BBK10: ಕೋಡ್ ವರ್ಡ್ ಮೇಲೆ ಎಲ್ಲರ ಕಣ್ಣು: ಪ್ರತಾಪ್‌ನ ಟಾರ್ಗೆಟ್ ಮಾಡಿದ್ರಾ ಈ ಐದು ಮಂದಿ..?
ಬಿಗ್ ಬಾಸ್ ಮನೆಯಲ್ಲಿ ಪ್ರತಾಪ್ ಪದೇ ಪದೇ ವಿನಯ್, ತುಕಾಲಿ ಸಂತೋಷ್, ನಮ್ರತಾ, ಇಶಾನಿ ಹಾಗೂ ರಕ್ಷಕ್ ಅವರ ಕೆಂಗಣ್ಣಿಗೆ ಗುರಿಯಾಗುತ್ತಲೇ ಇದ್ದಾರೆ. ಈ ಐವರು ಗುಂಪು ಕಟ್ಟಿಕೊಂಡು ಡ್ರೋನ್ ಪ್ರತಾಪ್ ಮೇಲೆ ಮುಗಿ ಬೀಳಲು ನೋಡುತ್ತಾ ಇರುತ್ತಾರೆ. ಪ್ರತಾಪ್, ವಿನಯ್‌ಗೆ ಆಟವನ್ನು ಬಿಟ್ಟು ಕೊಟ್ಟ ವಿಚಾರದ ಬಗ್ಗೆಯೂ ಸಹ ಚರ್ಚೆ ನಡೆಸಿದ್ದಾರೆ.
ಪ್ರತಾಪ್ ವಿಚಾರವನ್ನು ತುಕಾಲಿ ವಿನಯ್ ಮುಂದೆ ಹೇಳಿದ್ದಾರೆ. ಅಷ್ಟು ದಿನ ಮಾತನಾಡದೇ ಇದ್ದವನು ಮೂರನೇ ವಾರಕ್ಕೆ ಬಂದಾಗ ಸಾಕಷ್ಟು ಮಾತನಾಡಲು ಕಲಿತಿದ್ದಾನೆ ಎಂದು ತುಕಾಲಿ ಸಂತೋಷ್, ವಿನಯ್ ಬಳಿ ಹೇಳಿದ್ದಾರೆ. ಈಗ ಡ್ರೋನ್ ಪ್ರತಾಪ್ ಮನೆಯಲ್ಲಿ ಅಸಲಿ ಆಟವನ್ನು ಶುರು ಮಾಡಿದ್ದಾರೆ, ಸುದೀಪ್ ಅವರ ಮಾತುಗಳೇ ನನಗೆ ಪ್ರೇರಣೆ ಎಂದು ಹೇಳುವ ಮೂಲಕ ನಾನು ಕೂಡ ಸ್ಟ್ರಾಂಗ್ ಕಂಟೆಸ್ಟೆಂಟ್ ಎಂಬುದನ್ನ ಸಾಬೀತು ಪಡಿಸಲು ನಿಂತಿದ್ದಾರೆ.

ಬಿಗ್ ಬಾಸ್ ಮನೆಯಲ್ಲಿರುವ ವಿನಯ್ ಆಂಡ್ ಗ್ಯಾಂಗ್ ಪ್ರತಾಪ್‌ರನ್ನು ತುಳಿಯುವ ಮಟ್ಟಕ್ಕೆ ಇಳಿದಿದೆ. ಪ್ರತಾಪ್ ನಿಂತರು ಅಷ್ಟೇ ಕೂತರು ಅಷ್ಟೇ ಪ್ರತಾಪ್ ತನ್ನ ಪಾಡಿಗೆ ತಾನು ಏನೇ ಮಾಡುತ್ತಿದ್ದರು ಇವರ ಕಣ್ಣಿಗೆ ಬಿದ್ದರೆ ಮುಗಿಯಿತು, ಅಲ್ಲಿ ಪ್ರತಾಪ್ ಬಗ್ಗೆ ಮಾತನಾಡುತ್ತಾರೆ. ಪ್ರತಾಪ್‌ನ ಹೀಯಾಳಿಸೋದು ಬಿಡೋದಿಲ್ಲ. ಪ್ರತಾಪ್ ತನ್ನ ಪಾಡಿಗೆ ಇದ್ದರೂ ಟಾರ್ಗೆಟ್ ಆಗುತ್ತಿದ್ದಾರೆ.
ಪ್ರತಾಪ್ ಬರೆಯುತ್ತಿರುವ ಕೋಡ್ ವರ್ಡ್ ಬಗ್ಗೆ ಮನೆಯಲ್ಲಿ ಚರ್ಚೆ ನಡೆಯುತ್ತಿದೆ. ಎಲ್ಲರೂ ಮಲಗಿದ ಮೇಲೆ ಪ್ರತಾಪ್ ಒಬ್ಬರೇ ಕುಳಿತು ಏನೋ ಕೋರ್ಡ್ ವರ್ಡ್ ಬರೆಯುತ್ತಾ ಇದ್ದಾರೆ. ಈ ಬಗ್ಗೆ ನಮ್ರತಾ, ವಿನಯ್ ಬಳಿ ಬಂದು ಅವನು ಏನು ಬರೆಯುತ್ತಿದ್ದಾನೆ. ಸಿಂಗಲ್ ಇಂಟಿಗ್ರೇಷನ್, ಡಬಲ್ ಇಂಟಿಗ್ರೇಷನ್ ಬಗ್ಗೆ ಗೊತ್ತಾ? ಎಂದು ಕೇಳಿದ್ದಾರೆ. ಏನು ಎಂದು ತಿಳಿಯುತ್ತಾ ಇಲ್ಲ, ಎಂದು ಹೇಳುವ ಮೂಲಕ ಪ್ರತಾಪ್ ಏನು ಮಾಡುತ್ತಿದ್ದಾನೆ ಎಂಬುದನ್ನ ತಿಳಿದುಕೊಳ್ಳಲು ಪ್ರಯತ್ನಿಸಿದ್ದಾರೆ. ಇಲ್ಲೂ ಸಹ ವಿನಯ್ ಅವನೇನು ಸಂಶೋಧನೆ ಮಾಡುತ್ತಿದ್ದಾನಾ? ಇಲ್ಲಿ ಡ್ರೋನ್ ಹಾರಿಸಲು ಸಾಧ್ಯವಾ? ಎಂದು ಕೀಟಲೆ ಮಾಡುವ ಮೂಲಕ ಡ್ರೋನ್ ಪ್ರತಾಪ್‌ನ ಆಡಿಕೊಂಡಿದ್ದಾರೆ.

ಕೋಡ್ ವರ್ಡ್ ಮೇಲೆ ಎಲ್ಲರ ಕಣ್ಣು
ಡ್ರೋಣ್ ಪ್ರತಾಪ್ ಏನೋ ಕೋಡ್ ವರ್ಡ್ ಬರೆಯುತ್ತಾ ತಮ್ಮ ಪಾಡಿಗೆ ತಾವಿದ್ದರೂ ಸಹ ತುಕಾಲಿ ಸಂತೋಷ್, ನಮ್ರತಾ, ರಕ್ಷಕ್, ವಿನಯ್, ಇಶಾನಿ, ಆತನ ಬಗ್ಗೆ ಮಾತನಾಡುತ್ತಾ ಇದ್ದಾರೆ. ಅವನು ಏನೋ ಕೋಡ್ ವರ್ಡ್ ಬರೆಯುತ್ತಾ ಇದ್ದಾನೆ ಎಂದು ನಮ್ರತಾ ಹೇಳಿದಾಗ ತುಕಾಲಿ ಸಂತೋಷ್ ಅವನೇನು ನ್ಯೂಕ್ಲಿಯರ್ ಬಗ್ಗೆ ಕಂಡು ಹಿಡಿಯೋಕೆ ಸಾಧ್ಯನಾ> ಅವನು ಇಲ್ಲಿ ಏನು ಸಂಶೋಧನೆ ಮಾಡಲು ಸಾಧ್ಯ ಎಂದು ಹೀಯಾಳಿಸಿದ್ದಾರೆ.
ಪ್ರತಾಪ್‌ರನ್ನು ಟಾರ್ಗೆಟ್ ಮಾಡಿದ್ರಾ..?
ಪ್ರತಿ ಶನಿವಾರ ಮತ್ತು ಭಾನುವಾರ ಅವನು ಡ್ರೋನ್ ಹಾರಿಸುವುದೇ ಆಯಿತು ಎಂದು ತಮಾಷೆ ಮಾಡಿದ್ದಾರೆ. ಇದರ ಜೊತೆಗೆ ಪ್ರತಾಪ್ ಮೇಲೆ ಎಷ್ಟು ದ್ವೇಷವಿದೆ ಎಂಬುವುದು ಗೊತ್ತಾಗುವಂತೆ ತಾವೇ ಮಾತನಾಡುತ್ತಿದ್ದಾರೆ. ನಾನು ಟಾಸ್ಕ್ ಆಡದೇ ಬಿಟ್ಟುಕೊಟ್ಟ ವಿಚಾರದ ಬಗ್ಗೆಯೂ ನನ್ನ ಬಳಿಯೇ ಬಂದು ಕೇಳಿದಾಗ ನನಗೆ ಉರಿದು ಹೋಯಿತು ಎಂದು ತುಕಾಲಿ ಸಂತೋಷ್, ವಿನಯ್ ಬಳಿಯಲ್ಲಿ ಹೇಳಿಕೊಳ್ಳುತ್ತಾ ಇದ್ದಾರೆ. ನಮ್ರತಾ ಹಾಗೂ ಇಶಾನಿ ಎಲ್ಲರ ಮಾತಿಗೆ ಕಿವಿಯಾಗಿದ್ದಾರೆ.
ಪ್ರತಾಪ್‌ದೇನು ಕಂಟೆಂಟೇ ಇಲ್ವಂತೆ..?
ನಮ್ರತಾ, ಇಶಾನಿ, ರಕ್ಷಕ್, ವಿನಯ್, ತುಕಾಲಿ ಸಂತೋಷ್ ಇವರು ಸಹ ಮಾತನಾಡುತ್ತಾ ಇದ್ದಾಗ ತುಕಾಲಿ ಸಂತೋಷ್, ಪ್ರತಾಪ್‌ನದ್ದು ಇಲ್ಲಿ ಕಂಟೆಂಟ್ ಇಲ್ಲ. ನಾನು ಮಾತನಾಡಿದರೆ ಸಾಕು ಎಂದು ಕಾಯುತ್ತಾ ಇರುತ್ತಾನೆ ಎಂದಿದ್ದಾರೆ. ನಾನು ನಿಮಗೆ ಕೊಟ್ಟಿದ್ದಕ್ಕೆ ಅವನು ನನ್ನನ್ನ ಬಂದು ಕೇಳಿದ್ದಕ್ಕೆ ಉರಿದು ಹೋಯಿತು ಎಂದು ಹೇಳುವ ಮೂಲಕ ಬಿಗ್ ಬಾಸ್ ಮನೆಯಲ್ಲಿ ಗಾಸಿಪ್ ಮಾಡಿಕೊಳ್ಳುತ್ತಾ ಕುಳಿತುಕೊಂಡಿದ್ದಾರೆ.


Click it and Unblock the Notifications











