ಬಿಗ್‌ಬಾಸ್ ತನಿಷಾ ಕುಪ್ಪಂಡ ಲಿಪ್ ಲಾಕ್ ವಿಡಿಯೋ ಫುಲ್ ವೈರಲ್
ಈ ಬಾರಿ ಬಿಗ್‌ಬಾಸ್ ಮನೆಗೆ 17 ಜನ ಸ್ಪರ್ಧಿಗಳು ಎಂಟ್ರಿ ಕೊಟ್ಟದರು. ನಾಲ್ಕು ವಾರಗಳಲ್ಲಿ ಮೂವರು ಎಲಿಮಿನೇಟ್ ಆಗಿದ್ದಾರೆ. ಇನ್ನು ದಿನದಿಂದ ದಿನಕ್ಕೆ ಶೋ ಕುತೂಹಲ ಕೆರಳಿಸುತ್ತಿದೆ. ವಿನಯ್, ಕಾರ್ತಿಕ್, ಸಂಗೀತಾ, ಡ್ರೋನ್ ಪ್ರತಾಪ್ ಹಾಗೂ ತನಿಷಾ ಕುಪ್ಪಂಡ ಪ್ರಬಲ ಸ್ಪರ್ಧಿಗಳು ಎನಿಸಿಕೊಂಡಿದ್ದಾರೆ. ವಿನಯ್‌ಗೂ ಕೂಡ ತನಿಷಾ ಗಟ್ಟಿ ಪೈಪೋಟಿ ಕೊಡುತ್ತಿದ್ದಾರೆ.
ಕನ್ನಡ ಕಿರುತೆರೆ ಹಾಗೂ ಹಿರಿತೆರೆಯಲ್ಲಿ ತನಿಷಾ ಬಣ್ಣ ಹಚ್ಚಿದ್ದಾರೆ. ತಮಿಳು ಸಿನಿಮಾದಲ್ಲೂ ನಟಿಸಿ ಬಂದಿದ್ದಾರೆ. ಆದರೆ ಕೆಲ ವಿವಾದಗಳಿಂದ ಆಕೆ ಸುದ್ದಿ ಆಗಿದ್ದರು. ಹೆಚ್ಚು ಬೋಲ್ಡ್ ಪಾತ್ರಗಳಲ್ಲಿ ನಟಿಸಿದ್ದ ತನಿಷಾಗೆ, ಯೂಟ್ಯೂಬ್ ಸಂದರ್ಶನವೊಂದರಲ್ಲಿ ಅಸಭ್ಯ ಪ್ರಶ್ನೆ ಎದುರಾಗಿತ್ತು. ನಿರೂಪಕ ನೀವು ನೀಲಿ ಚಿತ್ರದಲ್ಲಿ ನಟಿಸಿದ್ದೀರಾ? ಎಂದು ಕೇಳಿದ್ದು ಭಾರೀ ಸುದ್ದಿ ಆಗಿತ್ತು. ಈ ವಿವಾದದ ಬೆನ್ನಲ್ಲೇ ಆಕೆ ಬಿಗ್‌ಬಾಸ್ ಮನೆ ಪ್ರವೇಶಿಸುವ ಅವಕಾಶ ಪಡೆದಿದ್ದರು.

ಕೆಲ ವರ್ಷಗಳ ಹಿಂದೆ ನಟಿ ಪೂಜಾ ಗಾಂಧಿಗೆ ತನಿಷಾ ಲಿಪ್ ಲಾಕ್ ಮಾಡಿದ್ದು ಭಾರೀ ಸುದ್ದಿ ಆಗಿತ್ತು. 'ದಂಡುಪಾಳ್ಯ'-2 ಚಿತ್ರದಲ್ಲಿ ತನಿಷಾ ಕುಪ್ಪಂಡ ಕೂಡ ನಟಿಸಿದ್ದರು. ಆ ಚಿತ್ರದ ಸನ್ನಿವೇಶವೊಂದರಲ್ಲಿ ಸಹ ನಟಿ ಪೂಜಾ ಗಾಂಧಿ ತುಟಿಗೆ ತುಟಿ ಸೇರಿಸುವ ದೃಶ್ಯವೊಂದಿತ್ತು. ಆದರೆ ಸಿನಿಮಾ ರಿಲೀಸ್‌ಗೂ ಮೊದ್ಲೆ ಆ ದೃಶ್ಯದ ಫೋಟೊ ಲೀಕ್ ಆಗಿತ್ತು. ಬಿಟ್ಟಿ ಪ್ರಚಾರಕ್ಕಾಗಿ ಚಿತ್ರತಂಡ ಇಂತಹ ಗಿಮಿಕ್ ಮಾಡಿದೆ ಎಂದು ಕೆಲವರು ಹೇಳಿದ್ದರು.
ಸದ್ಯ ಬಿಗ್‌ಬಾಸ್ ಕನ್ನಡ ಸೀಸನ್ 10 ಶೋನಲ್ಲಿ ತನಿಷಾ ಬಹಳ ಸುದ್ದಿಯಲ್ಲಿದ್ದಾರೆ. ಇಂತಹ ಸಮಯದಲ್ಲೇ ಪೂಜಾ ಗಾಂಧಿಗೆ ತನಿಷಾ ಲಿಪ್ ಲಾಕ್ ಮಾಡಿದ್ದ 'ದಂಡುಪಾಳ್ಯ'-2 ವಿಡಿಯೋ ವೈರಲ್ ಆಗುತ್ತಿದೆ. ಶ್ರೀನಿವಾಸ್ ರಾಜು ನಿರ್ದೇಶನದ ಈ ಸಿನಿಮಾ 2017ರಲ್ಲಿ ರಿಲೀಶ್ ಆಗಿತ್ತು. ಚಿತ್ರದಲ್ಲಿ ಪೂಜಾ ಗಾಂಧಿ, ದಂಡುಪಾಳ್ಯ ಗ್ಯಾಂಗ್ ಸದಸ್ಯೆ ಲಕ್ಷ್ಮಿ ಪಾತ್ರದಲ್ಲಿ ನಟಿಸಿದ್ದರು. ಆಕೆ ಜೈಲಿನಲ್ಲಿ ಇರುವಾಗ ಇತರೆ ಮಹಿಳಾ ಖೈದಿಗಳು ಹಿಂಸಿಸುವ ಸನ್ನಿವೇಶ ಇತ್ತು. ಆ ಸನ್ನಿವೇಶದಲ್ಲಿ ಪೂಜಾಗೆ ತನಿಷಾ ಲಿಪ್ ಲಾಕ್ ಮಾಡುವಂತ ಸೀನ್ ಇತ್ತು.
ಲಿಪ್ ಲಾಕ್ ಫೋಟೊ ಲೀಕ್ ಆಗುತ್ತಿದ್ದಂತೆ ನಟಿ ಪೂಜಾ ಗಾಂಧಿ ಪ್ರತಿಕ್ರಿಯಿಸಿದ್ದರು. "ಜೈಲಿನಲ್ಲಿ ಮಹಿಳಾ ಖೈದಿಗಳಿಬ್ಬರು ಕಿಸ್ ಮಾಡುವ ದೃಶ್ಯ ಅದು. ಈ ಬಗ್ಗೆ ನಿರ್ದೇಶಕರು ಮೊದಲೇ ನನಗೆ ತಿಳಿಸಿದ್ದರಿಂದ ನನಗೆ ಅಭ್ಯಂತರ ಇರಲಿಲ್ಲ. ಹುಡುಗಿ-ಹುಡುಗಿ ಕಿಸ್ ಮಾಡಿದ್ರೆ, ತಪ್ಪೇನು.? ಇದು ಗಿಮಿಕ್ ಅಲ್ಲ. ಚಿತ್ರದಲ್ಲಿ ಈ ಸನ್ನಿವೇಶ ಕತೆಗೆ ಪೂರಕವಾಗಿದೆ" ಎಂದಿದ್ದರು.

ಸಂದರ್ಶನವೊಂದರಲ್ಲಿ ಮಾತನಾಡಿದ್ದ ತನಿಷಾ, "ನಾನು ದಂಡುಪಾಳ್ಯ-2 ಚಿತ್ರದ ಒಂದು ಸೀಕ್ವೆನ್ಸ್‌ನಲ್ಲಿ ಕಾಣಿಸಿಕೊಂಡಿದ್ದೆ. ಪೂಜಾ ಗಾಂಧಿ ಅವರಿಗೆ ಲಿಪ್ ಲಾಕ್ ಮಾಡುವ ಸನ್ನಿವೇಶ ಅದು. ಅದನ್ನು ತಮ್ಮ ತಾಯಿ ಯಾವ ರೀತಿ ಹೇಳಿದ್ದೆ ಅಂದ್ರೆ, ಮಮ್ಮಿ "ಪೂಜಾ ಗಾಂಧಿ ಸಖತ್ ಫಿಗರ್ ಅಲ್ವಾ? ಅದಕ್ಕೆ ಒಂದು ಕಿಸ್ ಕೊಟ್ಟು ಬಂದೆ ಮಮ್ಮಿ" ಎಂದು ಹೇಳಿದ್ದಾರೆ ಹೇಳಿಕೊಂಡಿದ್ದರು. ಇನ್ನು 'ಪೆಂಟಗನ್' ಚಿತ್ರದ ಹಾಡೊಂದರಲ್ಲೂ ತನಿಷಾ ಕುಪ್ಪಂದ ಸಖತ್ ಹಾಟ್ ಆಗಿ ಕಾಣಿಸಿಕೊಂಡಿದ್ದರು.
ಕೊಡಗಿನಲ್ಲಿ ಹುಟ್ಟಿದ ತನಿಷಾ, ಅಲ್ಲೇ ಶಾಲಾ ವಿದ್ಯಾಭ್ಯಾಸ ಮುಗಿಸಿದರು. ಬೆಂಗಳೂರಿನ ಕಾಲೇಜಿನಲ್ಲಿ ಓದು ಮುಂದುವರೆಸಿದರು. ಹಾಡುವುದು, ಡ್ರೈವಿಂಗ್, ಶಾಪಿಂಗ್ ಆಕೆಯ ಹವ್ಯಾಸ. ಅಪ್ಪುಸ್ ಕಿಚನ್ ಹೆಸರಿನ ರೆಸ್ಟೋರೆಂಟ್ ಕೂಡ ಹೊಂದಿದ್ದಾರೆ. ತಮ್ಮ ನೇರಾನೇರ ಮಾತುಗಳಿಂದ, ಉತ್ತಮ ಪ್ರದರ್ಶನದಿಂದ ತನಿಷಾ ವೀಕ್ಷಕರ ಮನಗೆಲ್ಲುತ್ತಿದ್ದಾರೆ. ಈ ಬಾರಿ ಆಕೆ ಬಿಗ್‌ಬಾಸ್ ಫೈನಲ್ ಹಂತಕ್ಕೇ ಏರುತ್ತಾರೆ ಎನ್ನುವುದು ಕೆಲವರ ಲೆಕ್ಕಾಚಾರ.


Click it and Unblock the Notifications











