BBK 11: "ಗೆದ್ದಿದ್ದಕ್ಕೆ ಖುಷಿ ಆಗ್ತಿದೆ, ನಾನು ನಿರೀಕ್ಷಿಸಿರಲಿಲ್ಲ"; ಮೋಕ್ಷಿತಾ ವಿನ್ನಿಂಗ್ ಸ್ಪೀಚ್ ವೈರಲ್

ಬಿಗ್‌ಬಾಸ್ ಸೀಸನ್ 11ರ ಗ್ರ್ಯಾಂಗ್ ಫಿನಾಲೆ ಆರಂಭವಾಗಿದೆ. ಶನಿವಾರ ಸಂಚಿಕೆ ಯಶಸ್ವಿಯಾಗಿ ಮುಕ್ತಾಯವಾಗಿದೆ. ಭಾನುವಾರ ರಾತ್ರಿ ವೇಳೆಗೆ ಯಾರು ವಿನ್ನರ್ ಎಂದು ಘೋಷಿಸಲಾಗುತ್ತದೆ. ಈ ಬಾರಿ ಯಾರು ಟ್ರೋಫಿ ಎತ್ತಿ ಹಿಡಿಯುತ್ತಾರೆ ಎನ್ನುವ ಕುತೂಹಲ ವೀಕ್ಷಕರಲ್ಲಿದೆ. ಆದರೆ ಈಗಾಗಲೇ ಮೋಕ್ಷಿತಾ ಗೆದ್ದ ಸಂತಸ ವ್ಯಕ್ತಪಡಿಸಿದ ವೀಡಿಯೋ ವೈರಲ್ ಆಗುತ್ತಿದೆ.

ಫಿನಾಲೆ ವೇದಿಕೆ ರಂಗೇರಿದೆ. ಹಳೇ ಸ್ಪರ್ಧಿಗಳು ಮಾತ್ರವಲ್ಲದೇ ಫೈನಲಿಸ್ಟ್‌ಗಳ ಕುಟುಂಬ ಸದಸ್ಯರು ಡ್ಯಾನ್ಸ್ ಮಾಡಿ ಶೋಗೆ ಕಳೆ ತಂದಿದ್ದಾರೆ. ಇನ್ನು ಕಿಚ್ಚನ ನಿರೂಪಣೆ ಎಲ್ಲದ್ದಕ್ಕೂ ಕಳಶವಿಟ್ಟಂತೆ ಇದೆ. ಈಗಾಗಲೇ ಭವ್ಯಾ ಗೌಡ 6ನೇ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡು ಹೊರಬಂದಿದ್ದಾರೆ. ಈಗ ಮನೆಯಲ್ಲಿ 5 ಜನ ಮಾತ್ರ ಉಳಿದುಕೊಂಡಿದ್ದಾರೆ. ಉಗ್ರಂ ಮಂಜು ಕೂಡ ಎಲಿಮಿನೇಟ್ ಆಗಿದ್ದಾರೆ ಎನ್ನುವ ಗುಸುಗುಸು ಕೇಳಿಬರ್ತಿದೆ.

BBK 11 Grand Finale thank you very much i didn t expect Mokshitha Pai s winning Speech Goes viral

ನಿನ್ನೆ ಸುದೀಪ್ ಫಿನಾಲೆಗೆ ಬಂದಿರುವ ಸ್ಪರ್ಧಿಗಳ ಜೊತೆ ಮಾತನಾಡುತ್ತಾ ನೀವು ಗೆದ್ದರೆ ನಿಮ್ಮ ಪ್ರತಿಕ್ರಿಯೆ ಹೇಗಿರುತ್ತದೆ. ಅದನ್ನು ಹೇಳಿ ನೋಡೋಣ ಎಂದಿದ್ದರು. ಮೋಕ್ಷಿತಾ ಮಾತನಾಡಿ "ಥ್ಯಾಂಕ್‌ಯು ಸೋ ಮಚ್, ನಾನು ನಿರೀಕ್ಷೆ ಮಾಡಿರಲಿಲ್ಲ. ಗೆಲ್ತಿನಿ ಅಂತ, ನಾನು ಗೆಲ್ಲೋಕೆ ಕಾರಣ ನೀವೇ, ನಿಮ್ಮೆಲ್ಲರ ಪ್ರೀತಿ ವಿಶ್ವಾಸಕ್ಕೆ ಧನ್ಯವಾದ" ಎಂದಿದ್ದರು.

ಮೋಕ್ಷಿತಾ ಹೇಳಿಕೆಯೊಂದಿಗೆ ಗ್ರ್ಯಾಂಡ್ ಫಿನಾಲೆ ಎಪಿಸೋಡ್ ಆರಂಭವಾಗಿತ್ತು. ಆ ವೀಡಿಯೋ ಈಗ ವೈರಲ್ ಆಗುತ್ತಿದೆ. ಇನ್ನು ಮೋಕ್ಷಿತಾ ಮಾತನಾಡಿದ ಬಳಿಕ ಇನ್ನುಳಿದ ಸ್ಪರ್ಧಿಗಳು ಗೆದ್ದರೆ ಪ್ರತಿಕ್ರಿಯೆ ಹೇಗಿರುತ್ತದೆ ಎಂದು ರಜತ್ ಮಾತನಾಡಿ ತೋರಿಸಿದರು. ತಮಾಷೆಯಾಗಿ ಕಾಲೆಳೆದಿದ್ದರು. ಕೊನೆಗೆ ಮೋಕ್ಷಿತಾ ಗೆದ್ದರೆ ಹೇಗೆ ಮಾತನಾಡಬಹುದು ಎನ್ನುವುದನ್ನು ರಜತ್ ಇಮಿಟೇಟ್ ಮಾಡಿ ಮನೆಯಲ್ಲಿ ನಗೆಬುಗ್ಗೆ ಸಿಡಿಸಿದ್ದರು.

ಚೈತ್ರಾ ಕುಂದಾಪುರ ಗೆದ್ದಿದ್ದರೆ ಆಕೆಯ ಪ್ರತಿಕ್ರಿಯೆ ಹೇಗಿರುತ್ತದೆ, ಒಂದು ವೇಳೆಗೆ ಗೌತಮಿ ಗೆದ್ದರೆ ಹೇಗೆ ಮಾತನಾಡಬಹುದು ಎಂದು ರಜತ್ ಹೇಳಿ ತೋರಿಸಿದ್ದಾರೆ.

More from Filmibeat

English summary
BBK 11: When sudeep asked Finalist how thire first reaction suppose they win
Read more about: tv bigg boss bigg boss kannada 11
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X