»   » ಪ್ರಥಮ್ ಮುಖಕ್ಕೆ ಮಸಿ: ಶಾಲಿನಿ, ಕೀರ್ತಿ, ಮಾಳವಿಕಾ ವಿರುದ್ಧ ವೀಕ್ಷಕರು ಸಿಡಿಮಿಡಿ

ಪ್ರಥಮ್ ಮುಖಕ್ಕೆ ಮಸಿ: ಶಾಲಿನಿ, ಕೀರ್ತಿ, ಮಾಳವಿಕಾ ವಿರುದ್ಧ ವೀಕ್ಷಕರು ಸಿಡಿಮಿಡಿ

Posted By:
Subscribe to Filmibeat Kannada

ಪ್ರಥಮ್ ಕಂಡ್ರೆ 'ಬಿಗ್ ಬಾಸ್' ಸ್ಪರ್ಧಿಗಳಿಗೆ ಆಗದೇ ಇರಬಹುದು. ಆದರೂ, ಪ್ರಥಮ್ ಗೆ ಸಪೋರ್ಟ್ ಮಾಡುವ ವೀಕ್ಷಕರು ಲೆಕ್ಕವಿಲ್ಲದಷ್ಟು.

ಪ್ರಥಮ್ ಏನೇ ಮಾಡಿದ್ರೂ ತಪ್ಪು ಎನ್ನುವ 'ಬಿಗ್ ಬಾಸ್' ಮನೆಯ ಸದಸ್ಯರು, ಮೊನ್ನೆತಾನೆ 'ಮಸಿ-ಹಾರ' ಟಾಸ್ಕ್ ನಲ್ಲಿ ಪ್ರಥಮ್ ಮುಖಕ್ಕೆ ಮಸಿ ಬಳಿದು ಅವಮಾನ ಮಾಡಿದರು. ಸ್ಪರ್ಧಿಗಳ ಈ ನಡೆ ಬಗ್ಗೆ 'ಬಿಗ್ ಬಾಸ್' ವೀಕ್ಷಕರು ಸಿಡಿಮಿಡಿಗೊಂಡಿದ್ದಾರೆ.[ಮುಖಕ್ಕೆ ಮಸಿ ಬಳಿದು ಅವಮಾನ: ಭಾವುಕರಾದ ಪ್ರಥಮ್]

ಪ್ರಥಮ್ ಮುಖಕ್ಕೆ ಮಸಿ ಮೆತ್ತಿದ ಕೀರ್ತಿ, ಮಾಳವಿಕಾ ಹಾಗೂ ಶಾಲಿನಿ ವಿರುದ್ಧ ವೀಕ್ಷಕರು 'ಕಲರ್ಸ್ ಕನ್ನಡ ಆಫೀಶಿಯಲ್ ಫೇಸ್ ಬುಕ್ ಪೇಜ್' ನಲ್ಲಿ ಕಿಡಿಕಾರುತ್ತಿದ್ದಾರೆ.

ಶಾಲಿನಿ ತಲೆ ಮೇಲೆ ಮಸಿ ಸುರಿಬೇಕಿತ್ತು.!

ಪ್ರಥಮ್ ಮುಖಕ್ಕೆ ಮಸಿ ಬಳಿದ ಶಾಲಿನಿ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಟ್ರೋಲ್ ಆಗಿರುವುದು ಹೀಗೆ....

[ಹೋಗಿ ಬಂದು ಪ್ರಥಮ್ ಗೆ ಸೂಜಿ ಚುಚ್ಚುವ 'ಬಿಗ್ ಬಾಸ್' ಸ್ಪರ್ಧಿಗಳು.!]

ಪ್ರಥಮ್ ಫೇಕ್ ಅಲ್ಲ.!

'ಬಿಗ್ ಬಾಸ್' ವೀಕ್ಷಕರ ಪ್ರಕಾರ ಪ್ರಥಮ್ 'ಒಳ್ಳೆಯ ಹುಡುಗ'.

ಪ್ರಥಮ್ ತರಹ ದೊಡ್ಡ ಮನಸ್ಸು ಯಾರಿಗೂ ಇಲ್ಲ!

'ಬಿಗ್ ಬಾಸ್' ಮನೆಯಲ್ಲಿ ಪ್ರಥಮ್ ತರಹ ದೊಡ್ಡ ಮನಸ್ಸು ಯಾರಿಗೂ ಇಲ್ಲ ಎಂಬುದು ವೀಕ್ಷಕರ ಅಭಿಪ್ರಾಯ.

ಶಾಲಿನಿ-ಮಾಳವಿಕಾಗೆ ಭಯ.!

ಪ್ರಥಮ್ ಯಶಸ್ಸು ಕಂಡು ಶಾಲಿನಿ ಹಾಗೂ ಮಾಳವಿಕಾ ಭಯಗೊಂಡಿದ್ದಾರಂತೆ. ಯಾಕಂತೆ.? ಈ ಕಾಮೆಂಟ್ ಓದಿ....

ಗುಂಪುಗಾರಿಕೆ ತೋರಿಸಿಬಿಟ್ಟರು.!

ಮತ್ತೊಬ್ಬರಿಗೆ ಮಸಿ ಬಳಿಯುವ ತಾಕತ್ತಿಲ್ಲದೇ ಪ್ರಥಮ್ ನ ಶಾಲಿನಿ, ಕೀರ್ತಿ, ಮಾಳವಿಕಾ ಗುರಿಯಾಗಿಸಿಕೊಂಡರು ಅಂತಿದ್ದಾರೆ ವೀಕ್ಷಕರು.

ಶಾಲಿನಿಗೆ ಮನುಷ್ಯತ್ವ ಇಲ್ವಾ.?

ಶಾಲಿನಿ ವಿರುದ್ಧ ಯದ್ವಾತದ್ವಾ ಗರಂ ಆಗಿರುವ ವೀಕ್ಷಕರೊಬ್ಬರು ಮಾಡಿರುವ ಕಾಮೆಂಟ್ ಇದು.

ಪ್ರಥಮ್ ಗೆ ಫ್ಯಾನ್ಸ್ ಸಿಕ್ಕಾಪಟ್ಟೆ

ಪ್ರಥಮ್ ಪರ ಅನೇಕರು ಬ್ಯಾಟಿಂಗ್ ಮಾಡ್ತಿದ್ದಾರೆ ಎನ್ನುವುದಕ್ಕೆ ಸಣ್ಣ ನಿದರ್ಶನ ಇದು.

ಟಿವಿ ವಾಲ್ಯೂಮ್ ಮ್ಯೂಟ್ ಆಗ್ತಿದ್ಯಂತೆ.!

ಶಾಲಿನಿ ಹಾಡು, ಡಬ್ಬ ಜೋಕ್ಸ್, ಕೂಗಾಟ, ಕಿರುಚಾಟದಿಂದ ವೀಕ್ಷಕರೊಬ್ಬರು ಟಿವಿ ವಾಲ್ಯೂಮ್ ಮ್ಯೂಟ್ ಮಾಡಿದ್ರಂತೆ.!

ಮಡಿಕೆ ಆಟದಲ್ಲೂ ಹಾಳು ಮಾಡಿದ ಶಾಲಿನಿ

ಮಡಿಕೆ ಆಟದಲ್ಲೂ ಪ್ರಥಮ್ ನ ಶಾಲಿನಿ ಡಿಸ್ಟರ್ಬ್ ಮಾಡಿದ್ದಕ್ಕೆ ವೀಕ್ಷಕರು ಕೋಪಗೊಂಡಿದ್ದಾರೆ.

ವೀಕ್ಷಕರು ಸಿಡಿಮಿಡಿ

ಎಲ್ಲರೂ ಪ್ರಥಮ್ ರವರನ್ನ ಟಾರ್ಗೆಟ್ ಮಾಡುತ್ತಿರುವುದಕ್ಕೆ ವೀಕ್ಷಕರು ಪಿತ್ತ ನೆತ್ತಿಗೇರಿಸಿಕೊಂಡಿದ್ದಾರೆ.

ಕಾಮೆಂಟ್ ಗಳು ಒಂದೆರಡಲ್ಲ.!

'ಕಲರ್ಸ್ ಕನ್ನಡ ಅಫೀಶಿಯಲ್ ಫೇಸ್ ಬುಕ್ ಪೇಜ್'ನಲ್ಲಿ ಶಾಲಿನಿ, ಕೀರ್ತಿ, ಮಾಳವಿಕಾ ವಿರುದ್ಧ ವೀಕ್ಷಕರು ಮಾಡಿರುವ ಕಾಮೆಂಟ್ ಗಳು ಒಂದೆರಡಲ್ಲ. ಇವು ಸಣ್ಣ ಸ್ಯಾಂಪಲ್ ಅಷ್ಟೇ.

ವೋಟ್ ಮಾಡಿ ಅಂತ ಹೇಳೋದ್ ನಿಲ್ಸಿ.!

'ಬಿಗ್ ಬಾಸ್' ವೋಟಿಂಗ್ ಸಂಸ್ಕೃತಿ ವಿರುದ್ಧವೂ ವೀಕ್ಷಕರು ಕಣ್ಣು ಕೆಂಪಗೆ ಮಾಡಿಕೊಂಡಿದ್ದಾರೆ.

English summary
Bigg Boss Kannada 4, Week 13 : Since Pratham was inked by other contestants, Viewers are annoyed with Shalini, Keerthi and Malavika Avinash.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada