Karthik Mahesh: ಟ್ರೋಫಿಗೆ ಮುತ್ತಿಡೋದು ಕಾರ್ತಿಕ್ ಮಹೇಶ್!: ಪಾರ್ಟಿ ಮಾಡಿ ಎಂದಿದ್ಯಾಕೆ ಕಿಚ್ಚ ಸುದೀಪ್!?

ಕಿರುತೆರೆಯ ದೊಡ್ಮನೆ ಆಟಕ್ಕೆ ಇನ್ನೇನು ಅಂತಿಮ ತೆರೆ ಎಲೆಯಲಾಗುತ್ತಿದೆ. ಸದ್ದಯ ಇರುವ ಟಾಪ್ ಫೈವ್ ಫೈನಲಿಸ್ಟ್‌ಗಳಲ್ಲಿ ಯಾಎಉ ಟ್ರೋಪಿ ಕೈಯಲ್ಲಿ ಹಿಡಿಯುತ್ತಾರೆ ಎಂಬುದು ಭಾನುವಾರ (ಜನವರಿ 28) ಘೋಷಣೆಯಾಗುತ್ತದೆ. ಆದರೆ, ಇದಕ್ಕೂ ಮುನ್ನವೇ ನಟ ಕಿಚ್ಚ ಸುದೀಪ್ ಯಾರು ಬಿಗ್ ಬಾಸ್ ಟ್ರೋಫಿಗೆ ಮುತ್ತಿಡುತ್ತಾರೆ ಎಂಬ ಸುಳಿವು ನೀಡಿದ್ದಾರೆ.

ಹೌದು... ಶನಿವಾರ ನಡೆದ ಬಿಗ್ ಬಾಸ್ ಗ್ರ್ಯಾಂಡ್ ಫಿನಾಲ್ ಮೊದಲ ಸಂಚಿಕೆಯಲ್ಲಿ ಮನೆ ಮಂದಿಯ ಜೊತೆಗೆ ವೇದಿಕೆಯಲ್ಲಿ ನಿಂತು ಮಾತಾಡಿದ ನಟ ಸುದೀಪ್ ಅವರ ಮಾತುಗಳಲ್ಲಿ ವಿನ್ನರ್ ಬಗ್ಗೆ ಸುಳಿವಿದೆ. ಸಾಮಾಜಿಕ ಜಾಲತಾಣಗಳಲ್ಲಿ ಈಗಾಗಲೇ ವಿನ್ನರ್ ಯಾರು ಎಂದು ಫೋಸ್ಟರ್‌ಗಳು ಹಂಚಲಾಗುತ್ತಿದೆ. ನಿನ್ನೆಯ ಸಂಚಿಕೆ ಮುಗಿದ ಬಳಿಕ ಕಾರ್ತಿಕ್ ಮಹೇಶ್ ವಿನ್ನರ್ ಎಂದು ಹೇಳುತ್ತಿದ್ದಾರೆ.

BBK10 Grand Finale: Will Karthik Mahesh Became Bigg Boss Kannada Winner

ಕಾರ್ತಿಕ್ ಮಹೇಶ್ ಗೆಲುವಿನ ಬಗ್ಗೆ ಸುಳಿವು ಕೊಟ್ರಾ ಸುದೀಪ್!?

ಬಿಗ್ ಬಾಸ್ ಫಿನಾಲೆ ವೇದಿಕೆಯಲ್ಲಿ ಮಾತನಾಡುವಾಗ ಕಿಚ್ಚ ಸುದೀಪ್ ಒಂದು ಸುಳಿವು ನೀಡಿದ್ದಾರೆ. ಸಕಲಕಲಾ ವಲ್ಲಭ ಕಾರ್ತಿಕ್ ಮಹೇಶ್ ವಿನ್ನರ್ ಎಂಬುದೇ ಆ ಸುಳಿವು ಎಂಬ ಅನುಮಾನ ಪ್ರೇಕ್ಷಕರಲ್ಲಿ ಮೂಡಿದೆ. ಕಾರ್ತಿಕ್‌ಗೆ ಉತ್ಸಾಹ ತುಂಬುವ ಭರದಲ್ಲಿ ಹೊರಗೆ ಬಂದು ಪಾರ್ಟಿ ಮಾಡಿ ಎಂದು ಕಿಚ್ಚ ಹೇಳಿದ್ದು, ಇದು ವಿನ್ನರ್ ಯಾರು ಎಂಬುದನ್ನು ತಿಳಿಸಿದೆ ಎಂದು ಸೋಶಿಯಲ್ ಮಿಡಿಯಾದಲ್ಲಿ ಹರಿದಾಡುತ್ತಿದೆ.

ಈಗಾಗಲೇ ವಿನಯ್ ಗೌಡ ಎಲಿಮಿನೇಟ್ ಆಗಿದ್ದಾರೆ ಎನ್ನಲಾಗುತ್ತಿದ್ದು, ಸಂಗೀತಾ ಶೃಂಗೇರಿ ಮತ್ತು ಕಾರ್ತಿಕ್ ಮಹೇಶ್ ಇಬ್ಬರು ವಿನ್ನರ್ ಮತ್ತು ಮೊದಲ ರನ್ನರ್ ಅಪ್ ಅಗಲಿದ್ದಾರೆ. ಟ್ರೋಫಿಯನ್ನು ಕಾರ್ತಿಕ್ ಅವರೇ ಗೆಲ್ಲುತ್ತಾರೆ. ಕಿಚ್ಚ ಸುದೀಪ್ ಅವರ ಒಂದು ಕೈಯಲ್ಲಿ ಕಾರ್ತಿಕ್ ಕೈ ಇರುತ್ತದೆ. ಮತ್ತೊಂದು ಕೈಯಲ್ಲಿ ಸಂಗೀತಾ ಶೃಂಗೇರಿ ಕೈ ಇರುತ್ತದೆ ಅನ್ನೋ ಮಾತು ಕೇಳಿ ಬರುತ್ತಿದೆ.

ಜನರ ಪ್ರೀತಿ ಸ್ವೀಕರಿಸಿ, ಹೊರಗೆ ಬಂದು ಪಾರ್ಟಿ ಮಾಡಿ!

ಬಿಗ್ ಬಾಸ್ ಮನೆಯಲ್ಲಿನ ಸ್ಟ್ರಾಂಗ್ ಕಂಟೆಸ್ಟೆಂಟ್‌ಗಳಲ್ಲಿ ಕಾರ್ತಿಕ್ ಮಹೇಶ್ ಕೂಡ ಒಬ್ಬರು. ವಿನಯ್ ಗೌಡಗೆ ಸಕತ್ ಆಗಿ ಪೈಪೋಟಿ ನೀಡಿದ್ದ ಸ್ಪರ್ಧಿ ಕಾರ್ತಿಕ್ ಮಹೇಶ್. ಅವರಿಗೆ ಹೊರಗಡೆಯೂ ಒಳ್ಳೆಯ ಹೆಸರಿದೆ. ಇದನ್ನೇ ವೇದಿಕೆ ಮೇಲೆ ಹೇಳುತ್ತಿದ್ದ ಕಿಚ್ಚ ಸುದೀಪ್ ಮಾತಿಗೆ ಕಾರ್ತಿಕ್ ಭಾವುಕರಾಗಿದ್ದಾರೆ. ನನ್ನ ಅಭಿನಯದ ಮೂಲಕವೇ ಎಲ್ಲರಿಗೂ ಉತ್ತರ ಕೊಡುತ್ತೇನೆ ಎಂದೂ ಕಾರ್ತಿಕ್ ಮಹೇಶ್ ಹೇಳಿದ್ದರು. ಈ ವೇಳೆ ಸುದೀಪ್ ಹೇಳಿದ ವಿಷಯ ಸಕತ್ ಕ್ರೇಜ್ ಸೃಷ್ಟಿಸಿದೆ.

BBK10 Grand Finale: Will Karthik Mahesh Became Bigg Boss Kannada Winner

"ಕಾರ್ತಿಕ್ ಅವರೇ ಅಳಬೇಡಿ, ಕೂಲ್ ಆಗಿಯೇ ಇದ್ದು ಬಿಡಿ. ಹೊರಗಡೆ ಬಂದ ಮೇಲೆ ಜನರು ನಿಮಗೆ ತೋರಿದ ಪ್ರೀತಿಯನ್ನ ಸ್ವೀಕರಿಸಿ, ಹಾಗೇನೆ ಎಂಜಾಯ್ ಮಾಡಿ, ಪಾರ್ಟಿ ಮಾಡಿ" ಎಂದು ಹೇಳಿದ್ದಾರೆ. ಈ ಮಾತು ಅವರ ಅಭಿಮಾನಿಗಳಿಗೆ ಕಾರ್ತಿಕ್ ಟ್ರೋಫಿ ಗೆಲ್ಲುತ್ತಾರೆ ಎಂಬ ಭರವಸೆ ಮೂಡಿಸಿದೆ. ಪ್ರೇಕ್ಷಕರು ಕೂಡ ಕಾರ್ತಿಕ್ ವಿನ್ ಆಗಬಹುದು ಎನ್ನುತ್ತಿದ್ದಾರೆ.

ಇನ್ನು, ಸಂಗೀತಾ ಶೃಂಗೇರಿ ಪರ ಹೆಚ್ಚಿನ ಒಲವು ವ್ಯಕ್ತವಾಗುತ್ತಿದ್ದು, ಅವರು ಕೂಡ ನಾನೇ ಗೆಲ್ಲುವುದು ಎನ್ನುತ್ತಿದ್ದಾರೆ. ಹಲವು ಪೋಲ್‌ಗಳು, ಸಮೀಕ್ಷೆಗಳ ವರದಿಗಳು ಕೂಡ ಸಂಗೀತಾ ಪರವಾಗಿವೆ. ಆದರೆ, ವೋಟಿಂಗ್‌ನಲ್ಲಿ ಯಾರು ಹೆಚ್ಚು ಮತ ಪಡೆದಿದ್ದಾರೆ ಎಂಬುದು ಭಾನುವಾರ ಸುದೀಪ್ ಬಹಿರಂಗ ಮಾಡಲಿದ್ದಾರೆ.

More from Filmibeat

English summary
Will Karthik Mahesh became bigg boss kannada winner.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X