BBK 10: ಬಿಗ್ ಬಾಸ್ ಮನೆಯೊಳಗೆ ಎಂಟ್ರಿ ಕೊಟ್ಟ ಮೊದಲ 3 ಸ್ಪರ್ಧಿಗಳು ಇವರೇ..!
ಬಿಗ್ ಬಾಸ್ ಕನ್ನಡ ಸೀಸನ್ 10 ಆರಂಭ ಆಗುವುದಕ್ಕೆ ಕ್ಷಣಗಣನೆ ಆರಂಭ ಆಗಿದೆ. ಇಂದು (ಅಕ್ಟೋಬರ್ 8) ಸಂಜೆ 6 ಗಂಟೆಯಿಂದ ಕನ್ನಡದ ಅತೀ ದೊಡ್ಡ ರಿಯಾಲಿಟಿ ಶೋ ಬಿಗ್ ಬಾಸ್ ಆರಂಭ ಆಗುತ್ತಿದೆ. 10ನೇ ಸೀಸನ್ ಆಗಿರುವುದರಿಂದ ಸಹಜವಾಗಿಯೇ ಕುತೂಹಲ ಹೆಚ್ಚಿದೆ.
ಈ ಬಾರಿ ಆಯ್ಕೆ ಪ್ರಕ್ರಿಯೆ ಕೂಡ ವಿಭಿನ್ನವಾಗಿರುತ್ತೆ ಅನ್ನೋದನ್ನು ಪ್ರೋಮೊ ಮೂಲಕವೇ ರಿವೀಲ್ ಮಾಡಲಾಗಿದೆ. ಸದ್ಯ ಯಾರು ಒಳಗೆ ಹೋಗುತ್ತಾರೆ ಅನ್ನೋ ಕಂಪ್ಲೀಟ್ ಡಿಟೈಲ್ಸ್ ಕೂಡ ಹೊರಬಿದ್ದಿದೆ. ಸ್ಪರ್ಧಿಗಳ ಜೊತೆ ಜೊತೆಗೆ ಚಾರ್ಲಿ ಕೂಡ ಬಿಗ್‌ಬಾಸ್ ಮನೆಯೊಳಗೆ ಪ್ರವೇಶ ಪಡೆಯುತ್ತಿರೋದು ಅಚ್ಚರಿ ಮೂಡಿಸಿದೆ.
ಈ ಬಾರಿ ಬಿಗ್ ಬಾಸ್ ಕನ್ನಡ ಸೀಸನ್ 10 ಜಿಯೊ ಸಿನಿಮಾ(Jio Cinema)ದಲ್ಲಿ 24 ಗಂಟೆಗಳ ಕಾಲ ಪ್ರಸಾರ ಆಗುತ್ತಿದೆ. ಹೀಗಾಗಿ ಶೋ ಆರಂಭಕ್ಕೂ ಮುನ್ನವೇ ಕೆಲವು ಗುಟ್ಟುಗಳನ್ನು ಬಿಟ್ಟುಕೊಟ್ಟಿದೆ. ಮೊದಲು ಮನೆಯೊಳಗೆ ಪ್ರವೇಶ ಮಾಡುವ ಸ್ಪರ್ಧಿಗಳ ಗುಟ್ಟನ್ನು ಬಿಟ್ಟುಕೊಟ್ಟಿದೆ.

ಕಳೆದ ಬಾರಿ ಸ್ಪರ್ಧಿಗಳ ಹೆಸರನ್ನೇ ಗುಟ್ಟಾಗಿ ಇಟ್ಟಿದ್ದ ಕಲರ್ಸ್ ಕನ್ನಡ ಈ ಬಾರಿ ಒಬೊಬ್ಬರ ಹೆಸರನ್ನೇ ರಿವೀಲ್ ಮಾಡುತ್ತಿದೆ. ಸದ್ಯ ಬಿಗ್ ಬಾಸ್ ಮನೆಯೊಳಗೆ ಎಂಟ್ರಿ ಕೊಟ್ಟ ಮೊದಲ ಮೂರು ಸ್ಪರ್ಧಿಗಳ ಹೆಸರನ್ನು ರಿವೀಲ್ ಮಾಡಲಾಗಿದೆ. ಅವರು ಯಾರು ಅಂತ ನೋಡುವುದಾದರೇ...
ಡ್ರೋನ್ ಪ್ರತಾಪ್
ವಿವಾದಾತ್ಮಕ ಸ್ಪರ್ಧಿ ಡ್ರೋನ್ ಪ್ರತಾಪ್ ಈ ಬಾರಿ ಬಿಗ್ ಬಾಸ್ ಮನೆ ಸೇರುವ ಸ್ಪರ್ಧಿ. ಡ್ರೋನ್ ವಿಚಾರಕ್ಕಾಗಿಯೇ ಕನ್ನಡಿಗರಿಗೆ ಸುಳ್ಳು ಹೇಳಿರುವ ಆರೋಪವನ್ನು ಎದುರಿಸುತ್ತಿದ್ದಾರೆ. ಕಳೆದ ಕೆಲವು ವರ್ಷಗಳ ಹಿಂದೆನೇ ಡ್ರೋನ್ ಪ್ರತಾಪ್ ಮೋಸ ಮಾಡುತ್ತಿದ್ದಾರೆ ಅನ್ನೋ ಆರೋಪ ಕೇಳಿಬಂದಿತ್ತು. ಕೆಲವು ದಿನ ಸೈಲೆಂಟ್ ಆಗಿದ್ದ ಡ್ರೋನ್ ಪ್ರತಾಪ್ ಇತ್ತೀಚೆಗೆ ಮತ್ತೆ ಡ್ರೋನ್‌ಗಳ ಮೂಲಕವೇ ಪ್ರತ್ಯಕ್ಷ ಆಗಿದ್ದರು. ಇವರು ಸೀಸನ್ 10ರಲ್ಲಿ ಬಿಗ್ ಬಾಸ್ ಮನೆ ಸೇರಲಿರುವ ಮೊದಲ 3 ಸ್ಪರ್ಧಿಯಲ್ಲಿ ಒಬ್ಬರು.
ರಕ್ಷಕ್ ಬುಲೆಟ್
ಹಾಸ್ಯ ನಟ ದಿವಂಗತ ಬುಲೆಟ್ ಪ್ರಕಾಶ್ ಪುತ್ರ ರಕ್ಷಕ್ ಬಿಗ್ ಬಾಸ್ ಮನೆಯೊಳಗೆ ಪ್ರವೇಶ ಮಾಡುತ್ತಿದ್ದಾರೆ. ಇತ್ತೀಚೆಗೆ 'ಗುರು ಶಿಷ್ಯರು' ಅನ್ನೋ ಸಿನಿಮಾದಲ್ಲಿ ಕಾಣಿಸಿಕೊಂಡರು. ಸಿನಿಮಾಗಿಂತ ಹೆಚ್ಚಾಗಿ ತಮ್ಮ ಸಂದರ್ಶನಗಳಿಂದಲೇ ಸುದ್ದಿಯಲ್ಲಿದ್ದ ಹೆಸರು ಇದು. ಇದೇ ವಿಷಯಕ್ಕೆ ಟ್ರೋಲ್ ಕೂಡ ಆಗಿದ್ದರು. ಇವರು ಕೂಡ ಬಿಗ್ ಬಾಸ್ ಮನೆಯೊಳಗೆ ಹೋಗುತ್ತಿರುವ ಮೊದಲು 3 ಸ್ಪರ್ಧಿಗಳಲ್ಲಿ ಒಬ್ಬರು ಎನ್ನಲಾಗಿದೆ.
ವರ್ತೂರು ಸಂತೋಷ್
ಇನ್ನೊಂದು ಪ್ರತಿಭೆ ವರ್ತೂರು ಸಂತೋಷ್. ಹಳ್ಳಿಕಾರ್ ದೇಸಿ ಹಸುಗಳಿಂದಲೇ ಜನಪ್ರಿಯರಾಗಿರುವ ವರ್ತೂರು ಸಂತೋಷ್ ಬಿಗ್ ಬಾಸ್ ಮನೆಗೆ ಕಾಲಿಡುತ್ತಿದ್ದಾರೆ. ವರ್ತೂರು ಸುತ್ತಮುತ್ತ ಸಾಕಷ್ಟು ಜನಪ್ರಿಯತೆಯನ್ನು ಗಳಿಸಿದ್ದಾರೆ. ಇವರ ಮಾತಿನ ಶೈಲಿ ಜನರನ್ನು ಸೆಳೆದಿತ್ತು. ಇವರು ಮೊದಲು ಬಿಗ್ ಬಾಸ್ ಮನೆಯೊಳಗೆ ಕಾಲಿಡುತ್ತಿರುವ ಮೊದಲ ಮೂರು ಸ್ಪರ್ಧಿಗಳಲ್ಲಿ ಒಬ್ಬರಾಗಿದ್ದಾರೆ.


Click it and Unblock the Notifications











