For Quick Alerts
  ALLOW NOTIFICATIONS  
  For Daily Alerts

  'ಬಿಗ್ ಬಾಸ್' ಮನೆಯಲ್ಲಿ 'ಒಳ್ಳೆ ಹುಡುಗ' ಪ್ರಥಮ್ ಬಾಯ್ಬಿಟ್ಟ 'ಬಿಗ್' ಸತ್ಯ

  By Harshitha
  |

  ಹೇಳಿಕೊಳ್ಳೋಕೆ 'ಒಳ್ಳೆ ಹುಡುಗ' ಆದರೂ, ತಂಟೆಗೆ ಹೋದ್ರೆ ತರಾಟೆಗೆ ತೆಗೆದುಕೊಳ್ಳುವ ಹುಡುಗ ಪ್ರಥಮ್.

  ಪ್ರಥಮ್ 'ಹೀಗೆ' ಅಂತ ಗೊತ್ತಿದ್ದರೂ, ಅವರನ್ನ ಕೆಣಕುವವರ ಸಂಖ್ಯೆ 'ಬಿಗ್ ಬಾಸ್' ಮನೆಯಲ್ಲಿ ಕಮ್ಮಿಯೇನಿಲ್ಲ. ಇದೇ ಕಾರಣಕ್ಕೆ ಅನೇಕ ಬಾರಿ 'ಬಿಗ್ ಬಾಸ್ ಕನ್ನಡ-4' ಕಾರ್ಯಕ್ರಮದಲ್ಲಿ ದೊಡ್ಡ ರಂಪಾಟ ನಡೆದುಹೋಗಿದೆ. [ಯಾರೀ 'ತಲೆಕೆಟ್ಟ ತಂಗಳಿಟ್ಟು' ಪ್ರಥಮ್? ನಿಮಗೆ ಗೊತ್ತಿಲ್ಲದ ಸತ್ಯ ಸಂಗತಿ]

  'ಫೈರಿಂಗ್ ಸ್ಟಾರ್' ಹುಚ್ಚ ವೆಂಕಟ್ ಕೂಡ 'ಬಿಗ್ ಬಾಸ್' ಮನೆಗೆ ಕಾಲಿಟ್ಟು, ಪ್ರಥಮ್ ಗೆ ಪಂಚ್ ಕೊಟ್ಟು ಹೋದರು. ಈ ಘಟನೆ ನಡೆದ ಮೇಲೆ ಪ್ರಥಮ್ ಬಾಯಿಂದ ಒಂದು ದೊಡ್ಡ ಸತ್ಯ ಹೊರಬಿದ್ದಿದೆ.

  ಪ್ರಥಮ್ ಬಾಯ್ಬಿಟ್ಟ ಸತ್ಯ ಏನು.?

  ಪ್ರಥಮ್ ಬಾಯ್ಬಿಟ್ಟ ಸತ್ಯ ಏನು.?

  ಯೂಟ್ಯೂಬ್ ಸ್ಟಾರ್ ಹುಚ್ಚ ವೆಂಕಟ್ ಹಾಗೂ 'ಬಿಗ್ ಬಾಸ್ ಕನ್ನಡ-3' ಕಾರ್ಯಕ್ರಮದ ಕುರಿತು 37ನೇ ದಿನ ನಿರ್ದೇಶಕ ಪ್ರಥಮ್ ಬಿಚ್ಚಿಟ್ಟ ಸತ್ಯವನ್ನ ಅವರ ಮಾತುಗಳಲ್ಲೇ ಓದಿರಿ....

  'ಬಿಗ್ ಬಾಸ್ ಕನ್ನಡ-3' ಕಾರ್ಯಕ್ರಮಕ್ಕೆ ಬರಬೇಕಿತ್ತು.!

  'ಬಿಗ್ ಬಾಸ್ ಕನ್ನಡ-3' ಕಾರ್ಯಕ್ರಮಕ್ಕೆ ಬರಬೇಕಿತ್ತು.!

  ''ಬಿಗ್ ಬಾಸ್ ಕನ್ನಡ-3' ಕಾರ್ಯಕ್ರಮಕ್ಕೆ ಬರಲು ನಾನು ಏನೆಲ್ಲ ಟ್ರೈ ಮಾಡಿದ್ದೆ ಗೊತ್ತಾ? ಹುಚ್ಚ ವೆಂಕಟ್ ಹೋಗ್ತಾನೆ ಅಂದ್ರೆ ಅವನ ಎದುರುಗಡೆ ನಾನು ಇರಬೇಕು ಅಂತ ತುಂಬಾ influence ಮಾಡಿಸಿದ್ದೆ'' - ಪ್ರಥಮ್

  ಹಠಕ್ಕೆ ಬಿದ್ದಿದ್ದೆ.!

  ಹಠಕ್ಕೆ ಬಿದ್ದಿದ್ದೆ.!

  ''ಇರಿಟೇಷನ್ ಅನ್ನೋ ಪದಕ್ಕೆ ಇರಿಟೇಷನ್ ಮಾಡ್ತೀನಿ ನಾನು. ಆ ಮನುಷ್ಯನ ಜೊತೆ ನಾನಿರಬೇಕು ಅಂತ ಹಠಕ್ಕೆ ಬಿದ್ದಿದ್ದೆ. ಯಾರ್ಯಾರ ಕೈಯಲ್ಲಿ ನಾನು ಫೋನ್ ಮಾಡಿಸಿದ್ದೆ ಗೊತ್ತಾ?'' - ಪ್ರಥಮ್

  ಸೆಂಟ್ರಲ್ ಲೀಡರ್ಸ್ ನಿಂದ ಫೋನ್ ಮಾಡಿಸಿದ್ದೆ.!

  ಸೆಂಟ್ರಲ್ ಲೀಡರ್ಸ್ ನಿಂದ ಫೋನ್ ಮಾಡಿಸಿದ್ದೆ.!

  ''ನಿಜವಾಗಲೂ ಆ ಮನುಷ್ಯ ಇದ್ದ ಎಪಿಸೋಡ್ ನಲ್ಲಿ ನಾನಿರಬೇಕು ಅಂತ ಪ್ರಯತ್ನ ಪಟ್ಟಿದ್ದೆ. ಸೆಂಟ್ರಲ್ ಲೀಡರ್ಸ್ ಕೈಯಿಂದ ಫೋನ್ ಮಾಡಿಸಿದ್ದೆ'' - ಪ್ರಥಮ್

  ಚಾನೆಲ್ ನವರ ಆಯ್ಕೆ...

  ಚಾನೆಲ್ ನವರ ಆಯ್ಕೆ...

  ''ಆದ್ರೆ ಚಾನೆಲ್ ನವರು ಡಿಗ್ನಿಫೈಡ್ ಆಗಿ ಯಾರ್ಯಾರನ್ನ ಬೇಕೋ, ಅವರನ್ನೇ ಆಯ್ಕೆ ಮಾಡಿಕೊಂಡರು'' - ಪ್ರಥಮ್ [ಹುಚ್ಚ ವೆಂಕಟ್ 'ಕಿರಿಕ್': ಕೆರಳಿದ 'ಹೆಬ್ಬುಲಿ' ಕಿಚ್ಚ ಸುದೀಪ್.!]

  ಹುಚ್ಚ ವೆಂಕಟ್ ಗೂ ಪ್ರಥಮ್ ಗೂ ಆಗ್ಬರಲ್ಲ.!

  ಹುಚ್ಚ ವೆಂಕಟ್ ಗೂ ಪ್ರಥಮ್ ಗೂ ಆಗ್ಬರಲ್ಲ.!

  ಪ್ರಥಮ್ ಗೂ ಹುಚ್ಚ ವೆಂಕಟ್ ಗೂ ಆಗ್ಬರಲ್ಲ ಎಂಬುದು ಈ ಮಾತುಗಳಲ್ಲೇ ಸ್ಪಷ್ಟ. ['ಬಿಗ್' ಅವಾಂತರ: 'ಒಳ್ಳೆ ಹುಡುಗ' ಪ್ರಥಮ್ ಗೆ ಪಂಚ್ ಕೊಟ್ಟ ಹುಚ್ಚ ವೆಂಕಟ್.!]

  ಹಳೇ ಕೋಪ ಕಾರಣ

  ಹಳೇ ಕೋಪ ಕಾರಣ

  ಹಳೇ ಕೋಪದಿಂದ 'ಬಿಗ್ ಬಾಸ್' ಮನೆಗೆ ಬಂದು ಬೇಕಂತಲೇ ಪ್ರಥಮ್ ಮೇಲೆ ಹುಚ್ಚ ವೆಂಕಟ್ ಹಲ್ಲೆ ಮಾಡಿದ್ರಾ? ಎಂಬುದು ಸದ್ಯಕ್ಕೆ ಉತ್ತರವಿಲ್ಲದ ಪ್ರಶ್ನೆ.

  'ಬಿಗ್ ಬಾಸ್-3' ಬದಲು 'ಬಿಗ್ ಬಾಸ್-4'ಗೆ ಸೆಲೆಕ್ಟ್ ಆದ ಪ್ರಥಮ್

  'ಬಿಗ್ ಬಾಸ್-3' ಬದಲು 'ಬಿಗ್ ಬಾಸ್-4'ಗೆ ಸೆಲೆಕ್ಟ್ ಆದ ಪ್ರಥಮ್

  ಹುಚ್ಚ ವೆಂಕಟ್ ಎದುರು ಇರಬೇಕು ಅಂತ 'ಬಿಗ್ ಬಾಸ್ ಕನ್ನಡ-3' ಕಾರ್ಯಕ್ರಮದಲ್ಲಿ ಭಾಗಿಯಾಗಲು ಪ್ರಯತ್ನ ಪಟ್ಟಿದ್ದ ಪ್ರಥಮ್ 'ಬಿಗ್ ಬಾಸ್ ಕನ್ನಡ-4' ಕಾರ್ಯಕ್ರಮಕ್ಕೆ ಸೆಲೆಕ್ಟ್ ಆದರು.

  ಹುಚ್ಚ ವೆಂಕಟ್ ವರ್ಸಸ್ ಪ್ರಥಮ್

  ಹುಚ್ಚ ವೆಂಕಟ್ ವರ್ಸಸ್ ಪ್ರಥಮ್

  'ಬಿಗ್ ಬಾಸ್ ಕನ್ನಡ-4' ಕಾರ್ಯಕ್ರಮದಲ್ಲಿ ಪ್ರಥಮ್ ಪಕ್ಕ ಹುಚ್ಚ ವೆಂಕಟ್ ಕುಳಿತಾಗ ನಡೆದ ರಾದ್ಧಾಂತದ ಸಂಪೂರ್ಣ ವೃತ್ತಾಂತ ಇಲ್ಲಿದೆ ಓದಿರಿ.... [ಅಷ್ಟಕ್ಕೂ, ಸಡನ್ನಾಗಿ ಹುಚ್ಚ ವೆಂಕಟ್ ಗೆ ಪಿತ್ತ ನೆತ್ತಿಗೇರಿದ್ದು ಯಾಕೆ.?]

  English summary
  Bigg Boss Kannada 4, Day 37: Kannada Director Pratham revealed that he wanted to take part in Bigg Boss Kannada 3, along with Huccha Venkat.
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X