BBK10: ಬಿಗ್ ಬಾಸ್‌ನಲ್ಲಿ ಅಮೂಲ್ ಹಾಲು ಬಳಕೆ.. ಫೋಟೊ ವೈರಲ್.. ನಂದಿನಿ ಬಳಸಲು ನೆಟ್ಟಿಗರ ಒತ್ತಾಯ..!

By ಎಸ್ ಸುಮಂತ್

ಬಿಗ್ ಬಾಸ್ ಶೋ ವರ್ಷಕ್ಕೆ ಒಂದೇ ಬಾರಿಗೆ ಬಂದರೂ ಇಡೀ ಕರ್ನಾಟಕದ ಮಂದಿ ಬಾರೀ ಕುತೂಹಲದಿಂದ ಕಾಯುತ್ತಾರೆ. ಮನೆಗೆ ಬರುವ ಸದಸ್ಯರ ಬಗ್ಗೆಯೂ ಅಷ್ಟೇ ಕುತೂಹಲವಿರುತ್ತದೆ. ಆರಂಭದಿಂದ ಅಂತ್ಯದವರೆಗೂ ಬಿಗ್ ಬಾಸ್ ನೋಡುವವರ ಸಂಖ್ಯೆ ಹೆಚ್ಚಾಗಿನೇ ಇರುತ್ತದೆ. ಯಾಕಂದ್ರೆ ಬಿಗ್ ಬಾಸ್ ಮನೆಗೆ ಎಲ್ಲಾ ಕ್ಷೇತ್ರದ ಸ್ಪರ್ಧಿಗಳು ಬರುತ್ತಾರೆ.

ಮತ್ತೊಂದು ಸಂತಸದ ವಿಚಾರ ಅಂದ್ರೆ ಬಿಗ್ ಬಾಸ್ ಮನೆಯಲ್ಲಿ ಕನ್ನಡಕ್ಕೆ ಹೆಚ್ಚಿನ ಒತ್ತು ನೀಡಲಾಗುತ್ತದೆ. ಕನ್ನಡ ಬಾರದವರಿಗೂ ಕನ್ನಡವನ್ನು ಕಲಿಸುತ್ತದೆ ಬಿಗ್ ಬಾಸ್. ಈ ಬಾರಿ ಸೀಸನ್‌ನಲ್ಲಿ ಇಶಾನಿ ಹಾಗೂ ಮೈಕೆಲ್ ನಾನ್ ಕನ್ನಡಿಗಾಸ್ ಆಗಿದ್ದರು. ಆದರೆ, ಈಗ ಕನ್ನಡವನ್ನು ಚೆನ್ನಾಗಿಯೇ ಮಾತನಾಡುತ್ತಾರೆ. ಹಾಲಿನ ವಿಚಾರದಲ್ಲಿ ಬಿಗ್ ಬಾಸ್ ಯಡವಟ್ಟು ಮಾಡಿಕೊಂಡಿದೆ.

bigg-boss-kannada-10-amul-milk--nandini

ಕದ್ದು ಹಾಲು ಕುಡಿದ ವಿನಯ್ ಅಂಡ್ ಟೀಂ

ವಿನಯ್, ಸ್ನೇಹಿತ್ ಮತ್ತು ನಮ್ರತಾ, ಸಂಗೀತಾ ನಿನ್ನೆ ರಾತ್ರಿ ಎಲ್ಲರೂ ಮಲಗಿದ್ದಾಗ ಅಡುಗೆ ಮನೆಯಲ್ಲಿ ಮಾತನಾಡುತ್ತ ಕುಳಿತಿದ್ದರು. ಆಗ ವಿನಯ್‌ಗೆ ಹಾಲು ಕುಡಿಯಬೇಕು ಎನಿಸಿದೆ. ಫ್ರಿಡ್ಜ್ ಓಪನ್ ಮಾಡಿ, ಅದರಲ್ಲಿ ಕಾರ್ತಿಕ್ ಹೆಸರು ಬರೆದಿದ್ದ ಹಾಲನ್ನೇ ತೆಗೆದುಕೊಂಡು ಬಳಸಿದ್ದಾರೆ. ಆಗಲೇ ಬಿಗ್ ಬಾಸ್ ಮನೆಯಲ್ಲಿ ಯಾವ ಬ್ರ್ಯಾಂಡ್ ಹಾಲು ಬಳಕೆ ಮಾಡುತ್ತಿದ್ದಾರೆ ಎಂಬುದು ಗೊತ್ತಾಗಿದೆ.

ಬಿಗ್ ಬಾಸ್ ಮನೆಯಲ್ಲಿ ಅಮುಲ್ ಬಳಕೆ

ಕರ್ನಾಟಕದಲ್ಲಿ ನಮ್ಮದೇ ಬ್ರ್ಯಾಂಡ್ ನಂದಿನಿ ಇದೆ. ಕಳೆದ ಕೆಲವು ದಿನಗಳಿಂದ ಅಮೂಲ್ ಹಾಗೂ ನಂದಿನಿ ವಿಚಾರಕ್ಕೆ ವಿವಾದ ಎದ್ದಿತ್ತು. ಆದ್ರೀಗ ಬಿಗ್ ಬಾಸ್ ಮನೆಯಲ್ಲಿ ಅಮುಲ್ ಬಳಕೆ ಮಾಡುತ್ತಿರೋದು ನೆಟ್ಟಿಗರ ಕಣ್ಣಿಗೆ ಬಿದ್ದಿದೆ. ಇಷ್ಟು ದಿನ ಹಾಲಿನ ಬಗ್ಗೆ ಯಾರ ಗಮನಕ್ಕೂ ಬಂದಿರಲಿಲ್ಲ. ಆದರೆ, ವಿನಯ್ ಅಂಡ್ ಟೀಂ ಕದ್ದು ಕುಡಿದಿದ್ದಕ್ಕಾಗಿ ಯಾವ ಹಾಲು ಬಳಕೆ ಮಾಡುತ್ತಿದ್ದಾರೆ ಎಂಬುದು ಗೊತ್ತಾಗಿದೆ‌. ಕನ್ನಡಕ್ಕಾಗಿ ಅಷ್ಟೊಂದು ಮಹತ್ವ ನೀಡುವ ಬಿಗ್ ಬಾಸ್, ಹಾಲಿನ ವಿಚಾರದಲ್ಲಿ ಈ ರೀತಿ ನಡೆದುಕೊಂಡಿದ್ದು ಎಷ್ಟು ಸರಿ ಎನ್ನುತ್ತಿದ್ದಾರೆ ನೆಟ್ಟಿಗರು ಕುಟುಕುತ್ತಿದ್ದಾರೆ.

ನಂದಿನಿ ಉಳಿವಿಗಾಗಿ ಹೋರಾಟವೇ ನಡೆದಿತ್ತು

ಕರ್ನಾಟಕದಲ್ಲಿ ಕಳೆದ ಸ್ವಲ್ಪ ಸಮಯದ ಹಿಂದೆ ನಂದಿನಿ ಹಾಗೂ ಅಮುಲ್ ನಡುವೆ ವಾರ್ ನಡೆದಿತ್ತು. ಅಮುಲ್ ಜೊತೆಗೆ ವಿಲೀನ ಮಾಡುವುದಕ್ಕೆ ಹೊರಟಿದ್ದರು. ಆದರೆ, ಇದಕ್ಕೆ ದೊಡ್ಡ ವಿರೋಧವೇ ವ್ಯಕ್ತವಾಗಿತ್ತು. ನಮ್ಮದೇ ನಂದಿನಿ ಬ್ರ್ಯಾಂಡ್ ಅನ್ನು ನಾವೇ ಉಳಿಸಿಕೊಳ್ಳಬೇಕು. ವಿಲೀನಕ್ಕೆ ಒಪ್ಪುವುದಿಲ್ಲವೆಂದು ದೊಡ್ಡ ಹೋರಾಟವೇ ನಡೆದಿತ್ತು. ಅಂಥ ವಿರೋಧದ ನಡುವೆಯೂ ಬಿಗ್ ಬಾಸ್ ಮನೆಯಲ್ಲಿ ಅಮುಲ್ ಹಾಲು ಕಣ್ಣಿಗೆ ಬಿದ್ದಿದೆ.

ನೆಟ್ಟಿಗರಿಂದ ಪರ - ವಿರೋಧದ ಚರ್ಚೆ

ಅಮುಲ್ ಹಾಲನ್ನು ಬಳಸುತ್ತಿರುವ ಬಗ್ಗೆ ವ್ಯಕ್ತಿಯೊಬ್ಬರು ಫೋಟೋ ಸಮೇತ ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಿ, ಕನ್ನಡ ಪರ ಸಂಘಟನೆಯವರಿಗೆ ಮನವಿ ಮಾಡಿದ್ದಾರೆ. ಆ ಪೋಸ್ಟ್‌ಗೆ ಪರ ಹಾಗೂ ವಿರೋಧಗಳು ಕೇಳು ಬಂದಿವೆ. "ಸ್ಪಾನ್ಸರ್ ಮಾಡಿರಬೇಕು. ಹೀಗಾಗಿ ಅದನ್ನೇ ನೀಡುತ್ತಿದ್ದಾರೆ" ಎಂದು ಒಬ್ಬರು ಹೇಳಿದರೆ, "ಸ್ಪಾನ್ಸರ್ ನೋಡಿದ್ದರೆ, ಇಷ್ಟೊತ್ತಿಗೆ ಸ್ಪರ್ಧಿಗಳಿಂದ ಪ್ರಮೋಟ್ ಮಾಡಿಸುತ್ತಾ ಇದ್ದರು, ಇಲ್ಲವೇ ಮನೆಯೊಳಗೆ ಪೋಸ್ಟರ್ ಹಾಕುತ್ತಿದ್ದರು. ಸ್ಪಾನ್ಸರ್ ಅಲ್ಲ, ಇವರೇ ಹಣ ಕೊಟ್ಟು ಕೊಂಡುಕೊಳ್ಳುತ್ತಿದ್ದಾರೆ. ಅದನ್ನೇ ನಂದಿನಿಗೆ ಬಂಡವಾಳ ಹಾಕಿ, ನಮ್ಮ ಬ್ರ್ಯಾಂಡ್ ಉಳಿಸಬಹುದಿತ್ತು. ಅಲ್ಲವೆ ಎಂಬ ಅಭಿಪ್ರಾಯವೂ ವ್ಯಕ್ತವಾಗುತ್ತಿದೆ.

More from Filmibeat

English summary
BBK 10 November 25th episode about Amul milk using in Bigg Boss house
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X