BBK 12; ಗಿಲ್ಲಿ, ಅಶ್ವಿನಿ, ಜಾಹ್ನವಿ ಈ ವಾರ ಮನೆಯಿಂದ ಹೊರ ಹೋಗುವುದು ಯಾರು? ಕಾವ್ಯ, ಮಾಳು, ಧ್ರುವಂತ್ ಪಾರಾಗ್ತಾರಾ?

''ಬಿಗ್ ಬಾಸ್'' ಕೇವಲ ಕಾರ್ಯಕ್ರಮ ಮಾತ್ರ ಅಲ್ಲ. ವ್ಯಕ್ತಿ ಮತ್ತು ವ್ಯಕ್ತಿತ್ವಗಳ ಸಂಘರ್ಷ ಕೂಡ ಹೌದು. ಆದರೆ .. ಈ ಸಂಘರ್ಷದಲ್ಲಿ ಕೆಲವರು ಕುತಂತ್ರದಿಂದ ಗೆಲ್ಲಲು ಮುಂದಾಗುತ್ತಾರೆ. ತಮ್ಮನ್ನು ತಾವು ಶ್ರೇಷ್ಠ ಎಂದುಕೊಳ್ಳುತ್ತಾರೆ. ಮತ್ತೊಬ್ಬರನ್ನು ಮಾನಸಿಕವಾಗಿ ಕುಗ್ಗಿಸುವ ಪ್ರಯತ್ನ ಮಾಡುತ್ತಾರೆ. ಆದರೆ ಎಷ್ಟೇ ಪ್ರಯತ್ನ ಮಾಡಿದರೂ ಕೂಡ ವಾರಾಂತ್ಯಕ್ಕೆ ಒಬ್ಬರಲ್ಲೊಬ್ಬರು ಮನೆಯಿಂದ ಹೊರಗಡೆ ಬರಲೇಬೇಕು.

ನಿಯಮಾನುಸಾರ ''ಅಗ್ನಿ ಪರೀಕ್ಷೆ''ಯನ್ನು ಎದುರಿಸಲೇಬೇಕು. ಈ ವಾರ ಕೂಡ ಕನ್ನಡದ ಬಿಗ್ ಬಾಸ್ ಮನೆಯಲ್ಲಿ ಈ ಅಗ್ನಿ ಪರೀಕ್ಷೆ ಇದೆ. ಮನೆಯ 7 ಜನರ ಮೇಲೆ ಎಲಿಮಿನೇಷನ್‌ನ ತೂಗುಕತ್ತಿ ನೇತಾಡುತ್ತಿದೆ. ಈ 7 ಜನರಲ್ಲಿ ಯಾರು ಮನೆ ಹೊರಗಡೆ ಬರುತ್ತಾರೆ ಎನ್ನುವುದೇ ಸದ್ಯದ ಕುತೂಹಲ.

BBK 12 Shock Elimination Gilli Nata Ashwini Jahnavi Which Star Is Walking Out This Week

ಹೌದು, ಈ ವಾರ ಒಬ್ಬರಲ್ಲ.. ಇಬ್ಬರಲ್ಲ..7 ಜನ ನಾಮಿನೇಟ್‌ ಆಗಿದ್ದಾರೆ. ವಿಶೇಷ ಅಂದರೆ ಎಲ್ಲರು ಘಟಾನುಘಟಿಗಳೇ. ಗಿಲ್ಲಿ.. ಅಶ್ವಿನಿ ಗೌಡ.. ಕಾವ್ಯ ಶೈವ.. ಜಾಹ್ನವಿ.. ಧ್ರುವಂತ್.. ರಘು.. ಮತ್ತು ಮಾಳು ನಿಪನಾಳ ಈ ಬಾರಿ ಸಂಕಷ್ಟಕ್ಕೆ ಸಿಲುಕಿದ್ದಾರೆ.

ಈ 7 ಜನರಲ್ಲಿ ಯಾರು ಹೊರ ಬರುತ್ತಾರೆ ಎನ್ನುವುದು ಇನ್ನೇನು ಕೆಲವೇ ಗಂಟೆಗಳಲ್ಲಿ ಗೊತ್ತಾಗಲಿದೆಯಾದರು ಗಿಲ್ಲಿ ಈ ವಾರ ಮಾತ್ರವಲ್ಲ ಹಲವರ ಪ್ರಕಾರ ''ಬಿಗ್ ಬಾಸ್‌''ನ ಫಿನಾಲೆಯವರೆಗೆ ಸುರಕ್ಷಿತ ಅಭ್ಯರ್ಥಿ. ಹೀಗಾಗಿಯೇ ದೇಶಕ್ಕೆ ಒಬ್ಬನೇ ಪ್ರಧಾನಿ... ರಾಜ್ಯಕ್ಕೆ ಒಬ್ಬನೇ ಮಂತ್ರಿ... ಬಿಗ್ ಬಾಸ್ ಗೆ ಒಬ್ಬನೇ ಪಂಟ್ರು ಅದು ಗಿಲ್ಲಿ ಎಂಬ ಘೋಷವಾಕ್ಯವನ್ನು ಸದ್ಯ ಹಲವರು ಸೋಶಿಯಲ್ ಮೀಡಿಯಾದಲ್ಲಿ ಮೊಳಗಿಸುತ್ತಿದ್ದಾರೆ.

ಇನ್ನು, ಅಶ್ವಿನಿ ಅವರಿಂದಲೇ ಗಿಲ್ಲಿಗೆ ಸ್ಕೋಪ್ ಸಿಗುತ್ತಿದೆ ಎನ್ನುವುದು ಹಲವರ ಅಭಿಪ್ರಾಯ. ಅಷ್ಟೇ ಅಲ್ಲ ಅಶ್ವಿನಿ ಗೌಡ ಈ ಬಾರಿಯ ಪ್ರಬಲ ಸ್ಫರ್ಧಿ ಕೂಡ ಹೌದು. ಹೀಗಾಗಿ ಅಶ್ವಿನಿ ಗೌಡ ಕೂಡ ಹೊರ ಬರಲಾರರು ಎನ್ನುವ ಅಭಿಪ್ರಾಯವನ್ನು ಹಲವರು ವ್ಯಕ್ತಪಡಿಸುತ್ತಿದ್ದಾರೆ. ಜಾಹ್ನವಿ, ಕಾವ್ಯ ಶೈವ ಕೂಡ ಈ ವಾರ ಹೊರ ಬರಲು ಸಾಧ್ಯ ಇಲ್ಲ ಎಂದು ಕಾಮೆಂಟ್‌ಗಳನ್ನು ಮಾಡುತ್ತಿದ್ದಾರೆ.

ಇನ್ನುಳಿದವರು ಮಾಳು ನಿಪನಾಳ.. ರಘು ಮತ್ತು ಧ್ರುವಂತ್. ''ಬಿಗ್ ಬಾಸ್'' ಮನೆ ಸೇರಿದ ಆರಂಭದಲ್ಲಿಯೇ ಮನೆಯ ಹೊರಗಡೆ ಹೋಗುವ ಇಂಗಿತ ವ್ಯಕ್ತಪಡಿಸಿದ್ದರು ಮಾಳು ನಿಪನಾಳ.

bbk-12-shock-elimination-gilli-nata-ashwini-jahnavi-which-star-is-walking-out-this-week

ಆದ್ಯಾಗ್ಯೂ ಅವರು ಇನ್ನು ಮನೆಯಲ್ಲಿಯೇ ಉಳಿದುಕೊಂಡಿದ್ದಾರೆ. ಆದರೆ ಈ ವಾರ ಮಾಳುಗೆ ''ಬಿಗ್ ಬಾಸ್‌'' ಮನೆಯ ಋಣ ಮುಗೀತು ಎನ್ನುವ ನಂಬಿಕೆ ಹಲವರದ್ದು.

ಇನ್ನು ಧ್ರುವಂತ್ ಮನೆಯಲ್ಲಿ ತಿ* ಶಬ್ದದ ಬಳಕೆ ಮಾಡಿದ್ದಾರೆ. ಮನೆಯ ಕ್ಯಾಪ್ಟನ್ ಆಗಿರುವ ಧನುಷ್‌ ಇದನ್ನು ಪ್ರಶ್ನೆ ಮಾಡಿದ್ದೇ ತಪ್ಪೆನ್ನುವಂತೆ ಧ್ರುವಂತ್ ನಡೆದುಕೊಂಡಿದ್ದಾರೆ. ಇಬ್ಬರ ಜಗಳ ಕೈ-ಕೈ ಮಿಲಾಯಿಸುವ ಹಂತಕ್ಕೆ ಕೂಡ ಹೋಗಿತ್ತು.

ಈ ಹಿನ್ನೆಲೆ ನಿಯಮದ ಉಲ್ಲಂಘನೆ ಮಾಡಿದ ಆರೋಪದಡಿ ಧ್ರುವಂತ್ ಅವರನ್ನು ಮನೆಯಿಂದ ಹೊರಗಡೆ ಕಳುಹಿಸಿದರು ಕಳುಹಿಸಬಹುದು. ಆ ಸಾಧ್ಯತೆ ಕೂಡ ಇದೆ ಎನ್ನುವುದು ಹಲವರ ಅಭಿಪ್ರಾಯ. ಮಿಕ್ಕಂತೆ ರಘು ಅವರ ಹಲವರ ದೃಷ್ಟಿಕೋನದಲ್ಲಿ ಸದ್ಯಕ್ಕಂತೂ ಸೇಫ್.

ಇನ್ನುಳಿದಂತೆ ಎಲ್ಲರಿಗೆ ಗೊತ್ತಿರುವಂತೆ ಬಿಗ್ ಬಾಸ್ ಮನೆಗೆ ಕಳೆದ ಬಾರಿಯ ರಣಕಲಿಗಳು ಹೋಗಿದ್ದಾರೆ. ಈ ಹಿನ್ನೆಲೆ ಮನೆಯ ವಾತಾವರಣ ಸದ್ಯ ಕಾವೇರಿದೆ. ಹಳೆಯ ಸ್ಫರ್ಧಿಗಳು ಬೇಕು ಬೇಕಂತಲೇ ಗಿಲ್ಲಿಯನ್ನು ಗುರಿಯಾಗಿಸಿಕೊಂಡು ಮಾತನಾಡಿದ್ದಾರೆ ಎನ್ನುವ ಅಭಿಪ್ರಾಯ ಸಾರ್ವಜನಿಕರಲ್ಲಿದೆ. ಉಗ್ರಂ ಮಂಜು ರಜತ್‌ ಕೆಟ್ಟ ವರ್ತನೆಗೆ ಸುದೀಪ್ ಅವರು ಕ್ಲಾಸ್‌ ತೆಗೆದುಕೊಳ್ಳಬೇಕು ಎನ್ನುವ ಅಭಿಪ್ರಾಯ ಇದೆ. ಇಂದು ಕಿಚ್ಚ ಯಾರಿಗೆಲ್ಲಾ ಕ್ಲಾಸ್ ತೆಗೆದುಕೊಳ್ಳುತ್ತಾರೆ..? ಯಾವೆಲ್ಲ ವಿಷಯ ಚರ್ಚೆ ಮಾಡುತ್ತಾರೆ..? ಎನ್ನುವುದನ್ನು ನೋಡಬೇಕಿದೆ.

ಒಟ್ನಲ್ಲಿ ಸದ್ಯ 07 ಜನ ಈ ವಾರ ಮನೆಯ ಹೊಸ್ತಿಲಿನವರೆಗೆ ಬಂದು ನಿಂತಿದ್ದಾರೆ. ಈ 7ಜನರಲ್ಲಿ ಮನೆಯ ಮುಖ್ಯದ್ವಾರದಿಂದ ಹೊರಗಡೆ ಬರುವುದು ಯಾರು..? ಎನ್ನುವುದನ್ನು ಕಾದು ನೋಡಬೇಕಿದೆ.

More from Filmibeat

English summary
Who is OUT of BBK 12 this week? Get the complete elimination prediction and voting results for Dhruvanth, Malu Nipanal, Jahnavi, and Raghu. Don't miss the shocking final decision!
Read more about: bigg boss biggboss ಟಿವಿ
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X