Don't Miss!
- Sports
IND vs NZ 3rd T20: ಶುಭ್ಮನ್ ಗಿಲ್, ಹಾರ್ದಿಕ್ ಪಾಂಡ್ಯ ಮಿಂಚು; ನ್ಯೂಜಿಲೆಂಡ್ ವಿರುದ್ಧ ಸರಣಿ ಗೆದ್ದ ಭಾರತ
- Lifestyle
ಗರುಡ ಪುರಾಣ ಪ್ರಕಾರ ಈ 9 ಬಗೆಯ ವ್ಯಕ್ತಿಗಳ ಮನೆಯಲ್ಲಿ ಆಹಾರ ತಿನ್ನಲೇಬಾರದು
- News
ತಂಬಾಕು ನಿಯಂತ್ರಣಕ್ಕೆ ಮೈಸೂರು ಜಿಲ್ಲಾಧಿಕಾರಿ ತೆಗೆದುಕೊಂಡ ಕ್ರಮಗಳು, ಇಲ್ಲಿದೆ ವಿವರ
- Automobiles
ಹೊಸ ಇನೋವಾ ಹೈಕ್ರಾಸ್ ಬಲದೊಂದಿಗೆ ಮಾರಾಟದಲ್ಲಿ ದಾಖಲೆ ಮಟ್ಟದ ಬೆಳವಣಿಗೆ ಸಾಧಿಸಿದ ಟೊಯೊಟಾ
- Technology
ಚೀನಾದಲ್ಲಿ ಸೌಂಡ್ ಮಾಡಿದ್ದ ಈ ಡಿವೈಸ್ ಇದೀಗ ಜಾಗತಿಕ ಮಾರುಕಟ್ಟೆಗೆ ಎಂಟ್ರಿ!
- Finance
Union Budget 2023: ಹೊಸ ತೆರಿಗೆ ಪದ್ಧತಿಯಡಿಯಲ್ಲಿ ತೆರಿಗೆ ಲೆಕ್ಕಾಚಾರ ಹೇಗೆ?
- Education
KVS Recruitment 2022 : ಕೇಂದ್ರೀಯ ವಿದ್ಯಾಲಯ ಸಂಗತನ್ ದಲ್ಲಿ 13404 ಹುದ್ದೆಗಳ ನೇಮಕಾತಿ
- Travel
ಯಾವುದೇ ಚಿಂತೆ ಇಲ್ಲದೆ ಸುಖಕರ ಪ್ರಯಾಣ ಅನುಭವಿಸಲು ಇಲ್ಲಿದೆ ಸಲಹೆಗಳು
ಬಿಗ್ ಬಾಸ್: ಹಾಡು ಕೇಳಿ ಅನುಪಮಾ ಕಣ್ಣೀರು.. ಹುಚ್ಚನಾಗಿ ಕುಣಿದ ರೂಪೇಶ್ ಶೆಟ್ಟಿ!
ಬಿಗ್ ಬಾಸ್ ಮನೆಯಲ್ಲಿ ಇವತ್ತು ನೀಡಿದ ಟಾಸ್ಕ್ ಗಳೆಲ್ಲವೂ ಮನರಂಜನೆಯ ಕೂಟವೇ ಆಗಿತ್ತು. ನೋಡುಗರಂತು ಫುಲ್ ಎಂಜಾಯ್ ಮಾಡಿದರು. ಬಿಗ್ ಬಾಸ್ ನಲ್ಲಿ ಬೆಳಗ್ಗೆ ಎದ್ದ ಕೂಡಲೇ ರಿಫ್ರೆಶ್ ಗೆ ಅಂತ ಕನ್ನಡ ಹಾಡುಗಳನ್ನೇ ಪ್ಲೇ ಮಾಡಲಾಗುತ್ತದೆ. ಆ ಹಾಡುಗಳನ್ನು ಆನಂದಿಸುತ್ತಾ, ಒಂದೆರಡು ಸ್ಟೆಪ್ಸ್ ಹಾಕಿ, ಮುಂದಿನ ಕೆಲಸಗಳನ್ನು ನೋಡಿಕೊಳ್ಳುತ್ತಾರೆ ಮನೆ ಸದಸ್ಯರು.
ಇವತ್ತು ನೀಡಿದ ಟಾಸ್ಕ್ ಅದಕ್ಕಿಂತ ಕೊಂಚ ಭಿನ್ನ. ಮನೆ ಮಂದಿಗೆ ಕನ್ನಡ ಹಾಡುಗಳ ಬಗ್ಗೆ ಎಷ್ಟರಮಟ್ಟಿಗೆ ಗೊತ್ತು ಎನ್ನುವ ಅಂಶವೂ ಅದರಲ್ಲಿ ಅಡಗಿತ್ತು. ಅದರಲ್ಲಿ ಅನುಪಮಾ ಬೆಸ್ಟ್ ಆಟವನ್ನೇ ಆಡಿದರು. ದಿವ್ಯಾ ಮತ್ತು ಅಮೂಲ್ಯಾ ಸಿಕ್ಕಾಪಟ್ಟೆ ತಡಕಾಡಿದರು.

ಈ ಹಾಡು ಯಾವುದು..?
ಬಿಗ್ ಬಾಸ್ ಇಂದು ಈ ಹಾಡು ಯಾವುದು ಎಂಬ ಟಾಸ್ಕ್ ಅದು. ಆಡುವ ಮೂರು ಜೋಡಿಗಳಿಗೆ ಮೂರು ಸಾಂಗ್ ಗಳ ಮ್ಯೂಸಿಕ್ ಕೇಳಿಸಲಾಗಿತ್ತು. ಪ್ರತಿ ಜೋಡಿ ಕೇಳಿದ ಮ್ಯೂಸಿಕ್ ಮುಗಿದ 3 ಸೆಕೆಂಡುಗಳ ಒಳಗೆ ಹಾಡು ಯಾವುದೆಂದು ಊಹಿಸಬೇಕು. ಆಟದ ಮೌಲ್ಯ 3 ಸಾವಿರವಾಗಿತ್ತು. ಅದಕ್ಕೆ ಜೋಡಿಗಳನ್ನು ಮಾಡಲಾಗಿತ್ತು. ಅದರಲ್ಲಿ ಮೊದಲ ಸರದಿ ರೂಪೇಶ್ ರಾಜಣ್ಣ ಹಾಗೂ ಅರುಣ್ ಸಾಗರ್, ಎರಡನೆಯದ್ದು ರಾಕೇಶ್ ಮತ್ತು ಅನುಪಮಾ ಗೌಡ, ಮೂರನೆಯ ತಂಡ ದಿವ್ಯಾ ಹಾಗೂ ಅಮೂಲ್ಯರನ್ನು ಮಾಡಲಾಗಿತ್ತು. ಒಂದು ಹಾಡಿಗೆ ಏಳು ಹಾಡುಗಳನ್ನು ಪ್ಲೆ ಮಾಡಲಾಗಿತ್ತು. ಈ ಹಾಡು ಯಾವುದು ಟಾಸ್ಕ್ ಗೆ ನಿಗದಿಯಾಗಿದ್ದ ಹಣ ಮೂರು ಸಾವಿರ. ಹದಿನೈದು ಸಾಂಗ್ ಗಳನ್ನು ಕಂಡು ಹಿಡಯಬೇಕಾಗಿತ್ತು.

ಅನುಪಮಾ ಟಾಸ್ಕ್ ಸೂಪರ್
ಈ ಟಾಸ್ಕ್ ಆರಂಭವಾದ ಮೇಲೆ ಫಸ್ಟ್ ಸರದಿ ಬಂದಿದ್ದು ರೂಪೇಶ್ ರಾಜಣ್ಣ ಹಾಗೂ ಅರುಣ್ ಸಾಗರ್ ಅವರಿಗೆ. ಅಲ್ಲಿ ಮ್ಯೂಸಿಕ್ ಪ್ಲೇ ಆಗಿದ್ದು ಒಂದು ರಾಜಣ್ಣ ಹೇಳಿದ್ದು ಮತ್ತೊಂದು. ಕರಿಯ ಐ ಲವ್ ಯೂ ಹಾಡು ಪ್ಲೆ ಆಗಿದ್ರೆ, ರಾಜಣ್ಣ ಊಹಿಸಿದ್ದು, ಮಳೆಬಿಲ್ಲೆ ಮಳೆ ಬಿಲ್ಲು ಎಂಬ ಹಾಡನ್ನು. ಬಿಗ್ ಬಾಸ್ ಬಜ್ಹರ್ ಬಂದ ಮೇಲೆ ರಿಯಲ್ ಹಾಡು ಪ್ಲೆ ಆಗಿತ್ತು. ಇನ್ನು ಅಮೂಲ್ಯ ಮತ್ತು ದಿವ್ಯಾ ಟೀಂ ಯಾವುದೇ ಹಾಡು ಬಂದು ನಾಲಿಗೆ ತುದಿಯಲ್ಲಿ ಬಂದರು ಹಾಡನ್ನು ಗುರುತಿಸುವುದಕ್ಕೆ ಆಗುತ್ತಿಲ್ಲ. ಎಲ್ಲಾ ಸಾಂಗ್ಸ್ ಗಳಿಗೂ ಡುಮ್ಕಿ ಹೊಡೆದಿದ್ದಾರೆ. ಆದರೆ ಅನುಪಮಾ ಎಲ್ಲಾ ಹಾಡುಗಳನ್ನು ಸಖತ್ತಾಗಿ ಗುರುತಿಸಿದ್ದಾರೆ.

ಅನುಪಮಾರನ್ನು ಅಳಿಸಿದ ಬಿಗ್ ಬಾಸ್
ಹೀಗೆ ಒಂದೊಂದೆ ಜೋಶ್ ಇರುವಂತ ಹಾಡುಗಳನ್ನು ಹಾಕಿದ್ದ ಬಿಗ್ ಬಾಸ್, ಎಲ್ಲರನ್ನು ಕುಣಿಯುವಂತೆ ಮಾಡಿತ್ತು. ಒಂದೊಂದೆ ಹಾಡುಗಳನ್ನು ಬಿಗ್ ಬಾಸ್ ಹಾಕುತ್ತಾ ಇದ್ದರೆ ಎಲ್ಲರೂ ಅದೇ ಜೋಶ್ ನಲ್ಲಿ ಕುಣಿಯುತ್ತಾ ಇದ್ದರು. ಆದರೆ ಒಂದು ಸಾಂಗಿಗೆ ಅನುಪಮಾ ತುಂಬಾ ಕಣ್ಣಿರು ಹಾಕಿದ್ದಾರೆ. ದಿವ್ಯಾ ಅಂಡ್ ಅಮೂಲ್ಯ ಸರದಿಗೇನೆ ಒಂದು ಎಮೋಷನಲ್ ಆದಂತ ಹಾಡು ಬಂದಿತ್ತು. ಅದುವೆ ಅಪ್ಪಾ ಐ ಲವ್ ಯೂ ಅಪ್ಪ. ಆ ಮ್ಯೂಸಿಕ್ ಕೇಳುತ್ತಿದ್ದಂತೆ ದಿವ್ಯಾ ತುಂಬಾ ಖುಷಿಯಿಂದ ಹಾಡುವುದಕ್ಕೆ ಶುರು ಮಾಡಿದರು. ಅಪ್ಪಾ ಐ ಲವ್ ಯೂ ಪಾ ಅಂತ. ಬಜ್ಹರ್ ಬಂತು. ಬಳಿಕ ಆ ಹಾಡನ್ನು ಪ್ಲೆ ಮಾಡಲಾಯ್ತು. ಎಲ್ಲರೂ ಎಲ್ಲಾ ಹಾಡಿಗೂ ಕುಣಿದಂತೆ ಈ ಹಾಡಿಗೂ ಕುಣಿದರು. ಆದರೆ ಅನುಪಮಾ ತುಂಬಾನೇ ಎಮೋಷನಲ್ ಆದರು, ಒಂದು ಕಡೆಯಲ್ಲಿ ನಿಂತು ತುಂಬಾನೇ ಕಣ್ಣೀರು ಹಾಕಿದರು. ಅದನ್ನು ಅಮೂಲ್ಯ ನೋಡಿದರು. ಸಮಾಧಾನವನ್ನು ಮಾಡಿದರು.

ರೂಪೇಶ್ ನಡವಳಿಕೆಗೆ ಮನೆ ಮಂದಿ ಶಾಕ್
ಒಂದಷ್ಟು ಕುಣಿದು ಕುಪ್ಪಳಿಸಿದ ಮನೆ ಮಂದಿ ಒಂದಷ್ಟು ಎಮೋಷನಲ್ ಫೀಲ್ ಕೂಡ ಮಾಡಿದರು. ಎರಡನೇ ರೌಂಡ್ ಶುರುವಾಗಿತ್ತು. ಆಗಲೂ ಮೊದ ಮೊದಲಿಗೆ ಜೋಶ್ ಬರುವಂತ ಹಾಡುಗಳನ್ನು ಹಾಕಿದರು. ಬಳಿಕ ಕೊನೆಯಲ್ಲಿ ಬಿಟ್ಟೋಗ್ಬೇಡ ಹಾಡು ಪ್ಲೇ ಆಯ್ತು. ಈ ಹಾಡಿನಲ್ಲಿ ಅನುಪಮಾ ಮತ್ತು ಅಮೂಲ್ಯ ಇಬ್ಬರು ಡಿಸ್ಟರ್ಬ್ ಆಗಿದ್ದರು. ಇಬ್ಬರು ತಬ್ಬಿ ಅಳುತ್ತಾ ನಿಂತಿದ್ದರು. ಆದರೆ ರೂಪೇಶ್ ಶೆಟ್ಟಿ ಹಾಡು ಮುಗಿದರು, ಬಿಗ್ ಬಾಸ್ ಪ್ಲೀಸ್ ಬಿಗ್ ಬಾಸ್ ಇನ್ನೊಮ್ಮೆ ಪ್ಲೇ ಮಾಡಿ ಎಂದರು. ಬಳಿಕ ಜೋರಾಗಿ ಕಿರುಚುತ್ತಾ, ಬಿಟ್ಟೋಗ್ಬೇಡ, ಅಂತ ಕೈಯ್ಯಲ್ಲಿದ್ದ ದಿಂಬನ್ನು ಬಿಸಾಡಿದರು. ಇದನ್ನು ಕಂಡು ದೀಪಿಕಾ ಶಾಕ್ ಆಗಿದ್ದರು. ದೀಪಿಕಾ ಕೂಡ ರೂಪೇಶ್ ಅಂತ ಜೋರಾಗಿ ಕಿರುಚಿದಾಗ, ಓ ಇದು ಬಿಗ್ ಬಾಸ್ ಮನೆನಾ ಅಂತ ತಮಾಷೆ ಮಾಡಿದರು ರೂಪೇಶ್.