For Quick Alerts
  ALLOW NOTIFICATIONS  
  For Daily Alerts

  'ಬಿಗ್ ಬಾಸ್' ಬಗ್ಗೆ ನಟ ಮೋಹನ್ ಗೆ ಅನುಮಾನ ಕಾಡ್ತಿದ್ಯಾ.?

  By ಒನ್ಇಂಡಿಯಾ/ಫಿಲ್ಮಿಬೀಟ್ ಕನ್ನಡ ಸಿಬ್ಬಂದಿ
  |

  'ಬಿಗ್ ಬಾಸ್ ಕನ್ನಡ' ಇತಿಹಾಸದಲ್ಲಿ ಮೊಟ್ಟ ಮೊದಲ ಬಾರಿಗೆ ಮನೆಯ ಗಾರ್ಡನ್ ಏರಿಯಾದಲ್ಲಿ ಮೊನ್ನೆ ಪ್ರೆಸ್ ಮೀಟ್ ನಡೆಯಿತು. 'ಬಿಗ್ ಬಾಸ್ ಕನ್ನಡ-4' ಕಾರ್ಯಕ್ರಮದ ಗ್ರ್ಯಾಂಡ್ ಫಿನಾಲೆಗೂ ಒಂದು ವಾರದ ಮುನ್ನ ಎಲ್ಲ ಸ್ಪರ್ಧಿಗಳಿಗೆ ನಾಲ್ವರು ಪತ್ರಕರ್ತರು ಪ್ರಶ್ನೆ ಕೇಳಿದರು.

  ಅದರಲ್ಲಿ ನಟ, ನಿರ್ದೇಶಕ ಮೋಹನ್ ರವರಿಗೆ ಪತ್ರಕರ್ತ ಶರಣು ಹುಲ್ಲೂರು ಕೇಳಿದ ಪ್ರಶ್ನೆ ಇದು - ''ಮೊನ್ನೆ ಮಿನಿ ಮ್ಯೂಸಿಯಂ ಟಾಸ್ಕ್ ಮಾಡುವಾಗ ಪ್ರಥಮ್ ವರ್ತನೆಯನ್ನ ಖಂಡಿಸಿ, ಒಂದು ಮಾತನ್ನು ಕೇಳುತ್ತೀರಾ... 'ಇಲ್ಲಿರುವ ಸ್ಪರ್ಧಿಗಳನ್ನ ಹೊಡೆದರೂ 'ಬಿಗ್ ಬಾಸ್' ನಿನ್ನ ಕ್ಷಮಿಸಿಬಿಡ್ತಾರೆ ಅಂತ'' ಅಂದ್ರೆ 'ಬಿಗ್ ಬಾಸ್' ಮೇಲೆ ನಿಮಗೆ ಅನುಮಾನ ಇದ್ಯಾ.?'' [Exclusive: 'ಬಿಗ್ ಬಾಸ್' ಮನೆಯಲ್ಲಾದ ಡಿಢೀರ್ ಪ್ರೆಸ್ ಮೀಟ್ ಹೇಗಿತ್ತು ಗೊತ್ತಾ?]

  ನಟ, ನಿರ್ದೇಶಕ ಮೋಹನ್ ಕೊಟ್ಟ ಉತ್ತರ ಇದು - ''ಅದು ಅನುಮಾನದಿಂದ ಬರುವ ಮಾತುಗಳಲ್ಲ. ಪ್ರಥಮ್ ಗೆ ಒಂದು ಬ್ಯಾರಿಕೇಡ್ ಅಂತ ಇಲ್ಲ. ಮೊದಲು ಮಾತನಾಡುತ್ತಾನೆ, ನಂತರ ಬಂದು ಕ್ಷಮೆ ಕೇಳುತ್ತಾನೆ. ಅನುಮಾನ ಇದ್ದಿದ್ರೆ, ಈಗ ವ್ಯಕ್ತಪಡಿಸುವ ಅಗತ್ಯ ಇಲ್ಲ. ಸುದೀಪ್ ಕೂಡ ಶನಿವಾರ ನಮ್ಮನ್ನೆಲ್ಲ ಎಚ್ಚರಿಸುತ್ತಾರೆ. ಆದ್ರೆ ಪ್ರಥಮ್ ನ ಏನೂ ಕೇಳಲ್ಲ ಅನ್ನೋ ತರಹ ಮಾತನಾಡಿದ್ದೇವೆ. ಆದರೆ ಅದು ಅನುಮಾನ ಅಲ್ಲ. ಪ್ರಥಮ್ ನ ಕಂಟ್ರೋಲ್ ಮಾಡೋಕೆ ಒಂದು ಲಗಾಮು ಇಲ್ಲ ಎನ್ನುವ ಅರ್ಥದಲ್ಲಿ ಮಾತನಾಡಿದ್ದೇವೆ ಅಷ್ಟೇ'' [ವಿಡಿಯೋ: 'ಬಿಗ್ ಬಾಸ್' ಸ್ಪರ್ಧಿಗಳ ಮೇಲೆ ಪತ್ರಕರ್ತರು ತೂರಿದ ಪ್ರಶ್ನೆಗಳ ಬಾಣ.!]

  English summary
  Bigg Boss Kannada 4: Day 105, Kannada Actor Mohan clarifies his statement on Pratham's Behaviour in 'Mini Museum' Task

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X