BBK10: ಎದ್ದ ಕೂಡಲೇ ನಾಮಿನೇಷನ್ ಶಾಕ್: ಸಂತು-ಸಂಗೀತಾ ಹಾಗೂ ಸ್ನೇಹಿತ್-ಕಾರ್ತಿಕ್ ಮಧ್ಯೆ ಕಿರಿಕ್
ಬಿಗ್‌ಬಾಸ್ ಕನ್ನಡ ಸೀಸನ್-10ರ ಮೊದಲ ವಾರ ಯಶಸ್ವಿಯಾಗಿ ಮುಕ್ತಾಯವಾಗಿದ್ದು ಎರಡನೇ ವಾರಕ್ಕೆ ಕಾಲಿಟ್ಟಿದೆ. ಮೊದಲ ಸ್ನೇಕ್ ಶ್ಯಾಮ್ ನಾಮಿನೇಷನ್ ಆಗಿ ಬಿಗ್‌ಬಾಸ್ ಮನೆಯಿಂದ ಹೊರ ಬಂದಿದ್ದಾರೆ. ಇದೀಗ ಮನೆಯಲ್ಲಿ 16 ಜನ ಸ್ಪರ್ಧಿಗಳು ಮಾತ್ರ ಉಳಿದುಕೊಂಡಿದ್ದಾರೆ.
ನಿಜಕ್ಕೂ ಮೊದಲ ವಾರ ಬಿಗ್‌ಬಾಸ್ ಶೋ ಹಿಟ್ ಎನಿಸಿಕೊಂಡಿದೆ. ವೀಕ್ಷಕರ ಊಹೆಯನ್ನು ಮೀರಿ ಹಲವರು ಬಿಗ್‌ಬಾಸ್ ಮನೆ ಪ್ರವೇಶಿಸಿದರು. ಅಲ್ಲೇ ಶೋ ಅರ್ಧ ಗೆದ್ದಂತಾಗಿತ್ತು. ಮೊದಲ ದಿನ ಶೋ ಹೇಗಿರುತ್ತೋ ಏನೋ ಎಂದುಕೊಳ್ಳುವ ವೇಳೆಗೆ ಶಾಸಕರಾದ ಪ್ರದೀಪ್ ಈಶ್ವರ್ ಹಾಗೂ ಪ್ರಥಮ್ ಬಿಗ್‌ಬಾಸ್ ಮನೆ ಪ್ರವೇಶಿಸಿ ಸರ್‌ಪ್ರೈಸ್ ನೀಡಿದ್ದರು. ಅಲ್ಲಿಂದಲೇ ಶೋ ಕಳೆ ಕಟ್ಟಿತ್ತು.

ವೀಕೆಂಡ್ ಪಂಚಾಯ್ತಿಯಲ್ಲಿ ಸುದೀಪ್ ತಪ್ಪು ಮಾಡಿದವರ ಕಿವಿ ಹಿಂಡಿ ಮತ್ತಷ್ಟು ಖದರ್ ತಂದರು. ಇನ್ನು ಮೊದಲ ವಾರ ಎಲಿಮಿನೇಷನ್ ಇರತ್ತೋ ಇಲ್ವೋ ಎನ್ನುವ ಅನುಮಾನ ಇತ್ತು. ಆದರೆ ಸ್ನೇಕ್ ಶ್ಯಾಮ್ ಒಂದೇ ವಾರಕ್ಕೆ ದೊಡ್ಮನೆ ಆಟ ಮುಗಿಸಿ ಹೊರ ಬಂದರು. ಅಲ್ಲಿಗೆ ವೀಕ್ಷಕರನ್ನು ಊಹೆಯನ್ನು ಮೀರಿ ಶೋ ಮೂಡಿ ಬರುತ್ತಿರುವುದು ಗೊತ್ತಾಗುತ್ತಿದೆ. ಇನ್ನು ಮನೆಯೊಳಗೆ ಅಸಲಿ ಆಟ ಶುರುವಾಗಿ ವೀಕ್ಷಕರ ಗಮನ ಸೆಳೆಯುತ್ತಿದೆ.
'ಸೂಪರ್ ಸಂಡೇ ವಿತ್ ಕಿಚ್ಚನ ಜೊತೆ' ಮುಗಿದ ಬಳಿಕ 2ನೇ ವಾರ ಶುರುವಾಗಿದೆ. ಸೋಮವಾರ ಸ್ಪರ್ಧಿಗಳು ಏಳುತ್ತಿದ್ದಂತೆ ನಾಮಿನೇಷನ್ ಶಾಕ್ ಎದುರಾಗಿದೆ. ಬೆಳ್ಳಂಬೆಳಗ್ಗೆ ಬಿಗ್‌ಬಾಸ್ ಧ್ವನಿ ಮನೆ ಮಂದಿಯನ್ನು ಎಬ್ಬಿಸಿದೆ. ಎದ್ದ ಕೂಡಲೇ ಎಲ್ಲರೂ ಕುಳಿತಲ್ಲೇ ಈ ಮನೆಯಲ್ಲಿ ಇರಲು ಅರ್ಹರಲ್ಲದವರ ಹೆಸರಗಳನ್ನು ಸೂಚಿಸುವಂತೆ ಹೇಳಲಾಗಿದೆ. ಇದು ನಿಜಕ್ಕೂ ಎಲ್ಲರಿಗೂ ಶಾಕ್ ತಂದಿತ್ತು.
ಮೊದಲ ವಾರ ಓಪನ್ ನಾಮಿನೇಷನ್ ಇತ್ತು. ಎರಡನೇ ವಾರವೂ ಇದೇ ಮುಂದುವರೆದಿದೆ. ಸ್ಪರ್ಧಿಗಳು ಎಲ್ಲರೆದುರೇ ಯಾರನ್ನು ಮನೆಯಿಂದ ಹೊರಗೆ ಕಳುಹಿಸಲು ಇಚ್ಚಿಸುತ್ತಿದ್ದಾರೆ ಅನ್ನೋದನ್ನು ಹೇಳಿ, ಅದಕ್ಕೆ ಕಾರಣ ಕೊಟ್ಟಿದ್ದಾರೆ. ಇದು ಸಹಜವಾಗಿಯೇ ಮನೆಮಂದಿಯ ಮಧ್ಯೆ ಕಿರಿಕ್‌ಗೆ ಕಾರಣವಾಗಿದೆ. ಕೆಲವರು ನಾಮಿನೇಷನ್ ಒಪ್ಪಿಕೊಳ್ಳಲು ಸಿದ್ಧರಿಲ್ಲದೇ ವಾಗ್ವಾದ ನಡೆಸಿದ್ದಾರೆ.
ತುಕಾಲಿ ಸಂತು ಹೆಸರನ್ನು ಸಂಗೀತಾ ಶೃಂಗೇರಿ ಹೇಳಿದ್ದಾರೆ. ಅವರ ಮಾತುಗಳಿಂದ ಬೇಸರವಾಗಿದೆ ಎಂದಿದ್ದಾರೆ. ಅದೇ ರೀತಿ ಸಂತೀತಾ ಹೆಸರನ್ನು ತುಕಾಲಿ ತಗೊಂಡಿದ್ದು ಇಬ್ಬರ ನಡುವೆ ಬೆಂಕಿ ಹಚ್ಚಿದೆ. ನಾನು ಇವತ್ತು ನಾಮಿನೇಟ್ ಮಾಡಿದೆ ಎನ್ನುವ ಕಾರಣಕ್ಕೆ ನನ್ನನ್ನು ನಾಮಿನೇಟ್ ಮಾಡ್ದಾ ಎಂದು ಕ್ಯಾತೆ ತೆಗೆದಿದ್ದಾರೆ. ಇದು ಕಿರಿಕ್‌ಗೆ ಕಾರಣವಾಗಿದೆ.

ಮತ್ತೊಂದು ಕಡೆ ಕಾರ್ತಿಕ್ ಹೆಸರನ್ನು ಸ್ನೇಹಿತ್ ಸೂಚಿಸಿದ್ದಾರೆ. ಟಮೋಟೊ ಕಟ್ ಮಾಡಿದ ವಿಚಾರವನ್ನು ಕಾರಣವಾಗಿ ನೀಡಿದ್ದು ಕಾರ್ತಿಕ್ ಕೆರಳುವಂತೆ ಮಾಡಿದೆ. ನೀನು ಕ್ಯಾಪ್ಟನ್ ಆಗಿ ಇರೋದಕ್ಕೆ ಅರ್ಹನಲ್ಲ ಎಂದು ಕಾರ್ತಿಕ್ ಕೂಗಾಡಿದ್ಧಾರೆ. ಒಟ್ನಲ್ಲಿ ಪ್ರೊಮೊನೇ ಸಖತ್ ಮಜವಾಗಿದ್ದು ಹೊಸ ಎಪಿಸೋಡ್ ಬಗ್ಗೆ ಕುತೂಹಲ ಕೆರಳುವಂತೆ ಮಾಡಿದೆ.
ಸೂಪರ್ ಸಂಡೇ ಶೋ ಸಖತ್ ಮಜವಾಗಿತ್ತು. ಅದರಲ್ಲೂ ಸಂಗೀತಾ ಹಾಗೂ ತನಿಷಾ ಜೊತೆ ಡ್ರೋನ್ ಪ್ರತಾಪ್ ರ್ಯಾಂಪ್ ವಾಕ್ ಮಾಡಿ ಡ್ಯಾನ್ಸ್ ಮಾಡಿದ್ದು ಹೈಲೆಟ್ ಎನಿಸಿಕೊಂಡಿತ್ತು. ಪ್ರತಾಪ್ ಓಪನ್ ಅಪ್ ಆಗಿಲ್ಲ ಎನ್ನುತ್ತಿದ್ದಿರಲ್ಲ ಸಂತು, ಓಪನ್ ಅಪ್ ಮಾಡೋದು ಅಂದ್ರೆ ಹಿಂದೆ ಎಂದು ಕಿಚ್ಚ ಟಾಂಗ್ ಕೊಟ್ಟರು. ಡ್ರೋನ್ ಪ್ರತಾಪ್ ಡ್ಯಾನ್ಸ್ ನೋಡಿ ಮನೆಮಂದಿ ಕೂಡ ಶಾಕ್ ಆಗಿದ್ದರು.
ಇನ್ನು Yes or No ಬದಲು ಈ ಬಾರಿ ವಿಲನ್, ಹೀರೋ, ಖಾಲಿ ಡಬ್ಬ ಎನ್ನುವ ಕಾನ್ಸೆಪ್ಟ್ ಶುರುವಾಗಿದೆ. ಈ ಬಗ್ಗೆಯೂ ಮೆಚ್ಚುಗೆ ವ್ಯಕ್ತವಾಗುತ್ತಿದೆ. ಇದು ಕೂಡ ನೋಡಗರಿಗೆ ಮಜಾ ಕೊಟ್ಟಿತ್ತು. ಜೊತೆಗೆ ಸ್ಪರ್ಧಿಗಳ ನಡುವಿನ ಆಟದ ಸ್ಪಿರಿಟ್ ಹೆಚ್ಚಿಸಿದೆ.


Click it and Unblock the Notifications











