BBK10: "ಕರ್ನಾಟಕ ಕ್ರಶ್ ಅಂತೆ ಕನ್ನಡಿಲಿ ಮುಖ ನೋಡ್ಕೊ.. ಕ್ರ್ಯಾಶ್ ಆದವಳ ಜೊತೆ ಓಡಾಡ್ತಿದ್ದೀಯಾ": ಸ್ನೇಹಿತ್

ಬಿಗ್‌ಬಾಸ್ ಶೋ ದಿನದಿಂದ ದಿನಕ್ಕೆ ಹೆಚ್ಚು ಕುತೂಹಲ ಮೂಡಿಸುತ್ತಿದೆ. ಮೊದಲೇ ಹೇಳಿದಂತೆ ಇದು ಸಂಥಿಂಗ್ ಸ್ಪೆಷಲ್ ಸೀಸನ್ ಎನ್ನುವಂತೆ ಟಾಸ್ಕ್‌ಗಳನ್ನು ಕೊಡಲಾಗುತ್ತಿದೆ. 28ನೇ ದಿನದ ಟಾಸ್ಕ್‌ ಪ್ರೋಮೊ ರಿಲೀಸ್ ಆಗಿ ಸಖತ್ ಸದ್ದು ಮಾಡ್ತಿದೆ.

ದೊಡ್ಮನೆ ಆಟ ನಾಲ್ಕು ವಾರ ಪೂರೈಸಿ 5ನೇ ವಾರಕ್ಕೆ ಕಾಲಿಟ್ಟಿದೆ. ಈಗಾಗಲೇ ಮೂವರು ಮನೆಯಿಂದ ಹೊರ ಬಂದಿದ್ದಾರೆ. ಕಳೆದ ವಾರವಿಡೀ ಬಳೆ ವಿಚಾರ ದೊಡ್ಡದಾಗಿ ಸದ್ದು ಮಾಡಿತ್ತು. ವೀಕೆಂಡ್ ಪಂಚಾಯ್ತಿಯಲ್ಲಿ ನಟ ಕಿಚ್ಚ ಸುದೀಪ್ ಅದಕ್ಕೆ ಒಳ್ಳೆ ರೀತಿಯಲ್ಲಿ ಅಂತ್ಯ ಹಾಡಿದ್ದರು. ವಿನಯ್ ಗೌಡ ಕ್ಷಮೆ ಕೇಳಿದ್ದರು. ಕಿಚ್ಚನ ಮಾತುಗಳಿಗೆ ವೀಕ್ಷಕರು ಜೈಕಾರ ಹಾಕಿದ್ದರು.

BBK10 Promo; Snehith, Vinay, Namratha Triggers Karthik and Sangeeta part of task

ಸದ್ಯ ಮನೆ ಮಂದಿಗೆ ಬಿಗ್‌ಬಾಸ್ ಹೊಸ ಟಾಸ್ಕ್ ಕೊಟ್ಟಿದ್ದಾರೆ. ಎದುರಾಳಿಗಳನ್ನು ಹೇಗೆಲ್ಲಾ ನಿಂದಿಸಲು ಸಾಧ್ಯ? ಯಾರ ಬಗ್ಗೆ ಯಾರ ಮನಸ್ಸಿನಲ್ಲಿ ನಿಜವಾಗಿಯೂ ಏನಿದೆ? ಹೇಗೆಲ್ಲಾ ಕೆಣಕಲು ಸಾಧ್ಯ? ಎನ್ನುವುದು ಟಾಸ್ಕ್. ಅದರಲ್ಲೂ ಮುಖ್ಯವಾಗಿ ಕಾರ್ತಿಕ್ ಹಾಗೂ ಸಂಗೀತಾ ಬಗ್ಗೆ ಮನೆ ಮಂದಿನ ಅನಿಸಿಕೆ ಏನು? ಎನ್ನುವುದನ್ನು ಕೇಳಿದಂತಿದೆ. ಕಾರ್ತಿಕ್ ಮತ್ತು ಸಂಗೀತಾ ಏನೂ ಮಾತನಾಡದೇ ಸುಮ್ಮನೆ ಕುಳಿತುಕೊಳ್ಳಲು ಹೇಳಿದ್ದು ಇನ್ನುಳಿದವರು ಬಂದು ಅವರಿಬ್ಬರನ್ನು ಹಿಯ್ಯಾಳಿಸಿ ಮಾತನಾಡಿರುವುದನ್ನು ಪ್ರೋಮೊದಲ್ಲಿ ನೋಡಬಹುದು.

ಕಾರ್ತಿಕ್ ಬಗ್ಗೆ ವಿನಯ್ ಗೌಡ "ಫ್ರೆಂಡು ನೀನು. ಒಂಟಿ ಮನುಷ್ಯ ಆಗಿಯೇ ಜೀವನದಲ್ಲಿ ಉಳಿಯುವುದು ನೀನು" ಎಂದಿದ್ದಾರೆ. ಸಂಗೀತಾನ ನೋಡಿ ನಮ್ರತಾ ಗೌಡ "ಯಾವಳು ಬಕೆಟ್ ಹಿಡಿಯುವುದು? ಅಲ್ಲಿ ಕೂತಿದ್ದಾನಲ್ಲ ಅವನು ಬಕೆಟ್ ಹಿಡಿಯುವುದು" ಎಂದು ಕಿರುಚಾಡಿದ್ದಾರೆ.

BBK10 Promo; Snehith, Vinay, Namratha Triggers Karthik and Sangeeta part of task

ಕಾರ್ತಿಕ್ ನೋಡಿ ಸ್ನೇಹಿತ್ ರೊಚ್ಚಿಗೆದ್ದಿದ್ದಾರೆ. "ಏನೋ ಗಂಡಸ್ತನ ನಿಂದು. ಏನು ಮಾಡಿದ್ದೀಯಾ ನೀನು ಮನೆಗೆ ಬಂದು. ಮನೆಗೋಗಿ ಸ್ಲೋ ಮೋಷನ್‌ನಲ್ಲಿ ನೀನು ಹೊರಗಾಕ್ಕಿದ್ದು ನೋಡೊ. ಅವಾಗ ಗೊತ್ತಾಗುತ್ತೆ ಯಾರು ಅಂತ" ಎಂದಿದ್ದಾರೆ. ಇದಕ್ಕೆ ವಿನಯ್ ಸೇರಿದಂತೆ ಕೆಲವರು ಚಪ್ಪಾಳೆ ತಟ್ಟಿ ಹುರಿದುಂಬಿಸಿದ್ದಾರೆ.

ಇನ್ನು ಸಂಗೀತಾ ಬಗ್ಗೆ ಸ್ನೇಹಿತ್ "ಕರ್ನಾಟಕ ಕ್ರಶ್ ಅಂತೆ. ಮಿರರ್‌ ಅಲ್ಲಿ ನಿಮ್ಮ ಮುಖ ನೀನು ನೋಡ್ಕೊ. ಇಲ್ಲಿ ಯಾವಳೋ ಕ್ರಶ್ ಅಂತೆ. ಕ್ರ್ಯಾಶ್ ಆದವಳನ್ನು ಹಿಡ್ಕೊಂಡು ಓಡಾಡ್ತೀಯಲ್ಲ. ಕಾರ್ತಿಕ್, ಏನು ಕಾಲು ನೋಡ್ತಿದ್ದೀಯಲ್ಲ, ನಿನ್ನ ಸ್ಥಾನ ಕೂಡ ಅಲ್ಲೇ ಇರೋದು ಎಂದಿದ್ದಾರೆ. ಒಟ್ನಲ್ಲಿ ಪ್ರೋಮೊ ಮಾತ್ರ ಸಖತ್ ವೈರಲ್ ಆಗ್ತಿದೆ. ಕಾರ್ತಿಕ್, ಸಂಗೀತಾ ಇತರರ ಬಗ್ಗೆ ಮಾತನಾಡಿರುವ ಪ್ರೋಮೊ ಬೇಗ ಬಿಡಿ ಎಂದು ಕೇಳುತ್ತಿದ್ದಾರೆ.

ಡ್ರೋನ್ ಪ್ರತಾಪ್ ಹಾಗೂ ಸಿರಿ ನಾಯಕತ್ವದಲ್ಲಿ ಎರಡು ತಂಡಗಳಾಗಿ ಸ್ಪರ್ಧಿಗಳು ಟಾಸ್ಕ್ ಆಡುತ್ತಿದ್ದಾರೆ. ಸಿರಿ ಟೀಮ್ ಪ್ರೋಮೊ ಕಟ್ ಆಗಿದೆ. ಪ್ರತಾಪ್ ಟೀಂ ಪ್ರೋಮೊ ಬರುತ್ತಾ ಅಥವಾ ನೇರವಾಗಿ ಎಪಿಸೋಡ್ ನೋಡಬೇಕಾ? ಗೊತ್ತಿಲ್ಲ.ಮೇಲ್ನೋಟಕ್ಕೆ ಇದು ಬರೀ ಟಾಸ್ಕ್ ಅನ್ನಿಸಿದರು, ಈ ಮಾತುಗಳು ಸ್ಪರ್ಧಿಗಳ ಮನಸ್ಸಿನಲ್ಲಿ ಕೊನೆಯವರೆಗೂ ಉಳಿಯುವ ಸಾಧ್ಯತೆಯಿದೆ.

ಸ್ನೇಹಿತ್ ಮತ್ತೆ ಗಂಡಸ್ತನದ ಬಗ್ಗೆ ಮಾತನಾಡಿರುವುದು ವೀಕ್ಷಕರಿಗೆ ಬೇಸರ ತರಿಸಿದೆ. ಏನೇ ಟಾಸ್ಕ್ ಆಗಿದ್ದರೂ ಮಾತುಗಳು ಕೊಂಚ ಹಿಡಿತದಲ್ಲಿ ಇರಬೇಕು ಎಂದು ಕಾಮೆಂಟ್ ಮಾಡುತ್ತಿದ್ದಾರೆ. ಕಳೆದ ವಾರ ಕಾರ್ತಿಕ್ ಬಗ್ಗೆ ವಿನಯ್ "ಗಂಡ್ಸು ಬಾ.. ಬಳೆಗಳನ್ನ ಹಾಕೊಂಡ್ ಹೆಂಗಸ್ರ ತರಹ ಆಡಬೇಡ" ಎಂದು ಕೆಣಕ್ಕಿದ್ದರು. ಕೂಡಲೇ ಗರಂ ಆಗಿದ್ದ ಸಂಗೀತಾ, "ಬಳೆ ಹಾಕೊಂಡ್ ಬಿಟ್ಟರೆ ಏನು? ಏನರ್ಥ ನಿಂದು?" ಎಂದು ವಿನಯ್ ಗೌಡ ವಿರುದ್ಧ ಕೆಂಡಾಮಂಡಲವಾಗಿದ್ದರು. ಕಿಚ್ಚನ ಪಂಚಾಯಿತಿಯಲ್ಲಿ ವಿನಯ್‌ಗೆ ಛೀಮಾರಿ ಹಾಕಲಾಯಿತು.

More from Filmibeat

English summary
Bigg Boss kannada 10: Trigger the contestants task turns house into battlefield.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X