BBK 11 Grand Finale: ಸ್ಪರ್ಧಿ ಧರಿಸಿರುವ ಕಾಸ್ಟ್ಯೂಮ್ ಹೇಳ್ತಿದ್ಯಾ ವಿನ್ನರ್ ಅವರೇ ಅಂತ?

ಬಿಗ್‌ಬಾಸ್ ಕನ್ನಡ ಸೀಸನ್ 11ರ ವಿನ್ನರ್ ಯಾರು ಎಂದು ತಿಳಿದುಕೊಳ್ಳಲು ಕೆಲವೇ ನಿಮಿಷಗಳು ಬಾಕಿಯಿದೆ. ಈಗಾಗಲೇ ಭಾನುವಾರದ ಎಪಿಸೋಡ್ ಸಹ ಆರಂಭವಾಗಿದೆ. ಬಿಗ್‌ಬಾಸ್ ವೇದಿಕೆಗೆ ಕಿಚ್ಚ ಬಂದಿದ್ದಾರೆ. ಮಾಜಿ ಸ್ಪರ್ಧಿಗಳಾದ ಶುಭಾ ಪೂಂಜಾ ಹಾಗೂ ವಿನಯ್ ಮನೆಯೊಳಗೆ ಹೋಗಿ ಸ್ಪರ್ಧಿಗಳ ಜೊತೆ ತಿಂಡಿ ತಿಂದು ಬಂದಿದ್ದಾರೆ.

ಈ ಬಾರಿ ಟ್ರೋಫಿ ಯಾರು ಎತ್ತಿ ಹಿಡಿಯುತ್ತಾರೆ ಎನ್ನುವ ಮಿಲಿಯನ್ ಡಾಲರ್ ಪ್ರಶ್ನೆಗೆ ಉತ್ತರ ಶೀಘ್ರದಲ್ಲೇ ಸಿಗಲಿದೆ. ಈಗಾಗಲೇ ವಿನ್ನರ್ ಯಾರು ಇರಬಹುದು ಎನ್ನುವ ಚರ್ಚೆ ಜೋರಾಗಿದೆ. ಕಳೆದೊಂದು ವಾರದಿಂದ ಈ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ಸೌಂಡ್ ಆಗ್ತಿದೆ. ಒಬ್ಬೊಬ್ಬರು ಒಬ್ಬೊಬ್ಬರ ಹೆಸರು ಹೇಳುತ್ತಿದ್ದಾರೆ. ಮಂಜು ಅಥವಾ ಹನುಮಂತ ವಿನ್ನರ್ ಎನ್ನುವುದು ಸಾಕಷ್ಟು ಜನರ ಅಭಿಪ್ರಾಯ ಆಗಿತ್ತು.

BBK 11 Grand Finale Do contestant outfit hint that Trivikram is the winner

ಭಾನುವಾರದ ಎಪಿಸೋಡ್ ಆರಂಭವಾಗುವ ಮುನ್ನ ಮಂಜು ಎಲಿಮಿನೇಟ್ ಆಗಿದ್ದಾರೆ ಎನ್ನುವ ಚರ್ಚೆ ಸೋಶಿಯಲ್ ಮೀಡಿಯಾದಲ್ಲಿ ಶುರುವಾಗಿತ್ತು. ಮೋಕ್ಷಿತಾ ಕೂಡ ಹೊರ ಬಂದಿದ್ದು ತ್ರಿವಿಕ್ರಮ್, ಹನುಮಂತ ಹಾಗೂ ರಜತ್ ಟಾಪ್ 3 ಸ್ಥಾನಗಳಿಗೆ ಏರಿದ್ದಾರೆ ಎನ್ನುವ ಗುಸುಗುಸು ಶುರುವಾಗಿದೆ. ಇದೆಲ್ಲದರ ನಡುವೆ ಸ್ಪರ್ಧಿಗಳು ಫಿನಾಲೆ ದಿನ ತೊಟ್ಟಿರುವ ಕಾಸ್ಟ್ಯೂಮ್ ಬಗ್ಗೆ ಭಾರೀ ಚರ್ಚೆ ಆಗ್ತಿದೆ. ಅದಕ್ಕೆ ಕಾರಣವೂ ಇದೆ.

ಸ್ಪರ್ಧಿ ತೊಟ್ಟಿರುವ ಕಾಸ್ಟ್ಯೂಮ್ ವಿಜೇತರ ಬಗ್ಗೆ ಸುಳಿವು ಕೊಡುತ್ತದೆ ಎನ್ನಲಾಗ್ತಿದೆ. ಹೀಗೊಂದು ಚರ್ಚೆ ಕಳೆದೊಂದು ವಾರದಿಂದ ಸೋಶಿಯಲ್ ಮೀಡಿಯಾದಲ್ಲಿ ಜೋರಾಗಿದೆ. ಬಿಗ್‌ಬಾಸ್ ಟ್ರೋಫಿ ಹೋಲುವಂತೆ ಗೆಲ್ಲುವ ಸ್ಪರ್ಧಿ ಕಾಸ್ಟ್ಯೂಮ್ ಇರುತ್ತದೆ ಎನ್ನುವುದು ಕೆಲವರ ಲೆಕ್ಕಾಚಾರ. ಅಂದರೆ ಟ್ರೋಫಿಯನ್ನು ಬಿಂಬಿಸುವಂತಹ ಕಾಸ್ಟ್ಯೂಮ್ ಅನ್ನು ಗೆಲ್ಲುವ ಸ್ಪರ್ಧಿ ತೊಟ್ಟಿರುತ್ತಾರೆ ಎನ್ನುವುದು ಅದರ ಸಾರಾಂಶ.

ಈ ಬಾರಿಯ ಟ್ರೋಫಿ ಡಿಸೈನ್ ವಾರದ ಹಿಂದೆಯೇ ರಿವೀಲ್ ಆಗಿದೆ. ಪಕ್ಷಿಯ ರೆಕ್ಕೆ ಆಕಾರದ ಟ್ರೋಫಿಯನ್ನು ವಿಜೇತರಿಗೆ ಈ ಬಾರಿ ಕೊಡುತ್ತಿದ್ದಾರೆ. ಅಂದರೆ ಪಕ್ಷಿ ಚಿತ್ರ ಹೋಲುವ ಕಾಸ್ಟ್ಯೂಮ್ ಯಾರು ಧರಿಸಿದ್ದಾರೆ. ಅವರೇ ವಿನ್ನರ್ ಎಂದು ಕೆಲವರು ಕಾಮೆಂಟ್ ಮಾಡಲು ಆರಂಭಿಸಿದ್ದಾರೆ. ಸದ್ಯ ಫಿನಾಲೆಗೆ ಸ್ಪರ್ಧಿಗಳು ಡಿಸೈನರ್ ಕಾಸ್ಟ್ಯೂಮ್‌ಗಳಲ್ಲಿ ಮಿಂಚುತ್ತಿದ್ದಾರೆ. ಹನುಮಂತ ಮಾತ್ರ ಎಂದಿನಂತೆ ಶರ್ಟ್, ಲುಂಗಿಯಲ್ಲೇ ಕಾಣಿಸಿಕೊಂಡಿದ್ದಾರೆ.

ಈಗಾಗಲೇ ಮಂಜು, ಮೋಕ್ಷಿತಾ ಎಲಿಮಿನೇಟ್ ಎನ್ನುತ್ತಿರುವುದರಿಂದ ಮೂರು ಜನ ಮಾತ್ರ ಉಳಿದುಕೊಳ್ಳುತ್ತಾರೆ. ಅದರಲ್ಲಿ ತ್ರಿವಿಕ್ರಮ್ ತೊಟ್ಟಿರುವ ಬಿಳಿಬಣ್ಣದ ಶರ್ಟ್ ಮೇಲೆ ಪಕ್ಷಿಯ ಚಿತ್ರ ಇರುವುದು ಸ್ಪಷ್ಟವಾಗಿ ಗೊತ್ತಾಗುತ್ತಿದೆ. ಹಾಗಾದರೆ ತ್ರಿವಿಕ್ರಮ್ ಈ ಬಾರಿ ಟ್ರೋಫಿ ಎತ್ತಿ ಹಿಡಿಯುತ್ತಾರಾ? ಎಂದು ಕಾದು ನೋಡಬೇಕಿದೆ. ಇನ್ನು ತ್ರಿವಿಕ್ರಮ್ ಈ ಬಾರಿ ಗೆಲ್ಲುತ್ತಾರೆ ಎಂದು ಹೆಚ್ಚು ಜನರಿಗೆ ನಂಬಿಕೆ ಇಲ್ಲ. ಆದರೆ ಡಾರ್ಕ್ ಹಾರ್ಸ್ ಆಗಿ ಬಿಡ್ತಾರಾ? ಕಾದು ನೋಡಬೇಕಿದೆ.

ಇನ್ನು ಉಗ್ರಂ ಮಂಜು ಕೂಡ ಎರಡೂ ಭುಜಗಳ ಭಾಗದಲ್ಲಿ ಎರಡು ಪಕ್ಷಿ ಗೊಂಬೆಗಳನ್ನು ನೋಡಬಹುದು. ಆ ಡಿಸೈನ್ ಬಗ್ಗೆ ಕೂಡ ಸುದೀಪ್ ಪ್ರಶ್ನಿಸಿದರು. ಒಂದು ಮೋಕ್ಷಿತಾ ಮತ್ತೊಂದು ಗೌತಮಿ ಎಂದು ಮನೆಮಂದಿ ತಮಾಷೆ ಮಾಡಿದ್ದಾರೆ. ಇನ್ನು ಉಗ್ರಂ ಮಂಜು 5ನೇ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡಿದ್ದಾರೆ ಎನ್ನಲಾಗ್ತಿದೆ.

More from Filmibeat

English summary
Bigg Boss Kannada 11; Fans declare Winner already, not Hanumantha
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X