'ಕಿರಿಕ್ ತಂಗಳಿಟ್ಟು' ಪ್ರಥಮ್ ಗೆ ದೊಡ್ಡ ಗಣೇಶ್ ಕೊಟ್ಟ ಭಯಂಕರ ಶಿಕ್ಷೆ
ಎಲ್ಲರೂ ಅಂದುಕೊಂಡಂತೆ ಕ್ರಿಕೆಟ್ ದೊಡ್ಡ ಗಣೇಶ್ ಅವರು ಈ ವಾರ ಮನೆಯಿಂದ ಔಟ್ ಆದರು. ಎಂದಿನಂತೆ ಬಿಗ್ ಬಾಸ್ ಕೊಟ್ಟ ವಿಶೇಷ ಅಧಿಕಾರದಿಂದ ಪ್ರಥಮ್ ಅವರಿಗೆ ಮನೆ ತುಂಬಾ ಸ್ಟ್ರೆಚರ್ ನಲ್ಲಿ ಓಡಾಡುವ ಶಿಕ್ಷೆ ಕೊಟ್ಟು ಹೊರಬಂದರು.
ವಾರದ ಕಥೆ ಕಿಚ್ಚನ ಕಾರ್ಯಕ್ರಮ ಸಾರಾಗವಾಗಿ ಮುಗಿದ ನಂತರ ಸುದೀಪ್ ಅವರು ಎಂದಿನಂತೆ ಎಲಿಮಿನೇಷನ್ ರೌಂಡ್ ಗೆ ಬಂದರು. ಈ ಬಾರಿ 5 ಜನ ನಾಮಿನೇಟ್ ಆಗಿದ್ದರು, ಶೀತಲ್ ಶೆಟ್ಟಿ, ದೊಡ್ಡ ಗಣೇಶ್, ಪ್ರಥಮ್, ಸಂಜನಾ ಚಿದಾನಂದ್ ಮತ್ತು ಕಾವ್ಯ ಶಾಸ್ತ್ರಿ.
ಈ ವಾರದ ಎಲಿಮಿನೇಷನ್ ಬಗ್ಗೆ ಸುದೀಪ್ ಅವರು ಮೊದಲು ಮೋಹನ್ ಅವರಿಗೆ ಅಭಿಪ್ರಾಯ ಕೇಳುತ್ತಾರೆ. ಅದಕ್ಕೆ ಮೋಹನ್ ಅವರು ನನ್ನ ಪ್ರಕಾರ, ನನಗೆ ತುಂಬಾ ಹತ್ತಿರವಾಗಿರುವ ಗಣೇಶ್ ಅವರು ಹೋಗಬಹುದು ಅಂತ್ಹೆನಿಸುತ್ತಿದೆ ಎಂದರು.['ಬಿಗ್ ಬಾಸ್' ಮನೆಯಿಂದ ಕ್ರಿಕೆಟರ್ ದೊಡ್ಡ ಗಣೇಶ್ ಔಟ್.?]

ಶಾಲಿನಿ ಕೂಡ ಅವರ ಹೆಸರನ್ನೇ ಹೇಳಿದರು. ನಿರಂಜನ್ ಕೂಡ ಅವರನ್ನೇ ಹೇಳಿದರು. ಕೀರ್ತಿ, ಕಾರುಣ್ಯ ಮತ್ತು ಶಾಲಿನಿ ಅವರು ಕೂಡ ಗಣೇಶ್ ಹೆಸರು ಸೂಚಿಸಿದರು. ಆದ್ರೆ ಓಂ ಪ್ರಕಾಶ್ ಮಾತ್ರ ಶಾಲಿನಿ ಹೆಸರು ಸೂಚಿಸಿದ್ದು ತಮಾಷೆ ಆಗಿತ್ತು. ಶೀತಲ್ ನನ್ನನ್ನು ಉಳಿಸಿಕೊಳ್ಳುತ್ತೇನೆ ಬೇರೆಯವರನ್ನು ಉಳಿಸುವಷ್ಟು ಒಳ್ಳೆಯವಳಲ್ಲ ಎಂದರು.
ಮೊದಲು ಕಾವ್ಯ ಶಾಸ್ತ್ರಿ ಅವರು ಸೇಫ್ ಆದರು, ನಂತರ ಪ್ರಥಮ್, ಸಂಜನಾ ಕೊನೆಗೆ ಶೀತಲ್ ಶೆಟ್ಟಿ ಸೇಫ್ ಆದರು. ಅದಾದ ನಂತರ ಕೊನೆಗೆ ಕ್ರಿಕೆಟರ್ ದೊಡ್ಡ ಗಣೇಶ್ ಅವರು ಎಲಿಮಿನೇಟ್ ಆಗಿ ಖುಷಿ-ಖುಷಿಯಾಗಿ ಮನೆಯಿಂದ ಹೊರಬಂದರು.[ಬಿಗ್ ಬಾಸ್ 4: ಬರ್ತ್ ಡೇ ಬಾಯ್ ನಿರಂಜನ್ ದೇಶಪಾಂಡೆ ಕಾಲೆಳೆದ ಕಿಚ್ಚ]

ಮನೆಯಿಂದ ಹೊರಗಡೆ ಬರುವ ದೊಡ್ಡ ಗಣೇಶ್ ಅವರಿಗೆ ಬಿಗ್ ಬಾಸ್ ಎಂದಿನಂತೆ ವಿಶೇಷ ಅಧಿಕಾರ ನೀಡಿದರು. ಅದೇನಪ್ಪಾ ಅಂದ್ರೆ ಬಿಗ್ ಬಾಸ್ ಮುಂದಿನ ಆದೇಶದವರೆಗೂ ಮನೆಯ ಒಬ್ಬ ಸದಸ್ಯ ಮನೆಯ ಆಚೆ-ಈಚೆ ಓಡಾಡಬೇಕಾದರೂ ಸ್ಟ್ರೆಚರ್ ಬಳಸಬೇಕು. ಇದಕ್ಕೆ ಗಣೇಶ್ ಅವರು ಮುಲಾಜಿಲ್ಲದೆ ಪ್ರಥಮ್ ಅವರ ಹೆಸರನ್ನು ಸೂಚಿಸಿದರು.[ಕಿಚ್ಚ ಸುದೀಪ್ ಮುಂದೆ ಎರಡು ಬಾರಿ ಕ್ಷಮೆ ಕೇಳಿದ ದೊಡ್ಡ ಗಣೇಶ್.!]

ಆದ್ದರಿಂದ ಇನ್ನು ಬಿಗ್ ಬಾಸ್ ನ ಮುಂದಿನ ಆದೇಶದವರೆಗೆ ಬಾಯಿ ಬಡುಕ ಪ್ರಥಮ್ ಅವರು ಸ್ಟ್ರೆಚರ್ ಮೂಲಕ ಓಡಾಡಬೇಕು. ಇವರನ್ನು ಇಬ್ಬರು ಸದಸ್ಯರು ಹೊತ್ತುಕೊಂಡು ಓಡಾಡಬೇಕು ಅನ್ನೋದು ಇನ್ನೊಂದು ವಿಶೇಷ.


Click it and Unblock the Notifications











