಾಗುತ್ತಿದೆ.


Click it and Unblock the Notifications











