ಕಿಚ್ಚ ಸುದೀಪ್ ಮುಂದೆ ಅಳಲು ತೋಡಿಕೊಂಡ 'ಪ್ರಕೃತಿ ವಿಕೋಪ' ಪ್ರಥಮ್.!
ಪ್ರತಿಭಟನೆ ಮಾಡುವುದರಲ್ಲಿ, ವಾದ ಮಾಡುವುದರಲ್ಲಿ, ಖಂಡಿಸುವುದರಲ್ಲಿ ಪ್ರಥಮ್ ಎತ್ತಿದ ಕೈ. 'ಕಿರಿಕ್' ಮಾಡಿದ್ರೆ ಕಾಲು ಕೆರೆದುಕೊಂಡು ಜಗಳಕ್ಕೆ ಬೀಳುವ ಪ್ರಥಮ್, ಕಳೆದ ವಾರ ತುಂಬಾ ಬೇಸರ ಮಾಡಿಕೊಂಡಿದ್ದರು. ಅದಕ್ಕೆ ಕಾರಣ ನಿರಂಜನ್ ದೇಶಪಾಂಡೆ.!
ಕಾರಣ ಕೊಡದೆ ನಾಮಿನೇಟ್ ಮಾಡಿದಕ್ಕೆ ನಿರಂಜನ್ ಮೇಲೆ ಪ್ರಥಮ್ ಮುನಿಸಿಕೊಂಡಿದ್ದರು. ಹಣೆಗೆ ಕಪ್ಪು ಪಟ್ಟಿ ಧರಿಸಿ ಪ್ರತಿಭಟನೆ ಮಾಡಿದ್ದರು, ಉಪವಾಸ ಸತ್ಯಾಗ್ರಹ ಕೈಗೊಂಡಿದ್ದರು. ಸಮಾಧಾನ ಆಗದೇ ಇದ್ದಾಗ ಕಣ್ಣೀರು ಸುರಿಸಿದ್ದರು. [ಯಾರೀ 'ತಲೆಕೆಟ್ಟ ತಂಗಳಿಟ್ಟು' ಪ್ರಥಮ್? ನಿಮಗೆ ಗೊತ್ತಿಲ್ಲದ ಸತ್ಯ ಸಂಗತಿ]
ಈ ಟಾಪಿಕ್ ನ ಕಿಚ್ಚ ಸುದೀಪ್ 'ವಾರದ ಕಥೆ ಕಿಚ್ಚನ ಜೊತೆ' ಕಾರ್ಯಕ್ರಮದಲ್ಲಿ ತೆಗೆದಾಗ, ತಮ್ಮ ಅಳಲನ್ನು ಪ್ರಥಮ್ ತೋಡಿಕೊಂಡರು. ಸುದೀಪ್ ಮುಂದೆ ಪ್ರಥಮ್ ಏನೆಲ್ಲ ಹೇಳಿದರು ಅಂತ ಅವರ ಮಾತುಗಳಲ್ಲೇ ಓದಿರಿ....

ಸುಲಭವಾಗಿ ಅಳುವವನಲ್ಲ.!
''ನಾನು ಸುಲಭವಾಗಿ ಅಳುವುದಿಲ್ಲ. ಒಂದು ಹನಿ ಕಣ್ಣೀರು, ಒಂದು ಟಿ.ಎಂ.ಸಿ ನೀರಿಗಿಂತಲೂ ಮಹತ್ವ ಅಂತ ಹೇಳಿಕೊಂಡು ಬಂದವನು ನಾನು. ಅಂಥದ್ರಲ್ಲಿ ನಾನೇ ಅತ್ತು ಬಿಟ್ಟೆ. ಮೊದಲನೇ ವಾರ ಎಲ್ಲರ ಮೇಲೂ ನನಗೆ ತುಂಬಾ ಅಸಮಾಧಾನ ಇತ್ತು. ನಂತರ ನೀವು ನನ್ನ ತಿದ್ದಿದ ಮೇಲೆ, ಎಲ್ಲರ ಮಹತ್ವ ನನಗೆ ಗೊತ್ತಾಗುತ್ತಾ ಬಂತು'' - ಪ್ರಥಮ್ ['ಬಿಗ್ ಬಾಸ್' ಮನೆಯಲ್ಲಿ 'ಒಳ್ಳೆ ಹುಡುಗ' ಪ್ರಥಮ್ ಗೆ ಉಳಿಗಾಲ ಇಲ್ಲ.!]

ತುಂಬಾ ಬೇಸರ ಆಯ್ತು.!
''ನೀವು ಪ್ರೀತಿಯಿಂದ ಕಿವಿ ಹಿಂಡಿದ ಮೇಲೆ ನಾನು ತುಂಬಾ ಬಗ್ಗಿದೆ. ಆದ್ರೆ, ನನಗೆ ಕಾರಣ ಕೊಡದೆ ನಾಮಿನೇಷನ್ ಮಾಡಿದ್ದು, ಹಾಗೂ ನನ್ನ ಹೆಸರನ್ನು ನಿರಂಜನ್ ದೇಶಪಾಂಡೆ ದುರ್ಬಳಕೆ ಮಾಡಿಕೊಂಡಿದ್ದು ತುಂಬಾ ಬೇಸರ ಆಯ್ತು. ಏನೂ ಮಾಡೋಕೆ ಆಗ್ತಿಲ್ಲವಲ್ಲಾ ಎಂಬ ಅಸಹಾಯಕತೆ ನನ್ನನ್ನ ಕಾಡ್ತಿತ್ತು'' - ಪ್ರಥಮ್ ['ಬಿಗ್' ಅವಾಂತರ: 'ಒಳ್ಳೆ ಹುಡುಗ' ಪ್ರಥಮ್ ಗೆ ಪಂಚ್ ಕೊಟ್ಟ ಹುಚ್ಚ ವೆಂಕಟ್.!]

ಉತ್ತರ ಕೊಡಲಿಲ್ಲ.!
''ನಾಮಿನೇಷನ್ ಮಾಡಲು ಕಾರಣ ಕೊಡಬೇಕು. ಆದ್ರೆ, ನನ್ನ ಹೆಸರನ್ನ ಮುಂದೆ ಇಟ್ಕೊಂಡು ಆಟವಾಡುವುದನ್ನು ಯಾರೂ ಹೇಳಿಲ್ಲ. ನನಗೆ ಉತ್ತರ ಬೇಕಿತ್ತು. ಕೇಳಿದರೆ, ಏನನ್ನೂ ಹೇಳುವುದಿಲ್ಲ'' [ಪ್ರಥಮ್ ಗೆ ಹುಚ್ಚ ವೆಂಕಟ್ ಪಂಚ್: ಮನೆ ಸದಸ್ಯರಿಗೂ ಪ್ರಥಮ್ ಟಾರ್ಗೆಟ್]

ನನ್ನ ಭಾವನೆಗಳಿಗೆ ಬೆಲೆ ಇಲ್ವಾ.?
''ಪ್ರತಿ ದಿನ ನನ್ನ ಪಾಡಿಗೆ ನಾನಿದ್ದರೂ ನನ್ನ ಭಾವನೆಗಳಿಗೆ ಬೆಲೆ ಇಲ್ವಾ.? ವೈಯುಕ್ತಿಕವಾಗಿ ಮೊದಲನೇ ವಾರ ಇದ್ದ ಪ್ರಥಮ್ ಆಗಿದ್ದರೆ, ನಾನು ಉತ್ತರ ಕೊಡುತ್ತಿದ್ದ ರೀತಿಯೇ ಬೇರೆ. ಆದ್ರೆ ನಾನು ಯಾಕೆ ಬದಲಾದೆ.?'' - ಪ್ರಥಮ್ ['ಬಿಗ್ ಬಾಸ್' ಮನೆಯಲ್ಲಿ 'ಒಳ್ಳೆ ಹುಡುಗ' ಪ್ರಥಮ್ ಬಾಯ್ಬಿಟ್ಟ 'ಬಿಗ್' ಸತ್ಯ]

ನಾನು ಅತ್ತರೆ ಯಾರೂ ಬರಲ್ಲ.!
''ಯಾರಾದರೂ ಬಂದು ನನಗೆ ಸಮಾಧಾನ ಮಾಡಿದ್ರಾ.? ಯಾರಾದರೂ ಒಬ್ಬರು ಅತ್ತರೆ, ಎಂಟೈರ್ ಗುಂಪು ಹೋಗಿ ಸಮಾಧಾನ ಮಾಡುತ್ತಾರೆ. ನಾನತ್ತರೆ ಯಾಕೆ ಯಾರೂ ನನ್ನ ಹತ್ತರ ಬರಲ್ಲ. ಅಷ್ಟು ನಾನು ನಿಷ್ಪ್ರಯೋಜಕನಾ.?'' - ಪ್ರಥಮ್

ನನ್ನದೇ ಆದ ನೋವಿದೆ
''ನನಗೂ ಬೇಸರ ಆಗುತ್ತದೆ. ನನಗೂ ನನ್ನದೇ ಆದ ನೋವಿದೆ. ಹೇಳಿಕೊಳ್ಳುವುದಿಲ್ಲ ಅಷ್ಟೆ. ಆದ್ರೆ, ಈ ವಾರ ನನಗೆ ತುಂಬಾ ಬೇಸರ ಆಗಿತ್ತು. ಅದರಲ್ಲೂ ನಿರಂಜನ್ ರವರಿಂದ ನನಗೆ ತುಂಬಾ ಬೇಸರ ಆಯ್ತು'' - ಪ್ರಥಮ್
'ಬಿಗ್ ಬಾಸ್ ಕನ್ನಡ-4' ಕಾರ್ಯಕ್ರಮದ ಎಲ್ಲಾ ಅಪ್ ಡೇಟ್ಸ್ ಗಾಗಿ ಈ ಲಿಂಕ್ ಕ್ಲಿಕ್ ಮಾಡಿ


Click it and Unblock the Notifications











