ಬಿಗ್ ಬಾಸ್ ಮನೆಯಲ್ಲಿ ಗೆಜ್ಜೆ ಸದ್ದು, ರಾಜಮಾತೆ ಅಶ್ವಿನಿ ಮತ್ತು ಶಿಷ್ಯೆ ಜಾಹ್ನವಿ ಮೈ ಚಳಿ ಬಿಡಿಸಿದ ಸುದೀಪ್

''ಬಿಗ್ ಬಾಸ್'' ಕೇವಲ ಕಾರ್ಯಕ್ರಮ ಮಾತ್ರ ಅಲ್ಲ. ವ್ಯಕ್ತಿ ಮತ್ತು ವ್ಯಕ್ತಿತ್ವಗಳ ಸಂಘರ್ಷ ಕೂಡ ಹೌದು. ಆದರೆ .. ಈ ಸಂಘರ್ಷದಲ್ಲಿ ಕೆಲವರು ಕುತಂತ್ರದಿಂದ ಯುದ್ಧ ಗೆಲ್ಲಲು ಮುಂದಾಗುತ್ತಾರೆ. ತಮ್ಮನ್ನು ತಾವು ಶ್ರೇಷ್ಠ ಎಂದುಕೊಳ್ಳುತ್ತಾರೆ. ಮತ್ತೊಬ್ಬರನ್ನು ಮಾನಸಿಕವಾಗಿ ಕುಗ್ಗಿಸುವ ಪ್ರಯತ್ನ ಮಾಡುತ್ತಾರೆ. ಆದರೆ ಇದೆಲ್ಲವೂ ಮಾಡುವ ಸಮಯದಲ್ಲಿ ಇವರಿಗೆ ಮನೆಯಲ್ಲಿ ಕ್ಯಾಮರಾಗಳು ತಮ್ಮ ಮೇಲಿವೆ ಎನ್ನುವುದು ಮರೆತು ಹೋಗಿರುತ್ತೆ.

ವಾರಾಂತ್ಯದಲ್ಲಿ ತಮ್ಮ ಮುಖವಾಡ ಕಳಚಿ ಬೀಳುತ್ತೆ ಎನ್ನುವ ಪರಿಜ್ಞಾನ ಕೂಡ ಇವರಿಗೆ ಇರುವುದಿಲ್ಲ. ಉದಾಹರಣೆಗೆ ಈ ಬಾರಿಯ ''ಬಿಗ್ ಬಾಸ್'' ಮನೆಯಲ್ಲಿರುವ ಅಶ್ವಿನಿ ಗೌಡ ಮತ್ತು ಜಾಹ್ನವಿ ಅವರನ್ನೇ ತೆಗೆದುಕೊಳ್ಳಿ. ಹೌದು, ಎಲ್ಲರಿಗೆ ಗೊತ್ತಿರುವಂತೆ ಕಳೆದ ವಾರ ಬಿಗ್ ಬಾಸ್ ಮನೆಯಲ್ಲಿ ಗೆಜ್ಜೆ ಸದ್ದು ಕೇಳಿಸಿತ್ತು. ಸಾಲದಕ್ಕೆ ಮನೆಯ ದೀಪಗಳು ಕೂಡ ಕಣ್ಣಾಮುಚ್ಚಾಲೆ ಆಡಿದ್ದವು.

BBK 12 SHOCK Sudeep s BRUTAL Verdict on Ghost Gimmick Janhvi amp amp Ashwini SHIVER

ಮನೆಯಲ್ಲಿನ ಈ ವಾತಾವರಣ ಅಲ್ಲಿನ ಎಲ್ಲರನ್ನೂ ಬೆಚ್ಚಿ ಬೀಳಿಸಿತ್ತು. ನೋಡುಗರಿಗೆ ಈ ಕೆಲಸ ಅಶ್ವಿನಿ ಗೌಡ ಮತ್ತು ಜಾಹ್ನವಿ ಅವರದ್ದು ಎಂದು ಗೊತ್ತಿತ್ತಾದರೂ ಮಾತ್ರ ಅಶ್ವಿನಿ ಮತ್ತು ಜಾಹ್ನವಿ ಆಗ ತಮಗೇನು ಗೊತ್ತಿಲ್ಲ ಎಂಬಂತೆ ಎಲ್ಲಿಂದ ಶಬ್ಧ ಬಂತು ಎಂದು ಹುಡುಕಲು ಆರಂಭಿಸಿದ್ದರು.

ಸದ್ಯ ಇಂದು ಇದೇ ವಿಚಾರಕ್ಕೆ ಸಂಬಂಧಿಸಿದಂತೆ ಸುದೀಪ್ ಜಾಹ್ನವಿ ಮತ್ತು ಅಶ್ವಿನಿಗೌಡ ಅವರ ಮುಖಕ್ಕೆ ಮಂಗಳಾರತಿ ಎತ್ತಿದ್ಧಾರೆ. ಇದೇ ವಿಚಾರಕ್ಕೆ ಸಂಬಂಧಿಸಿದಂತೆ ಇಂದು ಮಾತು ಶುರು ಮಾಡಿದ ಸುದೀಪ್ ಆರಂಭದಲ್ಲಿ ಗೆಜ್ಜೆ ಸದ್ದಿನ ಕುರಿತು ಚಂದ್ರಪ್ರಭಾ ಅವರಲ್ಲಿ ಪ್ರಶ್ನೆ ಕೇಳಿದರು. ಚಂದ್ರಪ್ರಭಾ ಅಮವಾಸೆ ಬೇರೆ ಇತ್ತು ಅನ್ಸುತ್ತೆ ತುಂಬಾ ಭಯ ಆಯ್ತು ಎಂದು ಹೇಳಿದರು. ಆ ನಂತರ ಗಿಲ್ಲಿಗೆ ಈ ಕುರಿತು ಕೇಳಿದಾಗ ಮಧ್ಯರಾತ್ರಿ ನಾನು ಬಾತ್ ರೂಮ್ ಹೋಗುವುದನ್ನೇ ಬಿಟ್ಟಿದ್ದೇನೆ ಅಣ್ಣ ಎಂದು ಹೇಳಿದರು.

ಇನ್ನು ಇದೇ ವಿಚಾರಕ್ಕೆ ಸಂಬಂಧಿಸಿದಂತೆ ಕಾಕ್ರೋಚ್ ಸುಧಿ ಕೂಡ ತಮ್ಮ ಮಾತು ಹಂಚಿಕೊಂಡರು. ದೆವ್ವಕ್ಕೆ ಜಾಂಡೀಸ್ ತರಿಸುವಂತ ಸ್ಫರ್ಧಿಗಳು ಈ ಮನೆಯಲ್ಲಿದ್ದಾರೆ. ಚಂದ್ರಮುಖಿ.. ನಾಗವಲ್ಲಿಗಿಂತ ತುಂಬಾ ಡೇಂಜರ್ ಎಂದು ಹೇಳಿದರು. ಕಾವ್ಯಾ ಕೂಡ ಜಾಹ್ನವಿ ಮೇಲೆ ಅನುಮಾನ ವ್ಯಕ್ತಪಡಿಸಿದರು. ಆಗ ಜಾಹ್ನವಿ ತಮ್ಮದೇನು ತಪ್ಪಿಲ್ಲ ಎನ್ನುವಂತೆ ನಾಟಕವಾಡಲು ಮುಂದಾದರು. ಅಶ್ವಿನಿ ಗೌಡ ಕೂಡ ಎಲ್ಲಾ ತಮಾಷೆಗಷ್ಟೇ ಎಂದು ಸಬೂಬು ಹೇಳಲು ಬಂದರು. ಆಗ ಕೆರಳಿದ ಸುದೀಪ್ ರಾಜಮಾತೆ ಅಶ್ವಿನಿ ಮತ್ತು ಅವರ ಶಿಷ್ಯೆ ಇಬ್ಬರಿಗೂ ಕ್ಲಾಸ್ ತೆಗೆದುಕೊಂಡರು.

ತಮಾಷೆ ಒಂದು ಹಂತಕ್ಕೆ ಓಕೆ ಆದರೆ ವ್ಯಕ್ತಿಯ ವ್ಯಕ್ತಿತ್ವಕ್ಕೆ ಧಕ್ಕೆ ತರುವಂತಹ ಕೆಲಸ ಮಾಡಬಾರದು ಎಂದು ಸುದೀಪ್ ಹೇಳಿದಾಗ, ನಾವು ಸುಮ್ಮನೆ ತಮಾಷೆ ಮಾಡಿದ್ದು ಯಾರಿಗೂ ನೋವುಂಟು ಮಾಡುವ ಉದ್ದೇಶ ಇರಲಿಲ್ಲ ಎಂದು ಹೇಳಿದರು.

BBK 12 SHOCK Sudeep s BRUTAL Verdict on Ghost Gimmick Janhvi amp amp Ashwini SHIVER

ಜಾಹ್ನವಿಯ ಈ ಮಾತುಗಳಿಗೆ ತಮ್ಮದೇ ಶೈಲಿಯಲ್ಲಿ ಉತ್ತರ ನೀಡಿದ ಸುದೀಪ್, ಹರ್ಟ್ ಮಾಡುವ ಉದ್ದೇಶ ನನಗೂ ಇಲ್ಲ, ತಮಾಷೆಗೆ ಅಂತ ಧ್ರುವಂತ್‌ನ ನಾನು ಮನೆಯ ಹೊರಗಡೆ ಬರುವಂತೆ ಹೇಳುತ್ತೇನೆ. ಆದರೆ ಆ ತಮಾಷೆ ಮುಖ್ಯದ್ವಾರದವರೆಗೆ ಸೀಮಿತವಾಗಿರಬೇಕು. ಅದರಾಚೆ ಮಾಡಿದರೆ ಅದು ತಮಾಷೆ ಎಂದು ಅನಿಸುವುದಿಲ್ಲ ಎಂದು ಹೇಳಿದರು.

ನಿಮ್ಮ ಇಬ್ಬರಿಗೆ ಇಷ್ಟ ಬಂದಾಗ ರಕ್ಷಿತಾ ಚಿಕ್ಕವಳು, ಕಷ್ಟ ಆದಾಗ ದೊಡ್ಡವಳು, ನಿಮ್ಮ ಇಬ್ಬರಿಗೆ ಇದು ಅಧಿಕ ಪ್ರಸಂಗ ಮಾಡುತ್ತಿದ್ದೇವೆ ಎನ್ನುವ ಭಾವನೆ ಬರಲಿಲ್ವಾ ಎಂದು ಪ್ರಶ್ನೆ ಕೇಳಿದ ಸುದೀಪ್ ಬೇರೆಯವರಿಗೆ ನಮ್ಮ ತಮಾಷೆಯಿಂದ ಭಯ ಆಗ್ತಿದೆ. ಎಂದು ಅನಿಸಿಲ್ವಾ ಎಂದು ಕೂಡ ಕೇಳಿದರು.

ನಿಮ್ಮ ದೃಷ್ಟಿಯಲ್ಲಿ ಜೋಕ್ ಅಂದರೇನು ಎಂದು ಕೇಳಿದ ಸುದೀಪ್, ನಾನು ಏನಾದರೂ ಮಾತನಾಡಿದರೆ ಜನ ನಗ್ತಾರಲ್ಲ ಅದು ಜೋಕ್ ಎಂದು ಹೇಳಿದರು. ಅತ್ತಾಗ ಹೇಗೆ ಜೋಕ್ ಆಗುತ್ತೆ ಎಂದು ಪ್ರಶ್ನೆ ಮಾಡಿದರು. ಆಗ ಮಾಡಿದ ತಪ್ಪಿಗೆ ತೇಪೆ ಹಚ್ಚಲು ಬಂದ ಅಶ್ವಿನಿ ಅವರಿಗೆ ಕೂಡ ಉಗಿದು ಉಪ್ಪಾಕಿದ ಸುದೀಪ್ ಪರ್ಸನಲ್ ಅಲ್ಲ ಅಂತೀರಾ ಆದರೆ ನೀವು ತುಂಬಾ ಪರ್ಸನಲ್ ಆಗಿ ತಗೊಳ್ತಿದ್ದೀರಾ ಎಂದು ಹೇಳಿದರು. ಬೇರೆಯವರು ನಿಮ್ಮನ್ನು ಯಮ್ಮ ಗಿಮ್ಮ ಎಂದು ಕರೆದರೆ ನಿಮಗೆ ಕೋಪ ಬರುತ್ತೆ ಆದರೆ ನೀವು ಮಾತ್ರ ಅವರನ್ನು ಈಡಿಯಟ್ ಎಂದು ಕರೆಯಬಹುದಾ ಎಂದು ಪ್ರಶ್ನೆ ಮಾಡಿದರು.

ಸುದೀಪ್ ತೆಗೆದುಕೊಂಡು ಈ ಕ್ಲಾಸ್‌ದಿಂದ ಕಕ್ಕಾಬಿಕ್ಕಿಯಾದ ಅಶ್ವಿನಿ ಕೊನೆಗೆ ಬೇರೆ ದಾರಿ ಇಲ್ಲದೆ ರಕ್ಷಿತಾ ಅವರ ಬಳಿ ಮಾಡಿದ ತಪ್ಪಿಗೆ ಕ್ಷಮೆ ಕೇಳಿದರು. ನೋವುಂಟು ಮಾಡುವ ಉದ್ದೇಶ ತಮಗೆ ಇರಲಿಲ್ಲ ಎಂದು ರಕ್ಷಿತಾ ಸಾರಿ ಕಂದ ಎಂದು ಹೇಳಿದರು.

More from Filmibeat

English summary
The BBK 12 house drama escalates! See why host Sudeep brutally criticized contestants Janhvi and Ashwini Gowda over their shocking fake ghost act in the First Finale.
Read more about: biggboss bigg boss ಟಿವಿ
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X