BBK 12 ; ಕಾವ್ಯ ಶೈವ ಪರ ಅಖಾಡಕ್ಕಿಳಿದ ಸಹೋದರ- ನೆಗೆಟಿವ್ ವಿಷಯ ಹಬ್ಬಿಸೋರಿಗೆ ಖಡಕ್ ಎಚ್ಚರಿಕೆ
''ಬಿಗ್ ಬಾಸ್'' ಕಾರ್ಯಕ್ರಮ ಶುರುವಾಗುವ ಮುನ್ನ, ಈ ಬಾರಿ ಮನೆಯನ್ನು ಪ್ರವೇಶ ಮಾಡುವ ವ್ಯಕ್ತಿಗಳ್ಯಾರು..? ಎನ್ನುವ ಪ್ರಶ್ನೆ ಹಲವರಲ್ಲಿ ಇರುತ್ತೆ. ಅದೇ ರೀತಿ ಕಾರ್ಯಕ್ರಮ ಶುರುವಾದ ನಂತರ ಈ ಬಾರಿ '' ಬಿಗ್ ಬಾಸ್'' ಗೆಲ್ಲೋದು ಯಾರು..? ಎನ್ನುವ ಪ್ರಶ್ನೆ ಕಾಡಲು ಶುರುವಾಗುತ್ತೆ. ಇನ್ನೂ ಇದು ಸೋಶಿಯಲ್ ಮೀಡಿಯಾ ಕಾಲ. ಈ ಕಾಲದಲ್ಲಿ ಹಲವರು ನೆಚ್ಚಿನ..
ಸ್ಫರ್ಧಿ ಮೇಲೀನ ತಮ್ಮ ಅಭಿಮಾನದ ಪ್ರದರ್ಶನ ಮಾಡುತ್ತಾರೆ. ಗೆಲ್ಲುವುದು ಇವರೇ ಎನ್ನುವ ವಾದ ಮಾಡಲು ಶುರು ಮಾಡುತ್ತಾರೆ. ಮನೆಯೊಳಗಡೆ ಹೋದ ಸ್ಫರ್ಧಿಗಳು ಕೂಡ ಕಡಿಮೆ ಇರುವುದಿಲ್ಲ. ತಾವು ಮನೆಯ ಒಳಗಡೆ ಹೋಗುವ ಮೊದಲು ತಮ್ಮ ಪ್ರಚಾರ ಮಾಡಲೇಂದೇ ಒಂದು ತಂಡವನ್ನು ನೇಮಕ ಮಾಡಿ ಹೋಗಿರುತ್ತಾರೆ. ಅವರಿಗೆ ಇಷ್ಟು ಅಂತ ಹಣ ನೀಡಿರುತ್ತಾರೆ. ಅಲ್ಲೊಬ್ಬರು.. ಇಲ್ಲೊಬ್ಬರು.. ಈ ಮಾತುಗಳಿಗೆ ಅಪವಾದ ಎನ್ನುವಂತೆ ಇರಬಹುದಷ್ಟೇ.

ಆದರೆ.. ಬಹುತೇಕರು ''ಬಿಗ್ ಬಾಸ್'' ಗೆಲ್ಲಲು ನೆಚ್ಚಿಕೊಂಡಿರುವುದು ಈ ಪಿಆರ್ ಏಜೆನ್ಸಿನಗಳನ್ನೇ. ಖುದ್ದು ಸುದೀಪ್ ಕೂಡ ಈ ಪಿಆರ್ ತಂತ್ರಗಾರಿಕೆಯ ಬಗ್ಗೆ ಮಾತನಾಡಿದ್ದಾರೆ. ಸ್ಫರ್ಧಿಗಳ ಪ್ರಚಾರ ಮಾಡುವುದು ಸರಿ ಆದರೆ ಎದುರಾಳಿಗಳ ತೇಜೋವಧೆ ಮಾಡುವುದು ಸರಿ ಅಲ್ಲ ಎಂದು ಹೇಳಿದ್ದಾರೆ.
ಆದರೂ ಕೂಡ ಹಣ ಪಡೆದ ಕೆಲ ಪಿಆರ್‌ಗಳು ಈ ಕೆಲಸವನ್ನು ಮುಂದುವರೆಸಿದ್ದಾರೆ. ಇದಕ್ಕೆ ಪುರಾವೆ ಎನ್ನುವಂತೆ ಕಾವ್ಯ ಶೈವ ಅವರ ಕಾಲೆಳೆಯುತ್ತಿರುವವರ ವಿರುದ್ಧ ಅವರ ಸಹೋದರ ಕಾರ್ತಿಕ ಕೆರಳಿ ಕೆಂಡವಾಗಿದ್ದಾರೆ.
ಈ ಕುರಿತು ವಿಡಿಯೋ ಮಾಡಿರುವ ಕಾರ್ತಿಕ್ ಆರಂಭದಲ್ಲಿ ಮೃದುವಾಗಿ ಮಾತನಾಡುವಂತೆ ಅಭಿನಯಿಸಿದ್ದಾರೆ. ಆ ನಂತರ ಖಡಕ್ ಉತ್ತರ ನೀಡಿದ್ಧಾರೆ. ಸಾಕಷ್ಟು ಜನ ಯಾಕೆ ಕಾವ್ಯ ಅವರ ಸೋಶಿಯಲ್ ಮೀಡಿಯಾ ಖಾತೆಯಲ್ಲಿ ಯಾವುದೇ ಪೋಸ್ಟ್ ಹಾಕುತ್ತಿಲ್ಲ ಎಂದು ಮೆಸೇಜ್‌ಗಳನ್ನು ಸಾಕಷ್ಟು ಜನ ಕಳೂಹಿಸುತ್ತಿದ್ದೀರಾ ಎಂದು ಹೇಳಿರುವ ಕಾರ್ತಿಕ್ ನಾನು ನಿಮಗೆಲ್ಲಾ ಹೇಳುವುದು ಇಷ್ಟೇ. ಈಗಾಗಲೇ ಕಾವ್ಯ ಬಗ್ಗೆ ನೆಗೆಟಿವ್ ಹಬ್ಬಿಸುತ್ತಿದ್ದಾರೆ. ದಯಮಾಡಿ ಯಾರು ಕಾವ್ಯ ಬಗ್ಗೆ ನೆಗೆಟಿವ್ ಹಬ್ಬಿಸಬೇಡಿ. ಕಾವ್ಯ ಪರವಾಗಿ ನಾನು ಕ್ಷಮೆ ಕೇಳುತ್ತೇನೆ ಎಂದು ಹೇಳಿದ್ದಾರೆ.
ಆ ನಂತರ ಹೀಗೆ ಹೇಳುತ್ತೇನೆ ಅಂತ ಅಂದುಕೊಂಡಿದ್ದೀರಾ...? ''ಬಿಗ್‌ಬಾಸ್'' ಶುರುವಾಗಿ ಕೇವಲ 50 ದಿನ ಆಗಿದೆ ಅಷ್ಟೇ. ಇನ್ನೂ ನೋಡೋದಕ್ಕೆ ತುಂಬಾ ಇದೆ. ನೀವುಗಳು ಆಗಲೇ ಕಾರಣ ಇಲ್ಲದೆ ನೆಗೆಟಿವ್ ಹಬ್ಬಿಸುತ್ತಿದ್ದೀರಾ ಅಂದರೆ ನಮ್ಮ ನಮ್ಮ ಕಾವು ನಿಮ್ಮ ಪಿಆರ್ ಟೀಮ್‌ಗೆ ಎಷ್ಟು ಭಯ ಹುಟ್ಟಿಸಿರಬಾರದು ಅಲ್ವಾ...? ಎಂದು ಪ್ರಶ್ನೆ ಮಾಡಿರುವ ಕಾರ್ತಿಕ್ ನಮ್ಮ ಕಾವು ಬಲಿಷ್ಠ ಸ್ಪರ್ಧಿ ಅಲ್ವಾ..? ಈಗಲೇ ತುಳಿದು ಬಿಡೋಣ ಅಂದುಕೊಂಡಿದ್ದೀರಿ ಅಲ್ವಾ..? ಎಂದು ಹೇಳಿದ್ದಾರೆ. ಅದೆಲ್ಲಾ ನಡಿಯೋದಿಲ್ಲ. ಫಿನಾಲೆ ಸಮಯದಲ್ಲಿ ಸುದೀಪ್ ಸರ್ ಅವರ ಒಂದು ಕೈಯಲ್ಲಿ ಕಾವ್ಯ ಇದ್ದೇ ಇರುತ್ತಾಳೆ ಬರೆದಿಟ್ಟುಕೊಳ್ಳಿ ಎಂದು ಆತ್ಮವಿಶ್ವಾಸದಿಂದ ಹೇಳಿದ್ದಾರೆ. ಈ ಮೂಲಕ ಸವಾಲು ಹಾಕಿದ್ದಾರೆ.

ಸದ್ಯ ಕಾವ್ಯ ಅವರ ಸಹೋದರನ ಈ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ತಮ್ಮ ಅಂದರೆ ಹೀಗೆ ಇರಬೇಕು ಎನ್ನುವ ಅಭಿಪ್ರಾಯ ವ್ಯಕ್ತವಾಗುತ್ತಿದೆ. ಸುದೀಪ್ ಅವರ ಒಂದು ಕೈಯಲ್ಲಿ ಕಾವ್ಯ ಕೈ ಇದ್ದರೆ ಇನ್ನೊಂದು ಕೈಯಲ್ಲಿ ಗಿಲ್ಲಿಯ ಕೈ ಇರುತ್ತೆ ಎಂದು ಕೂಡ ಹಲವರು ಕಾಮೆಂಟ್ ಮಾಡಿದ್ದಾರೆ. ಕಾವ್ಯಗೆ ಕಾವು ಎಂಬ ಹೆಸರು ಕೊಟ್ಟಿದ್ದೇ ನಮ್ಮ ಗಿಲ್ಲಿ ಎಂದು ಕೂಡ ತಮ್ಮ ಅಭಿಪ್ರಾಯವನ್ನು ಹಂಚಿಕೊಂಡಿದ್ದಾರೆ.


Click it and Unblock the Notifications











