ಕಿಚ್ಚ ಸುದೀಪ್ ವಿರುದ್ಧ 'ಬಿಗ್ ಬಾಸ್' ವೀಕ್ಷಕರ ಟ್ವಿಟ್ಟರ್ ಸಮರ.!
ಕಳೆದ ಶನಿವಾರ ಪ್ರಸಾರವಾದ 'ವಾರದ ಕಥೆ ಕಿಚ್ಚನ ಜೊತೆ' ಕಾರ್ಯಕ್ರಮದಲ್ಲಿ ''ಪ್ರಥಮ್-ಸಂಜನಾ-ಭುವನ್ ತ್ರಿಕೋನ ಪ್ರೇಮಕಥೆಯ ವಿವಾದವನ್ನು ಇತ್ಯರ್ಥ ಮಾಡದೆ, ಪ್ರಥಮ್ ಇಮೇಜ್ ಡ್ಯಾಮೇಜ್ ಮಾಡಿದ್ದಾರೆ'' ಎಂಬ ಕಾರಣಕ್ಕೆ 'ಬಿಗ್ ಬಾಸ್' ಹೋಸ್ಟ್ ಕಿಚ್ಚ ಸುದೀಪ್ ವಿರುದ್ಧ ಕಲರ್ಸ್ ಕನ್ನಡ ಅಫೀಶಿಯಲ್ ಫೇಸ್ ಬುಕ್ ಪೇಜ್ ನಲ್ಲಿ ವೀಕ್ಷಕರು ಬೇಸರ ವ್ಯಕ್ತಪಡಿಸಿದ್ದರು. ಈ ಬಗ್ಗೆ ನಿನ್ನೆಯಷ್ಟೇ ನಿಮ್ಮ 'ಫಿಲ್ಮಿಬೀಟ್ ಕನ್ನಡ' ವರದಿ ಮಾಡಿತ್ತು.[ಪಕ್ಷಪಾತ ಮಾಡಿದ್ರು ಅಂತ ಸುದೀಪ್ ಮೇಲೆ ಉರಿದುಬಿದ್ದ ವೀಕ್ಷಕರು!]
ಇದೀಗ ಟ್ವಿಟ್ಟರ್ ನಲ್ಲೂ ಸುದೀಪ್ ವಿರುದ್ಧ 'ಬಿಗ್ ಬಾಸ್' ವೀಕ್ಷಕರು ಸಮರಕ್ಕೆ ಇಳಿದಿದ್ದಾರೆ. ಕಿಚ್ಚ ಸುದೀಪ್ ರವರಿಗೆ ನೇರವಾಗಿ ಪ್ರಶ್ನೆಗಳ ಬಾಣ ಬಿಡುತ್ತಿದ್ದಾರೆ ವೀಕ್ಷಕರು.
ಟ್ವಿಟ್ಟರ್ ನಲ್ಲಿ ವೀಕ್ಷಕರು ಕೇಳುತ್ತಿರುವ ನೇರ ಪ್ರಶ್ನೆಗಳು ಹಾಗೂ ಸುದೀಪ್ ನೀಡಿರುವ ಉತ್ತರಗಳ ಕುರಿತು ಸಂಪೂರ್ಣ ವರದಿ ಇಲ್ಲಿದೆ ಓದಿರಿ...

ವೀಕ್ಷಕರು ಫುಲ್ ಅಪ್ ಸೆಟ್.!
''ಶನಿವಾರದ ಎಪಿಸೋಡ್ ನಿಂದ ಅಪ್ ಸೆಟ್ ಆಗಿದೆ. ಪ್ರಥಮ್ ಗೆ ನೀವು ನ್ಯಾಯ ಕೊಡಿಸುತ್ತೀರಾ ಅಂತ ಭಾವಿಸಿದ್ವಿ. ನಿಮಗೆ ಸತ್ಯ ಗೊತ್ತಿತ್ತು. 'ಬಿಗ್ ಬಾಸ್' ಮನೆಯಲ್ಲಿ ಪ್ರತಿಯೊಬ್ಬರು ಪ್ರಥಮ್ ನ ಟಾರ್ಗೆಟ್ ಮಾಡುತ್ತಿದ್ದಾರೆ'' ಅಂತ ವೀಕ್ಷಕರೊಬ್ಬರು ಸುದೀಪ್ ಗೆ ನೇರ ಬಾಣ ಬಿಟ್ಟರು.['ಬಿಗ್ ಬಾಸ್': ಈ ವಾರ ನಿರೀಕ್ಷೆ ಮಾಡದೇ ಇರೋದನ್ನ ನಿರೀಕ್ಷಿಸಿ.!]

ಸುದೀಪ್ ಕೊಟ್ಟ ಉತ್ತರ
''ನೀವು ಹೇಳುತ್ತಿರುವುದು ನನಗೆ ಅರ್ಥ ಆಗಿದೆ. ಆದರೆ ನಾನು ಏನೇ ಮಾಡಿದರೂ, ಅದಕ್ಕೆ ಒಂದು ಕಾರಣ ಇರುತ್ತದೆ ಎಂಬುದನ್ನು ನೀವು ಅರ್ಥ ಮಾಡಿಕೊಳ್ಳುತ್ತೀರಾ ಅಂತ ನಾನು ಭಾವಿಸುತ್ತೇನೆ'' ಅಂತ ಸುದೀಪ್ ಉತ್ತರ ಕೊಟ್ಟರು.[ಪ್ರಥಮ್-ಸಂಜನಾ-ಭುವನ್ ತ್ರಿಕೋನ ಪ್ರೇಮಕಥೆಗೆ ಕ್ಲೈಮ್ಯಾಕ್ಸ್ ಕೊಡದ ಕಿಚ್ಚ!]

ಸಂಜನಾ ಸ್ಕೂಲ್ ಗೆ ಹೋಗುವ ಹುಡುಗಿ ಅಲ್ಲ.!
''ಪ್ರಥಮ್ ಮೇಲೆ ಕೋಪಗೊಳ್ಳುವ ಬದಲು ನೀವು ಧನ್ಯವಾದ ತಿಳಿಸಬೇಕು. ಯಾಕಂದ್ರೆ ಅವರು ಅವಳ ನಿಜವಾದ ಬಣ್ಣ ಬಯಲು ಮಾಡಿದರು. ಆಕೆ ಸ್ಕೂಲ್ ಗೆ ಹೋಗುವ ಹುಡುಗಿ ಅಲ್ಲ.!'' ಅಂತ ವೀಕ್ಷಕರೊಬ್ಬರು ಪ್ರಶ್ನೆ ಕೇಳಿದ್ದಕ್ಕೆ ಸುದೀಪ್ ಕೊಟ್ಟ ಉತ್ತರವೇನು ಗೊತ್ತಾ.?

ನಾನು ಏನ್ಮಾಡ್ತಿದ್ದೀನಿ ಅಂತ ನನಗೆ ಗೊತ್ತು!
''ಸರ್, ನಾನು ಏನ್ಮಾಡ್ತಿದ್ದೀನಿ ಅಂತ ನನಗೆ ಗೊತ್ತಿದೆ. ನೀವು ಅದನ್ನ ಗೌರವಿಸಬೇಕು. ಶೋ ಬಗ್ಗೆ ಜಡ್ಜ್ ಮೆಂಟಲ್ ಆಗುವ ಬದಲು ಎಂಜಾಯ್ ಮಾಡಿ'' ಎಂದರು ಸುದೀಪ್

ವೀಕ್ಷಕರಿಂದ ಬಿದ್ದ ತಿರುಗುಬಾಣ.!
'ಜಡ್ಜ್ ಮೆಂಟಲ್ ಆಗಬೇಡಿ' ಅಂತ ಸುದೀಪ್ ಹೇಳಿದ್ದಕ್ಕೆ ಮತ್ತೋರ್ವ ವೀಕ್ಷಕರೊಬ್ಬರು, ''ಜನ ಜಡ್ಜ್ ಮೆಂಟಲ್ ಆಗುವುದನ್ನು ನಿಲ್ಲಿಸಿದರೆ, ಯಾರೂ ವೋಟ್ ಮಾಡಲ್ಲ'' ಅಂತ ತಿರುಗುಬಾಣ ಬಿಟ್ಟರು.

ವ್ಯಂಗ್ಯ ಪ್ರತಿಕ್ರಿಯೆ
ವೀಕ್ಷಕರ ಅಭಿಪ್ರಾಯಕ್ಕೆ ಕಿಚ್ಚ ಸುದೀಪ್ ನೀಡಿರುವ ಪ್ರತಿಕ್ರಿಯೆ ಇದು.

ವೋಟ್ ಗಳನ್ನ ಬಹಿರಂಗ ಪಡಿಸಿ
''ಬಿಗ್ ಬಾಸ್'ನಲ್ಲಿರುವ ಪ್ರತಿ ಸ್ಪರ್ಧಿಗೆ ಎಷ್ಟು ವೋಟ್ ಬರುತ್ತದೆ ಅಂತ ನೀವು ಯಾಕೆ ಬಹಿರಂಗ ಪಡಿಸಲ್ಲ. ಪ್ಲೀಸ್ ಕ್ಲಾರಿಫೈ ಮಾಡಿ'' ಅಂತ ಮತ್ತೊಬ್ಬರು ಕೇಳಿದರು.

ಕಲರ್ಸ್ ವಾಹಿನಿಯವರನ್ನ ಕೇಳಿ..
''ನಾನು ಕಾರ್ಯಕ್ರಮದ ಹೋಸ್ಟ್ ಅಷ್ಟೆ. ನಿಮ್ಮ ಅನಿಸಿಕೆ, ಅಭಿಪ್ರಾಯಗಳನ್ನು ಕಲರ್ಸ್ ವಾಹಿನಿಗೆ ಈ-ಮೇಲ್ ಮಾಡಿ. ಅವರನ್ನ ಪ್ರಶ್ನೆ ಮಾಡುವ ಎಲ್ಲ ಅಧಿಕಾರ ನಿಮಗೆ ಇದೆ. ಅವರಿಗೆ ಉತ್ತರಿಸುವ ಅಧಿಕಾರ ಇದೆ'' ಎಂದು ಉತ್ತರಿಸಿದರು ಸುದೀಪ್

ಸಲ್ಮಾನ್ ಖಾನ್ ಹೀಗೆ ಮಾಡಲ್ಲ.!
''ವೀಕೆಂಡ್ ಬಂದ್ರೆ ಬರೀ ಬೈಗುಳ ಅವನ (ಪ್ರಥಮ್) ಮೇಲೆ ಪಾಪ. ಸಲ್ಮಾನ್ ಖಾನ್ ಆದ್ರೆ ಯಾರನ್ನೂ ಕೇರ್ ಮಾಡದೆ ಬೈತಾರೆ. ಅದು ನಿಜವಾದ ಆಟ. ನಿಮ್ಮದು ಬರೀ ಟಿ.ಆರ್.ಪಿ ಗಿಮಿಕ್'' ಎಂದು ತೂರಿಬಂದ ಪ್ರಶ್ನೆಗೆ ಸುದೀಪ್ ಕೊಟ್ಟ ಉತ್ತರ...

ನಾನು ಸಲ್ಮಾನ್ ಅಲ್ಲ.!
''ನಾನು ಸಲ್ಮಾನ್ ಅಲ್ಲ'' ಎಂದು ಟ್ವೀಟ್ ಮಾಡಿದ್ದಾರೆ ಸುದೀಪ್.

ಇವರೆಲ್ಲ ಯಾವಾಗ್ಲೋ ಔಟ್ ಆಗಬೇಕಿತ್ತು!
''ವೋಟ್ ಪ್ರಕಾರ ತಗೊಂಡ್ರೆ ಸಂಜನಾ, ಭುವನ್, ಮಾಳವಿಕಾ, ಶಾಲಿನಿ, ಮೋಹನ್ ಮತ್ತು ಶೀತಲ್ ಯಾವತ್ತೋ ಹೋಗ್ತಿದ್ರು. ಇದೆಲ್ಲ ಫಿಕ್ಸ್ ಆಗಿದೆ'' ಎಂಬುದು ವೀಕ್ಷಕರ ಅಭಿಪ್ರಾಯ

ಹಾಗಾದ್ರೆ, ಶೋ ಯಾಕೆ ನೋಡ್ತೀರಾ.?
''ಗೇಮ್ ಫಿಕ್ಸ್ ಆಗಿದೆ'' ಅಂತ ''ನಿಮಗೆ ಅನಿಸಿದರೆ ಯಾಕ್ ನೋಡ್ತೀರಾ'' ಅಂತಲೂ ಟ್ವೀಟ್ ಮಾಡಿದ್ದಾರೆ ಸುದೀಪ್.

ಬಕರಾ ಮಾಡ್ತಿದ್ದೀರಾ.!
''ಒಟ್ನಲ್ಲಿ ನಮ್ಮನ್ನ ಬಕರಾ ಮಾಡ್ತಿದ್ದಾರೆ ಅಷ್ಟೆ. ಒಟ್ನಲ್ಲಿ ನೀವು ಮಾಡಿದ್ದೇ ಸರಿ ಅಲ್ವಾ'' ಅಂತ ದಿಲೀಪ್ ಗೌಡ ರವರು ಕೇಳಿದ ಪ್ರಶ್ನೆಗೆ ಸುದೀಪ್ ಹೇಳಿದ್ದು ಹೀಗೆ...

ಪ್ರಾಬ್ಲಂ ಏನು.?
''ನನಗೆ ಪ್ರಾಬ್ಲಂ ಏನು ಅನ್ನೋದೇ ಅರ್ಥ ಆಗ್ತಿಲ್ಲ. ನಾನು ಹೋಸ್ಟ್ ಮಾಡುತ್ತಿರುವುದೇ ಪ್ರಾಬ್ಲಂ.?'' ಅಂತ ಪ್ರಶ್ನೆ ಕೇಳಿದ್ದಾರೆ ಸುದೀಪ್.

ಈ ರೀತಿ ಹೇಳೋದು ಸರಿ ಇಲ್ಲ.!
ಸುದೀಪ್ ಕೊಟ್ಟ ರಿಯಾಕ್ಷನ್ ಗೆ, ''ಈ ರೀತಿ ಹೇಳುವುದು ತಪ್ಪು ಸರ್. ಜನ ನೋಡ್ತಿರೋದಕ್ಕೆ ನಿಮ್ಮ ಶೋಗೆ ದುಡ್ಡು ಬರೋದು. ಆಗಲೇ ಟಿ.ಆರ್.ಪಿ ಸಿಗುವುದು. ಒಬ್ಬನ್ನೇ ಟಾರ್ಗೆಟ್ ಮಾಡಿ ಬೈಯ್ಯೋದು ತಪ್ಪು ಅಲ್ವಾ ಸರ್?'' ಅಂತ ಪುನಃ ದಿಲೀಪ್ ಗೌಡ ಪ್ರಶ್ನೆ ಕೇಳಿದರು.

ನಾನು ಡೈರೆಕ್ಟರ್ ಅಲ್ಲ.!
''ನಾನು ಹೋಸ್ಟ್ ಅಷ್ಟೆ. ಡೈರೆಕ್ಟರ್ ಅಲ್ಲ. ಚಾನೆಲ್ ಹೆಡ್ ಕೂಡ ಅಲ್ಲ'' ಅಂತ ಟ್ವೀಟ್ ಮಾಡಿದ್ದಾರೆ ಸುದೀಪ್.

ಟ್ವಿಟ್ಟರ್ ನಲ್ಲಿ ನಿಲ್ಲದ ಸಮರ
ಪ್ರಥಮ್ ಪರ ವಹಿಸಿಕೊಂಡು ವೀಕ್ಷಕರು ಟ್ವಿಟ್ಟರ್ ನಲ್ಲಿ ಶುರು ಮಾಡಿರುವ ಸಮರ ಸದ್ಯಕ್ಕೆ ನಿಲ್ಲುವ ಹಾಗೆ ಕಾಣ್ತಿಲ್ಲ.


Click it and Unblock the Notifications











