ನಿವೇದಿತಾ ಗೌಡ ಉಗುರು ಬಿಟ್ಟಿದ್ದು ಮುದ್ದೆ ಮುರಿಯೋಕೆ, ಹನುಮಂತ ಉಗುರು ಬಿಟ್ಟಿದ್ದು...?
ಕಳೆದ ಹಲವು ವರ್ಷಗಳಿಂದಲೂ ಕಲರ್ಸ್ ಕನ್ನಡ ವಾಹಿನಿ ತನ್ನ ಕಾರ್ಯಕ್ರಮ ಕಟ್ಟಿಕೊಡುವಲ್ಲಿ ಹೊಸತನವನ್ನು ಮೈಗೂಡಿಸಿಕೊಳ್ಳುವ ಮೂಲಕ ಪ್ರೇಕ್ಷಕರಿಗೆ ಇನ್ನು ಹೆಚ್ಚೆಚ್ಚು ಹತ್ತಿರವಾಗುತ್ತಿದೆ. ಅದರಲ್ಲಿಯೂ ಬಿಗ್ ಬಾಸ್ ಅಂತಹ ಕಾರ್ಯಕ್ರಮದ ಮೂಲಕ ಕಲರ್ಸ್ ಕನ್ನಡದ ವ್ಯಾಪ್ತಿ ಪ್ರದೇಶ ಇನ್ನೂ ಹೆಚ್ಚಾಗಿದೆ.
ಕಲರ್ಸ್ ಕನ್ನಡ ಮೇಲೆ ಕೂಡ ಒಳ್ಳೊಳ್ಳೆಯ ಕಾರ್ಯಕ್ರಮ ನೀಡುವ ಜವಾಬ್ಧಾರಿಯ ಕೂಡ ಹೆಚ್ಚಾಗಿದೆ. ಇದನ್ನು ಅರಿತುಕೊಂಡೇ ಕಲರ್ಸ್ ಕನ್ನಡ ಈಗ ಬಿಗ್ ಬಾಸ್ ಜಾಗದಲ್ಲಿ ಬಾಯ್ಸ್ ವರ್ಸಸ್ ಗರ್ಲ್ಸ್ ಕಾರ್ಯಕ್ರಮ ಪರಿಚಯಿಸಿದೆ. ಮೊನ್ನೆ ಫೆಬ್ರವರಿ ಒಂದರಿಂದ ಕನ್ನಡಿಗರ ಮಡಿಲಿಗೆ ಕಾರ್ಯಕ್ರಮವನ್ನು ಹಾಕಿದೆ. ಪ್ರತಿ ಶನಿವಾರ ಮತ್ತು ಭಾನುವಾರ ಸಂಜೆ 07-30ಕ್ಕೆ ಈ ಕಾರ್ಯಕ್ರಮ ಪ್ರಸಾರವಾಗಲಿದ್ದು ಪ್ರತಿ ಶನಿವಾರ ಹಾಗೂ ಭಾನುವಾರ ಸಂಜೆ 7.30ಕ್ಕೆ 'ಬಾಯ್ಸ್ ವರ್ಸಸ್ ಗರ್ಲ್ಸ್' ಗೇಮ್ ಶೋ ಪ್ರಸಾರವಾಗಲಿದೆ.

ಇನ್ನು ಈ ಕಾರ್ಯಕ್ರಮದಲ್ಲಿ ಬಾಯ್ಸ್ ತಂಡಕ್ಕೆ ಬಿಗ್ ಬಾಸ್ ಕನ್ನಡ 10ರ ಸ್ಫರ್ಧಿ ವಿನಯ್ ಗೌಡ ಅವರ ಸಾರಥ್ಯ ಇದ್ದರೆ ಶುಭಾ ಪೂಂಜಾ ಹುಡುಗಿಯರ ಗುಂಪಿನ ನಾಯಕಿಯಾಗಿದ್ದಾರೆ. ಇಂಥಾ 'ಬಾಯ್ಸ್ ವರ್ಸಸ್ ಗರ್ಲ್ಸ್' ಕಾರ್ಯಕ್ರಮದಲ್ಲಿ ನಿವೇದಿತಾ ಗೌಡ ಮತ್ತು ಬಿಗ್ ಬಾಸ್ ವಿನ್ನರ್ ಹನುಮಂತ ಕೂಡ ಇದ್ದು ಸದ್ಯ ಇವರಿಬ್ಬರ ನಡುವಿನ ಮಾತುಕಥೆಯ ಭಾಗ ಸೋಶಿಯಲ್ ಮೀಡಿಯಾದಲ್ಲಿ ಸದ್ದು ಮಾಡುತ್ತಿದೆ.
ಹೌದು, 'ಬಾಯ್ಸ್ ವರ್ಸಸ್ ಗರ್ಲ್ಸ್ ಕಾರ್ಯಕ್ರಮದಲ್ಲಿ ನಿವೇದಿತಾ ಗೌಡ ಅವರ ಉಗುರು ಎಲ್ಲರ ಗಮನ ಸೆಳೆದಿದೆ. ಈ ಕುರಿತು ಚರ್ಚೆ ಕೂಡ ನಡೆದಿದೆ. ನಿವೇದಿತಾ ಗೌಡ ಅವರ ಉಗುರು ನೋಡಿ ಇಷ್ಟು ಉದ್ದದ ಉಗುರುಗಳನ್ನು ಬಿಟ್ಟಿದ್ದೀರಲ್ಲ ಮುದ್ದೆ ಕೊಟ್ಟರೆ ಅದನ್ನು ಹೇಗೆ ತಿನ್ನುತ್ತೀರಿ ? ಉಗುರಿನಿಂದ ತಿನ್ನಲು ತೊಂದರೆಯಾಗಲ್ವಾ ಎಂದು ಪ್ರಶ್ನಿಸಿದ್ದಾರೆ.ಇದಕ್ಕೆ ನಿವೇದಿತಾ ಗೌಡ ನಾನು ಸಾಮಾನ್ಯವಾಗಿ ಮುದ್ದೆ ತಿನ್ನಲು ಚಮಚ ಮತ್ತು ಫೋರ್ಕ್ ಬಳಸುತ್ತೇನೆ ಆದರೆ ಈಗ ಈ ಉಗುರುಗಳನ್ನೇ ಮುದ್ದೆ ತಿನ್ನಲು ನಾನು ಬಳಸುತ್ತೇನೆ ಎಂಬ ಉತ್ತರ ನೀಡಿದ್ದಾರೆ. ಚಮಚ ಹಾಗೂ ಫೋರ್ಕ್ ರೀತಿಯಲ್ಲಿ ಒಂದು ಉಗುರಿನಲ್ಲಿ ಮುದ್ದೆಯನ್ನು ಕಟ್ ಮಾಡಿ ಮತ್ತೊಂದರಲ್ಲಿ ಚುಚ್ಚಿ ತಿನ್ನುತ್ತೇನೆ ಎಂದು ಹೇಳಿದ್ದಾರೆ.
ನಿವೇದಿತಾ ಗೌಡ ಅವರ ಈ ಉತ್ತರ ಕೇಳಿ ಶ್ರುತಿ ಬೆಚ್ಚಿ ಬಿದ್ದಿದ್ದಾರೆ. ಆ ನಂತರ ಈ ಉಗುರಿನ ಕುರಿತು ಚರ್ಚೆ ಮಾಡಲು ನಿರೂಪಕಿ ಅನುಪಮಾ ಗೌಡ , ಹನುಮಂತನ ಬಳಿ ನಿಮಗೆ ಏನನ್ನಿಸುತ್ತೆ ಹನುಮಂತು ಅವರೇ ಎಂದು ಕೇಳಿದ್ದಾರೆ. ಇದಕ್ಕೆ ಹನುಮಂತು ಅದು ಉಗುರಷ್ಟೇ ನಾನು ಬಿಟ್ಟರೂ ಬರುತ್ತೆ ಕೆರೆದುಕೊಳ್ಳೋಕೆ ನಾನು ಕೂಡ ಒಂದೇ ಒಂದು ಉಗುರು ಬಿಟ್ಟಿದ್ದೇನೆ ಎಂದು ಹೇಳಿದ್ದಾರೆ. ಹನುಮಂತ ಅವರ ಈ ಉತ್ತರಕ್ಕೆ ಎಲ್ಲರು ಬಿದ್ದು ಬಿದ್ದು ನಕ್ಕಿದ್ದಾರೆ.
ಇನ್ನುಳಿದಂತೆ ಬಾಯ್ಸ್ ವರ್ಸಸ್ ಗರ್ಲ್ಸ್ ಕಾರ್ಯಕ್ರಮದಲ್ಲಿ ಐಶ್ವರ್ಯ ಸಿಂಧೋಗಿ, ಶೋಭಾ ಶೆಟ್ಟಿ, ಚೈತ್ರಾ ಕುಂದಾಪುರ, ಚಂದನಾ, ಕೋಳಿ ರಮ್ಯಾ, ಪ್ರಿಯಾ ಸವದಿ, ಕರಿಮಣಿ ಧಾರಾವಾಹಿಯ ಸ್ಪಂದನಾ ಸೋಮಣ್ಣ, ಐಶ್ವರ್ಯ ವಿನಯ್ ಇದ್ದಾರೆ. ಇನ್ನು ಹುಡುಗರ ಗುಂಪಿನಲ್ಲಿ
'ಬಿಗ್ ಬಾಸ್ ಕನ್ನಡ 11'ರ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದ ಧನರಾಜ್ ಆಚಾರ್ ಮತ್ತು ರಜತ್ ಇದ್ದಾರೆ. ಇವರಲ್ಲದೇ 'ಗಿಚ್ಚಿ ಗಿಲಿಗಿಲಿ'ಯ ಪ್ರಶಾಂತ್, 'ಬಿಗ್ ಬಾಸ್ ಕನ್ನಡ 8'ರ ವಿನ್ನರ್ ಮಂಜು ಪಾವಗಡ, 'ಕಾಮಿಡಿ ಕಿಲಾಡಿಗಳು' ಖ್ಯಾತಿಯ ಸೂರಜ್, ನಟ ವಿಶ್ವಾಸ್, ಸ್ನೇಹಿತ್, ವಿವೇಕ್ ಸಿಂಹ, 'ಕನ್ನಡತಿ' ಖ್ಯಾತಿಯ ರಕ್ಷಿತ್ ಇದ್ದಾರೆ. ಸದ್ಯ ನಿವೇದಿತಾ ಗೌಡ ಮತ್ತು ಹನುಮಂತ ಅವರ ಈ ಮಾತುಕಥೆಯ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗುತ್ತಿದೆ.


Click it and Unblock the Notifications











