BBK10: ಬಿಗ್‌ಬಾಸ್ ಮನೆಗೆ ಚಾರ್ಲಿ ಯಾಕೆ ಹೋಗಲಿಲ್ಲ? ಕಾರಣ ಬಹಿರಂಗ ಪಡಿಸಿದ ತರಬೇತುದಾರ ಪ್ರಮೋದ್

ಬಿಗ್‌ಬಾಸ್‌ ಕನ್ನಡ ಸೀಸನ್ 10ರ ಮೊದಲ ವಾರ ಮುಕ್ತಾಯವಾಗುತ್ತಾ ಬಂತು. ಈ ಹಿಂದೆ ಸೀಸನ್‌ಗಳಿಗಿಂತ ಹೊಸ ಸೀಸನ್ ವೀಕ್ಷಕರನ್ನು ಸೆಳೆಯುತ್ತಿದೆ. 17 ಜನ ಸ್ಪರ್ಧಿಗಳು ದೊಡ್ಮನೆ ಪ್ರವೇಶಿಸಿದ್ದಾರೆ. ಅಸಲಿ ಆಟ ಶುರುವಾಗಿದೆ. ಜಗಳ, ಕಿತ್ತಾಟ, ಮೈಂಡ್ ಗೇಮ್, ಟಾಸ್ಕ್ ಎಲ್ಲವೂ ಶುರುವಾಗಿದೆ. ಆದರೂ ವೀಕ್ಷಕರಿಗೆ ಅದೊಂದು ನಿರಾಸೆ ಮುಂದುವರೆದಿದೆ.

ಈ ಬಾರಿ ಬಿಗ್‌ಬಾಸ್ ಮನೆಗೆ ಯಾರೆಲ್ಲಾ ಸ್ಪರ್ಧಿಗಳಾಗಿ ಹೋಗುತ್ತಾರೆ ಎನ್ನುವ ಕುತೂಹಲ ಇತ್ತು. ಸಾಮಾನ್ಯವಾಗಿ ಗ್ರ್ಯಾಂಡ್ ಪ್ರೀಮಿಯರ್‌ ಮುಕ್ತಾಯವಾಗುವವರೆಗೂ ಬಿಗ್‌ಬಾಸ್ ಮನೆ ಸ್ಪರ್ಧಿಗಳು ಯಾರು ಎನ್ನುವುದು ರಿವೀಲ್ ಆಗಲ್ಲ. ಈ ಬಾರಿ ಹೆಚ್ಚು ಕಡಿಮೆ ಒಂದು ದಿನ ಮೊದ್ಲೆ ಸ್ಪರ್ಧಿಗಳ ಲಿಸ್ಕ್ ಲೀಕ್ ಆಗಿತ್ತು. 15 ದಿನ ಮೊದ್ಲೆ ಶ್ವಾನ ಚಾರ್ಲಿ ಬಿಗ್‌ಬಾಸ್ ಮನೆ ಪ್ರವೇಶಿಸುವ ವಿಚಾರವನ್ನು ಕಲರ್ಸ್ ಕನ್ನಡ ಘೋಷಿಸಿತ್ತು.

BBK10: Coach Pramod BC revealed the reason why still Charlie dog has not entered the house

ಶ್ವಾನವೊಂದು ಬಿಗ್‌ಬಾಸ್ ಮನೆ ಪ್ರವೇಶ ಮಾಡುತ್ತದೆ ಎನ್ನುವ ವಿಚಾರ ಭಾರೀ ಸುದ್ದಿಯಾಗಿತ್ತು. ಅದರಲ್ಲೂ '777 ಚಾರ್ಲಿ' ಚಿತ್ರದಲ್ಲಿ ನಟಿಸಿದ್ದ ಶ್ವಾನ ದೊಡ್ಮನೆ ದೊಡ್ಡಾಟಕ್ಕೆ ಹೋಗುತ್ತದೆ ಎನ್ನುವ ವಿಚಾರ ವೀಕ್ಷಕರಲ್ಲಿ ಕುತೂಹಲ ಮೂಡಿಸಿದ್ದು ಸುಳ್ಳಲ್ಲ. ಆದರೆ ಗ್ರ್ಯಾಂಡ್ ಪ್ರೀಮಿಯರ್ ನಡೆದು ಶೋ ಆರಂಭವಾಗಿ ವಾರ ಕಳೆದರೂ ಚಾರ್ಲಿ ಮಾತ್ರ ದೊಡ್ಮನೆಗೆ ಹೋಗಲೇಯಿಲ್ಲ.

ಗ್ರ್ಯಾಂಡ್ ಪ್ರೀಮಿಯರ್ ವೇಳೆ ನಟಿ ಸಂಗೀತಾ ಶೃಂಗೇರಿ ವೇದಿಕೆ ಏರಿದಾಗಲೂ ಚಾರ್ಲಿ ಬರುತ್ತೆ ನಿರೀಕ್ಷೆ ಇತ್ತು. ಸುದೀಪ್ ಆಣತಿಯಂತೆ ಸಂಗೀತಾ ಕೂಡ ಚಾರ್ಲಿ.. ಚಾರ್ಲಿ ಎಂದು ಕರೆದಿದ್ದರು. ಆದರೆ ಚಾರ್ಲಿ ಮಾತ್ರ ಬರಲೇಯಿಲ್ಲ. '777 ಚಾರ್ಲಿ' ಚಿತ್ರದಲ್ಲಿ ಚಾರ್ಲಿ ಜೊತೆ ಸಂಗೀತಾ ನಟಿಸಿದ್ದರು ಅನ್ನೋದ ಗೊತ್ತೇಯಿದೆ. ಇನ್ನು ಇಡೀ ಗ್ರ್ಯಾಂಡ್ ಪ್ರೀಮಿಯರ್ ಮುಗಿದರೂ ಬರಲಿಲ್ಲ. ಬಳಿಕ ಮೊದಲ ದಿನ ಬಿಗ್‌ಬಾಸ್ ಮನೆಗೆ ಹೋಗುತ್ತದೆ ಅಂದುಕೊಂಡರೂ ಅದು ನಿಜವಾಗಲಿಲ್ಲ.

BBK10: Coach Pramod BC revealed the reason why still Charlie dog has not entered the house

ವೀಕ್ಷಕರಂತೂ ಬಿಗ್‌ಬಾಸ್ ಮನೆಯೊಳಗೆ ಚಾರ್ಲಿಯನ್ನು ನೋಡಬೇಕು ಎಂದು ಕಾದು ಕಾದು ಸುಸ್ತಾಗಿದ್ದಾರೆ. ವಾರ ಕಳೆದರೂ ಆ ಬಗ್ಗೆ ಯಾವುದೇ ಸುಳಿವು ಸಿಗುತ್ತಿಲ್ಲ. ಅಷ್ಟಕ್ಕೂ ಏನಾಯ್ತು? ಚಾರ್ಲಿ ಯಾಕೆ? ಇನ್ನು ಬಿಗ್‌ಬಾಸ್ ಮನೆ ಪ್ರವೇಶಿಸಿಲ್ಲ ಎನ್ನುವ ಚರ್ಚೆ ಶುರುವಾಗಿದೆ. ಈ ಬಗ್ಗೆ ಸ್ವತಃ ಚಾರ್ಲಿ ಶ್ವಾನದ ತರಬೇತುದಾರ ಪ್ರಮೋದ್ ಫಿಲ್ಮ್‌ಬೀಟ್‌ಗೆ ಪ್ರತಿಕ್ರಿಯೆ ನೀಡಿದ್ದಾರೆ. ಯಾವಾಗ ಚಾರ್ಲಿ ಮನೆಯೊಳಗೆ ಹೋಗುತ್ತಾಳೆ ಅನ್ನೋದನ್ನು ತಿಳಿಸಿದ್ದಾರೆ.

ಸಿನಿಮಾ, ಕಿರುತೆರೆ ಅಥವಾ ರಿಯಾಲಿಟಿ ಶೋಗಳಲ್ಲಿ ಪ್ರಾಣಿಗಳನ್ನು ಬಳಸಿಕೊಳ್ಳುವುದು ಅಷ್ಟು ಸುಲಭವಲ್ಲ. ಅದಕ್ಕೆ ಅನಿಮಲ್ ವೆಲ್‌ಫೇರ್ ಬೋರ್ಡ್ ಆಫ್ ಇಂಡಿಯಾ ಅನುಮತಿ ಬೇಕು. ಚಾರ್ಲಿ ಶ್ವಾನ ಬಿಗ್‌ಬಾಸ್ ಮನೆ ಪ್ರವೇಶಿಸಲು ಕೂಡ ಅನುಮತಿ ಬೇಕಾಗಿದೆ. ಆದರೆ ಇನ್ನು ಅನುಮತಿ ಸಿಕ್ಕಿಲ್ಲ. ಹಾಗಾಗಿ ಚಾರ್ಲಿ ಬಿಗ್‌ಬಾಸ್ ಮನೆ ಪ್ರವೇಶ ತಡವಾಗುತ್ತಿದೆ.

ಫಿಲ್ಮಿ ಬೀಟ್‌ಗೆ ಪ್ರಮೋದ್ ಪ್ರತಿಕ್ರಿಯೆ ನೀಡಿದ್ದು "ಚಾರ್ಲಿಯನ್ನು ಬಿಗ್‌ಬಾಸ್ ಮನೆಯೊಳಗೆ ಕಳುಹಿಸುವ ಬಗ್ಗೆ ಎಲ್ಲಾ ತಯಾರಿ ನಡೀತಿದೆ. ಆದರೆ ಅನಿಮಲ್ ವೆಲ್‌ಫೇರ್ ಬೋರ್ಡ್ ಆಫ್ ಇಂಡಿಯಾ ಇನ್ನು ಅನುಮತಿ ಸಿಕ್ಕಿಲ್ಲ. ಅದಕ್ಕಾಗಿ ಎಲ್ಲಾ ಪ್ರಯತ್ನಗಳು ನಡೀತಿದೆ. ಪತ್ರ, ಮೇಲ್ ಮೂಲಕ ಅನುಮತಿ ಕೋರಲಾಗಿತ್ತು. ಆ ಪ್ರೋಸೆಸ್ ನೀಡಿತಿದೆ. ಅನುಮತಿ ಸಿಕ್ಕ ಕೂಡಲೇ ಚಾರ್ಲಿ ಬಿಗ್‌ಬಾಸ್ ಮನೆ ಪ್ರವೇಶಿಸುತ್ತದೆ. ಆದಷ್ಟು ಬೇಗ ಅನುಮತಿ ಸಿಗಲಿಲ್ಲ. ಶೋ ಮುಗಿಯಲು ಇನ್ನು 95 ದಿನ ಬಾಕಿಯಿದೆ. ಅಷ್ಟರಲ್ಲಿ ಅಭಿಮಾನಿಗಳ ಆಸೆ ಈಡೇರಲಿದೆ" ಎಂದಿದ್ದಾರೆ.

ಅಂದಹಾಗೆ ಚಾರ್ಲಿ ಬಿಗ್‌ಬಾಸ್ ಮನೆಗೆ ಸ್ಪರ್ಧಿಯಾಗಿ ಹೋಗುತ್ತಿಲ್ಲ ಎನ್ನಲಾಗುತ್ತಿದೆ. ಬರೀ ಎಂಟರ್‌ಟೈನರ್ ಆಗಿ ಮಾತ್ರ ಬಿಗ್‌ಬಾಸ್ ಮನೆಯೊಳಗೆ ಇರಲಿದೆ. ಆದರೆ ಎಷ್ಟು ದಿನ ಅನ್ನೋದು ಗೊತ್ತಿಲ್ಲ. ಇನ್ನು ಚಾರ್ಲಿ ಜೊತೆಗೆ ತರಬೇತುದಾರ ಪ್ರಮೋದ್ ಕೂಡ ಬಿಗ್‌ಬಾಸ್ ಮನೆ ಒಳಗೆ ಪ್ರವೇಶಿಸುವ ಸಾಧ್ಯತೆಯಿದೆ.

More from Filmibeat

English summary
Bigg Boss Kannada 10: Here's Why Charlie dog Did Not Enter the Show.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X