BBK 10: ಗೌರೀಶ್ ಅಕ್ಕಿ ಬಿಗ್ ಬಾಸ್ ನೋಡಬೇಡಿ ಅಂತ ಮನೆಯವರಿಗೆ ಹೇಳಿರೋದ್ಯಾಕೆ ಗೊತ್ತಾ..?
ಬಿಗ್ ಬಾಸ್ ಮನೆ ಆಗಾಗ ಸದಸ್ಯರ ಕಣ್ಣೀರಿಗೆ ಕಾರಣವಾಗುತ್ತದೆ. ಅದಕ್ಕೆ ಕಾರಣ ತುಂಬಾ ಪ್ರೀತಿಸುವಂತ, ತುಂಬಾ ಸಪೋರ್ಟ್ ಮಾಡುವಂತ ಮನೆಯವರನ್ನು ಬಿಟ್ಟು, ತಿಂಗಳುಗಟ್ಟಲೇ ಮನೆಯಲ್ಲಿ ಇರುವುದು ಎಂದರೆ ಸುಮ್ಮನೆ ಅಲ್ಲ. ಹೀಗಾಗಿ ಮನೆಯವರು ನೆನಪಾದಾಗೆಲ್ಲಾ ಮನದ ನೋವನ್ನು ಹೊರ ಹಾಕುವುದಕ್ಕೆ ಬಿಗ್ ಬಾಸ್ ಕೂಡ ಅವಕಾಶ ನೀಡುತ್ತದೆ.
ಇಂದು ಮನೆಯ ಒಳಗೆ 'ಬೃಂದಾವನ' ಟೀಂ ಬಂದಿತ್ತು. ಅಮ್ಮ, ಅಪ್ಪ, ಅಕ್ಕಂದಿರು, ಅಜ್ಜ-ಅಜ್ಜಿ, ಪುಟಾಣಿ ಮಕ್ಕಳು ಹೀಗೆ ಎಲ್ಲಾ ಸಂಬಂಧಗಳು ಅಲ್ಲಿದ್ದವು. ಇವನ್ನೆಲ್ಲ ನೋಡಿ ಖಂಡಿತ ಮನಯವರ ನೆನಪಾಗಿರುತ್ತೆ ಎಂದೇ ಭಾವಿಸಿದ ಬಿಗ್ ಬಾಸ್, ಅದನ್ನು ಹೇಳುವುದಕ್ಕೆ ಒಂದು ಅವಕಾಶ ನೀಡಿತ್ತು.

ಬಿಗ್ ಬಾಸ್ ಮನೆಯಲ್ಲಿ ಇವರು ಗಟ್ಟಿ
ಕೆಲವೊಮ್ಮೆ ಕಣ್ಣೀರೇ ವೀಕ್ನೆಸ್ ಆಗಿ ಬಿಡುತ್ತದೆ. ಬಿಗ್ ಬಾಸ್ ಮನೆಗೆ ಆಡುವುದಕ್ಕೆ ಬಂದಿರುವುದು. ಇಲ್ಲಿಂದ ಹೋದ ಮೇಲೆ ಫ್ಯಾಮಿಲಿ ಜೊತೆಗೆ ಇದ್ದೆ ಇರುತ್ತೀವಿ ಎಂಬ ಗಟ್ಟಿತನ ಹಲವರಲ್ಲಿದೆ. ಅದರಲ್ಲಿ ಮೊದಲಿಗೆ ಮಾತನಾಡಿದ ವಿನಯ್, "ಅಕ್ಷು ಅನ್ನು ತುಂಬಾ ಮಿಸ್ ಮಾಡಿಕೊಳ್ತಾ ಇದ್ದೀನಿ. ನೀನು, ರಿಷಿನಾ.. ಹುಷಾರಾಗಿರಿ. ಇಲ್ಲಿ ಪಪ್ಪಾ ಏನಾದರೂ ತಪ್ಪು ಮಾಡಿದರೆ ಏನು ಅಂದುಕೊಳ್ಳಬೇಡ. ಪಪ್ಪಾ ಬಗ್ಗೆ ಗೊತ್ತಲ್ವಾ" ಎಂದಿದ್ದಾರೆ. ಬಳಿಕ ಕಾರ್ತಿಕ್ ಅವರ ಅಮ್ಮ ಹಾಗೂ ತಂಗಿಯನ್ನು ಮಿಸ್ ಮಾಡಿಕೊಂಡಿದ್ದಾರೆ. ಇವತ್ತಿಗೆ ನಿಮ್ಮನ್ನು ನೋಡಿ ಎರಡು ವಾರ ಆಯ್ತು. ಆದರೆ, ನಾನು ಅಳಲ್ಲ ಎಂದು ಗಟ್ಟಿಯಾಗಿದ್ದಾರೆ.
ಮನೆಯವರಿಗಾಗಿ ಮನೆಯಲ್ಲಿ ಕಣ್ಣೀರು
ನೀತೂ ಮಾತನಾಡುವುದಕ್ಕೂ ಮುನ್ನವೇ ಕಣ್ಣೀರು ಹಾಕಿದ್ದು, ನಾನು ಬರೀ ಒಂದು ಹೆಣ್ಣಾಗಬೇಕು ಅಂದುಕೊಂಡಿದ್ದಷ್ಟೆ. ಅದಕ್ಕೆ ತುಂಬಾ ಸಪೋರ್ಟ್ ಮಾಡಿದ್ದು ನೀವು ಎಂದಿದ್ದಾರೆ. ಬಳಿಕ ಸ್ನೇಹಿತ್ ಮಾತನಾಡಿ, ನಮ್ಮ ಅಮ್ಮ ಒಂದು ಸಣ್ಣ ಹಳ್ಳಿಯಿಂದ ಬಂದಿದ್ದು. ಒಬ್ಬರ ಮನೆಯಲ್ಲಿಯೇ ಅಂದಿಗೆ ಟಿವಿ ಇದ್ದಿದ್ದು. ಅಮ್ಮನಿಗೆ ಮಗನನ್ನು ಟಿವಿಯಲ್ಲಿ ನೋಡಬೇಕು ಎಂಬ ಆಸೆ ಇತ್ತು. ನಮ್ಮ ಅಪ್ಪನ ಎದುರುಗಡೆ ನಿಂತು ಲವ್ ಯೂ ಹೇಳಿಲ್ಲ, ಫಾದರ್ ಡೇಗೂ ವಿಶ್ ಮಾಡಿಲ್ಲ. ನಾನು ಡಯೆಟ್‌ನಲ್ಲಿರ್ತೀನಿ. ದುಡ್ಡೇ ಇರ್ಲಿಲ್ಲ. ಆದರೆ, ಪೇಪರ್ ಮಾರಿ ಒಂದು ಕೆಜಿ ಚಿಕನ್ ತಂದಿದ್ದರು ಎಂದು ಹಳೆ ಘಟನೆ ನೆನೆದಿದ್ದಾರೆ. ತನಿಷಾ, ನೀನು ಗಂಡು ಹುಡುಗ ಆಗ್ಬೇಕಿತ್ತು ಅಂತ ಇಲ್ಲಿ ಎಲ್ಲಾ ಹೇಳ್ತೀರಾ. ಆದ್ರೆ, ನಮ್ಮ ಮನೆಗೆ ನಾನೇ ಗಂಡು ಮಗು ಎಂದಿದ್ದಾರೆ. ಸಿರಿ ಹಾಗೂ ಭಾಗ್ಯಶ್ರೀ ಕೂಡ ಮನೆಯವರನ್ನು ನೆನೆದು ಕಣ್ಣೀರು ಹಾಕಿದ್ದಾರೆ. ಭಾಗ್ಯಶ್ರೀ ಸಪೋರ್ಟ್ ಮಾಡಿದ ಗಂಡನಿಗೆ ಥ್ಯಾಂಕ್ಸ್ ಹೇಳಿದ್ದಾರೆ.
ಬಿಗ್ ಬಾಸ್ ನೋಡಬೇಡಿ ಎಂದಿದ್ದಾರಂತೆ ಗೌರೀಶ್
ಗೌರೀಶ್ ಅಕ್ಕಿ ಮಾತನಾಡಿ ಹಲವು ವಿಚಾರ ಹಂಚಿಕೊಂಡಿದ್ದಾರೆ. ಜೊತೆಗೆ ತುಂಬಾ ಅತ್ತಿದ್ದಾರೆ. "ನಂಗೆ ಎಳ್ಳಷ್ಟು ಆಸಕ್ತಿ ಇರಲಿಲ್ಲ. ನನ್ನ ವೈಫ್ ಹೇಳಿದ್ದು. ನನ್ನ ಕರಿಯರ್ ಬೇರೆನೆ ಇದೆ. ಅಪ್ಪ ಅಮ್ಮನಿಗೆ ಏನ್ ಹೇಳಿದ್ದೀನಿ ಅಂದ್ರೆ ಆಶ್ಚರ್ಯ ಆಗುತ್ತೆ. ಅಪ್ಪ ಅಮ್ಮನಿಗೆ ಈ ಶೋ ನೋಡ್ಬೇಡ ಅಂತ ಹೇಳಿದ್ದೀನಿ. ತಮ್ಮ ರಾಜೇಶ್ ಹೇಳಿದ ಹೋಗ್ಬೇಡ. ಅಲ್ಲಿ ನೀನು ಏನೋ ಹೇಳಿದ್ರೆ ಇಲ್ಲಿ ನಮಗೂ ಬೇಸರ ಆಗುತ್ತೆ. ನಮ್ಮದು ಲವ್ ಮ್ಯಾರೇಜ್ . ಮಾಲತಿಗೆ ಯಾವಾಗಲೂ ಹೇಳುವುದು ಬಿಟ್ಟು ಹೋಗ್ಬೇಡ. ನಂಗೆ ನಿನ್ನ ಬಿಟ್ಟು ಇರುವುದಕ್ಕೆ ಆಗಲ್ಲ. ಗ್ಯಾಸ್ ಆಫ್ ಮಾಡು, ಬಾಗಿಲು ಹಾಕು ಅಂತ ಹೇಳ್ತೀನಿ. ಆದರೆ ಇಲ್ಲ ಅವಳು ಸುಮ್ಮನೆ ಹೋಗಿ ಮಲಗುತ್ತಾಳೆ" ಎಂದಿದ್ದಾರೆ
ಪ್ರತಾಪ್ ಆಸೆ ಈಡೆರಿಸುತ್ತಾ ಬಿಗ್ ಬಾಸ್..?
ಪ್ರತಾಪ್ ಬಗ್ಗೆ ಹಲವು ಕುತೂಹಲವೂ ಇದೆ. ವೈಯಕ್ತಿಕ ವಿಚಾರ ಹೇಳಿದ ಪ್ರತಾಪ್, "ತಂದೆ ತಾಯಿಯನ್ನು ಮಿಸ್ ಮಾಡಿಕೊಳ್ಳುತ್ತೀನಿ. ತಾಯಿಗಿಂತ ತಂದೆ ಜೊತೆ ಬಾಂಡಿಂಗ್ ಇದೆ. ಜೀವನದಲ್ಲಿ ಕಷ್ಟ ಪಟ್ಟಿದ್ದಾರೆ. ಎರಡ್ಮೂರು ವರ್ಷ ಆಗಿದೆ ಅವರ ಜೊತೆಗೆ ಮಾತನಾಡಿ. ಒಂದೇ ಒಂದು ಹಾಯ್ ಹೇಳಬೇಕು. ಅದಕ್ಕೆ ಅವಕಾಶ ಮಾಡಿಕೊಡಿ" ಎಂದು ಬಿಗ್ ಬಾಸ್ ಬಳಿ ಕೇಳಿದ್ದಾರೆ.


Click it and Unblock the Notifications











