For Quick Alerts
  ALLOW NOTIFICATIONS  
  For Daily Alerts

  BBK 9: ಆರ್ಯವರ್ದನ್ ಬದಲಾಗಿದ್ದಾರೆ; ತಮಾಷೆಯಾಗಿದ್ದ ವಿಚಾರಗಳೆಲ್ಲಾ ಈಗ ಫುಲ್ ಸೀರಿಯಸ್!

  By ಎಸ್ ಸುಮಂತ್
  |

  ಆರ್ಯವರ್ಧನ್ ಗುರೂಜಿಯನ್ನು ಎಲ್ಲರೂ ಒಟಿಟಿಯಿಂದಾನೂ ನೋಡಿಕೊಂಡು ಬಂದಿದ್ದಾರೆ. ಮೊದ ಮೊದಲಿಗೆ ಫುಲ್ ಇನೊಸೆಂಟ್ ಥರ ಕಾಣುತ್ತಿದ್ದ ಗುರೂಜಿ ಆಮೇಲೆ ಅವರ ರಿಯಾಲಿಟಿ ಎಲ್ಲರಿಗೂ ಗೊತ್ತಾಗಿದೆ. ವೋಟ್ ಮತ್ತು ನಾಮಿನೇಷನ್ ಈ ಎರಡು ದಿನಗಳಲ್ಲೂ ಫುಲ್ ಅಲರ್ಟ್ ಆಗಿ ಬಿಡುತ್ತಾರೆ.

  ಬಿಗ್ ಬಾಸ್ ಮನೆಯಲ್ಲಿ ದೋಸೆ ಕ್ಯಾಂಪ್ ಬಗ್ಗೆ ಎಲ್ಲರಿಗೂ ಗೊತ್ತಿರುವ ವಿಚಾರವೇ. ಕಿಚ್ಚ ಸುದೀಪ್ ಕೂಡ ಈ ಬಗ್ಗೆ ಆಗಾಗ ಎಲ್ಲವನ್ನು ಹೇಳಿರುತ್ತಾರೆ. ಈಗ ಆರ್ಯವರ್ಧನ್ ಅವರಿಗೆ ತಮ್ಮ ದೋಸೆ ಕ್ಯಾಂಪ್ ವಿಚಾರವೇ ಮೈನಸ್ ಆಗುತ್ತೆ ಎಂಬ ಭಯ ಶುರುವಾಗಿದೆ.

  46 ವರ್ಷದ ಮಗು ಹೇಗಿದೆ ಗೊತ್ತಾ?

  46 ವರ್ಷದ ಮಗು ಹೇಗಿದೆ ಗೊತ್ತಾ?

  ಆರ್ಯವರ್ಧನ್ ಗುರೂಜಿ ಆಗಾಗ ಕಾಮಿಡಿ ಮಾಡುವುದರಲ್ಲಿ ಫೇಮಸ್ ಅಂದ್ರೆ ಫೇಮಸ್. ಇವತ್ತು ಅಡುಗೆ ಮನೆಯಲ್ಲಿ ದೋಸೆ ಹಾಕುತ್ತಾ ನಿಂತಿದ್ದಾಗ ಮಗುವಿನ ಕಾಮಿಡಿ ಮಾಡಿದ್ದಾರೆ. ನಾನು 46 ವರ್ಷದ ಮಗು ಎಂದು ಗುರೂಜಿ ದೋಸೆ ಹಾಕುತ್ತಾ, ಜೊತೆಗೆ ಬೀಟ್ ರೋಟ್ ಪಲ್ಯ ರೆಡಿ ಮಾಡಿಕೊಳ್ಳುತ್ತಾ ಹೇಳಿದ್ದಾರೆ. ಇದನ್ನು ಕೇಳಿದ ರಾಜಣ್ಣ ಹಾಗೂ ದಿವ್ಯಾ ಇಬ್ಬರಿಗೂ ಶಾಕ್ ಆಗಿದೆ.

  ಬಿದ್ದು ನಿದ್ದು ನಕ್ಕಾ ದಿವ್ಯಾ

  ಬಿದ್ದು ನಿದ್ದು ನಕ್ಕಾ ದಿವ್ಯಾ

  ಗುರುಗಳ ಈ ಮಾತು ಕೇಳಿದ ರಾಜಣ್ಣ, "ಮಗು ಬಿಟ್ ರೋಟ್ ಪಲ್ಯ ತಿನ್ನಲ್ಲ. 46 ಸೆಕೆಂಡ್ ಮಗು ಈ ಥರ ಗೋಲ್ಡ್ ಹಾಕಲ್ಲ, ಪಲ್ಯ ತಿನ್ನಲ್ಲ, ಆಮೇಲೆ ಎಣ್ಣೆ ಹತ್ರ ನಿಂತು ಕೆಲಸ ಮಾಡಲ್ಲ. ಹೋಗಿ ತೊಟ್ಟಿಲಲ್ಲಿ ಮಲಗುತ್ತೆ" ಎಂದಿದ್ದಾರೆ. ಆಗ ಆರ್ಯವರ್ಧನ್ ಅವರು ತಮ್ಮನ್ನು ತಾವೂ ಸಮರ್ಥನೆ ಮಾಡಿಕೊಂಡು "46 ಸೆಕೆಂಡ್ ಮಗು ಅಂತ ನಾನು ಹೇಳಲಿಲ್ಲ. 46 ವರ್ಷದ ಮಗು. ನಾನು ಕರ್ನಾಟಕದ ಜನತೆ ಮುಂದೆ ಸಣ್ಣ 46 ವರ್ಷದ ಮಗುವೆ" ಎಂದಿದ್ದಾರೆ.

  ದಿವ್ಯಾ ಈ ಕಾಮಿಡಿಗೆ ಹೇಳಿದ್ದೇನು?

  ದಿವ್ಯಾ ಈ ಕಾಮಿಡಿಗೆ ಹೇಳಿದ್ದೇನು?

  ಗುರುಗಳ ಮಾತಿಗೆ ಬಿದ್ದು ಬಿದ್ದು ನಕ್ಕ ದಿವ್ಯಾ, "ಆಯ್ತು ಆಯ್ತು ಈಗ ನೋಡುತ್ತಿರದ್ದವರ ವೋಟೆಲ್ಲಾ ನಿಮಗೆ ಬಿದ್ದಿದೆ. ಏನು ಟೆನ್ಶನ್ ಮಾಡಿಕೊಳ್ಳಬೇಡಿ. ಈಗ ಥಿಂಕ್ ಮಾಡುತ್ತಿದ್ದಾರೆ. ರೂಪಿ ಬಾಯಿಲ್ಲಿ ನೀನು ಎಂತ ಸೀನ್ ಮಿಸ್ ಮಾಡಿಕೊಂಡೆ. ಇವರು ಕರ್ನಾಟಕ್ಕೆ 46 ವರ್ಷದ ಮಗು ಅಂತೆ. ಅದರ ಜೊತೆಗೆ ಒಂದು ಥಿಂಕ್ ಮಾಡಿದ್ದಾರೆ. ಇದು ವರ್ಕೌಟ್ ಆಯ್ತಾ ಹೇಳಿದ್ದು ಅಂತ. ಇದಕ್ಕೆ ವೋಟ್ ಬಂದಿರಬಹುದಾ ಎಂದು ಥಿಂಕ್ ಮಾಡುತ್ತಿದ್ದಾರೆ. ವೋಟಿಂಗ್ ಕ್ಯಾಂಪೇನ್ ಮಾಡುವುದೇ ನೀವು ಎಂದಿದ್ದಾರೆ.

  ರಾಜಣ್ಣನೇ ಗುರೂಜಿಯ ಗಂಡ

  ರಾಜಣ್ಣನೇ ಗುರೂಜಿಯ ಗಂಡ

  ಯಾವಾಗಲೂ ರಾಜಣ್ಣ ಮತ್ತು ರೂಪೇಶ್ ಶೆಟ್ಟಿಯ ಜೊತೆಗೆ ಇರುವ ಆರ್ಯವರ್ಧನ್ ಈಗ "ರೈಲು ಬರತಿದ್ದಾಗ ಏನಾದರೂ ಕೇಳಿಸುತ್ತಾ. ಹಾಗೇ ರಾಜಣ್ಣ ಅವರ ಮಾತುಗಳು. ಊಟದ ಮೇಲೆ ಸತ್ಯ ಮಾಡಿ ಹೇಳುತ್ತೀನಿ. ರಾಜಣ್ಣ ಆ ಲೈನ್ ತುಂಬಾ ಇಷ್ಟವಾಯ್ತು. ಜೀವನಕ್ಕೆ ಅಳವಡಿಸಿಕೊಳ್ಳಬಹುದು. ಆ ಮಾತನ್ನು ಹೇಳಿ ಅನ್ನೋ ಮಾತುಗಳೇ ಇಲ್ಲ. ನಾನೇ ಹೆಂಡತಿಯಾಗಿದ್ದೀನಿ. ಅವರೇ ಗಂಡನಾಗಿದ್ದಾರೆ. ಅವನು ಮಗ ಆಗಿರಬಹುದು. ಆ ಮಗುಗೆ ಬೇರೆ ಏನು ಅರ್ಥ ಆಗ್ತಿಲ್ಲ. ಬರೀ ಪಾಸ್ ಆದರೆ ಸಾಕು ಅಂತ ಇದೆ. ಮನೆಯಲ್ಲಿ ಏನು ಆಗುತ್ತಿದೆ ಗೊತ್ತಾಗುತ್ತಿಲ್ಲ. ಇಲ್ಲಿನ ಕಷ್ಟಗಳನ್ನು ಅರ್ಥ ಮಾಡಿಕೊಳ್ಳುತ್ತಿಲ್ಲ" ಎಂದಿದ್ದಾರೆ.

  ದೋಸೆ ನೆಗೆಟಿವ್ ಹಾ?

  ದೋಸೆ ನೆಗೆಟಿವ್ ಹಾ?

  ಇನ್ನು ರಾಜಣ್ಣ ದೋಸೆ ಎಂಬ ಮಾತು ಹೇಳುತ್ತಿರುವುದು ಆರ್ಯವರ್ದನ್ ಅವರಿಗೆ ಇಷ್ಟವಾಗಿಲ್ಲ. ಆ ದೋಸೆ ಎಂಬ ಪಾಯಿಂಟ್ ಈಗಾಗಲೇ ನೆಗೆಟಿವ್ ಆಗಿದ್ದು ಮತ್ತೆ ಮತ್ತೆ ನೆಗೆಟಿವ್ ಆಗಬಾರದು ಎಂಬ ಕಾರಣಕ್ಕೆ ಆ ದೋಸೆ ಪಾಯಿಂಟ್ ಬಿಡುವಂತೆ ಹೇಳಿದ್ದಾರೆ. ಈ ಬಗ್ಗೆ ರೂಪೇಶ್ ಶೆಟ್ಟಿ ಮಾತನಾಡಿ ದೋಸೆ ಪಾಯಿಂಟ್ ಮತ್ತೆ ಬರುವುದು ಬೇಡ ಎಂದಿದ್ದಾರೆ. ರಾಜಣ್ಣ ಕೂಡ ಅದಕ್ಕೆ ಓಕೆ ಎಂದಿದ್ದಾರೆ.

  English summary
  BBK 9: Bigg Boss Kannada December 16th Episode Written Update
  Saturday, December 17, 2022, 7:10
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X