BBK10: ಹರ ಹರ ಮಹಾದೇವ.. ವಿನಯ್- ಸಂಗೀತಾ ಮಧ್ಯೆ ಕಿರಿಕ್: ಯಾರ ನಿಜ ಬಣ್ಣ ಬಯಲಾಯ್ತು?

ಹ್ಯಾಪಿ ಬಿಗ್‌ಬಾಸ್ ಸಖತ್ ಇಂಟ್ರೆಸ್ಟಿಂಗ್ ಆಗಿ ಶುರುವಾಗಿದೆ. ಮೊದಲ ದಿನವೇ ಶಾಸಕರಾದ ಪ್ರದೀಪ್ ಈಶ್ವರ್ ದೊಡ್ಮನೆಗೆ ಎಂಟ್ರಿ ಕೊಟ್ಟು ಎಲ್ಲರಿಗೂ ಶಾಕ್ ಕೊಟ್ಟಿದ್ದರು. ಮೋಟಿವೇಷನಲ್​ ಸ್ಪೀಕರ್ ಆಗಿಯೂ ಪ್ರದೀಪ್ ಈಶ್ವರ್ ಗುರ್ತಿಸಿಕೊಂಡಿದ್ದಾರೆ. ಇನ್ನು ಒಂದೇ ದಿನಕ್ಕೆ ಅವರು ಮನೆಯಿಂದ ಹೊರ ಬಂದಿದ್ದಾರೆ.

ಬಿಗ್‌ಬಾಸ್ 2ನೇ ದಿನ ಆಟ ಶುರುವಾಗಿದೆ. ಬಿಗ್‌ಬಾಸ್‌ ಕನ್ನಡ ಸೀಸನ್ 10ರ ಮೊದಲ ನಾಮಿನೇಶನ್ ಪ್ರಕ್ರಿಯೆ ಆರಂಭವಾಗಿದ್ದು ನಟ ವಿನಯ್ ಗೌಡ ಹಾಗೂ ನಟಿ ಸಂಗೀತಾ ಭಟ್ ನಡುವೆ ಕಿರಿಕ್ ಆಗಿದೆ. ಇಬ್ಬರೂ ಮನೆಯಲ್ಲಿ ಬಹಳ ಜೋರಾಗಿಯೇ ಒಬ್ಬರ ಮೇಲೊಬ್ಬರು ಕಿರುಚಾಡಿದ್ದಾರೆ. ಸದ್ಯ ಪ್ರೋಮೊ ರಿಲೀಸ್ ಆಗಿ ಸಖತ್ ವೈರಲ್ ಆಗುತ್ತಿದೆ.

BBK10 Day 2: Vinay Gowda and Sangeetha Sringeri get into a major fight

ಬಿಗ್‌ಬಾಸ್ ಆದೇಶದಂತೆ ಸ್ಪರ್ಧಿಗಳು ತಾವು ಯಾರನ್ನು ಹೊರಗೆ ಕಳುಹಿಸಬೇಕು ಎನ್ನುವುದನ್ನು ಸೂಕ್ತ ಕಾರಣಗಳೊಂದಿಗೆ ತಿಳಿಸಿದ್ದಾರೆ. ಇದು ರಂಗು ಚೆಲ್ಲುವ ನಾಮಿನೇಶನ್ ಆಗಿದ್ದು ಕೆಲವರ ಮೇಲೆ ರಂಗೀನ ಓಕುಳಿಯಾಗಿದೆ. ಇನ್ನು 'ಹರ ಹರ ಮಹಾದೇವ' ಧಾರಾವಾಹಿಯಲ್ಲಿ ನಟ ವಿನಯ್ ಗೌಡ ಹಾಗೂ ನಟಿ ಸಂಗೀತಾ ಭಟ್ ಒಟ್ಟಿಗೆ ನಟಿಸಿದ್ದರು. ಹಾಗಾಗಿ ಇಬ್ಬರು ನಡುವೆ ಹಲವು ವರ್ಷಗಳಿಂದ ಪರಿಚಯ, ಸ್ನೇಹ ಇದೆ. ಆದರೆ ಇಬ್ಬರು ಮೊದಲ ದಿನವೇ ಕಿತ್ತಾಡಿಕೊಂಡಿದ್ದಾರೆ.

'ಹರ ಹರ ಮಹಾದೇವ' ಧಾರಾವಾಹಿಯಲ್ಲಿ ಶಿವನಾಗಿ ವಿನಯ್, ಸತಿ ದಾಕ್ಷಾಯಿಣಿ ಆಗಿ ಸಂಗೀತಾ ನಟಿಸಿದ್ದರು. ಬಿಗ್‌ಬಾಸ್ ಮನೆಯಲ್ಲಿ ವಿಜಯ್ ಆಕೆಯನ್ನು ಸತಿ ಎಂದೇ ಕರೆಯುತ್ತಿದ್ದಾರೆ. ವಿನಯ್ ಬೇಡ ಅಂದರೂ ಸಂಗೀತಾ ಬಂದು ಸೋಫಾ ಮೇಲೆ ಕೂತಿದ್ದಕ್ಕೆ ಗರಂ ಆಗಿದ್ದಾರೆ. ಬಿಗ್‌ಬಾಸ್ ರೂಲ್ಸ್ ಬ್ರೇಕ್ ಆಯ್ತು ಎಂದು ವಿನಯ್- ಸಂಗೀತಾ ನಡುವೆ ವಾಗ್ವಾದ ನಡೆದಿದೆ. ಇದು ತಾರಕಕ್ಕೇರಿ ಒಬ್ಬರ ಮೇಲೊಬ್ಬರು ಕಿರುಚಾಡುವಂತಾಗಿದೆ.

ನೀವೇ ಬಿಗ್‌ಬಾಸ್ ರೀತಿ ಮಾತನಾಡುತ್ತಿದ್ದೀರಾ ಎಂದು ಸಂಗೀತಾ, ನೀವು ಪರ್ಸನಲ್ ಆಗಿ ತಗೊಂಡ್ರೆ ನಾನೇನು ಮಾಡೋಕ್ಕಾಗಲ್ಲ ಎಂದು ವಿನಯ್ ಮಾತಿಗೆ ಮಾತು ಬೆಳೆಸಿದ್ದಾರೆ. ಯಾರು ಪರ್ಸನಲ್ ಆಗಿ ತಗೊಂಡಿದ್ದಾರೆ ಅಂತ ನನಗೆ ಗೊತ್ತು ಎಂದು ಸಂಗೀತಾ, ಯಾರು ನನ್ನತ್ರ ಮಾತನಾಡೋದು ಬೇಡ ಎಂದು ವಿನಯ್, ಕೊನೆಗೆ ನೀವು ನಿಮ್ಮ ಬಣ್ಣ ತೋರಿಸಿದ್ದೀರಾ ಬಿಡಿ ಅಂತ ಸಂಗೀತಾ ಮಾತು ಮುಂದುವರೆಸಿದ್ದಾರೆ.

ಒಟ್ನಲ್ಲಿ ಮೊದಲ ದಿನವೇ ಸ್ಪರ್ಧಿಗಳ ನಡುವೆ ನೀನಾ ನಾನಾ ಎನ್ನುವ ಕಿತ್ತಾಟ ಶುರುವಾಗಿದೆ.ಇನ್ನು ಬಿಗ್‌ಬಾಸ್ ಮನೆಗೆ ಶಾಸಕ ಪ್ರದೀಪ್ ಈಶ್ವರ್ ಎಂಟ್ರಿ ಕೊಟ್ಟಿದ್ದು ರಾಜಕೀಯ ವಲಯದಲ್ಲಿ ಸಾಕಷ್ಟು ಚರ್ಚೆ ಹುಟ್ಟು ಹಾಕಿತ್ತು. ಹಾಲಿ ಶಾಸಕರೊಬ್ಬರು ಈ ರೀತಿ ರಿಯಾಲಿಗೆ ಶೋಗೆ ಹೋಗಬಹುದಾ? ಎಂದು ಕೆಲವರು ಚಕಾರ ಎತ್ತಿದ್ದರು. ಆದರೆ ಒಂದು ದಿನದ ಮಟ್ಟಿಗೆ ಅತಿಥಿಯಾಗಿ ಹೋಗಿದ್ದ ಪ್ರದೀಪ್ ಈಶ್ವರ್ ಹೊರಗೆ ಬಂದಿದ್ದಾರೆ.

ಬಿಗ್‌ಬಾಸ್ ಮನೆಗೆ ಹೋಗಿದ್ದ ಪ್ರದೀಪ್ ಈಶ್ವರ್ ನಾನು ಕೂಡ ಸ್ಪರ್ಧಿ ಎಂದು ಸ್ಪರ್ಧಿಗಳನ್ನೆಲ್ಲಾ ನಂಬಿಸಿದ್ದರು. ಇನ್ನು ಸ್ಪರ್ಧಿಗಳಿಗೆ ಟಾಸ್ಕ್ ಕೊಟ್ಟು ತೆಗೆದುಕೊಂಡು ಹೋಗಿದ್ದ ಸಿಹಿ ಹಂಚಿದ್ದರು. ತಮ್ಮ ಮಾತುಗಳ ಮೂಲಕ ಸ್ಪರ್ಧಿಗಳಲ್ಲಿ ಹೊಸ ಉತ್ಸಾಹ ತುಂಬಿದರು. ಕೊನೆಗೆ ಬಿಗ್‌ಬಾಸ್ ಆದೇಶದಂತೆ ಮೊದಲ ದಿನವೇ ಮನೆಯಿಂದ ಹೊರಬಂದರು. ಒಟ್ನಲ್ಲಿ ದೊಡ್ಮೆನೆಗೆ ಶಾಸಕರಾದ ಪ್ರದೀಪ್ ಈಶ್ವರ್ ಎಂಟ್ರಿ ಕುತೂಹಲ ಮೂಡಿಸಿದ್ದು ಸುಳ್ಳಲ್ಲ.

More from Filmibeat

English summary
Quarrel Breaks Out Between Vinay Gowda And Sangeetha Sringeri Over nomination;
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X