BBK10: "ಹೆಣ್ಣು ಮಗು.. ದರಿದ್ರ, ದುರದೃಷ್ಟ ಅಂತ ಇವತ್ತಿಗೂ ಮನೆಯವ್ರು ನನ್ನ ಒಪ್ಪಿಕೊಂಡಿಲ್ಲ": ನಮ್ರತಾ ಗೌಡ ಭಾವುಕ

ಬಿಗ್‌ಬಾಸ್ ಮನೆಯಲ್ಲಿ ವಿಜಯದಶಮಿ ಸಂಭ್ರಮ ಮುಗಿದಿದೆ. ನಟಿ ತಾರಾ ಕೂಡ ಈ ಸಡಗರದಲ್ಲಿ ಭಾಗಿ ಆಗಿದ್ದರು. ಸ್ಪರ್ಧಿಗಳು ಡ್ಯಾನ್ಸ್, ಕಾಮಿಡಿ ಮೂಲಕ ರಂಜಿಸಿದರು. ಇದೀಗ ಮನೆಮಂದಿ ತಮ್ಮ ವೈಯಕ್ತಿಕ ಜೀವನದ ಸಂಗತಿಗಳನ್ನು ಹಂಚಿಕೊಂಡು ಭಾವುಕರಾಗಿದ್ದಾರೆ. ತಮ್ಮವರಿಗೆ ಕ್ಷಮೆ ಕೇಳಿದ್ದಾರೆ.

ಭಾಗ್ಯಶ್ರೀ, ನಮ್ರತಾ ಗೌಡ, ಸಿರಿ, ಕಾರ್ತಿಕ್ ಮಹೇಶ್, ಪ್ರತಾಪ್ ಎಲ್ಲರೂ ತಮ್ಮ ತಮ್ಮ ಜೀವನದ ನೋವು ಹಂಚಿಕೊಂಡು ಕಣ್ಣೀರಾಗಿದ್ದಾರೆ. ಅದಕ್ಕೆ ಸಂಬಂಧಿಸಿದ ಪ್ರೋಮೊ ರಿಲೀಸ್ ಆಗಿದೆ. ಸಹ ಸ್ಪರ್ಧಿಗಳ ನೋವಿನ ಮಾತುಗಳನ್ನು ಕೇಳಿ ಇಶಾನಿ ಸೇರಿದಂತೆ ಮನೆ ಮಂದಿ ಕಣ್ಣಾಲಿಗಳಲ್ಲಿ ನೀರು ತುಂಬಿಕೊಂಡಿತ್ತು.

BBK10: Bhagyashree, Sangeetha Sringeri, Namratha Gowda breaks down in tears

ಪ್ರತಾಪ್ ನನ್ನ ತಂದೆ ತಾಯಿಗೆ ಸ್ವಾರಿ ಹೇಳಲು ಇಷ್ಟಪಡ್ತೀನಿ ಎಂದಿದ್ದಾರೆ. ಭಾಗ್ಯಶ್ರೀ ತಮ್ಮ ಪತಿಯ ಬಗ್ಗೆ ಮಾತನಾಡಿದ್ದಾರೆ. ನನ್ನಿಂದ ನೀವು ಎಷ್ಟೊಂದು ಕಳೆದುಕೊಂಡಿದ್ದೀರಿ ಎಂದಿದ್ದಾರೆ. ನಾನು ನಮ್ಮ ಅಪ್ಪ ಅಮ್ಮನಿಂದ ಬಹಳ ದಿನ ದೂರಾಗಿದ್ದೆ. ಬಹಳ ದಿನ ಮಾತು ಬಿಟ್ಟಿದ್ದೆವು ಎಂದು ಸಂಗೀತಾ ನೋವು ತೋಡಿಕೊಂಡಿದ್ದಾರೆ.

ನಮ್ರತಾ ಗೌಡ ಮಾತನಾಡಿ "ಹೆಣ್ಣು ಮಗು ಆಗಿ ಹುಟ್ದೆ ಅಂತ ಇವತ್ತಿನವರೆಗೂ ನಮ್ಮ ಫ್ಯಾಮಿಲಿಯವರು ಒಪ್ಪಿಕೊಂಡಿಲ್ಲ. ದರಿದ್ರ, ದುದೃಷ್ಟ ಮಗು ಅಂತ ಎಂದು ಕಣ್ಣೀರು ಹಾಕಿದ್ದಾರೆ. ಅಮ್ಮನಿಗೆ ಪ್ರಾಮಿಸ್ ಮಾಡಿದ್ದೆ ಅಪ್ಪನನ್ನು ಉಳಿಸಿಕೊಡ್ತೀನಿ ಅಂತ ಅದರೆ ಆಗಲಿಲ್ಲ. ಗಿಲ್ಟಿ ಫೀಲ್ ಆಗುವಂತೆ ಮಾಡಿದ್ದೀನಿ ಅಮ್ಮನಿಗೆ, ರಿಯಲಿ ಸ್ವಾರಿ ಎಂದು ಮಹೇಶ್ ಹೇಳಿದ್ದಾರೆ. ಸಂಪೂರ್ಣ ಮಾತುಗಳನ್ನು ಸಂಜೆ ಎಪಿಡೋಡ್‌ನಲ್ಲೇ ನೋಡಬೇಕು.

ತಣ್ಣನೆಯ ರಾತ್ರಿಯಲ್ಲಿ ಬಿಗ್‌ಬಾಸ್ ಮನೆಯಲ್ಲಿ ಆದರೆ ಎಲ್ಲರ ಕಣ್ಣಲ್ಲೂ ಬಿಸಿಯಾದ ಕಂಬನಿ ಕೋಡಿಯಾಗಿ ಹರಿದಿದೆ. ಎದುರಲ್ಲಿ ಅಗ್ಗಷ್ಟಿಗೆ ಧಗಧಗ ಉರಿಯುತ್ತಿದ್ದರೆ, ಸ್ಪರ್ಧಿಗಳೆಲ್ಲ ಕುಟುಂಬದವರ ನೆನಪಲ್ಲಿ ಭಾವುಕರಾಗಿದ್ದಾರೆ. ಅಪ್ಪ-ಅಮ್ಮನಿಗೆ ಕೊಟ್ಟ ಮಾತು, ಸಂಗಾತಿಯ ನೆನಪು, ಈಡೇರದೇ ಉಳಿದುಬಿಟ್ಟ ಭಾಷೆ, ಕೊನೆಗೂ ಒಪ್ಪಿಕೊಳ್ಳದೇ ತಮ್ಮೊಳಗೆ ಒಂದಾಗಿಸಿಕೊಂಡು ಅಪ್ಪಿಕೊಳ್ಳದೇ ಹೋದ ಕುಟುಂಬ, ಹೆತ್ತವರ ಬೆಂಬಲಕ್ಕೆ ಪ್ರತಿಫಲ ನೀಡಲಾಗದ ಅಸಹಾಯಕತೆ ಹೀಗೆ ಒಬ್ಬೊಬ್ಬರ ಹೃದಯದಲ್ಲಿಯೂ ಹೇಳಿಕೊಳ್ಳದೇ ಉಳಿದಿದ್ದ ಕತೆ ಈ ಹೊರ ಬಂದಿದೆ.

ಅಗ್ಗಷ್ಟಿಕೆಯ ಬೆಳಕಲ್ಲಿ, ನೆನಪುಗಳ ಕಾವಿನಲ್ಲಿ ನೋವಿನ ನೆಪದಲ್ಲಿ ಮನೆಯ ಸ್ಪರ್ಧಿಗಳೆಲ್ಲ ಒಂದಾಗಿದ್ದಾರೆ. ಒಬ್ಬರ ಕಣ್ಣೀರನ್ನು ಇನ್ನೊಬ್ಬರು ಒರೆಸಿದ್ದಾರೆ. ಒಬ್ಬರ ದುಃಖಕ್ಕೆ ಇನ್ನೊಬ್ಬರು ಹೆಗಲಾಗಿದ್ದಾರೆ. ಒಬ್ಬರಿಗೊಬ್ಬರು ಸಾಂತ್ವನ ಹೇಳಿ ಎಲ್ಲರೂ ಒಂದೇ ಆಗಿದ್ದಾರೆ.

BBK10: Bhagyashree, Sangeetha Sringeri, Namratha Gowda breaks down in tears

ಬಿಗ್‌ಬಾಸ್ ಕನ್ನಡ ಸೀಸನ್ 10 ಯಶಸ್ವಿಯಾಗಿ 2 ವಾರ ಪೂರೈಸಿ 3ನೇ ವಾರಕ್ಕೆ ಕಾಲಿಟ್ಟಿದೆ. ಈ ಬಾರಿ ಬಿಗ್‌ಬಾಸ್‌ ಕೆಲ ಅಪರೂಪದ ಘಟನೆಗಳಿಗೆ ಸಾಕ್ಷಿಯಾಗಿದೆ. ಹೊಸ ರೂಪದಲ್ಲಿ ಸಂಥಿಂಗ್ ಸ್ಪೆಷಲ್ ಶೋ ಮೂಡಿ ಬರುತ್ತಿದೆ. ಗ್ರ್ಯಾಂ ಪ್ರೀಮಿಯರ್‌ನಿಂದ ನಾಮಿನೇಷನ್, ಟಾಸ್ಕ್ ಹೀಗೆ ಎಲ್ಲದರಲ್ಲೂ ವಿಭಿನ್ನ ಪ್ರಯತ್ನ ಮಾಡಲಾಗುತ್ತಿದೆ.

More from Filmibeat

English summary
BBK10: when Namratha Gowda got emotional about her personal issues in Bigg Boss
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X