ಬಿಗ್ ಬಾಸ್‌ನಲ್ಲಿ 'ಕಾವೇರಿ'ದ ವಾತಾವರಣ, ಹೊರಗಡೆ ಬಯಲಾಯ್ತು ಅಶ್ವಿನಿ ಗೌಡ- ರಾಶಿಕಾ ಶೆಟ್ಟಿ ಮುಚ್ಚಿಟ್ವ ಸತ್ಯ

''ಬಿಗ್ ಬಾಸ್'' ಕನ್ನಡದಲ್ಲಿ ಶುರುವಾಗಿ ಎರಡು ವಾರಗಳಾಗುತ್ತಾ ಬರುತ್ತಿದೆ. ಈ ಎರಡು ವಾರದಲ್ಲಿಯೇ ಹಲವು ಬಾರಿ ಪ್ರೇಕ್ಷಕರಿಗೆ ಸರ್‌ ಫ್ರೈಸ್ ನೀಡಿದ ''ಬಿಗ್ ಬಾಸ್'' ಮೇಲೆ ಮೊನ್ನೆ ಬಂಡೆಕಲ್ಲು ಬಿದ್ದಿತ್ತು. ಸೀಜ್ ಡ್ರಾಮಾ ನಡೆಯಿತು. ಒಂದು ದಿನ ಅಡಚಣೆ ಉಂಟಾಯ್ತು. ಸದ್ಯ ''ಬಿಗ್ ಬಾಸ್‌''ನ ಮುಖ್ಯದ್ವಾರ ಮತ್ತೆ ತೆರೆದಿದೆ. ರೆಸಾರ್ಟ್‌ನಲ್ಲಿದ್ದ ಸ್ಫರ್ಧಿಗಳನ್ನು ಮತ್ತೆ ಮನೆಗೆ ಕಳುಹಿಸಲಾಗಿದೆ.

ಮುಂದೇನಾಗುತ್ತೆ.? ಈ ವಾರ ಯಾರು ಹೊರಗಡೆ ಬರ್ತಾರೆ..? ಕಿಚ್ಚನ ಪಂಚಾಯ್ತಿಯಲ್ಲಿ ''ಬೀಗ''ದ ವಿಚಾರ ಚರ್ಚೆಯಾಗುತ್ತಾ..? ಈ ಎಲ್ಲಾ ಪ್ರಶ್ನೆಗಳಿಗೆ ಉತ್ತರ ಮುಂಬರುವ ದಿನಗಳಲ್ಲಿ ಸಿಗಲಿದೆಯಾದರೂ ಸದ್ಯ ಬಿಗ್ ಬಾಸ್ ಮನೆಗೆ ಬರುವ ಸ್ಫರ್ಧಿಗಳು ಯಾಕೆ ಇಷ್ಟೊಂದು ವಿಚಿತ್ರ ಎನ್ನುವ ಮತ್ತೊಂದು ಪ್ರಶ್ನೆ ಸದ್ಯ ಹಲವರನ್ನು ಕಾಡುತ್ತಿದೆ.

BBK12 s BIGGEST ACT Ashwini Gowda Rashika Shetty Act Like Strangers Playing Atte Sose in Cauvery

ಹೌದು, ಅಸಲಿಗೆ ''ಬಿಗ್ ಬಾಸ್‌'' ಮನೆ ತೆರೆಯವುದು ಚಿತ್ರರಂಗ ಮತ್ತು ಕಿರುತೆರೆಯವರಿಗೆ ಮಾತ್ರ. ಅಲ್ಲೊಮ್ಮೆ.. ಇಲ್ಲೊಮ್ಮೆ.. ಜನಸಾಮಾನ್ಯರಿಗೆ ಅವಕಾಶ ಸಿಗುತ್ತೆಯಾದರೂ ಬಹುತೇಕ ಬಾರಿ ಮಣೆ ಹಾಕುವುದು ತಾರೆಯರಿಗೆಯೇ.

ಇನ್ನು ಮನೆಯ ಒಳ ಹೋಗೋರಿಗೆ ಕೂಡ ಈ ವಿಚಾರ ಗೊತ್ತೇ ಇರುತ್ತೆ. ತಮ್ಮ ಪರಿಚಯದವರೇ ಮನೆಗೆ ಬರಬಹುದು ಎನ್ನುವ ಸುಳಿವು ಆರಂಭದಲ್ಲಿ ಇದ್ದೇ ಇರುತ್ತೆ. ಮನೆಯ ಒಳಗಡೆ ಬಂದಾಗ ಅಂದುಕೊಂಡತೆಯೇ 18-19 ಜನರಲ್ಲಿ ಯಾರಾದರೂ ಒಬ್ಬರು ಅಥವಾ ಇಬ್ಬರಾದರು ಮೊದಲಿಂದ ಪರಿಚಯ ಇದ್ದವರು ಎದುರು ಬದುರಾಗಿಯೇ ಆಗುತ್ತಾರೆ. ಇನ್ನೂ ಕೆಲ ಒಮ್ಮೆ ಜೊತೆಯಲ್ಲಿ ಕೆಲಸ ಮಾಡಿದವರೇ ''ಬಿಗ್ ಬಾಸ್‌'' ಮನೆಯಲ್ಲಿ ಪ್ರತ್ಯಕ್ಷರಾಗುತ್ತಾರೆ.

ಆದರೆ ಹೀಗಾದರೂ ಕೂಡ ಕೆಲವರು ಅಪರಿಚಿತರಂತೆ ವರ್ತಿಸುತ್ತಾರೆ. ಇವರ ಈ ವರ್ತನೆ ನೋಡುಗರಲ್ಲಿ ವಿಚಿತ್ರ ಭಾವನೆ ಮೂಡಿಸುತ್ತೆ. ಎಂಥಾ ವಿಚಿತ್ರ ಮನುಷ್ಯರು ಅಂತ ಅನ್ಸುತ್ತೆ. ಉದಾಹರಣೆಗೆ ಅಶ್ವಿನಿ ಗೌಡ ಮತ್ತು ರಾಶಿಕಾ ಶೆಟ್ಟಿ ಅವರನ್ನೇ ತೆಗೆದುಕೊಳ್ಳಿ.

ಹೌದು, ಸದ್ಯ ಮನೆಯಲ್ಲಿ ಪರಸ್ಪರ ಸಂಬಂಧವೇ ಇಲ್ಲ, ಇದೇ ಮೊದಲ ಬಾರಿ ಭೇಟಿಯಾಗಿದ್ದು ಎನ್ನುವಂತೆ ಇರುವ ಅಶ್ವಿನಿ ಗೌಡ ಮತ್ತು ರಾಶಿಕಾ ಶೆಟ್ಟಿ ಒಂದು ಕಾಲದಲ್ಲಿ ಒಂದೇ ಧಾರಾವಾಹಿಯಲ್ಲಿ ಕೆಲಸ ಮಾಡಿದ್ದರು. 2020ರಲ್ಲಿ ಕನ್ನಡ ಮನರಂಜನಾ ಲೋಕದ ಖ್ಯಾತ ಚಾನೆಲ್ ''ಉದಯ ವಾಹಿನಿ''ಯಲ್ಲಿ ಪ್ರಸಾರವಾದ ''ಕಾವೇರಿ'' ಧಾರಾವಾಹಿ ಅದು. ವಿಶೇಷ ಅಂದರೆ ಈ ಸೀರಿಯಲ್‌ನಲ್ಲಿ ಅಶ್ವಿನಿ ಗೌಡ ಅತ್ತೆಯ ಪಾತ್ರವನ್ನು ನಿರ್ವಹಿಸಿದ್ದರೆ ರಾಶಿಕಾ ಶೆಟ್ಟಿ ಸೊಸೆಯ ಪಾತ್ರಕ್ಕೆ ಜೀವ ತುಂಬಿದ್ದರು.

BBK12 s BIGGEST ACT Ashwini Gowda Rashika Shetty Act Like Strangers Playing Atte Sose in Cauvery

ಆದರೆ ಈಗ ಮಾತಿಲ್ಲ-ಕಥೆ ಇಲ್ಲ. ಇಬ್ಬರು ಪರಿಚಯ ಇಲ್ಲದಂತೆ ಮನೆಯಲ್ಲಿದ್ದಾರೆ. ಇದು ಎಲ್ಲರಿಗೆ ಆಶ್ಚರ್ಯವನ್ನುಂಟು ಮಾಡಿದೆ. ಇನ್ನುಳಿದಂತೆ ನಿನ್ನೆ (ಅಕ್ಟೋಬರ್ 08) ರಾತ್ರಿ 11:30 ಸುಮಾರಿಗೆ ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರ ಆದೇಶದ ಮೆರೆಗೆ ''ಬಿಗ್ ಬಾಸ್‌'' ಆಟಕ್ಕೆ ಜಾಲಿವುಡ್‌ನಲ್ಲಿ ಅನುವು ಮಾಡಿಕೊಡಲಾಗಿದೆ.

ಬೆಂಗಳೂರು ದಕ್ಷಿಣ ಜಿಲ್ಲಾಧಿಕಾರಿಗಳಿಗೆ ನಿರ್ದೇಶನ ನೀಡಿದ್ದೇನೆ ಎಂದು ನಿನ್ನೆ ಹೇಳಿದ್ದ ಡಿಕೆ ಶಿವಕುಮಾರ್ ಅವರು ಪರಿಸರ ನೈರ್ಮಲ್ಯ ಕಾಪಾಡುವುದು ಪ್ರಮುಖ ಆದ್ಯತೆಯಾಗಿ ಉಳಿದಿದ್ದರೂ, ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯು ನಿಗದಿಪಡಿಸಿದ ಮಾನದಂಡಗಳಿಗೆ ಅನುಗುಣವಾಗಿ ಉಲ್ಲಂಘನೆಗಳನ್ನು ಪರಿಹರಿಸಲು ಸ್ಟುಡಿಯೋಗೆ ಸಮಯ ನೀಡಲಾಗುವುದು ಎಂದು ಹೇಳಿದ್ದರು. ಕನ್ನಡ ಮನರಂಜನಾ ಉದ್ಯಮವನ್ನು ಬೆಂಬಲಿಸಲು ನಾನು ಬದ್ಧನಾಗಿರುತ್ತೇನೆ, ಜೊತೆಗೆ ಪರಿಸರ ಸಂರಕ್ಷಣೆಯ ಬಗ್ಗೆ ನಮ್ಮ ಜವಾಬ್ದಾರಿಯನ್ನು ಎತ್ತಿಹಿಡಿಯುತ್ತೇನೆ ಎಂದಿದ್ದರು. ಡಿಸಿಎಂ ಡಿಕೆ ಶಿವಕುಮಾರ್ ಅವರ ಈ ಟ್ವೀಟ್​​ಗೆ ಕಿಚ್ಚ ಸುದೀಪ್ ಕೂಡ ಪ್ರತಿಕ್ರಿಯೆ ನೀಡಿ ಅಗತ್ಯ ಸಮಯದಲ್ಲಿ ಅಗತ್ಯ ನೆರವು ನೀಡಿದ್ದಕ್ಕಾಗಿ ಧನ್ಯವಾದಗಳನ್ನು ಹೇಳಿದ್ದರು.

More from Filmibeat

English summary
BB12 SHOCKER: Ashwini Gowda and Rashika Shetty shared a deep history as co-stars in the hit serial Cauvery, yet they refuse to acknowledge each other. Find out why their "stranger" act has Bigg Boss fans furious!
Read more about: biggboss bigg boss ಟಿವಿ
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X