BBK10: ಇಬ್ಭಾಗವಾದ ಮನೆ.. ಕಿತ್ತಾಟ.. ಕೂಗಾಟ: ರಕ್ಷಕ್ ಮೇಲೆ ಕಾರ್ತಿಕ್ ಹಾರಾಟ

ಬಿಗ್‌ಬಾಸ್ ಮನೆಯಲ್ಲಿ ನಿಧಾನವಾಗಿ ಗ್ರೂಪಿಸಂ ಶುರುವಾಗುತ್ತಿದೆ. ಕೆಲವರನ್ನು ಮೂಲೆಗುಂಪು ಮಾಡುವ ಪ್ರಯತ್ನಗಳು ನಡೀತಿದೆ. ಕೆಲವರು ಸುಖಾ ಸುಮ್ಮನೆ ಕಿರುಚಾಡಲು ಆರಂಭಿಸಿದ್ದಾರೆ. ಮಾತಿನ ಚಕಮಕಿನ ತಾರಕಕ್ಕೇರಿದೆ. ಮನೆಯೊಂದು ಮೂರು ಭಾಗವಾಗಿದೆ.

ಬಿಗ್‌ಬಾಸ್ ಕನ್ನಡ ಸೀಸನ್ -10 ಮೊದಲ ವಾರ ಯಶಸ್ವಿಯಾಗಿ ಪೂರೈಸಿದ ಬಳಿಕ 2ನೇ ವಾರ ಆಟ ಕುತೂಹಲದ ಘಟ್ಟ ತಲುಪಿದೆ. ಬಹಳ ಕಷ್ಟದ ಟಾಸ್ಕ್‌ಗಳು ಸ್ಪರ್ಧಿಗಳಿಗೆ ಎದುರಾಗುತ್ತಿದೆ. ಈ ಹಾದಿಯಲ್ಲಿ ಕಿರುಚಾಟ, ಕಿತ್ತಾಟ ಹೆಚ್ಚಾಗುತ್ತಿದೆ. ಮನೆಯಲ್ಲಿನ ಸದಸ್ಯರನ್ನು 2 ತಂಡಗಳಾಗಿ ಮಾಡಿ ಟಾಸ್ಕ್‌ ನೀಡಲಾಗಿದೆ. ಈ ಟಾಸ್ಕ್ ವೇಳೆ ವಿನಯ್, ಪ್ರತಾಪ್, ರಕ್ಷಕ್, ಕಾರ್ತಿಕ್ ಬಹಳ ಜೋರಾಗಿದೆ ಜಗಳವಾಡಿದ್ದಾರೆ. ಅದರ ಪ್ರೋಮೊ ರಿಲೀಸ್ ಆಗಿದೆ.

BBK10-karthik-mahesh-rakshak-bullet-fight

2ನೇ ವಾರದಲ್ಲಿ 2 ತಂಡಗಳಾಗಿ ಸ್ಪರ್ಧಿಗಳ ಆಟ ಆಡಲು ಆರಂಭಿಸಿದ್ದಾರೆ. ಒಂದು ತಂಡವನ್ನು ವಿನಯ್ ಗೌಡ ಮುನ್ನಡೆಸಿದರೆ ಮತ್ತೊಂದು ತಂಡದ ನಾಯಕತ್ವವನ್ನು ಕಾರ್ತಿಕ್ ವಹಿಸಿಕೊಂಡಂತೆ ಕಾಣುತ್ತಿದೆ. ಸಗಣಿ ನೀರನ್ನು ಮೈಮೇಲೆ ಸುರಿದುಕೊಳ್ಳು ಟಾಸ್ಕ್‌ ಬಿಗ್‌ ಬಾಸ್ ಕೊಟ್ಟಿದ್ದು ಸೋತವರಿಗೆ ಶಿಕ್ಷೆಯೂ ಸಿಕ್ಕಿದೆ. ಆ ಬಳಿಕ ಆಟದ ಬಗ್ಗೆ ಸ್ಪರ್ಧಿಗಳ ನಡುವೆ ಜಗಳ ನಡೆದಿದೆ. ಕನ್ನಿಂಗ್ ಗೇಮ್ ಬೇಡ ಎಂದು ಡ್ರೋನ್ ಪ್ರತಾಪ್‌ಗೆ ವಿನಯ್ ಎಚ್ಚರಿಕೆ ಕೊಟ್ಟಿದ್ದಾರೆ.

ಇಡೀ ತಂಡದ ಬಗ್ಗೆ ಡ್ರೋನ್ ಪ್ರತಾಪ್ ಮಾತನಾಡಿದ್ದು ಸಂತೋಷ್ ವರ್ತೂರು ಗರಂ ಆಗಿದ್ದಾರೆ. ಬಳಿಕ ಟಾಸ್ಕ್ ರೂಲ್ಸ್ ಬಗ್ಗೆ ಮಾತನಾಡಲು ರಕ್ಷಕ್ ಬುಲೆಟ್ ಮುಂದಾಗಿದ್ದಾರೆ. ಆಗ ಕಾರ್ತಿಕ್ ಕೆಂಡಾಮಂಡಲವಾಗಿದ್ದಾರೆ. "ರೂಲ್ಸ್ ಹೇಳುವ ರೀತಿ ಇರುತ್ತದೆ. ಕೂತ್ಕೊಂಡು ಮಾತಾಡು. ಜೋರಾಗಿ ಮಾತನಾಡಬೇಕು ಅಂದ್ರೆ ನನಗೂ ಮಾತನಾಡಲು ಬರುತ್ತೆ. ಅದ್ಯಾವನಾದ್ರೂ ಆಗಲಿ" ಎಂದು ಕಿರುಚಾಡಿದ್ದಾರೆ. ಪ್ರೋಮೊ ನೋಡಿದವರು ಕಾರ್ತಿಕ್ ಸುಖಾ ಸುಮ್ಮನೆ ಕೂಗಾಡುತ್ತಿದ್ದಾರೆ ಇದೆಲ್ಲಾ ಅತಿಯಾಯಿತು ಎನ್ನುತ್ತಿದ್ದಾರೆ.

ಇದಕ್ಕೂ ಸಂಗೀತಾ ಹಾಗೂ ಕಾರ್ತಿಕ್ ಸ್ನೇಹದ ಬಗ್ಗೆ ಪ್ರೋಮೊ ಬಂದಿತ್ತು. ಟಾಸ್ಕ್‌ನಲ್ಲಿ ಸೋತು ಗಾಯ ಮಾಡಿಕೊಂಡ ಕಾರ್ತಿಕ್‌ಗೆ ಸಂಗೀತಾ ಔಷಧಿ ಹಚ್ಚಿ ಸಮಾಧಾನ ಮಾಡಿದ್ದನ್ನು ಅದರಲ್ಲಿ ನೋಡಬಹುದು. ಒಟ್ನಲ್ಲಿ ಬಿಗ್‌ಬಾಸ್ ಮನೆಯಲ್ಲಿ ಬಿಸಿ ಏರುತ್ತಾ ಇದೆ. ಇನ್ನು ಡ್ರೋನ್ ಪ್ರತಾಪ್ ನಿಧಾನವಾಗಿ ಮಾತನಾಡಲು ಆರಂಭಿಸಿದ್ದು ಶೋ ಕುತೂಹಲ ಮೂಡಿಸುತ್ತಿದೆ.

ಅಕ್ಟೋಬರ್ 8ರಂದು ಬಿಗ್‌ಬಾಸ್ ಕನ್ನಡ ಸೀಸನ್ 10 ಆರಂಭವಾಗಿತ್ತು. ಗ್ರ್ಯಾಂಡ್‌ ಪ್ರೀಮಿಯರ್‌ ಶೋನದಲ್ಲಿ ಕಿಚ್ಚ ಸುದೀಪ್ 17 ಸ್ಪರ್ಧಿಗಳನ್ನು ದೊಡ್ಮನೆ ಒಳಗೆ ಕಳುಹಿಸಿದ್ದರು. ಇಬ್ಬರು ಮಾತ್ರ ಮನೆಯೊಳಗೆ ಹೋಗಲು ಅರ್ಹತೆ ಪಡೆಯದೇ ಹೊರಬಂದಿದ್ದರು. ಇನ್ನು ಮೊದಲ ವಾರ ಸ್ನೇಕ್ ಶ್ಯಾಮ್ ಎಲಿಮಿನೇಟ್ ಆಗಿ ಬಿಗ್‌ಬಾಸ್ ಮನೆ ಆಟ ಮುಗಿಸಿ ವಾಪಸ್ ಬಂದಿದ್ದಾರೆ.

ನಿಧಾನವಾಗಿ ಡ್ರೋನ್ ಪ್ರತಾಪ್ ವೀಕ್ಷಕರ ಮನಗೆಲ್ಲುತ್ತಿದ್ದಾರೆ. ಸೂಪರ್ ಸಂಡೇ ಶೋನಲ್ಲಿ ಪ್ರತಾಪ್ ಡ್ಯಾನ್ಸ್ ಸಿಕ್ಕಾಪಟ್ಟೆ ವೈರಲ್ ಆಗಿತ್ತು. ಇನ್ನು ಕಾರ್ತಿಕ್, ಸಂಗೀತಾ ಹಾಗೂ ಪ್ರತಾಪ್ ಸದ್ಯಕ್ಕೆ ವೀಕ್ಷಕರ ನೆಚ್ಚಿನ ಸ್ಪರ್ಧಿಗಳಾಗಿ ಗುರ್ತಿಸಿಕೊಳ್ಳುತ್ತಿದ್ದಾರೆ. ಇನ್ನು ಸಂಗೀತಾ ಹಾಗೂ ಕಾರ್ತಿಕ್ ಅವರದ್ದು ಬರೀ ಸ್ನೇಹನಾ? ಅಥವಾ ಪ್ರೀತಿನಾ? ಎಂದು ಕೂಡ ಕೆಲವರು ಕೇಳುತ್ತಿದ್ದಾರೆ. ಒಂದೇ ವಾರ ಹಿಂಗಿದ್ರೆ 100 ದಿನ ಒಳಗೆ ಇದ್ದರೆ ಹೆಂಗೆ? ಅಂತೆಲ್ಲಾ ಕಾಮೆಂಟ್ ಮಾಡುತ್ತಿದ್ದಾರೆ. ಇನ್ನು ಈ ಕಿತ್ತಾಟ, ಗಲಾಟೆ ಎಲ್ಲಾ ನೋಡುತ್ತಿರುವ ವೀಕ್ಷಕರು ವೀಕೆಂಡ್‌ನಲ್ಲಿ ಕಿಚ್ಚ ಸುದೀಪ್ ಇದ್ದಕ್ಕೆಲ್ಲಾ ಯಾವ ರೀತಿ ಪ್ರತಿಕ್ರಿಯಿಸುತ್ತಾರೆ ಅನ್ನೋದನ್ನು ನೊಡೋಕೆ ಉತ್ಸುಕರಾಗಿದ್ದಾರೆ.

More from Filmibeat

English summary
BBK10: Karthik mahesh and Rakshak Bullet Get Into Massive Fight
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X