»   » ಇಂದು 'ಬಿಗ್ ಬಾಸ್' ಕಾರ್ಯಕ್ರಮದಲ್ಲಿ ದಿಢೀರ್ ಪತ್ರಿಕಾಗೋಷ್ಠಿ.! ನಿರೀಕ್ಷಿಸಿ...

ಇಂದು 'ಬಿಗ್ ಬಾಸ್' ಕಾರ್ಯಕ್ರಮದಲ್ಲಿ ದಿಢೀರ್ ಪತ್ರಿಕಾಗೋಷ್ಠಿ.! ನಿರೀಕ್ಷಿಸಿ...

Posted By:
Subscribe to Filmibeat Kannada

'ಬಿಗ್ ಬಾಸ್ ಕನ್ನಡ-4' ಕಾರ್ಯಕ್ರಮ ಒಂದು ವಿಶಿಷ್ಟ ಪ್ರಯೋಗಕ್ಕೆ ಸಾಕ್ಷಿ ಆಗಿದೆ. ಕನ್ನಡದ 'ಬಿಗ್ ಬಾಸ್' ಇತಿಹಾಸದಲ್ಲಿಯೇ ಇದೇ ಮೊಟ್ಟ ಮೊದಲ ಬಾರಿಗೆ 'ಬಿಗ್ ಬಾಸ್' ಮನೆಯೊಳಗೆ ದಿಢೀರ್ ಪತ್ರಿಕಾಗೋಷ್ಠಿ ನಡೆದಿದೆ.

ಪ್ರಜಾವಾಣಿ, ವಿಜಯ ಕರ್ನಾಟಕ, ಈಟಿವಿ ನ್ಯೂಸ್ ಮತ್ತು ಒನ್ಇಂಡಿಯಾ/ಫಿಲ್ಮಿಬೀಟ್ ಕನ್ನಡದ ವರದಿಗಾರರು ಸೇರಿದಂತೆ ಒಟ್ಟು ನಾಲ್ವರು ಪತ್ರಕರ್ತರು ನಿನ್ನೆ ಸಂಜೆ 'ಬಿಗ್ ಬಾಸ್' ಮನೆ ಪ್ರವೇಶಿಸಿ ಸ್ಪರ್ಧಿಗಳಿಗೆ ಪ್ರಶ್ನೆಗಳ ಬಾಣ ಬಿಟ್ಟಿದ್ದಾರೆ.[Exclusive: 'ಬಿಗ್ ಬಾಸ್' ಮನೆಯಲ್ಲಾದ ಡಿಢೀರ್ ಪ್ರೆಸ್ ಮೀಟ್ ಹೇಗಿತ್ತು ಗೊತ್ತಾ?]

BBK4: Don't miss to watch Bigg Boss pressmeet today at 9 pm

ಪತ್ರಕರ್ತರು ಕೇಳಿದ ಅಷ್ಟೂ ನೇರ ಪ್ರಶ್ನೆಗಳಿಗೆ ಕೊಂಚ ಕೂಡ ಹಮ್ಮು-ಬಿಮ್ಮು ತೋರದೇ 'ಬಿಗ್ ಬಾಸ್' ಸ್ಪರ್ಧಿಗಳು ನೇರ ಉತ್ತರ ಕೊಟ್ಟಿದ್ದಾರೆ.['ಬಿಗ್ ಬಾಸ್' ವೀಕ್ಷಕರ ಲೆಕ್ಕಾಚಾರ ಹೀಗೂ ಉಂಟೇ.!?]

ಪತ್ರಕರ್ತರ ನೇರ, ನಿಷ್ಠೂರ ಪ್ರಶ್ನೆಗಳು ಮತ್ತು ಸ್ಪರ್ಧಿಗಳ ಬಿಚ್ಚು ಮನಸ್ಸಿನ ಉತ್ತರ ಹೊಂದಿರುವ 'ಬಿಗ್ ಬಾಸ್' ಪತ್ರಿಕಾಗೋಷ್ಠಿ ಸಂಚಿಕೆ ಇಂದು ರಾತ್ರಿ 9 ಗಂಟೆಗೆ ನಿಮ್ಮ ಕಲರ್ಸ್ ಸೂಪರ್ ವಾಹಿನಿಯಲ್ಲಿ ಪ್ರಸಾರವಾಗಲಿದೆ. ಮಿಸ್ ಮಾಡದೇ ನೋಡಿ....

English summary
Bigg Boss Kannada 4: Week 15 - Don't miss to watch Bigg Boss pressmeet today at 9 pm in Colors Super Channel

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada