BBK10: ಜಗಳದ ಸಂತೆಯಲ್ಲಿ ಹೆಣ್ಣಿನ ವೇಷ ತೊಟ್ಟ ತುಕಾಲಿ ಸಂತು!
ಬಿಗ್‌ಬಾಸ್ ಕನ್ನಡ ಸೀಸನ್ 10 ವೀಕ್ಷಕರಿಗೆ ಭರ್ಜರಿ ಮನರಂಜನೆ ಉಣಬಡಿಸುತ್ತಿದೆ. ಅಂತೂ ಇಂತೂ ಶೋ 29ನೇ ದಿನಕ್ಕೆ ಕಾಲಿಟ್ಟಿದೆ. ನಿಧಾನವಾಗಿ ಸ್ಪರ್ಧಿಗಳಲ್ಲಿ ಬಿಗ್‌ಬಾಸ್ ಟ್ರೋಫಿ ಗೆಲ್ಲುವ ಹವಣಿಕೆ ಹೆಚ್ಚಾಗುತ್ತಿದೆ. ಇನ್ನು ಈ ಬಾರಿಯ ಟಾಸ್ಕ್‌ಗಳು ಮನೆಯನ್ನು ರಣಾಂಗಣ ಮಾಡುತ್ತಿದೆ. ವೀಕ್ಷಕರಿಗೆ ಕೆಲವೊಮ್ಮೆ ಅತಿರೇಕ ಎನಿಸಿಬಿಡುತ್ತಿದೆ. ಆದರೂ ಶೋಗೆ ಸಖತ್ ರೆಸ್ಪಾನ್ಸ್ ಸಿಗುತ್ತಿರುವುದು ಸುಳ್ಳಲ್ಲ.
ಜಿಯೋ ಸಿನಿಮಾದಲ್ಲಿ ಬಿಗ್‌ಬಾಸ್ ಶೋ ಉಚಿತವಾಗಿ ನೋಡುವ ಅವಕಾಶ ಕೂಡ ಸಿಗುತ್ತಿದೆ. ಸ್ಪರ್ಧಿಗಳು ಬಿಗ್‌ಬಾಸ್ ಟಾಸ್ಕ್‌ಗಳನ್ನು ಗೆಲ್ಲುವುದರ ಜೊತೆಗೆ ವೀಕ್ಷಕರ ಮನಸ್ಸನ್ನು ಗೆಲ್ಲುವ ಪ್ರಯತ್ನ ಮಾಡುತ್ತಿದ್ದಾರೆ. ವೀಕೆಂಡ್‌ನಲ್ಲಿ ಸುದೀಪ್ ಪಂಚಾಯಿತಿ ನಡೆಸಿ ಇಡೀ ವಾರ ಮನೆಯಲ್ಲಿ ಏನೆಲ್ಲಾ ಆಯಿತು ಎನ್ನುವುದರ ಬಗ್ಗೆ ಮಂಥನ ನಡೆಸುತ್ತಾರೆ. ತಪ್ಪು ಮಾಡಿದವರಿಗೆ ಕಿಚ್ಚನ ಚಾಟಿ ಏಟು, ಉತ್ತಮ ಎನಿಸಿಕೊಂಡವರಿಗೆ ಚಪ್ಪಾಳೆ ಸಿಗುತ್ತದೆ.

ಇತ್ತೀಚೆಗೆ ಬಿಗ್‌ಬಾಸ್ ಮನೆಯಲ್ಲಿ ಮಾತು, ವಾಗ್ವಾದ, ಜಗಳ ತಾರಕಕ್ಕೇರಿತ್ತು. ಅದರಲ್ಲಿ ಕಳೆದೆರಡು ದಿನಗಳಿಂದ ಕೊಟ್ಟ ಟಾಸ್ಕ್‌ಗಳು ಸ್ಪರ್ಧಿಗಳ ನಡುವೆ ಕಿಚ್ಚು ಹಚ್ಚಿತ್ತು. ಟಾಸ್ಕ್ ಭಾಗವಾಗಿ ಒಬ್ಬರನ್ನು ಒಬ್ಬರು ಕೆಣಕಿದ್ದು, ಹೀಯಾಳಿಸಿ ಮಾತನಾಡಿದ್ದು ಕಾವೇರುವಂತೆ ಮಾಡಿತ್ತು. ಟಾಸ್ಕ್ ಮುಗಿದ ಬಳಿಕ ಈ ಬಗ್ಗೆ ಸ್ಪರ್ಧಿಗಳ ನಡುವೆ ಭಾರೀ ಚರ್ಚೆಗೆ ಕಾರಣವಾಗಿತ್ತು. ನೋವುಂಡವರು ಅತ್ತಿದ್ದು ತಪ್ಪು ಮಾಡಿದವರು ಕ್ಷಮೆ ಕೇಳಿದ್ದು ಎಲ್ಲವೂ ನಡೀತು. ಬರೀ ಜಗಳವೇ ತುಂಬಿದ್ದ ಮನೆಯಲ್ಲಿ ತುಕಾಲಿ ಸಂತು ನಗು ಉಕ್ಕಿಸುವ ಕೆಲಸ ಮಾಡಿದ್ದಾರೆ.
ಹೆಣ್ಣಿನ ವೇಷ ಧರಿಸಿ ಮನೆ ಮಂದಿಯನ್ನು ನಗಿಸುವ ಪ್ರಯತ್ನ ಮಾಡಿದ್ದಾರೆ. ಕಾಮಿಡಿ ಕಿಲಾಡಿಗಳು ಶೋನಲ್ಲಿ ತಮ್ಮ ಹಾಸ್ಯದ ಮೂಲಕ ಸಂತು ವೀಕ್ಷಕರನ್ನು ರಂಜಿಸಿದ್ದರು. ಬಿಗ್‌ಬಾಸ್ ಮನೆಯಲ್ಲಿ ಎಲ್ಲರನ್ನು ಆಗಾಗ್ಗೆ ಸಂತು ಎಲ್ಲರನ್ನು ನಗಿಸುವ ಕೆಲಸ ಮಾಡುತ್ತಿದ್ದಾರೆ. ಇದೀಗ ಹೆಣ್ಣಿನ ವೇಷ ಧರಿಸಿ, ಹೆಣ್ಣಿನಂತೆ ಮಿಮಿಕ್ರಿ ಮಾಡುತ್ತಾ ಎಲ್ಲರೊಂದಿಗೆ ಆಡಿ ಕುಣಿದಿದ್ದಾರೆ. ಅದರ ಪ್ರೋಮೊ ರಿಲೀಸ್ ಆಗಿದೆ.

ತುಕಾಲಿ ಸಂತು ಜೊತೆ ಕಾರ್ತಿಕ್ ಡ್ಯಾನ್ಸ್ ಮಾಡಿದ್ದಾರೆ. ಇನ್ನು ಸಂತು ವೇಷಭೂಷಣ, ಹಾವಭಾವ, ಮಾತಿಗೆ ಮನೆ ಮಂದಿ ಬಿದ್ದು ನಕ್ಕಿದ್ದಾರೆ.
ಜಗಳವೇ ತುಂಬಿದ್ದ ಮನೆಯಲ್ಲಿ ಮನರಂಜನೆ ತರಲು ಬಿಗ್‌ಬಾಸ್ ಈ ಪ್ರಯತ್ನ ಮಾಡಿದ್ದಾರೆ ಎಂದು ವೀಕ್ಷಕರು ಕಾಮೆಂಟ್ ಮಾಡುತ್ತಿದ್ದಾರೆ. ಎರಡು ದಿನಗಳಿಂದ ಕೋಪ ಬರಿಸುವ ಟಾಸ್ಕ್ ಹಾಗೂ ಅಳಿಸುವ ಟಾಸ್ಕ್ ವಿಕೋಪಕ್ಕೆ ಹೋಗಿತ್ತು. ಕೆಲವರು ವೈಯಕ್ತಿಕ ವಿಚಾರಗಳನ್ನು ಎಳೆದು ತಂದು ಪರಿಸ್ಥಿತಿ ಕೈ ಮೀರಿತ್ತು. ಸ್ನೇಹಿತ್ ಮಾತುಗಳಿಗೆ ತನಿಷಾ ಕೆಂಡಾಮಂಡಲವಾಗಿದ್ದರು.
ತಮ್ಮ ಫ್ಯಾಮಿಲಿ ಬಗ್ಗೆ ಮಾತನಾಡಿದ್ದ ನಮ್ರತಾಗೂ ತನಿಷಾ ಕ್ಲಾಸ್ ತಗೊಂಡಿದ್ದರು. "ನನ್ನ ಎಜುಕೇಷನ್ ಬಗ್ಗೆ ನಿನಗೆ ಏನು ಗೊತ್ತಾ. ನನ್ನ ಫ್ಯಾಮಿಲಿ ಬಗ್ಗೆ ಮಾತನಾಡಿದ್ರಲ್ಲ. ನಾನು ನಿನ್ನ ಫ್ಯಾಮಿಲಿ ಬಗ್ಗೆ ಮಾತನಾಡ್ಲಾ?. ಇನ್ನೊಂದು ಸಲ ನನ್ನ ಫ್ಯಾಮಿಲಿ ಬಗ್ಗೆ ಮಾತನಾಡಿದರೆ ಸುಮ್ಮನೆ ಬಿಡುತ್ತೀನಿ ಎಂದುಕೊಳ್ಳಬೇಡಿ" ಎಂದು ಖಾರವಾಗಿಯೇ ವಾರ್ನಿಂಗ್ ಕೊಟ್ಟಿದ್ದರು.
ಅಳಿಸುವ, ಕೋಪ ಬರಿಸುವ ಟಾಸ್ಕ್‌ಗಳ ಬಗ್ಗೆ ವೀಕ್ಷಕರು ಬೇಸರ ವ್ಯಕ್ತಪಡಿಸಿದ್ದರು. ಇಂತಹ ಟಾಸ್ಕ್‌ಗಳು ಬೇಕಾ? ಇದು ಯಾಕೋ ಅತಿಯಾಯಿತು ಎಂದು ಅಸಮಾಧಾನ ವ್ಯಕ್ತಪಡಿಸಿದ್ದರು. ಈ ಟಾಸ್ಕ್‌ಗಳು ಸ್ಪರ್ಧಿಗಳ ನಡುವೆ ಮತ್ತಷ್ಟು ತಿಕ್ಕಾಟಕ್ಕೆ ಕಾರಣವಾಗಿದ್ದು ಮುಂದಿನ ದಿನಗಳ ಇದರ ಪರಿಣಾಮ ಗೊತ್ತಾಗಲಿದೆ.
ಈ ಬಾರಿಯ ಬಿಗ್ ಬಾಸ್ ಶೋ 5ನೇ ವಾರಕ್ಕೆ ಕಾಲಿಟ್ಟಿದೆ. ಮೂವರು ಎಲಿಮಿನೇಟ್ ಆಗಿ ಹೊರ ಬಂದಿದ್ದಾರೆ. ಒಂದು ವಾರ ಎಲಿಮಿನೇಷನ್ ಇರಲಿಲ್ಲ. ಇನ್ನು 70 ದಿನಗಳ ಆಟ ಬಾಕಿಯಿದೆ. ಕೊನೆಗೆ ಯಾರು ಉಳಿದುಕೊಳ್ಳುತ್ತಾರೋ ಕಾದು ನೋಡಬೇಕಿದೆ.


Click it and Unblock the Notifications











