'ಬಿಗ್ ಬಾಸ್' ಮನೆಯಲ್ಲಿ ಕುತಂತ್ರಿ, 420, ಕಪಟಿ, ಅಹಂಕಾರಿ ಯಾರು.?

By Harshitha

'ಬಿಗ್ ಬಾಸ್ ಕನ್ನಡ-4' ಕಾರ್ಯಕ್ರಮದಲ್ಲಿ 'ಕಂಡಿರೋ ಮುಖಗಳ ಕಾಣದೇ ಇರೋ ಮುಖ' ಅನಾವರಣ ಮಾಡಲು 'ಬಿಗ್ ಬಾಸ್', ಮನೆಯ ಸದಸ್ಯರಿಗೆ 'ಮನದ ಮಾತು' ಎಂಬ ಚಟುವಟಿಕೆ ನೀಡಿದ್ದರು.

'ಮನದ ಮಾತು' ಚಟುವಟಿಕೆಯ ಅನುಸಾರ, ಗಾಜಿನ ಪೆಟ್ಟಿಗೆಯಲ್ಲಿ ಇರುವ ವ್ಯಕ್ತಿತ್ವಗಳನ್ನು ಸೂಚಿಸುವ ಪದಗಳ ಚೀಟಿಗಳನ್ನ, ಒಬ್ಬೊಬ್ಬರು ಒಂದೊಂದನ್ನು ತೆಗೆದು, ಪದಕ್ಕೆ ಸೂಕ್ತ ಎನಿಸಿದ ಸದಸ್ಯರಿಗೆ ಕಾರಣದೊಂದಿಗೆ ಕೊಡಬೇಕಿತ್ತು.

'ಬಿಗ್ ಬಾಸ್' ಮನೆಯಲ್ಲಿ 'ನಂಬಿಕಸ್ಥ' ಯಾರು?

'ಬಿಗ್ ಬಾಸ್' ಮನೆಯಲ್ಲಿ 'ನಂಬಿಕಸ್ಥ' ಯಾರು?

'ನಂಬಿಕಸ್ಥ' ಎಂದು ಬರೆದಿರುವ ಚೀಟಿ ನಿರ್ದೇಶಕ ಓಂ ಪ್ರಕಾಶ್ ರಾವ್ ರವರಿಗೆ ಸಿಕ್ಕಿತು. 'ನಂಬಿದವರನ್ನು ಯಾವತ್ತಿಗೂ ಕೈ ಬಿಡದ ವ್ಯಕ್ತಿ ಮೋಹನ್' ಎಂಬ ಕಾರಣದೊಂದಿಗೆ ಓಂ ಪ್ರಕಾಶ್ ರಾಮ್, 'ನಂಬಿಕಸ್ಥ' ಚೀಟಿಯನ್ನು ಮೋಹನ್ ರವರಿಗೆ ನೀಡಿದರು.

'ಹೊಟ್ಟೆ ಕಿಚ್ಚಿನ ಮೊಟ್ಟೆ' ಮಾಳವಿಕಾ ಅವಿನಾಶ್

'ಹೊಟ್ಟೆ ಕಿಚ್ಚಿನ ಮೊಟ್ಟೆ' ಮಾಳವಿಕಾ ಅವಿನಾಶ್

'ನಾಯಕತ್ವದ ವಿಚಾರದಲ್ಲಿ ಪಾಸಿಟೀವ್ ಆಗಿ ನಡೆದುಕೊಳ್ಳಬಹುದಿತ್ತು ಎಂದು' ಹೇಳುತ್ತಾ 'ಹೊಟ್ಟೆ ಕಿಚ್ಚಿನ ಮೊಟ್ಟೆ' ಚೀಟಿಯನ್ನ ಮಾಳವಿಕಾ ಅವಿನಾಶ್ ರವರಿಗೆ ನೀಡಿದವರು ಶೀತಲ್ ಶೆಟ್ಟಿ. [ನಟಿ ಮಾಳವಿಕಾ ಮಾನ-ಮರ್ಯಾದೆ ಕಳೆದ ಶೀತಲ್ ಶೆಟ್ಟಿ ಗ್ಯಾಂಗ್.!]

'ಮೊಸಳೆ ಕಣ್ಣೀರು' ಹಾಕುತ್ತಾರಂತೆ ಪ್ರಥಮ್

'ಮೊಸಳೆ ಕಣ್ಣೀರು' ಹಾಕುತ್ತಾರಂತೆ ಪ್ರಥಮ್

''ನಾನೆಷ್ಟು ಅತ್ತೆ ಅಂತ ಕ್ಯಾಮರಾ ಮುಂದೆ ಹೇಳ್ತಿದ್ರು ಪ್ರಥಮ್ ರವರು. ಆದ್ರೆ, ಅವರ ಕಣ್ಣಲ್ಲಿ ನೀರು ಬಂದಿದ್ದನ್ನ ನಾನು ನೋಡಲಿಲ್ಲ'' ಎಂಬ ಕಾರಣ ನೀಡಿ 'ಮೊಸಳೆ ಕಣ್ಣೀರು' ಚೀಟಿಯನ್ನ ನಟಿ ರೇಖಾ, ಪ್ರಥಮ್ ರವರಿಗೆ ನೀಡಿದರು.

'ಕಪಟಿ' ಕೀರ್ತಿ

'ಕಪಟಿ' ಕೀರ್ತಿ

ಟಾಸ್ಕ್ ಒಂದರಲ್ಲಿ ಪ್ರಥಮ್ ಸೋಲಬೇಕು ಅಂತ ಕೀರ್ತಿ ಬಯಸಿದ್ದರಂತೆ. ಹೀಗಾಗಿ ಕೀರ್ತಿಗೆ 'ಕಪಟಿ' ಪಟ್ಟ ನೀಡಿದರು ಪ್ರಥಮ್.

'ನರಿ' ಪ್ರಥಮ್

'ನರಿ' ಪ್ರಥಮ್

''ಎಲ್ಲರೂ ಕೂಡ ನರಿ. ಅದ್ರಲ್ಲಿ ಸ್ವಲ್ಪ ಡೀವಿಯೇಟ್ ಮಾಡಿ ಮೈಲೇಜ್ ತೆಗೆದುಕೊಳ್ಳಲು ಪ್ರಯತ್ನ ಪಟ್ಟವರು ಪ್ರಥಮ್'' ಅಂತ ನಟ ಮೋಹನ್ ಹೇಳಿದರು.

ಪ್ರಥಮ್ 'ವಿಕೃತ'

ಪ್ರಥಮ್ 'ವಿಕೃತ'

''ನನಗೆ ವಿಕೃತ ಪದದ ಅರ್ಥ ಗೊತ್ತಾಗಿದ್ದು ಪ್ರಥಮ್ ರವರಿಂದ. ಎರಡು ಮೂರು ಬಾರಿ ಎಕ್ಸ್ ಪ್ಲನೇಷನ್ ನೀಡಿದರು. ಹೀಗಾಗಿ ಈ ಪದಕ್ಕೆ ಅವರೇ ಬದ್ಧರು'' ಎಂದುಬಿಟ್ಟರು ನಟಿ ಕಾರುಣ್ಯ ರಾಮ್.

ಭುವನ್ 'ಅಹಂಕಾರಿ' ಅಂತೆ.!

ಭುವನ್ 'ಅಹಂಕಾರಿ' ಅಂತೆ.!

'ಬಿಗ್ ಬಾಸ್' ಮನೆಗೆ ಎಂಟ್ರಿಕೊಟ್ಟ ದಿನ 'ಭುವನ್ ಗೆ ಅಹಂಕಾರ ಇದೆ' ಅಂತ ನಟಿ ಸಂಜನಾಗೆ ಅನಿಸಿತ್ತಂತೆ.

'420', 'ಕುತಂತ್ರಿ' - ಪ್ರಥಮ್

'420', 'ಕುತಂತ್ರಿ' - ಪ್ರಥಮ್

ಗಾಯಕಿ ಚೈತ್ರ ಪ್ರಕಾರ, ಪ್ರಥಮ್ '420' ಹಾಗೂ 'ಕುತಂತ್ರಿ'.

'ಅಪ್ರಾಮಾಣಿಕ' ಮೋಹನ್

'ಅಪ್ರಾಮಾಣಿಕ' ಮೋಹನ್

'ಪೂರ್ತಿ ಆಗಿ ಹೊರಗೆ ಬಂದಿಲ್ಲ' ಎಂಬ ಅಭಿಪ್ರಾಯ ವ್ಯಕ್ತಪಡಿಸಿ, ನಟಿ ಮಾಳವಿಕಾ ಅವಿನಾಶ್, ಮೋಹನ್ ರವರಿಗೆ 'ಅಪ್ರಾಮಾಣಿಕ' ಚೀಟಿ ಕೊಟ್ಟರು.

'ನೇರ' ಶೀತಲ್ ಶೆಟ್ಟಿ

'ನೇರ' ಶೀತಲ್ ಶೆಟ್ಟಿ

ನಟಿ ಶಾಲಿನಿ ಪ್ರಕಾರ, ಶೀತಲ್ ಶೆಟ್ಟಿ ಅನಿಸಿದ್ದನ್ನ 'ನೇರ'ವಾಗಿ ಹೇಳುತ್ತಾರಂತೆ. [ಮಾಳವಿಕಾರನ್ನ ಔಟ್ ಮಾಡಲು 'ಬಿಗ್ ಬಾಸ್' ಮನೆಯಲ್ಲಿ ಮಾಸ್ಟರ್ ಪ್ಲಾನ್?]

'ಸಜ್ಜನ' ಭುವನ್ ಪೊನ್ನಣ್ಣ

'ಸಜ್ಜನ' ಭುವನ್ ಪೊನ್ನಣ್ಣ

''ಬಹಳ ವರ್ಷದಿಂದ ನಾನು ನೋಡಿರುವ ಹಾಗೆ ಭುವನ್ ಸಜ್ಜನಿಕೆಯನ್ನ ಮೀರಿ ಹೋಗಿಲ್ಲ. ಭುವನ್ ಜೆಂಟಲ್ ಮ್ಯಾನ್'' ಎಂದರು ಕಾವ್ಯ ಶಾಸ್ತ್ರಿ

'ನಾಟಕೀಯ' ಪ್ರಥಮ್

'ನಾಟಕೀಯ' ಪ್ರಥಮ್

ಪ್ರಥಮ್ ಓವರ್ ಡ್ರಾಮಾ ಮಾಡುತ್ತಾರೆ ಎಂದರು ಭುವನ್ ಪೊನ್ನಣ್ಣ.

'ಕ್ಲೀನ್' ಶಾಲಿನಿ

'ಕ್ಲೀನ್' ಶಾಲಿನಿ

'ಸ್ವಚ್ಛ ಮನಸ್ಸಿನ ವ್ಯಕ್ತಿ ಶಾಲಿನಿ' ಎಂದರು ಕೀರ್ತಿ.

'ಮಾತುಗಾರ' ಓಂ ಪ್ರಕಾಶ್ ರಾವ್

'ಮಾತುಗಾರ' ಓಂ ಪ್ರಕಾಶ್ ರಾವ್

''ಒನ್ ಲೈನರ್ ಚೆನ್ನಾಗಿರುತ್ತದೆ. ಅವರ ಮಾತು ನನಗೆ ಇಷ್ಟ ಆಯ್ತು'' ಅಂತ ಓಂ ಪ್ರಕಾಶ್ ರವರಿಗೆ 'ಮಾತುಗಾರ' ಚೀಟಿಯನ್ನು ನಿರಂಜನ್ ದೇಶಪಾಂಡೆ ಕೊಟ್ಟರು.

More from Filmibeat

English summary
Bigg Boss Kannada 4, Day 15 : Here is the complete Detail of 'Manada Maathu' task given by 'Bigg Boss'.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X