»   »  'ಕ್ಯಾಪ್ಟನ್' ಆದ ಪ್ರಥಮ್: 'ಸಹಿಸಿಕೊಳ್ಳುವ ಕರ್ಮ ನನಗಿಲ್ಲ' ಎಂದ ಮೋಹನ್

'ಕ್ಯಾಪ್ಟನ್' ಆದ ಪ್ರಥಮ್: 'ಸಹಿಸಿಕೊಳ್ಳುವ ಕರ್ಮ ನನಗಿಲ್ಲ' ಎಂದ ಮೋಹನ್

Posted By:
Subscribe to Filmibeat Kannada

'ಬಿಗ್ ಬಾಸ್ ಕನ್ನಡ-4' ಕಾರ್ಯಕ್ರಮದ ಆರಂಭದ ದಿನಗಳಲ್ಲಿ ಮೋಹನ್ ಹಾಗೂ ಪ್ರಥಮ್ ಹೀಗಿರಲಿಲ್ಲ. ಆಗಾಗ ಪ್ರತಿಭಟನೆ, ಹೋರಾಟ ಅಂತ ಅತಿರೇಕದಿಂದ ವರ್ತಿಸುತ್ತಿದ್ದರೂ, ಮೋಹನ್ ಹಾಕಿದ ಗೆರೆಯನ್ನ ಪ್ರಥಮ್ ದಾಟುತ್ತಿರಲಿಲ್ಲ. ಮೋಹನ್ ಮಾತಿಗೆ ಪ್ರಥಮ್ ಗೌರವ ಕೊಡ್ತಿದ್ರು. [ಕಡೆಗೂ 'ಬಿಗ್ ಬಾಸ್' ಮನೆಯ ಕ್ಯಾಪ್ಟನ್ ಆದ 'ಬುದ್ಧಿವಂತ' ಪ್ರಥಮ್.!]

ಆದ್ರೆ, 'ಬಿಗ್ ಬಾಸ್' ಮನೆಯ ಪರಿಸ್ಥಿತಿ, ಇಬ್ಬರ ಮನಃಸ್ಥಿತಿ ಈಗ ಹಾಗೇ ಉಳಿದಿಲ್ಲ. ಪ್ರಥಮ್ ಕಂಡ್ರೆ ಮೋಹನ್ ಗೆ ಅಷ್ಟಕಷ್ಟೆ ಎನ್ನುವಂತಾಗಿದೆ. ಹತ್ತು ವಾರಗಳ ಬಳಿಕ 'ಬುದ್ಧಿವಂತಿಕೆ'ಯನ್ನ ಸಾಬೀತು ಮಾಡಿ ಕ್ಯಾಪ್ಟನ್ ಪಟ್ಟಕ್ಕೆ ಪ್ರಥಮ್ ಏರಿರುವುದು ಮೋಹನ್ ಗೆ ಸಹಿಸಿಕೊಳ್ಳಲು ಆಗುತ್ತಿಲ್ಲ.

ಮೋಹನ್ ಗೆ ಅಸಮಾಧಾನ

ಕ್ಯಾಪ್ಟನ್ ಪಟ್ಟಕ್ಕೆ ಪ್ರಥಮ್ ಏರುತ್ತಿದ್ದಂತೆ ಮೋಹನ್ ಅಸಮಾಧಾನಗೊಂಡರು. ಮೋಹನ್ ಬೇಸರಗೊಂಡಿದ್ದನ್ನ ನೋಡಿದ ಕೀರ್ತಿ, ''ನಮಗೆ ಬೇಜಾರು ಒಂದು ಕಡೆ. ನೀವು ಬೇಸರಗೊಂಡರೆ ನಮಗೆ ಬಲ ಕುಗ್ಗಿಸಿ ಬಿಡುತ್ತದೆ'' ಅಂತ ಹೇಳಿದರು. [ಯಾರೀ 'ತಲೆಕೆಟ್ಟ ತಂಗಳಿಟ್ಟು' ಪ್ರಥಮ್? ನಿಮಗೆ ಗೊತ್ತಿಲ್ಲದ ಸತ್ಯ ಸಂಗತಿ]

ಒಂದೇ ತರಹ ಇರಲು ಆಗಲ್ಲ.!

''ಕೆಲವೊಂದೆಲ್ಲ ತೆಗೆದುಕೊಳ್ಳುವುದಕ್ಕೆ ಆಗಲ್ಲ. 10 ವಾರದಿಂದ ಇಗ್ನೋರ್ ಮಾಡಿಕೊಂಡು ಬಂದಿದ್ದೇನೆ. ಎಷ್ಟು ವಾರ ಅಂತ ಮಾಡಲಿ ನಾನು. ಒಂದೇ ತರ ಇರಲು ಆಗಲ್ಲ'' ಅಂತ ಮನಸ್ಸಿನಲ್ಲಿ ಇದ್ದ ಅಸಮಾಧಾನ ಹೊರ ಹಾಕಲು ಆರಂಭಿಸಿದರು. ['ದಂಡನಾಯಕ' ಪ್ರಥಮ್ ವಿರುದ್ಧ ದಂಗೆ ಎದ್ದ ಕೀರ್ತಿ-ಮೋಹನ್ ಗ್ಯಾಂಗ್.!]

ಸಂಯಮ ಪರೀಕ್ಷೆ ನಮಗೆ ಯಾಕೆ?

''ಪ್ರತಿ ಬಾರಿ ನಮ್ಮ ಸಂಯಮ ಪರೀಕ್ಷೆ ಆಗುತ್ತಿದೆ. ನಮ್ಮ ಪ್ರತಿಭೆ ಪರೀಕ್ಷೆ. ನಮ್ಮ ಮೇಲೆ ಡೌಟು. ಅವರಿಗೆ (ಪ್ರಥಮ್) ಯಾವ ರಿಸ್ಟ್ರಿಕ್ಷನ್ ಕೂಡ ಇಲ್ವೇ? ಬಿಂದಾಸ್ ಆಗಿ ಇರಬಹುದಲ್ವಾ? ಯಾರನ್ನ ಏನು ಬೇಕಾದರೂ ಅನ್ನಬಹುದು. ಒಂದು ಹುಡುಗಿಯನ್ನ ಡವ್ವು ಅನ್ನಬಹುದು. ಒಬ್ಬನ್ನ ಅವಿವೇಕಿ ಅನ್ನಬಹುದು. ಅವನಿಗೆ (ಪ್ರಥಮ್) ಈ ಮನೆಯಲ್ಲಿ ಯಾವ ರಿಸ್ಟ್ರಿಕ್ಷನ್ ಕೂಡ ಇಲ್ವೇ? ನಮಗೆ ತಾನೆ ಎಲ್ಲ'' - ಮೋಹನ್

ಐ ಆಮ್ ಲೂಸರ್

''ಅನಿಸಿಕೊಂಡು ಇರುವಂಥದ್ದು ನಮಗೆ ಬೇಡ. ಐ ವಿಲ್ ಡಿಕ್ಲೇರ್ ಮೈ ಸೆಲ್ಫ್ ಆಸ್ ಲೂಸರ್. ಈ ಆಟಕ್ಕೆ ನಾನು ಸೋತೆ. ನನಗೆ ಆಗುತ್ತಿಲ್ಲ. ಎಲ್ಲಾ ಸಹಿಸಿಕೊಂಡು ಇರುವ ಕರ್ಮ ನನಗಿಲ್ಲ. ಎಲ್ಲರಿಗಿಂತ ಹೆಚ್ಚಾಗಿ ಅವನನ್ನ (ಪ್ರಥಮ್) ಸಹಿಸಿಕೊಂಡು ಇರುವುದು ನಾನೇ. ಎಷ್ಟು ಅಂತ ಆಗುತ್ತೆ'' - ಮೋಹನ್

English summary
BBK4, Week 10: Actor, Director Mohan expresses his displeasure about Pratham being captain of the house.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada