Exclusive: 'ಬಿಗ್ ಬಾಸ್' ಮನೆಯಲ್ಲಾದ ಡಿಢೀರ್ ಪ್ರೆಸ್ ಮೀಟ್ ಹೇಗಿತ್ತು ಗೊತ್ತಾ?

By ಒನ್ಇಂಡಿಯಾ/ಫಿಲ್ಮಿಬೀಟ್ ಕನ್ನಡ ಸಿಬ್ಬಂದಿ

ಕನ್ನಡ ಕಿರುತೆರೆಯಲ್ಲಿ ಇಲ್ಲಿಯವರೆಗೂ 'ಬಿಗ್ ಬಾಸ್' ಕಾರ್ಯಕ್ರಮದ ಮೂರು ಆವೃತ್ತಿಗಳು ಪ್ರಸಾರ ಆಗಿವೆ. ಈ ಮೂರು ಸೀಸನ್ ಗಳಲ್ಲಿ ನಡೆಯದ ಎಕ್ಸ್ ಪೆರಿಮೆಂಟ್ ಈ ಬಾರಿ...ಅಂದ್ರೆ 'ಬಿಗ್ ಬಾಸ್ ಕನ್ನಡ-4' ಕಾರ್ಯಕ್ರಮದಲ್ಲಿ ನಡೆದಿದೆ. ಅದೇ 'ಬಿಗ್ ಬಾಸ್ ಪ್ರೆಸ್ ಮೀಟ್'.[ಇಂದು 'ಬಿಗ್ ಬಾಸ್' ಕಾರ್ಯಕ್ರಮದಲ್ಲಿ ದಿಢೀರ್ ಪತ್ರಿಕಾಗೋಷ್ಠಿ.! ನಿರೀಕ್ಷಿಸಿ..]

ಹೌದು, ನಿನ್ನೆ ಸಂಜೆ (ಜನವರಿ 21)... 'ಬಿಗ್ ಬಾಸ್ ಕನ್ನಡ-4' ಕಾರ್ಯಕ್ರಮದ 106ನೇ ದಿನ... 'ಬಿಗ್ ಬಾಸ್' ಮನೆಯಲ್ಲಿ ಡಿಢೀರ್ ಪತ್ರಿಕಾಗೋಷ್ಟಿ ಆಯೋಜಿಸಲಾಗಿತ್ತು. ಸ್ಪರ್ಧಿಗಳ ಪಾಲಿಗೆ ಇದು ಸಡನ್ ಶಾಕ್. ಯಾಕಂದ್ರೆ, 'ಬಿಗ್ ಬಾಸ್' ಮನೆಯೊಳಗೆ ಪತ್ರಕರ್ತರು ಬಂದು ನೇರ, ನಿಷ್ಠೂರ, ಹರಿತವಾದ ಪ್ರಶ್ನೆಗಳನ್ನ ಕೇಳುತ್ತಾರೆ ಎಂಬ ಊಹೆ ಸ್ಪರ್ಧಿಗಳಿಗೆ ಇರಲೇ ಇಲ್ಲ.!

'ಬಿಗ್ ಬಾಸ್' ಮನೆಯೊಳಗೆ ಪತ್ರಕರ್ತರು

'ಬಿಗ್ ಬಾಸ್' ಮನೆಯೊಳಗೆ ಪತ್ರಕರ್ತರು

'ಬಿಗ್ ಬಾಸ್' ಮನೆಯೊಳಗೆ ಹೋಗಿ ಸ್ಪರ್ಧಿಗಳಿಗೆ ಪ್ರಶ್ನೆಗಳನ್ನ ಕೇಳುವ ಅವಕಾಶವನ್ನ ಪತ್ರಕರ್ತರಿಗೆ 'ಬಿಗ್ ಬಾಸ್' ತಂಡ ಹಾಗೂ ಕಲರ್ಸ್ ಕನ್ನಡ ವಾಹಿನಿ ಕಲ್ಪಿಸಿತ್ತು. ಅದರಂತೆ 'ಬಿಗ್ ಬಾಸ್' ಮನೆಯೊಳಗೆ ನಿಮ್ಮ 'ಒನ್ಇಂಡಿಯಾ/ಫಿಲ್ಮಿಬೀಟ್ ಕನ್ನಡ' ವರದಿಗಾರ್ತಿ ಹರ್ಷಿತಾ ರಾಕೇಶ್, 'ಪ್ರಜಾವಾಣಿ' ವರದಿಗಾರ್ತಿ ರೋಹಿಣಿ, 'ವಿಜಯ ಕರ್ನಾಟಕ' ವರದಿಗಾರ ಶರಣು ಹುಲ್ಲೂರು ಮತ್ತು 'ಈಟಿವಿ ಕನ್ನಡ ನ್ಯೂಸ್' ಆಂಕರ್ ಸೋಮಣ್ಣ ಕಾಲಿಟ್ಟರು.

ಪತ್ರಕರ್ತರನ್ನು ನೋಡಿ ಸ್ಪರ್ಧಿಗಳಿಗೆ ಸರ್ಪ್ರೈಸ್/ಶಾಕ್.!

ಪತ್ರಕರ್ತರನ್ನು ನೋಡಿ ಸ್ಪರ್ಧಿಗಳಿಗೆ ಸರ್ಪ್ರೈಸ್/ಶಾಕ್.!

ಅದಾಗಲೇ ಗಾರ್ಡನ್ ಏರಿಯಾದಲ್ಲಿ ಬಂದು ಕುಳಿತಿದ್ದ ಪತ್ರಕರ್ತರನ್ನು ನೋಡಿ ಸ್ಪರ್ಧಿಗಳಿಗೆ ಆಶ್ಚರ್ಯ ಮತ್ತು ಆತಂಕ... ಎರಡೂ ಒಟ್ಟೊಟ್ಟಿಗೆ ಆಯ್ತು.

ಪ್ರಥಮ್ ಮುಖದಲ್ಲಿ ಸಂತಸ

ಪ್ರಥಮ್ ಮುಖದಲ್ಲಿ ಸಂತಸ

''ಅತಿಥಿ'ಗಳು ಬಂದು ಹೋದ್ಮೇಲೆ ನಿಮ್ಮ ಮುಖಗಳನ್ನೇ ನೋಡ್ತಿರೋದು'' ಅಂತ ಹೇಳ್ತಾ ಪ್ರಥಮ್ ಎಕ್ಸೈಟ್ ಆಗಿದ್ರೆ...ಕೆಲವರ ಮುಖದಲ್ಲಿ ''ಏನೇನ್ ಪ್ರಶ್ನೆಗಳು ಕೇಳ್ತಾರೋ'' ಎಂಬ ಆತಂಕ ಕೂಡ ಕಂಡುಬಂತು.

ಎಲ್ಲರಿಗೂ ಪ್ರಶ್ನೆಗಳ ಬಾಣ

ಎಲ್ಲರಿಗೂ ಪ್ರಶ್ನೆಗಳ ಬಾಣ

ಪತ್ರಕರ್ತರು ಬಿಟ್ಟ ಪ್ರಶ್ನೆಗಳ ಬಾಣಕ್ಕೆ 'ಬಿಗ್ ಬಾಸ್' ಮನೆಯ ರೇಖಾ, ಪ್ರಥಮ್, ಕೀರ್ತಿ, ಮಾಳವಿಕಾ, ಮೋಹನ್ ಮತ್ತು ಶಾಲಿನಿ ಮುಕ್ತ ಮನಸ್ಸಿನಿಂದ ಉತ್ತರ ಕೊಟ್ಟಿದ್ದಾರೆ.

ಇಂದಿನ ಸಂಚಿಕೆ ಮಿಸ್ ಮಾಡಬೇಡಿ

ಇಂದಿನ ಸಂಚಿಕೆ ಮಿಸ್ ಮಾಡಬೇಡಿ

ಕನ್ನಡದ 'ಬಿಗ್ ಬಾಸ್' ಇತಿಹಾಸದಲ್ಲಿ ಇದೇ ಮೊಟ್ಟ ಮೊದಲ ಬಾರಿಗೆ 'ಬಿಗ್ ಬಾಸ್' ಮನೆಯೊಳಗೆ ನಡೆದ ದಿಢೀರ್ ಪತ್ರಿಕಾಗೋಷ್ಠಿ ಸಂಚಿಕೆ ಇಂದು (ಭಾನುವಾರ) ರಾತ್ರಿ 9 ಗಂಟೆಗೆ ನಿಮ್ಮ ಕಲರ್ಸ್ ಸೂಪರ್ ವಾಹಿನಿಯಲ್ಲಿ ಪ್ರಸಾರವಾಗಲಿದೆ. ತಪ್ಪದೇ ವೀಕ್ಷಿಸಿ....

More from Filmibeat

English summary
Bigg Boss Kannada 4: Week 15 - 4 Journalists entered Bigg Boss House. Don't miss to watch Bigg Boss pressmeet today at 9 pm in Colors Super Channel.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X