'ಬಿಗ್ ಬಾಸ್' ಮನೆಯ ಡೇಂಜರಸ್ ಲೇಡಿ ಯಾರು ಗೊತ್ತಾ.?
'ಬಿಗ್ ಬಾಸ್' ಮನೆಯ 'ದಿ ಮೋಸ್ಟ್ ಡೇಂಜರಸ್ ಲೇಡಿ' ಅಂದ್ರೆ ಅದು ನಟಿ ಶಾಲಿನಿ. ಹೀಗಂತ ಭುವನ್ ಪೊನ್ನಣ್ಣ ಬಳಿ ನಟ, ನಿರ್ದೇಶಕ ಮೋಹನ್ ಹೇಳಿದರು.
ನಾಮಿನೇಷನ್ ಪ್ರಕ್ರಿಯೆಯಲ್ಲಿ ಭುವನ್ ರವರನ್ನ 'ಕ್ಯಾಪ್ಟನ್' ಶಾಲಿನಿ ನೇರವಾಗಿ ನಾಮಿನೇಟ್ ಮಾಡಿದರು. ಇದರಿಂದ ಬೇಸರಗೊಂಡ ಭುವನ್, ಮೋಹನ್ ರವರ ಬಳಿ ಅಸಮಾಧಾನ ಹೊರಹಾಕುತ್ತಿದ್ದರು.[12ನೇ ವಾರ 'ಬಿಗ್ ಬಾಸ್' ಮನೆಯಿಂದ ಗೇಟ್ ಪಾಸ್ ಯಾರಿಗೆ..?]

ಈ ವೇಳೆ, ''ಇಡೀ ಮನೆಯ ಮೋಸ್ಟ್ ಡೇಂಜರಸ್ ಲೇಡಿ ಆಕೆ (ಶಾಲಿನಿ). ನಗೋ ಹೆಂಗಸು, ಅಳೋ ಗಂಡಸು ಇದ್ದಾರಲ್ಲ. ಅವರನ್ನ ನಂಬಲೇಬಾರದು'' ಎಂದುಬಿಟ್ಟರು ಮೋಹನ್.

ಅಂದ್ಹಾಗೆ, 'ಬಿಗ್ ಬಾಸ್' ಮನೆಯ ಕಿಚನ್ ನಲ್ಲಿ ಶಾಲಿನಿ 'ರಾಜಕೀಯ' ಮಾಡುತ್ತಿದ್ದಾರೆ ಅಂತ ಕಿಚ್ಚ ಸುದೀಪ್ ಮುಂದೆ ಹೇಳಿದ್ದು ಇದೇ ಮೋಹನ್. ಇದನ್ನೆಲ್ಲ ನೋಡಿದರೆ, ಶಾಲಿನಿ ಅಂಡ್ ಗ್ಯಾಂಗ್ ಗೂ ಮೋಹನ್ ಗೂ ಅಷ್ಟಕಷ್ಟೆ ಅನಿಸಲ್ವಾ?
More from Filmibeat
English summary
BBK4, Week 12: Do you know who is the most Dangerous Lady in the house.? Ask Mohan.
bigg boss kannada 4 bigg boss reality show colors channel tv ಬಿಗ್ ಬಾಸ್ ಕನ್ನಡ 4 ಬಿಗ್ ಬಾಸ್ ರಿಯಾಲಿಟಿ ಶೋ ಟಿವಿ ಕಲರ್ಸ್ ವಾಹಿನಿ


Click it and Unblock the Notifications











