BBK 12 : ಮನೆಯಿಂದ ಹೊರ ಹೋದರೆ ಸಾಕು ಎಂದು ಕಾಯುತ್ತಿದ್ದ ಮಾಳು ನಿಪನಾಳ ಫಿನಾಲೆಗೆ, ಮುಂದಿನ ವಾರ ಇದೆ ಮಾರಿ ಹಬ್ಬ
ಪ್ರತಿ ವರ್ಷ ''ಬಿಗ್ ಬಾಸ್'' ಸುತ್ತ ಮುತ್ತ ಕುತೂಹಲ ಮನೆ ಮಾಡುತ್ತೆ. ಪ್ರತಿ ವರ್ಷ ಕಾರ್ಯಕ್ರಮದ ಆರಂಭಕ್ಕೂ ಮುನ್ನ ಈ ವರ್ಷ ಯಾರೆಲ್ಲಾ ಈ ಕಾರ್ಯಕ್ರಮದಲ್ಲಿ ಭಾಗವಹಿಸುತ್ತಾರೆ ಎಂಬ ಪ್ರಶ್ನೆ ಕೆಲವರಲ್ಲಿ ಮೂಡಿದರೆ, ಕಾರ್ಯಕ್ರಮ ಶುರುವಾದ ನಂತರ ಈ ವಾರ ಮನೆಯಾಚೆ ಯಾರು ಹೋಗ್ತಾರೆ ಎನ್ನುವ ಪ್ರಶ್ನೆ ಮೂಡುತ್ತೆ. ನಮ್ಮ ನೆಚ್ಚಿನ ಸ್ಫರ್ಧಿ ಮನೆಯಲ್ಲಿ ಇರ್ತಾರಾ..? ಹೇಗೆ..?
ಎನ್ನುವ ಚಿಕ್ಕ ದುಗುಡ ಕೂಡ ಕಾರ್ಯಕ್ರಮವನ್ನು ತಪ್ಪದೇ ಕಣ್ತುಂಬಿಕೊಳ್ಳುವ ಪ್ರೇಕ್ಷಕರಲ್ಲಿರುತ್ತೆ. ಎಂದಿನಂತೆ ಈ ವಾರ ಕೂಡ ಕನ್ನಡ ''ಬಿಗ್ ಬಾಸ್'' ನೋಡುವ ಪ್ರೇಕ್ಷಕರಲ್ಲಿ ಈ ವಾರ ಮನೆಯ ಹೊರಗಡೆ ಯಾರು ಹೋಗ್ತಾರೆ ಎನ್ನುವ ಪ್ರಶ್ನೆ ಮತ್ತು ಆತಂಕ ಇತ್ತು.ಇದಕ್ಕೆ ಕೈಗನ್ನಡಿ ಎಂಬಂತೆ ಸೋಶಿಯಲ್ ಮೀಡಿಯಾದಲ್ಲಿ ಈ ಕುರಿತು ಕಳೆದ ಒಂದು ವಾರದಲ್ಲಿ ಹಲವು ಚರ್ಚೆಗಳು ಆಗಿವೆ. ಅವರಾ..? ಇವರಾ..? ಯಾರನ್ನು ಮನೆಯಾಚೆ ಕಳುಹಿಸಬೇಕು ಎಂಬ ಅಭಿಪ್ರಾಯವನ್ನು ಕೂಡ ಕೇಳಲಾಗಿದೆ.

ಆದರೆ.. ''ಬಿಗ್ ಬಾಸ್'' ಊಹೆಗೆ ನಿಲುಕದ ಕಾರ್ಯಕ್ರಮ. ಅಂದುಕೊಂಡಿದ್ದ ಲೆಕ್ಕಾಚಾರ ತಲೆ ಕೆಳಗಾಗಿಸುವ ಕಾರ್ಯಕ್ರಮ ಇದು. ಇದಕ್ಕೆ ಮತ್ತೊಂದು ಪುರಾವೆ ಎಂಬಂತೆ ಕನ್ನಡ ''ಬಿಗ್ ಬಾಸ್''ನಲ್ಲಿ ಈ ವಾರ ಯಾರನ್ನು ಕೂಡ ಮನೆಯ ಹೊರಗಡೆ ಕಳುಹಿಸಿಲ್ಲ. ಬದಲಿಗೆ ಫಿನಾಲೆಗೆ ಟಿಕೆಟ್ ನೀಡಲಾಗಿದೆ.
ಹೌದು, ಅಸಲಿಗೆ ಈ ವಾರ ಪ್ರೇಕ್ಷಕರಿಂದ ಅಭಿಪ್ರಾಯ ಸಂಗ್ರಹಿಸಲಾಗಿತ್ತು. ಆದರೆ.. ಹೀಗೆ ನಡೆದ ವೋಟಿಂಗ್‌ನ ಮನೆಯಲ್ಲಿದ್ದ ಸ್ಫರ್ಧಿಗಳು ತಮ್ಮನ್ನು ಮನೆಯ ಹೊರಗಡೆ ಕಳುಹಿಸಲು ಮಾಡಲಾಗುತ್ತಿರುವ ಕಸರತ್ತು ಎಂದುಕೊಂಡಿದ್ದರು. ಆದರೆ ಸುದೀಪ್ ಬಿಡಬೇಕಲ್ಲ..?
ಕಾರ್ಯಕ್ರಮಕ್ಕೆ ಕೊನೆ ಕೊನೆಗೆ ಟ್ವಿಸ್ಟ್ ನೀಡಿದರು. ವೋಟಿಂಗ್ ಆಗಿರುವುದು ನಿಜ. ಆದರೆ ನಿಮ್ಮನ್ನ ಹೊರಗಡೆ ಕಳಿಸೋಕೆ ಅಲ್ಲ. ಫಿನಾಲೆಗೆ ಯಾರು ಹೋಗಬೇಕು ಅನ್ನೋದಕ್ಕೆ ವೋಟಿಂಗ್ ನಡೆದಿತ್ತು ಎಂದು ಹೇಳಿದರು. ಮನೆಯಿಂದ ಹೊರಗಡೆ ಹೋದರೆ ಸಾಕು ಎಂದು ಬೇಡಿಕೊಳ್ಳುತ್ತಿದ್ದ ಮಾಳು ಅವರನ್ನು ಫೈನಲಿಸ್ಟ್ ಎಂದು ಘೋಷಿಸಿದರು. ಇವರ ಜೊತೆಯಲ್ಲಿ ಸ್ಪಂದನಾ ಅವರನ್ನು ಕೂಡ ಫೈನಲ್‌ಗೆ ಕಳುಹಿಸಿದರು.
ಇನ್ನು ಇದೇ ಸಮಯದಲ್ಲಿ ಮುಂದಿನ ವಾರ ಮೊದಲ ಫಿನಾಲೆ ವೀಕ್ ಇರುತ್ತೆ. ಹಲವು ಜನರನ್ನು ಹೊರಗಡೆ ಕಳುಹಿಸಲಾಗುತ್ತೆ. ಎಚ್ಚರಿಕೆಯಿಂದ ಇರಿ ಎಂದು ಹೇಳಿದ ಸುದೀಪ್ ಸಾಧ್ಯವಾದಷ್ಟು ನಿಮ್ಮ ಶ್ರಮ ಹಾಕಿ ಎಂದು ಕಿವಿ ಮಾತನ್ನೂ ಕೂಡ ಸ್ಫರ್ಧಿಗಳಿಗೆ ಹೇಳಿದರು. ಒಂಟಿಯಾಗಿರುವ ಕಾಕ್ರೋಚ್ ಸುಧಿ, ಅಶ್ವಿನಿ ಗೌಡ ಮತ್ತು ಜಂಟಿಯಾಗಿರುವ ಮಾಳು ನಿಪನಾಳ ಮತ್ತು ಸ್ಪಂದನಾ ಸೋಮಣ್ಣ ಅವರನ್ನು ಹೊರತು ಪಡಿಸಿದರೆ ಈ ಮನೆಯಲ್ಲಿ ಸದ್ಯ ಇನ್ಯಾರು ಸೇಫ್ ಅಲ್ಲ ಎಂದು ಮತ್ತೊಂದು ಬಾಂಬ್‌ನ್ನು ಸ್ಪರ್ಧಿಗಳ ಮೇಲೆ ಸುದೀಪ್ ಎಸೆದರು.

ಆದರೂ ಕೂಡ ಬೀಸೋ ದೊಣ್ಣೆಯಿಂದ ಪಾರಾದ ಖುಷಿಯಲ್ಲಿದ್ದ ಸ್ಫರ್ಧಿಗಳು ಈ ವಾರ ಬಚಾವ್ ಆಗಿದ್ದಕ್ಕೆ ಖುಷಿ ಪಟ್ಟರು. ಅಂದ್ಹಾಗೇ ''ಬಿಗ್ ಬಾಸ್'' ಮನೆಯ ಒಳಗೆ ಬಂದ ಎರಡನೇ ವಾರಕ್ಕೆ ಸುಸ್ತಾಗಿದ್ದ ಮಾಳು ನಿಪನಾಳ ನನಗೆ ಇಲ್ಲಿ ಇಷ್ಟವಾಗುತ್ತಿಲ್ಲ, ಸೆಟ್ ಆಗ್ತಿಲ್ಲ, ಉತ್ತರ ಕರ್ನಾಟಕದವರು, ನಾನು ಹೊರಗಡೆ ಹೋಗಬೇಕು ಎಂದು ತಮ್ಮ ಅಳಲು ತೋಡಿಕೊಂಡಿದ್ದರು. ಮಾಳು ಆಡಿದ ಈ ಮಾತುಗಳಿಗೆ ಸಾರ್ವಜನಿಕ ವಲಯದಲ್ಲಿ ಆಕ್ರೋಶ ವ್ಯಕ್ತವಾಗಿತ್ತು. ಅರ್ಹರಿಗೆ ಮನೆಯೊಳಗೆ ಪ್ರವೇಶ ಕೊಡಿ ಎನ್ನುವ ಅಭಿಪ್ರಾಯ ವ್ಯಕ್ತವಾಗಿತ್ತು. ಆದರೆ ಈಗ ಮಾಳು ಅವರನ್ನೇ ಫಿನಾಲೆಗೆ ಕಳುಹಿಸಲಾಗಿದೆ. ಹೀಗಾಗಿ ''ಬಿಗ್ ಬಾಸ್'' ತೆಗೆದುಕೊಂಡ ಈ ನಿರ್ಧಾರದ ಕುರಿತು ಕೂಡ ಈಗ ಚರ್ಚೆ ಸೋಶಿಯಲ್ ಮೀಡಿಯಾದಲ್ಲಿ ಶುರುವಾಗಿದೆ.
ಇನ್ನುಳಿದಂತೆ ನಿರೂಪಕಿ ಜಾಹ್ನವಿ, ರಕ್ಷಿತಾ ಶೆಟ್ಟಿ, ಧನುಷ್, ಅಶ್ವಿನಿ ಗೌಡ, ಮಾಳು ನಿಪನಾಳ, ರಾಶಿಕಾ ಶೆಟ್ಟಿ, ಅಭಿಷೇಕ್ ಶ್ರೀಕಾಂತ್, ಅಶ್ವಿನಿ ಎಸ್, ಎಸ್, ರಾಶಿಕಾ ಶೆಟ್ಟಿ, ಮಂಜು ಭಾಷಿಣಿ ಅವರು ನಾಮಿನೇಟ್ ಆಗಿದ್ದರು. ಆ ಪೈಕಿ ಮಾಳು ಸೇಫ್ ಆಗಿದ್ದಾರೆ. ಕಾಕ್ರೋಚ್ ಸುಧಿ, ಅಶ್ವಿನಿ ಗೌಡ ಮತ್ತು ಸ್ಪಂದನಾ ಸದ್ಯ ಸೇಫ್ ಝೋನ್‌ನಲ್ಲಿದ್ದಾರೆ. ಬಾಕಿ ಉಳಿದ ಸ್ಫರ್ಧಿಗಳಲ್ಲಿ ಮುಂದಿನ ವಾರ ಯಾರೆಲ್ಲಾ ಮನೆ ಹೊರಗೆ ಬರುತ್ತಾರೆ ಎನ್ನುವುದನ್ನು ಕಾದು ನೋಡಬೇಕಿದೆ.


Click it and Unblock the Notifications











