BBk10: ಅವಕಾಶವಿಲ್ಲದೆ ಫಿಟ್ನೆಸ್ ಕಡೆಗೆ ಹೋಗಿದ್ದ ಚಿತ್ರಾಲ್ ಬಿಗ್ ಬಾಸ್‌ನಲ್ಲೂ ರಿಜೆಕ್ಟ್.. ಹಲವರ ಕಣ್ಣಲ್ಲಿ ಬೇಸರ..!
ಬಿಗ್ ಬಾಸ್ ಸೀಸನ್ 10... ಒಂದು ರೀತಿಯ ವಿಭಿನ್ನತೆಯನ್ನು ನೀಡಿದೆ. ಕಂಟೆಸ್ಟೆಂಟ್‌ಗಳ ಆಯ್ಕೆಯ ವಿಚಾರದಲ್ಲಿಯೇ ಹೆಚ್ಚು ಗಮನ ಸೆಳೆಯುತ್ತಿದೆ. ಒಂಭತ್ತು ಸೀಸನ್‌ಗಳಲ್ಲಿ ಆಯ್ಕೆಯ ರೀತಿಯೇ ಬೇರೆ ಇತ್ತು. ಆದರೆ, ಈ ಬಾರಿ ಊಹೆಯನ್ನೇ ಮಾಡದ ರೀತಿ ಇದೆ. ಒಂಭತ್ತು ಸೀಸನ್‌ಗಳಲ್ಲಿ ಹದಿನಾರು ಕಂಟೆಸ್ಟೆಂಟ್ ಬಿಗ್ ಬಾಸ್ ಮನೆಗೆ ಎಂಟ್ರಿ ಕೊಟ್ಟಿದ್ದನ್ನು ನೋಡಿದ್ದೇವೆ. ಅವರ ಆಯ್ಕೆಯೆಲ್ಲಾ ನೇರವಾಗಿಯೇ ಇತ್ತು.
ಬಿಗ್ ಬಾಸ್ ಸೀಸನ್ 10 ಶುರುವಾಗುತ್ತಿದೆ ಎಂದಾಗ ಎಲ್ಲರಲ್ಲೂ ಸಹಜವಾದ ಕುತೂಹಲವಿತ್ತು. ಕಂಟೆಸ್ಟೆಂಟ್‌ಗಳ ಮೇಲಷ್ಟೇ ಗಮನವಿತ್ತು. ಆದರೆ, ದಿನ ಹತ್ತಿರವಾದಂತೆ, ಗಂಟೆಗಳು ಸಮೀಪಿಸುತ್ತಿದ್ದಂತೆ ಬಿಗ್ ಬಾಸ್ ಕೊಟ್ಟ ಟ್ವಿಸ್ಟ್‌ಗಳೇ ಎಲ್ಲರನ್ನು ರೋಮಾಂಚನಕಾರಿಯನ್ನಾಗಿ ಮಾಡಿತ್ತು. ಅದುವೇ ವೇದಿಕೆ ಮೇಲೆ ಆಯ್ಕೆ ಮಾಡುವ ಪ್ರಕ್ರಿಯೆ.

ಬಿಗ್ ಬಾಸ್ ವೇದಿಕೆಗೆ ಬಂದ ಚಿತ್ರಾಲ್
ಬಿಗ್ ಬಾಸ್ ವೇದಿಕೆ ಮೇಲೆ ಇವತ್ತು ಸಾಕಷ್ಟು ಸ್ಪರ್ಧಿಗಳು ಬಂದು ಹೋಗಿದ್ದಾರೆ. ಹಲವರು ಆಯ್ಕೆಯಾದರೇ, ಇನ್ನು ಹಲವರು ವೈಟಿಂಗ್ ಲಿಸ್ಟ್‌ನಲ್ಲಿದ್ದಾರೆ. ಇನ್ನು ಕೆಲವರು ವೇದಿಕೆಗೆ ಹೇಗೆ ಬಂದರೋ ಹಾಗೇ ಅದೇ ದಾರಿಯಲ್ಲಿ ವಾಪಾಸ್ ಆಗಿದ್ದಾರೆ. ಇವತ್ತು ಬಿಗ್ ಬಾಸ್ ವೇದಿಕೆ ಮೇಲೆ ಚಿತ್ರಾಲ್ ಬಂದಿದ್ದರು. ಇನ್ನೇನು ಆಯ್ಕೆಯಾಗುತ್ತಾರೆ ಎನ್ನುವಾಗಲೇ ರಿಜೆಕ್ಟ್ ಆಗಿದ್ದಾರೆ.
ಚಿತ್ರಾಲ್ ಫಿಟ್ನೆಸ್ ಕಡೆ ಹೋಗಿದ್ದೇಕೆ ?
ಚಿತ್ರಾಲ್ ಅವರನ್ನು ಆಲ್ ಮೋಸ್ಟ್ 90 kids ನೋಡಿಯೇ ಇರುತ್ತಾರೆ. ಧಾರಾವಾಹಿ, ಸಿನಿಮಾಗಳಲ್ಲಿ ನಟಿಸಿ, ಸೈ ಎನಿಸಿಕೊಂಡಿದ್ದರು. ಆದರೆ ಬರಬರುತ್ತಾ ಅವಕಾಶಗಳು ಕಡಿಮೆ ಆಗಿತ್ತು. ಇದೇ ಕಾರಣಕ್ಕಾಗಿಯೇ ಚಿತ್ರಾಲ್ ಫಿಟ್ನೆಸ್ ಕಡೆಗೆ ಹೆಚ್ಚಿನ ಗಮನ ಹರಿಸಿ, ಈಗ ಚಿತ್ರಾಲ್ ಪವರ್ ಆಗಿದ್ದಾರೆ.
ಚಿತ್ರಾಲ್ ಆಸೆಗೆ ವೋಟಿಂಗ್ ಸೆಕ್ಷನ್ ತಣ್ಣೀರು
ಚಿತ್ರಾಲ್ ರಂಗಭೂಮಿಯಲ್ಲಿ ಸ್ನೇಹಿತೆಯ ಜೊತೆಗೆ ಹೋಗುತ್ತಾ ಹೋಗುತ್ತಾ ಆಸಕ್ತಿ ಬೆಳೆಸಿಕೊಂಡವರು. ಬಳಿಕ ಚಿತ್ರರಂಗದಲ್ಲಿ ಅವಕಾಶಗಳು ಮರೆಯಾದವು. ಎಲ್ಲಿಯೇ ಹೋದರು ದಪ್ಪ ಇದ್ದೀಯಾ ಎಂದೇ ರಿಜೆಕ್ಟ್ ಮಾಡುತ್ತಿದ್ದರು. ಫಿಟ್ನೆಸ್ ಮೆಂಟೈನ್ ಮಾಡಲೇಬೇಕೆಂದು ಹಠ ತೊಟ್ಟು ಜಿಮ್‌ಗೆ ಜಾಯಿನ್ ಆದವರು. ಹಲವು ಸ್ಪರ್ಧೆಗಳಲ್ಲೂ ಭಾಗವಹಿಸಿ ಹೆಸರು ಗಳಿಸಿದ್ದಾರೆ. ಆದರೆ, ಬಿಗ್ ಬಾಸ್ ರಿಜೆಕ್ಟ್ ಆಗಿದ್ದು, ಅವರ ನಿರೀಕ್ಷೆಯನ್ನು ಸುಳ್ಳು ಮಾಡಿದೆ.
ಚಿತ್ರಾಲ್‌ಗೆ ಬಂದ ವೋಟಿಂಗ್ ಎಷ್ಟು?
"ನಂಗೇನ್ ಕಡಿಮೆ ಆಗಿದೆ. ಬೇರೆ ಆರ್ಟಿಸ್ಟ್ ಸೆಲೆಕ್ಟ್ ಆದಾಗ ನಂಗೆ ಜಲಸ್ ಫೀಲ್ ಆಗ್ತಾ ಇತ್ತು. ಆದರೆ, ಈಗ ಫೀಲ್ಡ್ ಚೇಂಜ್ ಆಗಿದೆ. ಫಿಟ್ನೆಸ್ ಅಂಡ್ ಆಕ್ಟಿಂಗ್ ಬೇರೆ ಬೇರೆ ಅಲ್ಲ. ಸ್ವಲ್ಪ ಜನಕ್ಕೆ ನಾನು ಏನು ಅನ್ನೋದು ಸ್ವಲ್ಪ ಗೊತ್ತು. ಆದರೆ, ಬಿಗ್ ಬಾಸ್ ಮನೆಗೆ ಹೋದರೆ ಇನ್ನಷ್ಟು ಅರ್ಥ ಆಗುತ್ತೆ. ದಯವಿಟ್ಟು ವೋಟ್ ಮಾಡಿ" ಎಂದಿದ್ದರು. ಆದರೆ, ವೋಟಿಂಗ್ ಸೆಕ್ಷನ್‌ನಿಂದ ಚಿತ್ರಾಲ್ ರಿಜೆಕ್ಟ್ ಆಗಿದ್ದಾರೆ. ಮೊದಲೇ ಚಿತ್ರರಂಗದಲ್ಲಿ ಅವಕಾಶವಿಲ್ಲ ಅಂತ ಫಿಟ್ನೆಸ್ ಕಡೆಗೆ ಹೋಗಿದ್ದರು. ಈಗ ಮತ್ತೆ ಬಿಗ್ ಬಾಸ್ ವೇದಿಕೆ ಚಿತ್ರಾಲ್ ಮನಸ್ಸಿಗೆ ನೋವು ಕೊಟ್ಟಿತಾ ಎಂಬ ಪ್ರಶ್ನೆ ನೋಡುಗರಿಗೆ ಕಾಡಿದೆ. ಈ ಸೀನ್ ನೋಡುವಾಗ ಕೊಂಚ ಮನಸ್ಸಿಗೆ ಕಿರಿಕಿರಿಯೂ ಆಗಿದೆ.


Click it and Unblock the Notifications











