ಪ್ರಥಮ್-ಸಂಜನಾ-ಭುವನ್ ತ್ರಿಕೋನ ಪ್ರೇಮಕಥೆಗೆ ಕ್ಲೈಮ್ಯಾಕ್ಸ್ ಕೊಡದ ಕಿಚ್ಚ!
'ಬಿಗ್ ಬಾಸ್' ಮನೆಯೊಳಗೆ ಕಾಲಿಟ್ಟ ದಿನದಿಂದಲೂ ಭುವನ್ ಮತ್ತು ಸಂಜನಾ ನಡುವೆ ಸಂಥಿಂಗ್ ಸಂಥಿಂಗ್ ನಡೆಯುತ್ತಿದೆ ಎಂಬ ಸಂಗತಿ 'ಬಿಗ್ ಬಾಸ್' ಮನೆ ಸದಸ್ಯರಿಗೂ ಗೊತ್ತು.
ಭುವನ್-ಸಂಜನಾ 'ಬಾತ್ ರೂಮ್' ಎಪಿಸೋಡ್ ಆದ್ಮೇಲೆ, ಸಂಜನಾ ಹಿಂದೆ ಬಿದ್ದ ಪ್ರಥಮ್ 'ಐ ಲವ್ ಯು, ಯು ಮಸ್ಟ್ ಲವ್ ಮಿ' ಅಂತ ಹೇಳಲು ಶುರು ಮಾಡಿದರು. ಅದಕ್ಕೆ ಸರಿಯಾಗಿ ಸುದೀಪ್ ಕೂಡ ಪ್ರಥಮ್ ಕೈಯಲ್ಲಿ ಒಂದು ಲವ್ ಲೆಟರ್ ಬರೆಸಿದರು.[ಸಂಜನಾಗೆ 'ಪ್ರೇಮಪತ್ರ' ಬರೆದ 'ಪ್ರಥಮ್': ಎದ್ದುಬಿದ್ದು ನಕ್ಕಿದ ಸುದೀಪ್]
ಅಲ್ಲಿಯವರೆಗೂ ಕಾಮಿಡಿ ಆಗಿದ್ದ ಪ್ರಥಮ್-ಸಂಜನಾ ಲವ್ ಕಹಾನಿಯಲ್ಲಿ ಭುವನ್ ಮೂಗು ತೂರಿಸಿದ ಮೇಲೆ 'ಕಿರಿಕ್' ಶುರು ಆಯ್ತು. ಲವರ್ ಬಾಯ್ ಆಗಿದ್ದ ಪ್ರಥಮ್ ಇದಕ್ಕಿದ್ದಂತೆ 'ವಿಲನ್' ಆಗಿ, ಸಂಜನಾ ಕಣ್ಣೀರು ಸುರಿಸಿ, ಮನೆಯವರೆಲ್ಲರೂ ನಿದ್ದೆಗೆಟ್ಟ ಬಳಿಕ ಪಂಚಾಯತಿ ನಡೆಸಲು ಶನಿವಾರ ಸುದೀಪ್ ಹಾಜರ್ ಆದರು.

ಕಾಲರ್ ಆಫ್ ದಿ ವೀಕ್ ಪ್ರಶ್ನೆ ಕೇಳಿದರು
ವಾರ ಪೂರ್ತಿ 'ಬಿಗ್ ಬಾಸ್' ಮನೆಯಲ್ಲಿ ನಡೆದ ಭುವನ್-ಸಂಜನಾ-ಪ್ರಥಮ್ ವಿವಾದದ ಕುರಿತು ಮೈಸೂರಿನ ಉದಯ್ ಎಂಬುವರು ಪ್ರಥಮ್ ಗೆ ಪ್ರಶ್ನೆ ಕೇಳಿದರು. [ಕಿಚ್ಚನ ಎದುರು ಸಂಜನಾ-ಭುವನ್ ಲವ್ ಸ್ಟೋರಿ!]

ಪ್ರಶ್ನೆ ಏನು.?
''ಹೆಣ್ಮಕ್ಕಳಿಗೆ ನಾನು ಮರ್ಯಾದೆ ಕೊಟ್ಟು ಮಾತನಾಡಿಸುತ್ತೇನೆ ಅಂತ ನೀವು ಅವಾಗವಾಗ ಹೇಳ್ತಿರ್ತೀರಾ. ಆದ್ರೆ ಇತ್ತೀಚೆಗೆ ನೀವು ಸಂಜನಾ ರವರ ಹಿಂದೆ ಬಿದ್ದು, ಭುವನ್-ಸಂಜನಾ ಮಧ್ಯೆ ಇರುವ ಸಂಬಂಧವನ್ನ ಒಡೆದು ಹಾಕಲು ಪ್ರಯತ್ನ ಪಡ್ತಿದ್ದೀರಾ.. ಸಂಜನಾ ರವರನ್ನ ನೀವು ನಿಮ್ಮ ಮೈಲೇಜ್ ಗೆ ಯೂಸ್ ಮಾಡಿಕೊಳ್ಳುತ್ತಿದ್ದೀರಾ ಅಂತ ನಮಗೆ ಅನಿಸ್ತಾಯಿದೆ. ನಿಮ್ಮ ಮೇಲೆ ನಮಗೆ ಇದ್ದ ಭಾವನೆ ಚೀಪ್ ಆಗ್ತಿದೆ. ಇದಕ್ಕೆ ನಿಮ್ಮ ಜಸ್ಟಿಫಿಕೇಷನ್ ಏನು.?'' ಅಂತ ಪ್ರಥಮ್ ಗೆ 'ಕಾಲರ್ ಆಫ್ ದಿ ವೀಕ್' ಪ್ರಶ್ನೆ ಕೇಳಿದರು.

ಪ್ರಥಮ್ ಕೊಟ್ಟ ಉತ್ತರ ಏನು.?
''ಮೊದಲು ನಾನು ಕ್ಷಮೆ ಕೇಳುತ್ತೇನೆ. ಯಾಕಂದ್ರೆ ಹತ್ತು ವಾರ ನೀವು ನನ್ನ ಕೈ ಹಿಡಿದಿದ್ದೀರಾ. ಹೀಗಿರುವಾಗ ನಿಮ್ಮ ಪ್ರೀತಿಗೆ ನಾನು ಚೀಪ್ ಆಗಿ ನಡೆದುಕೊಂಡಿದ್ದೇನೆ ಅಂದ್ರೆ ನಾನು ಕ್ಷಮೆ ಕೇಳುತ್ತೇನೆ. ಸ್ವಲ್ಪ ವಿಶೇಷವಾಗಿರಲಿ, ತಮಾಷೆ ಆಗಿರಲಿ ಎನ್ನುವ ಕಾರಣಕ್ಕೆ ನಾನು ಲವ್ ಲೆಟರ್ ಬರೆದಿದ್ದು ನಿಜ. ತುಂಬಾ ತಮಾಷೆಯಾಗಿ ಎಲ್ಲವೂ ಹೋಗ್ತಾಯಿತ್ತು. ಪ್ರತಿ ಸಲ ನಾನು ಅವರಿಗೆ 'ಐ ಲವ್ ಯು' ಹೇಳುವಾಗಲೂ, ನಿಮಗೆ (ಸಂಜನಾ) ಕಿರಿಕಿರಿ ಆಗ್ತಿಲ್ಲ ಅಂತ ತಿಳ್ಕೊಳ್ತೀನಿ ಅಂತ ಕ್ಲಾರಿಟಿ ತಗೊಂಡು ಹೇಳಿದ್ದೀನಿ. ಆದ್ರೆ ಇದರಲ್ಲಿ ಭುವನ್ ಮಧ್ಯೆ ಬಂದಿದ್ದು ನನಗೆ ಬೇಸರ ಆಯ್ತು'' ಅಂತ ಪ್ರಥಮ್ ಸ್ಪಷ್ಟನೆ ನೀಡಿದರು.

ಪ್ರಥಮ್ ಕೊಟ್ಟ ಕ್ಲಾರಿಟಿ ಇದು..
''ತಮಾಷೆಯಾಗಿ ಮುಗಿದು ಹೋಗಿತ್ತು. ಆದರೂ, ಅವತ್ತು ಮಧ್ಯಾಹ್ನ ಸಂಜನಾ ನನ್ನ ಮೇಲೆ ಬಂದು ಆರ್ಭಟ ಮಾಡಿದ್ದು ನನಗೆ ಬೇಸರ ಆಯ್ತು. ಮಾರನೇ ದಿನ ನನ್ನ ಹತ್ತಿರ ಬಂದು ಭುವನ್ ಕೇಳುತ್ತಾರೆ. ಅವರು ಯಾಕೆ ಈ ವಿಷಯದಲ್ಲಿ ಮೂಗು ತೂರಿಸಬೇಕು.? ನನಗೆ ನಿಜವಾಗ್ಲೂ ಬೇಜಾರಾಯ್ತು'' ಅಂತ ಸುದೀಪ್ ಮುಂದೆ ಪ್ರಥಮ್ ಹೇಳಿದರು.

ಪ್ರಥಮ್ ಗೆ ಸುದೀಪ್ ಬಿಟ್ಟ ಬಾಣ
''ಫಸ್ಟ್ ಹಾಫ್ ಆಫ್ ದಿ ಬಿಗ್ ಬಾಸ್ ಪ್ರತಿಭಟನೆ ಮಾಡಿಕೊಂಡು ಕಳೆಯುತ್ತೀರಾ. ಒಂದು ದಿನ ನಿಮಗೆ ಲವರ್ ಬಾಯ್ ಆಗಬೇಕು ಅನ್ಸುತ್ತೆ. ನಿಮಗೆ ಮೊದಲು ಸಿಗುವುದು ಸುಕೃತಾ. ಅದಾದ ಮೇಲೆ ಕೆಲವೇ ಗಂಟೆಗಳಲ್ಲಿ ಪಾರ್ಟಿ ಚೇಂಜ್ ಆಗುತ್ತದೆ. ಸಂಜನಾ ಹಿಂದೆ ಹೋಗುತ್ತೀರಾ. ಅವರಿಗೆ ಐ ಲವ್ ಯು ಹೇಳುತ್ತೀರಾ. ತಮಾಷೆ-ಸೀರಿಯಸ್ ನಿಮಗೆ ಬಿಟ್ಟಿದ್ದು. ನಿಮ್ಮ ಇಮೇಜ್ ನ ನೀವು ಬದಲಾಯಿಸಿಕೊಳ್ಳುವುದು ತಪ್ಪಲ್ಲ. ಆದ್ರೆ, ಹುಡುಗಿಯನ್ನ ಆಟಿಕೆ ತರಹ ಬಳಸಿಕೊಳ್ಳುವುದು.?'' ಅಂತ ಪ್ರಥಮ್ ಗೆ ಸುದೀಪ್ ಪ್ರಶ್ನೆ ಕೇಳಿದರು.

ಪ್ರಥಮ್ ಏನಂದರು?
''ಖಂಡಿತ ಇದು ಇಮೇಜ್ ಬದಲಿಸುವ ಪ್ರಯತ್ನ ಅಲ್ಲ. ನನ್ನ ಮನಸ್ಸಿನಲ್ಲಿ ಇಷ್ಟ ಆಗಿದ್ದು ನಿಜ'' ಅಂತ ಪ್ರಥಮ್ ಹೇಳಿದರು. ಒಮ್ಮೆ ತಮಾಷೆ, ಇನ್ನೊಮ್ಮೆ ಸೀರಿಯಸ್ ಅಂತ ಪ್ರಥಮ್ ಹೇಳಿದಕ್ಕೆ, ''ನನಗೆ ಗೊತ್ತಿರುವ ಹಾಗೆ ಒಳಗೆ ಇರುವವರು ಯಾರೂ ಚಿಕ್ಕಮಕ್ಕಳಲ್ಲ'' ಅಂತ ಸುದೀಪ್ ಟಾಪಿಕ್ ಚೇಂಜ್ ಮಾಡಿದರು.

ಕಳಪೆ ಬೋರ್ಡ್ ನಿಂದ ಮತ್ತೆ ಶುರು ಆಯ್ತು.!
ಭುವನ್ ಗೆ ಸಿಕ್ಕ ಕಳಪೆ ಬೋರ್ಡ್ ಪ್ರಶ್ನೆ ಬಂದಾಗ ಲವ್ ಟ್ರಯಾಂಗಲ್ ಟಾಪಿಕ್ ಮತ್ತೆ ಶುರು ಆಯ್ತು. ''ಪರ್ಸನಲ್ ರೀಸನ್ ಗಳಿಂದ ಕಳಪೆ ಬೋರ್ಡ್ ಕೊಟ್ಟರು'' ಅಂತ ಪ್ರಥಮ್ ರತ್ತ ಭುವನ್ ಬೆಟ್ಟು ಮಾಡಿ ತೋರಿಸಿದರು.

ಏಟು-ಎದಿರೇಟು
ಪ್ರಥಮ್ - ''ಪ್ರೈಮರಿ ಸ್ಕೂಲ್ ಮಕ್ಕಳು ಹೆಡ್ ಮಾಸ್ಟರ್ ಗೆ ಜೊಲ್ಲು ಸುರಿಸುತ್ತಾರೆ ಅಂತ ಹೇಳಲ್ಲ. ಅವರು ಹೇಳಿದ್ದು ನನಗೆ ವೈಯುಕ್ತಿಕವಾಗಿ ಹರ್ಟ್ ಆಯ್ತು''
ಭುವನ್ - ''ಹೆಡ್ ಮಾಸ್ಟರ್ ಯೂಸ್ ಮಾಡುತ್ತಿದ್ದ ಪದಗಳು ತುಂಬಾ ಕೆಟ್ಟದ್ದಾಗಿತ್ತು. ವಾರ್ಷಿಕೋತ್ಸವದ ಸ್ಟೇಜ್ ಮೇಲೂ ಚೀಪ್ ಆಗಿ ಮಾತನಾಡಿದ್ದಾರೆ. ಇದನ್ನೆಲ್ಲ ನೋಡಿದ್ರೆ, ಬೇರೆಯವರಿಗೆ ಕಳಪೆ ಬೋರ್ಡ್ ಕೊಡುವ ಅಧಿಕಾರ ಅವರಿಗೆ ಇಲ್ಲ ಅಂತ ಅನಿಸ್ತು''

ಸುದೀಪ್ ಏನಂದರು.?
''ಕ್ಯಾಪ್ಟನ್ ಶಿಪ್ ಮುಗಿದ್ಮೇಲೆ ಮೋಹನ್ ರವರು ನಿಮಗೆ (ಪ್ರಥಮ್) ಒಂದು ಮಾತು ಹೇಳುತ್ತಾರೆ. ಹತ್ತು ವಾರ ಗಳಿಸಿದ್ದು ಒಂದೇ ವಾರ ಕಳ್ಕೊಂಡೆ ಅಂತ. ಅವರ ಅನುಭವಕ್ಕೆ ಬೆಲೆ ಕೊಡಬಹುದಿತ್ತು ತಾವು. ನಿಮಗೂ-ಭುವನ್ ಗೂ-ಸಂಜನಾಗೂ ಒಂದೇ ಮಾತಲ್ಲಿ ಹೇಳುವುದಾದರೆ, ಬೇರೆ ಸ್ಪರ್ಧಿಗಳಿಗೆ ಡಿಸ್ಟರ್ಬ್ ಮಾಡಬೇಡಿ. ಪ್ರತಿಯೊಬ್ಬರನ್ನೂ ಅದರಲ್ಲಿ ಡಿಸ್ಟರ್ಬ್ ಮಾಡುವ ಅಧಿಕಾರ ಯಾರಿಗೂ ಇಲ್ಲ'' ಅಂತ ಸುದೀಪ್ ಬುದ್ಧಿ ಮಾತು ಹೇಳಿದರು.

ಯಾವುದು ಒಪ್ಪಿಗೆ ಆಗಲ್ಲ!
''ನಾವೇ ಬಹಳ ಮರ್ಯಾದೆ ಕೊಡುವಂಥ ವ್ಯಕ್ತಿಗಳು ಅಲ್ಲಿ ಇದ್ದಾರೆ. ವೈಯುಕ್ತಿಕವಾಗಿ ನಾನೇ ಅಂದುಕೊಳ್ಳೋಣ. ತಾವು ಅಂಥವರ ಹತ್ರನೂ ಕೆಟ್ಟದಾಗಿ ಬೈಯ್ಕೊಂಡು ಮಾಡಬೇಕಾದರೆ ಅದು ಒಪ್ಪಿಗೆ ಆಗಲ್ಲ'' - ಸುದೀಪ್

ಸುಮ್ಮನಿದ್ದ ಸಂಜನಾ!
''ಅವಾಗ್ಲಿಂದ ನೀವು(ಪ್ರಥಮ್), ಭುವನ್ ಮಾತನಾಡುತ್ತಿದ್ದೀರಾ. ಸೈಲೆಂಟ್ ಆಗಿ ಕೂತಿರೋದು ಸಂಜನಾ. ಅವರೇ ಮಾತನಾಡುತ್ತಿಲ್ಲ'' ಅಂತ ಸುದೀಪ್ ಕೇಳಿದರು. ಅದಕ್ಕೆ ಸಂಜನಾ, ''ಎಲ್ಲ ಬ್ಲೇಮ್ ನನ್ನ ಮೇಲೆ ಬರ್ತಿದೆ'' ಅಂತ ಹೇಳಿದರು. ''ಯಾರಿಂದ ಬರ್ತಿದೆ'' ಅಂತ ಸುದೀಪ್ ಕೇಳಿದಕ್ಕೆ, ಸಂಜನಾ ''ಭುವನ್'' ಹೆಸರು ಹೇಳಿದರು. ''ನೀವು ಆ ಲೀನಿಯನ್ಸ್ ಕೊಟ್ಟಿರೋದಕ್ಕೆ ಅವರ ಕಡೆಯಿಂದ ಬರುತ್ತಿದೆ. ಆ ಲೀನಿಯನ್ಸ್ ಭುವನ್ ಗೆ ಕೊಟ್ಟಿರೋದು ಯಾರು? ಕನ್ಸರ್ನ್ ಇರಬೇಕು ಆದ್ರೆ ಡ್ಯಾಮೇಜ್ ಮಾಡುವ ಮಟ್ಟಕ್ಕೆ ಬರಬಾರದು'' ಅಂತ ಸಂಜನಾಗೆ ಸುದೀಪ್ ಕಿವಿಮಾತು ಹೇಳಿದರು.

ಇಷ್ಟಾದರೂ ಭುವನ್ ಸುಮ್ನೆ ಇರಲಿಲ್ಲ.!
ಇಷ್ಟೆಲ್ಲ ಆದರೂ ಭುವನ್ ಸುಮ್ನೆ ಇರಲಿಲ್ಲ. ಬೆಡ್ ರೂಮ್ ನಲ್ಲಿ ಪ್ರಥಮ್ ಹೇಳಿದ್ದನ್ನ ಇಟ್ಕೊಂಡು ಹೊಸ ಕ್ಯಾತೆ ತೆಗೆದರು. ಆಗ ಸುದೀಪ್ ''ನಿಮಗೆ ಯಾಕೆ ಬೇಕು.?'' ಅಂತ ಭುವನ್ ಗೆ ಸಿಡುಕಿದರು.

ಕ್ಲಾರಿಟಿ ಇಲ್ಲ, ಕ್ಲೈಮ್ಯಾಕ್ಸ್ ಇಲ್ಲ.!
'ವಾರದ ಕಥೆ ಕಿಚ್ಚನ ಜೊತೆ' ಕಾರ್ಯಕ್ರಮದಲ್ಲಿ ಭುವನ್-ಸಂಜನಾ-ಪ್ರಥಮ್ ವಿವಾದಕ್ಕೆ ಕ್ಲಾರಿಟಿ ಆಗ್ಲಿ, ಕ್ಲೈಮ್ಯಾಕ್ಸ್ ಆಗಲಿ ಸಿಗಲಿಲ್ಲ. ಸಂಜನಾ ಸುಮ್ಮನಾದರೂ, ಪ್ರಥಮ್ ತೆಪ್ಪಗಾದರೂ, ಎಲ್ಲವನ್ನೂ ಮರೆಯುವ ಹಾಗೆ ಭುವನ್ ಕಂಡು ಬರಲಿಲ್ಲ. ತ್ರಿಕೋನ ಪ್ರೇಮಕಥೆಯಲ್ಲಿ ಮುಂದೆ ಏನೆಲ್ಲ ತಿರುವುಗಳು ಕಾದಿದೆಯೋ...!?


Click it and Unblock the Notifications











