For Quick Alerts
  ALLOW NOTIFICATIONS  
  For Daily Alerts

  BBK 9: ಈ ವಾರ ಬಿಗ್ ಬಾಸ್ ನೀಡಿದ ಟಾಸ್ಕ್ ಎಲ್ಲವೂ ಮಾಡು ಇಲ್ಲವೆ ಮಡಿ!

  By ಎಸ್ ಸುಮಂತ್
  |

  ಬಿಗ್ ಬಾಸ್ ಜರ್ನಿ ಇನ್ನು ಕೆಲವೇ ದಿನಗಳು ಮಾತ್ರ. ಆದರೆ ದಿನಗಳು ಹತ್ತಿರವಾಗುತ್ತಿದ್ದಂತೆ ಸ್ಪರ್ಧೆ ಬಿಗಿಯಾಗುತ್ತದೆ ಎನ್ನುವುದಕ್ಕೆ ಬಿಗ್ ಬಾಸ್ ಮನೆ ಮಂದಿಗೆ ಇಂದು ನೀಡುತ್ತಿರುವ ಆಟವೇ ಸಾಕ್ಷಿಯಾಗಿದೆ. 21,750 ಪಾಯಿಂಟ್ ಗಳು ಸದ್ಯ ಮನೆಯವರ ಬಳಿ ಇದೆ. ಇದಕ್ಕೂ ಹೆಚ್ಚಾಗಿ ಪಾಯಿಂಟ್ ಗಳಿಸುವ ಅವಕಾಶವಲ್ಲ, ಇರುವ ಪಾಯಿಂಟ್ ಗಳನ್ನು ಉಳಿಸಿಕೊಳ್ಳಬೇಕಾದ ಅನಿವಾರ್ಯತೆ ಮನೆ ಮಂದಿಗೆ ಇದೆ.

  ಈ ಪಾಯಿಂಟ್ ಹೇಗೆ ಉಳಿಸಿಕೊಳ್ಳಬೇಕು ಎಂಬುದು ಮನೆ ಮಂದಿಗೆ ಬಿಟ್ಟಂತ ವಿಚಾರವಾಗಿದೆ. ಅದರಲ್ಲೂ ವಿಭಿನ್ನವಾದಂತ ಟಾಸ್ಕ್ ನೀಡಿ, ಇದ್ದ ಪಾಯಿಂಟ್ಸ್ ಗಳನ್ನು ಉಳಿಸಿಕೊಳ್ಳಲು ಮನೆ ಮಂದಿ ಒದ್ದಾಡುತ್ತಿದ್ದಾರೆ. ಅಂತ ಸ್ಥಿತಿಗೆ ಬಿಗ್ ಬಾಸ್ ತಂದು ನಿಲ್ಲಿಸಿದೆ.

  ದೀಪಿಕಾ ಗೆದ್ದರು ಸಿಗಲಿಲ್ಲ ಪಾಯಿಂಟ್

  ದೀಪಿಕಾ ಗೆದ್ದರು ಸಿಗಲಿಲ್ಲ ಪಾಯಿಂಟ್


  ಬಿಗ್ ಬಾಸ್ ಇವತ್ತು ಮೊದಲ ಟಾಸ್ಕ್ ಒಂದನ್ನು ನೀಡಿದೆ. ಅದುವೆ ಹಲಗೆಯೊಂದರ ಮೇಲೆ ನಿಂತು ಬ್ಯಾಲೆನ್ಸ್ ಮಾಡುತ್ತಾ ಒಂದು ಕಡೆ ಇರುವ ತುಂಡುಗಳನ್ನು ಮತ್ತೊಂದು ಕಡೆಗೆ ಜೋಡಿಸಬೇಕು. ಅದುವೇ ತಕ್ಕಡಿಯಂತೆ ಇರುತ್ತದೆ. ಸ್ವಲ್ಪ ವಾಲಿದರೂ ಸಾಕು ಜೋಡಿಸಿದ್ದ ತುಂಡುಗಳೆಲ್ಲಾ ಸಲೀಸಾಗಿ ಬಿದ್ದು ಬಿಡುತ್ತವೆ. ಆ ಟಾಸ್ಕ್ ಅಷ್ಟು ಸುಲಭದ್ದಾಗಿರಲಿಲ್ಲ. ಆದರೂ ಆ ಟಾಸ್ಕ್ ಅನ್ನು ದಿವ್ಯಾ, ಅನುಪಮಾ, ದೀಪಿಕಾ ದಾಸ್ ಆಡಿದರು. ಇನ್ನೇನು ಮುಗಿಯುತ್ತೆ ಎನ್ನುವಾಗ ದಿವ್ಯಾ ಅವರು ಜೋಡಿಸಿದ್ದ ತುಂಡುಗಳು ಬಿದ್ದು ಹೋಗಿತ್ತು, ಅನುಪಮಾ ಅವರದ್ದು ಅದೇ ರೀತಿ ಆಗಿತ್ತು. ದೀಪಿಕಾ ದಾಸ್ ಸ್ವಲ್ಪ ಟ್ರಿಕ್ಸ್ ಯೂಸ್ ಮಾಡಿ ಗೆದ್ದಿದ್ದರು. ಆದರೆ ಪಾಯಿಂಟ್ ಮಾತ್ರ ಬರಲಿಲ್ಲ. ಐದು ಸಾವಿರ ಪಾಯಿಂಟ್ ಅನ್ನು ಮನೆಯವರು ಕಳೆದುಕೊಂಡರು.

  ಎರಡನೇ ಬಾರಿಗೂ ಬರಲಿಲ್ಲ ಪಾಯಿಂಟ್

  ಎರಡನೇ ಬಾರಿಗೂ ಬರಲಿಲ್ಲ ಪಾಯಿಂಟ್


  ಹೀಗೆ ಕಷ್ಟದ ಟಾಸ್ಕ್ ನಲ್ಲಿ ಮನೆ ಮಂದಿ ಹಾಕಿದ್ದ ಎಫರ್ಟ್ ನಿಂದಾಗಿ ಬಿಗ್ ಬಾಸ್ ಮನೆ ಮಂದಿಗೆ ಮತ್ತೊಮ್ಮೆ ಟಾಸ್ಕ್ ಆಡುವ ಅವಕಾಶ ನೀಡಿತ್ತು. ಮನೆಯಲ್ಲಿ ದೀಪಿಕಾ ದಾಸ್ ಅವರನ್ನು ಬಿಟ್ಟು ಬೇರೆ ಯಾರಾದರೂ ಒಬ್ಬರು ಈ ಟಾಸ್ಕ್ ಆಡಬಹುದು ಎಂದು ಹೇಳಿದರು. ಈ ಆಟಕ್ಕೆ ಕೈ ಉದ್ಧವಿದ್ದ ವ್ಯಕ್ತಿ ಬೇಕಿದ್ದ ಕಾರಣ ಎಲ್ಲರ ಸಮ್ಮತದಿಂದ ರಾಕೇಶ್ ಆಯ್ಕೆಯಾಗಿತ್ತು. ರಾಕೇಶ್ ಆಟವನ್ನು ಆಡುವಾಗ ಕಾನ್ಫಿಡೆನ್ಸ್ ಇತ್ತು, ಟೈಮ್ ಔಟ್ ಆಗುವುದಕ್ಕಿಂತ ಮುಂಚೆಯೇ ಅವರು ಔಟ್ ಆದ ಕಾರಣ ಪಾಯಿಂಟ್ಸ್ ಗಳು ಮರಳಿ ಬರಲೇ ಇಲ್ಲ.

  ಎರಡನೇ ಟಾಸ್ಕ್ ಕೂಡ ಸುಲಭವಾಗಿರಲಿಲ್ಲ

  ಎರಡನೇ ಟಾಸ್ಕ್ ಕೂಡ ಸುಲಭವಾಗಿರಲಿಲ್ಲ


  ಇನ್ನು ಇವತ್ತು ಬಿಗ್ ಬಾಸ್ ಎರಡು ಟಾಸ್ಕ್ ಗಳನ್ನು ನೀಡಿತ್ತು. ಅದರಲ್ಲಿ ಒಂದು ಬ್ಯಾಲೆನ್ಸ್ ಆದ್ರೆ ಮತ್ತೊಂದು ಸ್ವಿಮ್ಮಿಂಗ್ ಪೂಲ್ ಟಾಸ್ಕ್. ಸ್ವಿಮ್ಮಿಂಗ್ ಪೂಲ್ ಒಳಗೆ ಒಂದು ಮರದ ಡಬ್ಬಿ ಇಡಲಾಗಿತ್ತು. ಅದಕ್ಕೆ ನೀರಿನ ಒಳಗಡೆ ಹಗ್ಗವನ್ನು ಇಡಲಾಗಿತ್ತು. ಆ ಹಗ್ಗವನ್ನು ಕೆಳಗೆ ಜಗ್ಗಿದರೆ ಮಾತ್ರ ಡಬ್ಬಿಯ ಬಾಯಿ ಓಪನ್ ಆಗುತ್ತಿತ್ತು. ಆಗ ಅದಕ್ಕೆ ಬಾಲ್ ಹಾಕಬೇಕಾಗಿತ್ತು. ಇದಂತು ತುಂಬಾನೇ ರಿಸ್ಕಿ ಇರುವಂತ ಟಾಸ್ಕ್ ಆಗಿತ್ತು.

  ಕಿಚ್ಚನ ಚಪ್ಪಾಳೆ ಈ ವಾರ ಇವರದ್ದೇನಾ..?

  ಕಿಚ್ಚನ ಚಪ್ಪಾಳೆ ಈ ವಾರ ಇವರದ್ದೇನಾ..?


  ಸ್ವಿಮ್ಮಿಂಗ್ ಪೂಲ್ ಆಟದಲ್ಲಿ ಆರ್ಯವರ್ಧನ್ ಹಾಗೂ ದೀಪಿಕಾ ದಾಸ್ ಅವರಿಗೆ ಸ್ವಿಮ್ಮಿಂಗ್ ಬರುತ್ತೆ ಎಂಬ ಕಾರಣಕ್ಕೆ ನೀರಿನ ಒಳಗೆ ಇಳಿಸಲಾಗಿತ್ತು, ಆದರೆ ಒಳಗೆ ಇಳಿದ ಮೇಲೆ ಗೊತ್ತಾಗಿದ್ದು, ಅದು ಸ್ವಿಮ್ಮಿಂಗ್ ಬರುವುದು ಮಾತ್ರವಲ್ಲ ಹೆವಿ ಶಕ್ತಿ ಬೇಕಾಗಿತ್ತು ಎಂಬುದು. ದೀಪಿಕಾ ಹಾಗೂ ಆರ್ಯವರ್ಧನ್ ನೀರಿನಿಂದ ಹಲವು ಬಾರಿ ಮೇಲೆದ್ದು ಮೇಲೆದ್ದು, ಮತ್ತೆ ಮುಳುಗಿ ಹಗ್ಗವನ್ನು ಎಳೆಯುತ್ತಿದ್ದರು. ಹಗ್ಗವನ್ನು ಎಳೆದಾಗ ಡಬ್ಬಿಯ ಬಾಯಿ ಓಪನ್ ಆದಾಗ ಬಾಲ್ ಎಸೆಯಿತ್ತಿದ್ದರು. ದೀಪಿಕಾ ಹಾಗೂ ಆರ್ಯವರ್ಧನ್ ಎಫರ್ಟ್ ನಿಂದ ಮನೆ ಮಂದಿ ಎರಡು ಸಾವಿರ ಪಾಯಿಂಟ್ ಉಳಿಸಿಕೊಂಡಿತ್ತು.

  English summary
  BBK 9: Bigg Boss Kannada December 13th Episode Written Update
  Wednesday, December 14, 2022, 7:55
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X